Shani Gochar 2022: ಶನಿಯ ರಾಶಿ ಪರಿವರ್ತನೆಯಿಂದ ಈ ಮೂರು ರಾಶಿಯವರ ಎಲ್ಲಾ ಕಷ್ಟಗಳಿಗೂ ಕೊನೆ

Shani Gochar 2022:  ಪ್ರತಿ ಗ್ರಹದ ರಾಶಿಚಕ್ರದ ಬದಲಾವಣೆಯು ಎಲ್ಲಾ ರಾಶಿಚಕ್ರದ ಚಿಹ್ನೆಗಳ ಮೇಲೆ ಪರಿಣಾಮ ಬೀರುತ್ತದೆ. ಆದರೆ ಶನಿಯ ಸಂಚಾರವು ಹೆಚ್ಚು ಪರಿಣಾಮ ಬೀರುತ್ತದೆ. ಎರಡೂವರೆ ವರ್ಷಗಳ ನಂತರ ಏಪ್ರಿಲ್ 29 ರಂದು ಶನಿಯು ರಾಶಿಯನ್ನು ಬದಲಿಸಿ ಕುಂಭ ರಾಶಿಯನ್ನು ಪ್ರವೇಶಿಸಲಿದ್ದಾನೆ. 

Written by - Ranjitha R K | Last Updated : Apr 16, 2022, 08:56 AM IST
  • ಏಪ್ರಿಲ್ 29 ರಂದು ಶನಿಯ ರಾಶಿ ಬದಲಾವಣೆ'
  • ಎರಡೂವರೆ ವರ್ಷದ ಬಳಿಕ ಶನಿ ಮಹಾತ್ಮನ ರಾಶಿ ಪರಿವರ್ತನೆ
  • ಈ ಮೂರು ರಾಶಿಯವರಿಗೆ ಭಾರೀ ಶುಭ ಫಲ ನೀಡಲಿದ್ದಾನೆ ಶನಿ
Shani Gochar 2022: ಶನಿಯ ರಾಶಿ ಪರಿವರ್ತನೆಯಿಂದ  ಈ ಮೂರು ರಾಶಿಯವರ ಎಲ್ಲಾ ಕಷ್ಟಗಳಿಗೂ ಕೊನೆ  title=
Shani gochara 2022 (file photo)

ನವದೆಹಲಿ : Shani Gochar 2022: ಶನಿ ಎಂದ ಕೂಡಲೇ ಮನಸ್ಸಿನಲ್ಲಿ ಒಂದು ರೀತಿಯ ಭಯ ಆವರಿಸಿ ಬಿಡುತ್ತದೆ. ಇನ್ನು ಶನಿ ಮಹಾತ್ಮನ ವಕ್ರ ದೃಷ್ಟಿ ಯಾರ ಮೇಲಾದರೂ ಬಿದ್ದರೆ ಅವರ ಜೀವನವೇ ಹಾಳಾಗಿ ಹೋಗುತ್ತದೆ ಎನ್ನಲಾಗುತ್ತದೆ.  ಆದರೆ ಶನಿಯು ಕೇವಲ ಅಶುಭ ಫಲವನ್ನು ಮಾತ್ರ ನೀಡುವುದಿಲ್ಲ, ವ್ಯಕ್ತಿಯ ಕರ್ಮ್ನಕ್ಕೆ ಅನುಗುಣವಾಗಿ ಶುಭ ಫಲವನ್ನು ಕೂಡಾ ನೀಡುತ್ತಾನೆ. ಕರ್ಮಫಲದಾತ ಶನಿ ಇದೆ ತಿಂಗಳ 29 ರಂದು ರಾಶಿಚಕ್ರವನ್ನು ಬದಲಾಯಿಸಲಿದ್ದಾನೆ. ಇದರಿಂದಾಗಿ ಕೆಲವು ರಾಶಿಯವರಿಗೆ ಸಾಡೇ ಸಾತಿ, ಶನಿ  ಧೈಯಾ ಕೊನೆಗೊಳ್ಳುತ್ತದೆ. ಇನ್ನು ಕೆಲವರಿಗೆ ಶನಿ ದೆಸೆ ಆರಂಭವಾಗುತ್ತದೆ. 

ಶನಿ ಸಂಕ್ರಮಣ 2022 ಈ ರಾಶಿಯವರಿಗೆ ಮಂಗಳ :  
ಶನಿಯು ತನ್ನದೇ ಆದ ರಾಶಿಯಾದ ಕುಂಭ ರಾಶಿಯನ್ನು ಪ್ರವೇಶಿಸಲಿದ್ದಾನೆ. ಈ ಸಂಕ್ರಮಣವು  3 ರಾಶಿಯವರಿಗೆ ಬಹಳ ಮಂಗಳಕರವಾಗಿದೆ. ಶನಿಯು ರಾಶಿಯನ್ನು ಬದಲಾಯಿಸಿದ ತಕ್ಷಣ, ಈ ಜನರ ಜೀವನದಲ್ಲಿ ಅನೇಕ ಸಕಾರಾತ್ಮಕ ಬದಲಾವಣೆಗಳು ಆಗುತ್ತವೆ.  

ಇದನ್ನೂ ಓದಿ:  Chanakya Niti : ಈ ಕೆಲಸಗಳನ್ನ ಅತಿಯಾಗಿ ಮಾಡುವುದರಿಂದ, ಇವು ಜೀವಕ್ಕಿದೆ ಕುತ್ತು 

ಮೇಷ: ಶನಿಯ ಸಂಕ್ರಮಣದಿಂದ ಮೇಷ ರಾಶಿಯವರಿಗೆ ಒಳ್ಳೆಯ ದಿನಗಳು ಆರಂಭವಾಗಲಿದೆ.  . ಅವರ ಆದಾಯ ಹೆಚ್ಚಾಗುತ್ತದೆ. ವ್ಯಾಪಾರಸ್ಥರ ವ್ಯಾಪಾರ ವೃದ್ಧಿಯಾಗಲಿದೆ. ಲಾಭ ಹೆಚ್ಚಾಗಲಿದೆ. ಉದ್ಯೋಗ ಮಾಡುವವರಿಗೆ ಬಡ್ತಿ ದೊರೆಯಲಿದೆ. ಹೊಸ ಉದ್ಯೋಗ ಸಿಗಬಹುದು. ರೋಗಗಳಿಂದ ಮುಕ್ತಿ ಸಿಗುತ್ತದೆ. 

ವೃಷಭ: ವೃಷಭ ರಾಶಿಯವರಿಗೆ ಶನಿ ಸಂಕ್ರಮವು ಅನೇಕ ವಿಷಯಗಳಲ್ಲಿ ಸಮಾಧಾನ ತರಲಿದೆ. ಅವನ ಜೀವನದ ಅನೇಕ ಕಷ್ಟಗಳು ಕೊನೆಗೊಳ್ಳುತ್ತವೆ. ಉದ್ಯೋಗ-ವ್ಯವಹಾರದಲ್ಲಿ ಒಂದರ ಹಿಂದೆ ಒಂದರಂತೆ ಯಶಸ್ಸು ಸಿಗಲಿದೆ. ಹೊಸ ಉದ್ಯೋಗ, ಬಡ್ತಿ ಸಿಗಬಹುದು. ಕೆಲಸದ ಸ್ಥಳದಲ್ಲಿ ಗೌರವ ಹೆಚ್ಚಾಗಲಿದೆ. ಹೊಸ ವ್ಯವಹಾರವನ್ನು ಪ್ರಾರಂಭಿಸಲು ಇದು ಉತ್ತಮ ಸಮಯ. ಒಟ್ಟಾರೆ ಅದೃಷ್ಟದ ಸಂಪೂರ್ಣ ಬೆಂಬಲ ಸಿಗಲಿದೆ. 

ಇದನ್ನೂ ಓದಿ: Zodiac Nature: ಈ ರಾಶಿಗಳ ಮಕ್ಕಳಲ್ಲಿರುತ್ತದೆ ಗೆಲ್ಲುವ ತವಕ, ಯಾವಾಗಲು ನಂ.1 ಇರ್ತಾರೆ

ಧನು ರಾಶಿ : ಧನು ರಾಶಿಯವರಿಗೆ ಸಾಡೇ ಸತಿಯಿಂದ ಮುಕ್ತಿ ಸಿಗಲಿದೆ. ಸಮಸ್ಯೆಗಳು ಕೊನೆಗೊಳ್ಳುತ್ತವೆ. ಗೌರವ ಹೆಚ್ಚಾಗಲಿದೆ. ದೀರ್ಘಕಾಲದ ಕಾಯಿಲೆಗಳಿಂದ ಮುಕ್ತಿ ಸಿಗಲಿದೆ. ಕಬ್ಬಿಣ, ಎಣ್ಣೆ, ಮದ್ಯದಂತಹ ವಸ್ತುಗಳ ವ್ಯಾಪಾರ ಮಾಡುವವರು ಬಹಳಷ್ಟು ಲಾಭವನ್ನು ಪಡೆಯುತ್ತಾರೆ. 

 

(ಸೂಚನೆ : ಇಲ್ಲಿ ನೀಡಲಾದ ಮಾಹಿತಿಯು ಸಾಮಾನ್ಯ ಜ್ಞಾನ ಮತ್ತು ನಂಬಿಕೆಯನ್ನು ಆಧರಿಸಿದೆ. ZEE NEWS ಅದನ್ನು ಖಚಿತಪಡಿಸುವುದಿಲ್ಲ.) 

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News