Shami Plant Worshiping: ಕೇವಲ Tulsi ಅಷ್ಟೇ ಅಲ್ಲ ಈ ಗಿಡವನ್ನು ಕೂಡ ಶುಭ ಎಂದು ಕರೆಯಲಾಗುತ್ತದೆ, ಮನೆಯಲ್ಲಿದ್ದರೆ ಧನವೃಷ್ಟಿ

Shami Plant Worshiping: ಶಮಿ ಗಿಡವನ್ನು ಮನೆಯಲ್ಲಿ ನೆಡುವ ಮೊದಲು ಕೆಲವು ವಿಷಯಗಳನ್ನು ನೆನಪಿನಲ್ಲಿಟ್ಟುಕೊಳ್ಳುವುದು ಬಹಳ ಮುಖ್ಯ. ಮೊದಲನೆಯದಾಗಿ, ಶನಿವಾರದಂದು ಈ ಸಸ್ಯವನ್ನು ನೆಡುವುದು ತುಂಬಾ ಪ್ರಯೋಜನಕಾರಿ ಎಂದು ಪರಿಗಣಿಸಲಾಗುತ್ತದೆ ಮತ್ತು ವಿಶೇಷವಾಗಿ ದಸರಾ ದಿನದಂದು ಹೆಚ್ಚು ಮಂಗಳಕರವೆಂದು ಪರಿಗಣಿಸಲಾಗುತ್ತದೆ.

Written by - Nitin Tabib | Last Updated : Nov 16, 2021, 10:36 PM IST
  • ಶಮಿ ಗಿಡ ಮನೆ ಮುಂದೆ ಇರುವುದು ತುಂಬಾ ಶುಭಕರ
  • ಮನೆಯ ಮುಂದೆ ಈ ಗಿಡವನ್ನು ನೆಡುವಾಗ ಕೆಲವು ವಿಷಯಗಳನ್ನು ನೆನಪಿನಲ್ಲಿಡಿ
  • ಸಂಜೆಯ ವೇಳೆ ಗಿಡಗಳನ್ನು ಪೂಜಿಸಬೇಕು ಮತ್ತು ಗಿಡದ ಅಡಿ ದೀಪ ಬೆಳಗಬೇಕು.
Shami Plant Worshiping: ಕೇವಲ Tulsi ಅಷ್ಟೇ ಅಲ್ಲ ಈ ಗಿಡವನ್ನು ಕೂಡ ಶುಭ ಎಂದು ಕರೆಯಲಾಗುತ್ತದೆ, ಮನೆಯಲ್ಲಿದ್ದರೆ ಧನವೃಷ್ಟಿ title=
Shami Plant Worshiping (File Photo)

ನವದೆಹಲಿ: Shami Plant Worshiping - ಹಿಂದೂ ಧರ್ಮದಲ್ಲಿ ತುಳಸಿ ಗಿಡವನ್ನು(Tulsi Plant) ಅತ್ಯಂತ ಮಂಗಳಕರವೆಂದು ಪರಿಗಣಿಸಲಾಗುತ್ತದೆ, ಇದನ್ನು ಅನೇಕ ಮನೆಗಳಲ್ಲಿ ಪೂಜಿಸಲಾಗುತ್ತದೆ. ಆದರೆ ತುಳಸಿಯ ಹೊರತಾಗಿ ಇನ್ನೊಂದು ಗಿಡವಿದ್ದು, ಅದನ್ನು ಮನೆಯಲ್ಲಿ ನೆಟ್ಟರೆ ಅದೂ ಕೂಡ ಹೆಚ್ಚು ಪ್ರಯೋಜನಯಾಗಿದೆ. ಅದುವೇ ಶಮಿ ಗಿಡ. ಮನೆಯಲ್ಲಿ ಈ ಗಿಡವನ್ನು ನೆಟ್ಟರೆ ಸಂತೋಷ ಮತ್ತು ಸಮೃದ್ಧಿ ಮಾತ್ರವಲ್ಲದೆ ಹಣದ ಕೊರತೆಯೂ ದೂರವಾಗುತ್ತದೆ. ಹಾಗೆಯೇ ಶಮಿ ಗಿಡವನ್ನು ನೆಟ್ಟರೆ ಶನಿದೇವನ ಪ್ರಕೊಪದಿಂದ ಕೂಡ ಪಾರಾಗಬಹುದು. 

ಹಣಕಾಸಿನ ಬಿಕ್ಕಟ್ಟು ನಿವಾರಣೆಯಾಗುತ್ತದೆ
ಶಮಿ ಗಿಡವು ಶಿವನಿಗೆ ಅತ್ಯಂತ ಪ್ರಿಯವಾದದ್ದು ಎಂದು ಪರಿಗಣಿಸಲಾಗಿದೆ ಮತ್ತು ವಾಸ್ತು (Vastu Tips) ಪ್ರಕಾರ ಇದನ್ನು ಮನೆಯಲ್ಲಿ ನೆಡುವುದರಿಂದ ಸಂತೋಷ ಮತ್ತು ಸಮೃದ್ಧಿಯನ್ನು ತರುತ್ತದೆ ಮತ್ತು ಹಣದ ಕೊರತೆ ನಿವಾರಿಸುತ್ತದೆ. ಈ ಸಸ್ಯವು ನಿಮ್ಮ ಮನೆಯಲ್ಲಿನ ಅಪಶ್ರುತಿಯನ್ನು ಸಹ ಕೊನೆಗೊಳಿಸುತ್ತದೆ ಮತ್ತು ಈ ಸಸ್ಯವನ್ನು ನೆಡುವುದರಿಂದ ಶನಿ ಸಾಡೇ ಸಾತಿ (Shani Effect) ಮತ್ತು ಎರಡೂವರೆ ವರ್ಷಗಳ  ದುಷ್ಪ್ರಭಾವವನ್ನು ತಪ್ಪಿಸಬಹುದು ಎಂದು ನಂಬಲಾಗಿದೆ. ಇದಲ್ಲದೆ, ಈ ಸಸ್ಯವು ಮದುವೆಗೆ ಸಂಬಂಧಿಸಿದ ಸಮಸ್ಯೆಗಳನ್ನು ತೆಗೆದುಹಾಕುವಲ್ಲಿ ಪರಿಣಾಮಕಾರಿ ಎಂದು ಪರಿಗಣಿಸಲಾಗಿದೆ.

ಈ ಸಸ್ಯವನ್ನು ನೆಡುವ ಮೊದಲು, ಕೆಲವು ವಿಷಯಗಳನ್ನು ನೆನಪಿನಲ್ಲಿಟ್ಟುಕೊಳ್ಳುವುದು ಬಹಳ ಮುಖ್ಯ. ಮೊದಲನೆಯದಾಗಿ, ಶನಿವಾರದಂದು ಈ ಸಸ್ಯವನ್ನು ನೆಡುವುದು ಪ್ರಯೋಜನಕಾರಿ ಎಂದು ಪರಿಗಣಿಸಲಾಗುತ್ತದೆ ಮತ್ತು ವಿಶೇಷವಾಗಿ ದಸರಾ ದಿನದಂದು ಹೆಚ್ಚು ಮಂಗಳಕರವೆಂದು ಪರಿಗಣಿಸಲಾಗುತ್ತದೆ. ಈ ಪೂಜನೀಯ ಸಸ್ಯವನ್ನು ನೆಡಲು ಶುದ್ಧವಾದ ಮಣ್ಣನ್ನು ಬಳಸಬೇಕು.

ಗಿಡವನ್ನು ಹೀಗೆ ಪೂಜಿಸಿ (Shami Plant Worshiping)
ಶಮಿ ಗಿಡವನ್ನು ಮನೆಯೊಳಗೆ ನೆಡಬಾರದು. ಅದನ್ನು ಯಾವಾಗಲೂ ಮನೆಯ ಮುಖ್ಯ ಬಾಗಿಲಿನ ಮೇಲೆ ಇರಿಸಿ ಮತ್ತು ಮನೆಯಿಂದ ಹೊರಡುವಾಗ ನಿಮ್ಮ ಬಲಭಾಗದಲ್ಲಿ ಇರುವಂತಹ ದಿಕ್ಕಿನಲ್ಲಿರಬೇಕು. ಅಂದರೆ ಮುಖ್ಯ ದ್ವಾರದ ಎಡಭಾಗದಲ್ಲಿ ಗಿಡವನ್ನು ನೆಟ್ಟರೆ ಶುಭ. ನೀವು ಈ ಸಸ್ಯವನ್ನು ಮುಖ್ಯ ಗೇಟ್‌ನಲ್ಲಿ ನೆಡಲು ಬಯಸದಿದ್ದರೆ ಅಥವಾ ಮೇಲಿನ ಮಹಡಿಯಲ್ಲಿ ಇರಿಸಲು ಬಯಸದಿದ್ದರೆ, ನೀವು ಅದನ್ನು ದಕ್ಷಿಣ ದಿಕ್ಕಿನಲ್ಲಿ ಟೆರೇಸ್‌ನಲ್ಲಿ ನೆಡಬಹುದು. ಅಲ್ಲದೆ, ಸೂರ್ಯನ ಸಾಕಷ್ಟು ಬಳಕಿಗಾಗಿ ಪೂರ್ವ ದಿಕ್ಕಿನಲ್ಲಿ ನೆಡಬಹುದು.

ಇದನ್ನೂ ಓದಿ-Astrology : ರಾಶಿಯ ಪ್ರಕಾರ ಯಾವ ಲೋಹದ ಆಭರಣ ಧರಿಸಿದರೆ ಅದೃಷ್ಟ ಖುಲಾಯಿಸುತ್ತೆ ಗೊತ್ತಾ?

ಗಿಡದ ಆಶೀರ್ವಾದ ಪಡೆಯಲು ಸಂಜೆ ಮನೆಯ ದೇವಸ್ಥಾನದಲ್ಲಿ ದೀಪ ಹಚ್ಚಿದ ನಂತರ ಶಮಿ ಗಿಡಕ್ಕೂ ಪೂಜೆ ಮಾಡಿ. ಗಿಡದ ಮುಂದೆ ದೀಪವನ್ನೂ ಬೆಳಗಿ. ಇದು ಆರ್ಥಿಕ ಸ್ಥಿತಿಯನ್ನು ಬಲಪಡಿಸುತ್ತದೆ ಮತ್ತು ವ್ಯರ್ಥ ವೆಚ್ಚವನ್ನು ಕಡಿಮೆ ಮಾಡುತ್ತದೆ ಎಂದು ನಂಬಲಾಗಿದೆ.

ಇದನ್ನೂ ಓದಿ-Kartik Purnima 2021: ಕಾರ್ತಿಕ ಹುಣ್ಣಿಮೆಯ ಸ್ನಾನಕ್ಕೆ ಯಾಕಿಷ್ಟು ಮಹತ್ವ? ಇಲ್ಲಿ ತಿಳಿಯಿರಿ

(Disclaimer: ಇಲ್ಲಿ ನೀಡಲಾಗಿರುವ ಮಾಹಿತಿ ಸಾಮಾನ್ಯ ಜ್ಞಾನ ಹಾಗೂ ಧಾರ್ಮಿಕ ನಂಬಿಕೆಗಳನ್ನು ಆಧರಿಸಿದೆ. ಅನುಸರಿಸುವುದಕ್ಕು ಮುನ್ನ ವಿಷಯ ತಜ್ಞರ ಸಲಹೆ ಪಡೆಯಿರಿ. ಝೀ ಹಿಂದೂಸ್ತಾನ್ ಕನ್ನಡ ಈ ಮಾಹಿತಿಯನ್ನು ಖಚಿತಪಡಿಸುವುದಿಲ್ಲ)

ಇದನ್ನೂ ಓದಿ-Chandra Grahan 2021: ಶುಭ ಫಲಿತಾಂಶಗಳನ್ನೂ ನೀಡುವ ಚಂದ್ರಗ್ರಹಣ: ಈ ಬಾರಿ ಯಾವ ರಾಶಿಯವರಿಗೆ ಲಾಭ?

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News