Sawan Month 2022 Horoscope: ಶ್ರಾವಣ ಮಾಸ ವಿಶೇಷವಾಗಿ ಶಿವನಿಗೆ ಸಮರ್ಪಿತವಾಗಿದೆ. ಈ ತಿಂಗಳು ಆರಂಭವಾಗುವುದಕ್ಕು ಮುನ್ನವೇ ಶ್ರೀವಿಷ್ಣು ಯೋಗನಿದ್ರೆಗೆ ಜಾರಲಿದ್ದು, ದೇವಾಧಿದೇವ ಶಿವನ ಹೆಗಲಿಗೆ ಪ್ರಪಂಚದ ಜವಾಬ್ದಾರಿ ಬೀಳಲಿದೆ. ಈ ವರ್ಷ ಜುಲೈ 29 ರಿಂದ ಶ್ರಾವಣ ಮಾಸ ಆರಂಭಗೊಳ್ಳುತ್ತಿದೆ. ಈ ತಿಂಗಳಿನಲ್ಲಿ ಶಿವಭಕ್ತರು ಪವಿತ್ರ ನದಿಗಳ ನೀರನ್ನು ತಂದು ಶಿವನಿಗೆ ಅಭಿಷೇಕ ನೆರವೇರಿಸುತ್ತಾರೆ. ಇದಲ್ಲದೆ ವಿಶೇಷ ಪೂಜೆ-ಪುನಸ್ಕಾರ, ವೃತಗಳನ್ನು ಕೈಗೊಳ್ಳುತ್ತಾರೆ. ಶಿವನ ಕೃಪಾಕಟಾಕ್ಷಕ್ಕೆ ಪಾತ್ರರಾಗಲು ಭಕ್ತಾದಿಗಳು ವಿವಿಧ ಉಪಾಯಗಳನ್ನು ಅನುಸರಿಸುತ್ತಾರೆ. ಈ ಬಾರಿಯ ಶ್ರಾವಣ ತಿಂಗಳು ಮೂರು ರಾಶಿಯ ಜಾತಕದವರಿಗೆ ತುಂಬಾ ವಿಶೇಷವಾಗಿರಲಿದೆ.
ಮೇಷ ರಾಶಿ- ಮೇಷ ರಾಶಿಯ ಜಾತಕದವರ ಪಾಲಿಗೆ ಈ ಸಮಯ ಅತ್ಯಂತ ಶುಭ ಸಾಬೀತಾಗಲಿದೆ. ಶಿವನ ಕೃಪೆಯಿಂದ ಹಲವು ಲಾಭಗಳು ಸಿಗಲಿವೆ. ನೌಕರಿ ವ್ಯಾಪಾರದಲ್ಲಿ ಅಪಾರ ವೃದ್ಧಿ ಇರಲಿದೆ. ಹಲವು ಸಾಧನೆಗಳು ಪ್ರಾಪ್ತಿಯಾಗಲಿವೆ. ಅಪಾರ ಧನ-ಲಾಭ ಸಿಗಲಿದೆ. ಗೌರವ ಪಾಪ್ತಿಯಾಗಲಿದೆ. ಶ್ರಾವಣದ ಸೋಮವಾರದಂದು ಶಿವನಿಗೆ ನೀರನ್ನು ಅರ್ಪಿಸಿ, ಶುಭ ಫಲಗಳು ಸಿಗಲಿವೆ.
ಮಿಥುನ ರಾಶಿ- ಮಿಥುನ ರಾಶಿಯ ಜಾತಕದವರ ಪಾಲಿಗೂ ಕೂಡ ಶ್ರಾವಣ ಮಾಸ ಅತ್ಯಂತ ಶುಭ ಫಲಪ್ರದಾಯಿ ಸಾಬೀತಾಗಲಿದೆ. ಹೊಸ ನೌಕರಿಯ ಹುಡುಕಾಟದಲ್ಲಿರುವವರಿಗೆ ಶಿವನ ಕೃಪಾಕಟಾಕ್ಷದಿಂದ ಹೊಸ ಉದ್ಯೋಗ ಸಿಗಲಿದೆ. ಪ್ರಮೋಶನ್ ಬಯಸುತ್ತಿರುವವರ ಇಚ್ಛೆ ಪೂರ್ಣಗೊಳ್ಳಲಿದೆ. ವ್ಯಾಪಾರಿಗಳ ಪಾಲಿಗೂ ಕೂಡ ಈ ಸಮಯ ಉತ್ತಮವಾಗಿರಲಿದೆ. ಶ್ರಾವಣ ಮಾಸದಲ್ಲಿ ನಿಮ್ಮ ಕೈಯಾರೆ ಸಾಧ್ಯವಾದಷ್ಟು ಶಿವನ ಆರಾಧನೆ ಮಾಡಿ.
ಇದನ್ನೂ ಓದಿ-June 26 Horoscope: ಈ ನಾಲ್ಕು ರಾಶಿಗಳ ಪಾಲಿಗೆ ವರದಾನ ಸಾಬೀತಾಗಲಿದೆ ಜೂನ್ 26
ಮಕರ ರಾಶಿ- ಮಕರ ರಾಶಿಯ ಜನರ ಪಾಲಿಗೂ ಕೂಡ ಶ್ರಾವಣ ಮಾಸದಲ್ಲಿ ಶಿವನ ಅಪಾರ ಕೃಪೆ ಲಭಿಸಲಿದೆ. ನೌಕರಿ-ವ್ಯಾಪಾರದಲ್ಲಿ ಅಪಾರ ಧನಲಾಭ ಸಿಗುವ ಸಾಧ್ಯತೆ ಇದೆ. ಕೆಲ ಜಾತಕದವರಿಗೆ ಹೊಸ ನೌಕರಿ ಸಿಗಲಿದೆ. ಬಾಳ ಸಂಗಾತಿಯ ಜೊತೆಗೆ ಈ ಸಮಯ ತುಂಬಾ ಉತ್ತಮವಾಗಿರಲಿದೆ. ಶ್ರಾವಣ ಮಾಸದಲ್ಲಿ ಸಂಪೂರ್ಣ ವಿಧಿ-ವಿಧಾನಗಳಿಂದ ಶಿವನಿಗೆ ಪೂಜೆ ಸಲ್ಲಿಸಿ ಅಭಿಷೇಕ ಮಾಡುವುದರಿಂದ ಸಾಕಷ್ಟು ಲಾಭ ಸಿಗಲಿದೆ.
ಇದನ್ನೂ ಓದಿ-ಶ್ರಾವಣ ತರಲಿದೆ ಶುಭದಿನ: ಈ ಮಾಸದಲ್ಲಿ ಶಿವಪೂಜೆಯನ್ನು ಹೀಗೆ ಮಾಡಿ
(ಹಕ್ಕುತ್ಯಾಗ- ಈ ಲೇಖನದಲ್ಲಿ ನೀಡಲಾಗಿರುವ ಮಾಹಿತಿ ಸಾಮಾನ್ಯ ಜ್ಞಾನ ಹಾಗೂ ಧಾರ್ಮಿಕ ನಂಬಿಕೆಗಳನ್ನು ಆಧರಿಸಿದೆ. ಜೀ ಕನ್ನಡ ನ್ಯೂಸ್ ಈ ಮಾಹಿತಿಯನ್ನು ಪುಷ್ಠಿಕರಿಸುವುದಿಲ್ಲ)
ಇದನ್ನೂ ನೋಡಿ-
ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook, Youtube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.