Shukra Rashi Parivartan:ಶುಕ್ರದೇವನ ಕೃಪೆಯಿಂದ ಆಗಸ್ಟ್ ತಿಂಗಳಿನಲ್ಲಿ ಈ ರಾಶಿಯ ಜನರಿಗೆ ಬರಲಿವೆ 'ಅಚ್ಛೆ ದೀನ್', ಆರ್ಥಿಕ ಸ್ಥಿತಿ ಬಲವರ್ಧನೆ

Shukra Rashi Parivartan - ಆಗಸ್ಟ್ ತಿಂಗಳು (August Month) ಆರಂಭಗೊಂಡಿದೆ. ಈ ತಿಂಗಳು ಹಲವು ರಾಶಿಯ ಜನರಿಗೆ ಶುಭ ಸಮಾಚಾರ ಸಿಗುವ ಸಾಧ್ಯತೆ ಇದೆ. ಇನ್ನೊಂದೆಡೆ ಕೆಲ ರಾಶಿಯ ಜನರು ಎಚ್ಚರಿಕೆಯಿಂದ ಕೂಡ ಇರಬೇಕಾದ ಪರಿಸ್ಥಿತಿ ಎದುರಾಗಬಹುದು. 

Written by - Nitin Tabib | Last Updated : Aug 3, 2021, 11:08 AM IST
  • ಆಗಸ್ಟ್ ತಿಂಗಳಿನಲ್ಲಿ ಈ ರಾಶಿಯ ಜನರಿಗೆ ಶುಕ್ರ ದೆಸೆ ಪ್ರಾಪ್ತಿ.
  • ಹೇಗಿರಲಿದೆ ಅವರ ಆರ್ಥಿಕ ಸ್ತಿತಿಗತಿ ?
  • ಹೇಗಿರಲಿದೆ ಅವರ ವೈಯಕ್ತಿಕ ಜೀವನ ಹಾಗೂ ಲವ್ ಲೈಫ್?
Shukra Rashi Parivartan:ಶುಕ್ರದೇವನ ಕೃಪೆಯಿಂದ ಆಗಸ್ಟ್ ತಿಂಗಳಿನಲ್ಲಿ ಈ ರಾಶಿಯ ಜನರಿಗೆ ಬರಲಿವೆ 'ಅಚ್ಛೆ ದೀನ್', ಆರ್ಥಿಕ ಸ್ಥಿತಿ ಬಲವರ್ಧನೆ title=
Shukra Rashi Parivartan (File Photo)

Shukra Rashi Parivartan - ಆಗಸ್ಟ್ ತಿಂಗಳು (August Month) ಆರಂಭಗೊಂಡಿದೆ. ಈ ತಿಂಗಳು ಹಲವು ರಾಶಿಯ ಜನರಿಗೆ ಶುಭ ಸಮಾಚಾರ ಸಿಗುವ ಸಾಧ್ಯತೆ ಇದೆ. ಇನ್ನೊಂದೆಡೆ ಕೆಲ ರಾಶಿಯ ಜನರು ಎಚ್ಚರಿಕೆಯಿಂದ ಕೂಡ ಇರಬೇಕಾದ ಪರಿಸ್ಥಿತಿ ಎದುರಾಗಬಹುದು. ಜ್ಯೋತಿಶ್ಯಾಚಾರ್ಯರ (Astrology) ಪ್ರಕಾರ ಆಗಸ್ಟ್ ತಿಂಗಳಿನಲ್ಲಿ ಮಕರ ರಾಶಿಯ ಜನರಿಗೆ ಶುಕ್ರನ ಪ್ರಭಾವದಿಂದ (Shukra Gochar 2021) ಪ್ರಗತಿ ಪ್ರಾಪ್ತಿಯಾಗುವ ಸಂಕೇತಗಳಿವೆ. ಶುಕ್ರನ ಸ್ಥಿತಿಯಲ್ಲಿ ಬದಲಾವಣೆಯಿಂದ (Venus Transit 2021) ಲಾಭದ ಯೋಗ ಕೂಡ ನಿರ್ಮಾಣಗೊಳ್ಳಲಿದೆ. ಹಾಗಾದರೆ, ಮಕರ ರಾಶಿಯ (Zodiac Sign) ಜನರ ಪಾಲಿಗೆ ಆಗಸ್ಟ್ ತಿಂಗಳು ಹೇಗಿರಲಿದೆ ತಿಳಿದುಕೊಳ್ಳೋಣ ಬನ್ನಿ.

ಮಕರ ಜಾತಕದವರಿಗೆ (Makar Rashi) ತಿಂಗಳಾರಂಭ ಸ್ವಲ್ಪ ನಿರಸವಾಗಿರಲಿದೆ. ಆದರೆ, ಎರಡನೇ ವಾರದಿಂದ ನಿಮ್ಮ ಸ್ಥಿತಿಯಲ್ಲಿ ಸುಧಾರಣೆಯಾಗಲಿದೆ. ವೃತ್ತಿಪರವಾಗಿ ಈ ತಿಂಗಳು ನಿಮ್ಮ ಪಾಲಿಗೆ ಉತ್ತಮವಾಗಿರಲಿದೆ. ನೌಕರಿಯಲ್ಲಿರುವವರಿಗೆ ಬಡ್ತಿಯ ಯೋಗವಿದೆ. ಇದಲ್ಲದೆ ನೌಕರಿಯಲ್ಲಿ ಆದಾಯ ವೃದ್ಧಿಯ ಸಂಕೇತಗಳು ಗೋಚರಿಸುತ್ತಿವೆ. ಈ ಅವಧಿಯಲ್ಲಿ ನೀವು ಸ್ವಲ್ಪ ಎಚ್ಚರಿಕೆಯಿಂದರಬೇಕಾದ ಅವಶ್ಯಕತೆ ಕೂಡ ಇದೆ.

ಕನ್ಯಾ ರಾಶಿಗೆ ಶುಕ್ರನ ಪ್ರವೇಶ
ಆಗಸ್ಟ್ (August) 11ರಂದು ಶುಕ್ರ ಕನ್ಯಾ ರಾಶಿ (Kanya Rashi) ಪ್ರವೇಶಿಸಲಿದ್ದಾನೆ. ಈ ಗೋಚರ ಕಾಲದಲ್ಲಿ ಆರ್ಥಿಕ ಸ್ಥಿತಿ ಸುಧಾರಣೆಯಾಗಲಿದೆ. ನೌಕರಿ ಪರಿವರ್ತನೆಗಾಗಿ ಯೋಚಿಸುತ್ತಿದ್ದರೆ, ಈ ತಿಂಗಳು ತುಂಬಾ ಶುಭಕರವಾಗಿದೆ. ವ್ಯಾಪಾರದಲ್ಲಿ ಲಾಭ, ಆದಾಯದಲ್ಲಿ ವೃದ್ಧಿಯ ಜೊತೆಗೆ ಧನಾಗಮನದ ಹೊಸ ಆಯಾಮಗಳು ಸೃಷ್ಟಿಯಾಗಲಿವೆ. ಆದ್ರೆ, ಈ ತಿಂಗಳು ಆದಾಯದ ಜೊತೆಗೆ ಖರ್ಚು ಕೂಡ ಹೆಚ್ಚಾಗಲಿದೆ. ಹೀಗಾಗಿ ಜಾಗ್ರತೆ ವಹಿಸಿ. ಆಗಸ್ಟ್ 26ರ ಬಳಿಕ ಬುಧ 9ನೇ ಭಾವಕ್ಕೆ ಜಾರಲಿದ್ದಾನೆ. ಬುಧನ ಈ ಗೋಚರ (Budh Gochar) ವ್ಯಾಪಾರಿಗಳ ಪಾಲಿಗೆ ಜಬರ್ದಸ್ತ್ ಲಾಭ ನೀಡಲಿದೆ.

ಇದನ್ನೂ ಓದಿ-Sun Transit In Ashlesha: ಶೀಘ್ರವೇ ಅಶ್ಲೇಷಾ ನಕ್ಷತ್ರದಲ್ಲಿ ಸೂರ್ಯನ ಪ್ರವೇಶ, ಈ ನಾಲ್ಕು ರಾಶಿಯ ಜನರಿಗೆ ಆರ್ಥಿಕ ಲಾಭ

ವೈಯಕ್ತಿಕ ಜೀವನ ಹೇಗಿರಲಿದೆ?
ಮಕರ ಜಾತಕದವರ ಲವ್ ಲೈಫ್ (Love Life) ದೃಷ್ಟಿಯಿಂದ ಆಗಸ್ಟ್ ತಿಂಗಳು ತುಂಬಾ ಉತ್ತಮವಗಿರಲಿದೆ. ಸಂಗಾತಿಯ ಜೊತೆಗೆ ನಿಮ್ಮ ಸಂಬಂಧ ಇನ್ನಷ್ಟು ಗಟ್ಟಿಯಾಗಲಿದೆ.  ಸಂಗಾತಿಯ ಜೊತೆಗೆ ಕಾಲ ಕಳೆಯುವ ಅವಕಾಶ ಸಿಗಲಿದೆ. ಪ್ರವಾಸಕ್ಕಾಗಿ ಯೋಜನೆ ರೂಪಿಸುವ ಸಾಧ್ಯತೆ ಇದೆ. ಆದ್ರೆ, ಆರೋಗ್ಯದ ಬಗ್ಗೆ ಕಾಳಜಿ ವಹಿಸಿ. ಹೊರ ಆಹಾರ ಪದಾರ್ಥಗಳಿಂದ ಅಂತರ ಕಾಯ್ದುಕೊಳ್ಳಿ.

ಇದನ್ನೂ ಓದಿ-Palmistry: ಸರ್ಕಾರಿ ನೌಕರಿ ಕೊಡಿಸುವ ಹಸ್ತರೇಖೆ ಈ ರೀತಿಯಾಗಿರುತ್ತದೆ, ನಿಮ್ಮ ಕೈಯಲ್ಲಿದೆಯಾ?

(ಸೂಚನೆ- ಈ ಲೇಖನದಲ್ಲಿ ನೀಡಲಾಗಿರುವ ವಿವರ ಸಾಮಾನ್ಯ ಮಾಹಿತಿ ಮತ್ತು ಧಾರ್ಮಿಕ ನಂಬಿಕೆಗಳನ್ನು ಆಧರಿಸಿದೆ. ಝೀ ಹಿಂದುಸ್ತಾನ್ ಕನ್ನಡ ಈ ಮಾಹಿತಿಯನ್ನು ಖಚಿತಪಡಿಸುವುದಿಲ್ಲ. ಅನುಸರಿಸುವ ಮೊದಲು ಕ್ಷೇತ್ರಕ್ಕೆ ಸಂಬಂಧಿಸಿದ ತಜ್ಞರ ಸಲಹೆ ಪಡೆಯಲು ಮರೆಯಬೇಡಿ)

ಇದನ್ನೂ ಓದಿ-Vastu Tips: ನಿಮ್ಮ ಮನೆಯಲ್ಲೂ ಇಂತಹ ವಿಗ್ರಹಗಳಿದ್ದರೆ ಸದಾ ಶಾಂತಿ-ಸಮೃದ್ಧಿ ತುಂಬಿರುತ್ತೆ

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ

Trending News