Shani Remedies: ತುಳಸಿ ಎಲೆಗಳ ಮಾಲೆ ಈ ಅದ್ಬುತ ಲಾಭ ನೀಡುತ್ತದೆ

Saturday Remedies:ಯಾವುದೇ ವ್ಯಕ್ತಿಯ ಜಾತಕದಲ್ಲಿ ಒಂದು ವೇಳೆ ಶನಿಯ ಮಹಾದೆಸೆ ನಡೆಯುತ್ತಿದ್ದರೆ, ಆ ವ್ಯಕ್ತಿಗೆ ಹಲವು ರೀತಿಯ ಸಮಸ್ಯೆಗಳು ಎದುರಾಗುತ್ತವೆ. ಇಂತಹ ಪರಿಸ್ಥಿತಿಯಲ್ಲಿ ಶನಿಯ ಅಶುಭ ಪ್ರಭಾವವನ್ನು ಕಡಿಮೆಗೊಳಿಸಲು ಜೋತಿಷ್ಯ ಶಾಸ್ತ್ರದಲ್ಲಿ ಕೆಲ ಉಪಾಯಗಳನ್ನು ಸೂಚಿಸಲಾಗಿದೆ. ಬನ್ನಿ ಈ ಉಪಾಯಗಳು ಯಾವುವು ತಿಳಿದುಕೊಳ್ಳೋಣ,  

Written by - Nitin Tabib | Last Updated : Jun 11, 2022, 02:35 PM IST
  • ಶನಿದೇವ ಎಲ್ಲಾ ವ್ಯಕ್ತಿಗಳ ಒಳ್ಳೆಯ ಮತ್ತು ಕೆಟ್ಟ ಕರ್ಮಗಳ ಖಾತೆಯನ್ನು ಇಡುತ್ತಾನೆ.
  • ವ್ಯಕ್ತಿ ಮಾಡುವ ಒಳ್ಳೆಯ ಕರ್ಮಗಳು ಒಳ್ಳೆಯ ಫಲಿತಾಂಶಗಳನ್ನು ನೀಡುತ್ತವೆ

    ಮತ್ತು ಕೆಟ್ಟ ಕರ್ಮಗಳು ಕೆಟ್ಟ ಫಲಗಳ ಪ್ರಾಪ್ತಿಗೆ ಕಾರಣವಾಗುತ್ತವೆ.
Shani Remedies: ತುಳಸಿ ಎಲೆಗಳ ಮಾಲೆ ಈ ಅದ್ಬುತ  ಲಾಭ ನೀಡುತ್ತದೆ  title=
Shani Remedies

Shani Remedies: ಶನಿದೇವ ಎಲ್ಲಾ ವ್ಯಕ್ತಿಗಳ ಒಳ್ಳೆಯ ಮತ್ತು ಕೆಟ್ಟ ಕರ್ಮಗಳ ಖಾತೆಯನ್ನು ಇಡುತ್ತಾನೆ. ವ್ಯಕ್ತಿ ಮಾಡುವ ಒಳ್ಳೆಯ ಕರ್ಮಗಳು ಒಳ್ಳೆಯ ಫಲಿತಾಂಶಗಳನ್ನು ನೀಡುತ್ತವೆ ಮತ್ತು ಕೆಟ್ಟ ಕರ್ಮಗಳು ಕೆಟ್ಟ ಫಲಗಳ ಪ್ರಾಪ್ತಿಗೆ ಕಾರಣವಾಗುತ್ತವೆ. ಇಂತಹ ಪರಿಸ್ಥಿತಿಯಲ್ಲಿ, ಒಬ್ಬ ವ್ಯಕ್ತಿಯು ಶನಿಯ ಸಾಡೆಸಾತಿ ಮತ್ತು ಶನಿಯ ಎರಡೂವರೆ ವರ್ಷಗಳ ಕಾಟದಿಂದ ಬಳಲುತ್ತಿದ್ದರೆ, ವ್ಯಕ್ತಿಯ ಕರ್ಮಗಳ ಆಧಾರದ ಮೇಲೆ  ಫಲಿತಾಂಶ ಸಿಗುತ್ತದೆ. ಸಾಮಾನ್ಯವಾಗಿ ಶನಿಯ ಹೆಸರು ಕೇಳಿದರೆ ಸಾಕು ಜನರು ಭಯಪಡುತ್ತಾರೆ. ಮತ್ತು ಶನಿಯನ್ನು ಮೆಚ್ಚಿಸಲು ಹಲವಾರು ಕ್ರಮಗಳನ್ನು ಕೈಗೊಳ್ಳುತ್ತಾರೆ. ಇದರಿಂದ ಶನಿಯ ಕೃಪಾದೃಷ್ಟಿ ನಮ್ಮ ಮೇಲಿರಲಿ ಎಂಬುದು ಅವರ ಉದ್ದೇಶವಾಗಿರುತ್ತದೆ. ಶನಿವಾರದಂದು ಕೆಲ ಉಪಾಯಗಳನ್ನು ಅನುಸರಿಸಿದರೆ ಶನಿಯ ಮಹಾದೆಸೆಯಿಂದ ಮುಕ್ತಿ ಹೊಂದಬಹುದು. ಅಲ್ಲದೆ, ಶನಿಯ ಪ್ರಭಾವವನ್ನು ಸಹ ಕಡಿಮೆ ಮಾಡಬಹುದು.

ಶನಿ ಸಾಡೆಸಾತಿ ಸತಿ ಅಥವಾ ಎರಡೂವರೆ ವರ್ಷಗಳ ಕಾಟ ಕಡಿಮೆ ಮಾಡಿಕೊಳ್ಳುವ ಉಪಾಯಗಳು
ತುಳಸಿ ಎಲೆಗಳ ಉಪಾಯ-
ಜ್ಯೋತಿಷ್ಯ ಶಾಸ್ತ್ರದಲ್ಲಿ ತುಳಸಿಯನ್ನು ಪವಿತ್ರವೆಂದು ಪರಿಗಣಿಸಲಾಗಿದೆ. ಹೀಗಿರುವಾಗ, ಶನಿಯ ದುಷ್ಪರಿಣಾಮಗಳನ್ನು ಕಡಿಮೆ ಮಾಡಲು, ಒಬ್ಬ ವ್ಯಕ್ತಿಯು 108 ತುಳಸಿ ಎಲೆಗಳ ಮಾಲೆಯನ್ನು ಮಾಡಿ ಅದರ ಮೇಲೆ ಶ್ರೀರಾಮನ ಹೆಸರನ್ನು ಬರೆಯಬೇಕು. ಮತ್ತು ಪ್ರತಿ ಶನಿವಾರ ಈ ಮಾಲೆಯನ್ನು ಆಂಜನೇಯನಿಗೆ ನಿಯಮಿತವಾಗಿ ಅರ್ಪಿಸಬೇಕು. ಇದನ್ನು ಕನಿಷ್ಠ 40 ಶನಿವಾರಗಳವರೆಗೆ ನಿರಂತರವಾಗಿ ಮಾಡಬೇಕು. ಹನುಮಂತನನ್ನು ಮೆಚ್ಚಿಸುವುದರಿಂದ ಶನಿದೇವನ ಕೃಪೆಯೂ ಪ್ರಾಪ್ತಿಯಾಗುತ್ತದೆ ಎಂದು ನಂಬಲಾಗಿದೆ.

ಶನಿವಾರದಂದು ಉಪವಾಸ ಕೈಗೊಳ್ಳಿ- ನೀವು ಕೂಡ ಶನಿದೇವನನ್ನು ಪ್ರಸನ್ನಗೊಳಿಸಲು ಬಯಸುತ್ತಿದ್ದರೆ, ನೀವು ಶನಿವಾರದಂದು ಉಪವಾಸವನ್ನು ಕೈಗೊಳ್ಳಬಹುದು. ಶುಭ ದಿನವನ್ನು ನೋಡಿ ನಂತರ ಶನಿವಾರದ ಉಪವಾಸವನ್ನು ಪ್ರಾರಂಭಿಸಿ ಅಥವಾ ಉಪವಾಸವನ್ನು ಪ್ರಾರಂಭಿಸುವ ಮೊದಲು ಪಂಡಿತರಿಂದ ಸಲಹೆ ಪಡೆದುಕೊಳ್ಳಿ. ಶನಿವಾರದಂದು ಕನಿಷ್ಠ 40 ಉಪವಾಸಗಳನ್ನು ಇಟ್ಟುಕೊಳ್ಳುವುದು ಉತ್ತಮ. ಶನಿವಾರದ ದಿನ ಸಂಜೆ, ಉದ್ದಿನ ಬೇಳೆಯ ಖಿಚಡಿಯನ್ನು ತಯಾರಿಸಿ ಮತ್ತು ಅದನ್ನು ದೇವಾಲಯದಲ್ಲಿರುವ ಎಲ್ಲಾ ದೇವತೆಗಳಿಗೆ ಅರ್ಪಿಸಿ. ಆರತಿ ಮತ್ತು ಪೂಜೆಯ ನಂತರ ಖಿಚಡಿಯನ್ನು ನೀವೇ ಸೇವಿಸಿ.

ಕಬ್ಬಿಣದ ಉಂಗುರವನ್ನು ಧರಿಸಿ- ಸಾಡೆಸಾತಿ ಮತ್ತು ಶನಿಯ ಎರಡೂವರೆ ವಷಗಳ ಕಾಟದಿಂದ ಬಳಲುತ್ತಿರುವ ಜನರು ಶನಿವಾರದಂದು ತಮ್ಮ ಕೈಯಲ್ಲಿ ಕಬ್ಬಿಣದ ಉಂಗುರವನ್ನು ಧರಿಸಬೇಕು ಎಂದು ಸಲಹೆ ನೀಡಲಾಗುತ್ತದೆ. ಈ ಕಬ್ಬಿಣದ ಉಂಗುರ ಅಥವಾ ಉಂಗುರವು ಕಪ್ಪು ಕುದುರೆ ಅಥವಾ ದೋಣಿಯ ಮೊಳೆಯಿಂದ ತಯಾರಿಸಬೇಕು ಎನ್ನಲಾಗಿದೆ. ಅಲ್ಲದೆ, ಕುಲುಮೆಯಲ್ಲಿ ಬಿಸಿ ಮಾಡುವ ಮೂಲಕ ಉಂಗುರವನ್ನು ತಯಾರಿಸಲಾಗಿಲ್ಲ ಎಂಬುದನ್ನೊಮ್ಮೆ ಖಚಿತಪಡಿಸಿ. ಇದನ್ನು ಶನಿವಾರದಂದು ಶನಿ ಅಂದರೆ ಮಧ್ಯಮ ಬೆರಳಿನಲ್ಲಿ ಧರಿಸಿ.

ಸುಂದರಕಾಂಡವನ್ನು ಪಠಿಸಿ- ಶನಿವಾರದಂದು ಸುಂದರಕಾಂಡವನ್ನು ಪಠಿಸಿದರೆ, ವ್ಯಕ್ತಿಯ ಎಲ್ಲಾ ಭಯಗಳು ಕೊನೆಗೊಳ್ಳುತ್ತವೆ ಮತ್ತು ಶನಿ ದೇವನು ಹನುಮನ ಭಕ್ತಿಯಿಂದ ಸಂತೋಷಪಡುತ್ತಾನೆ ಎಂದು ನಂಬಲಾಗಿದೆ. ಈ ಸುಂದರಕಾಂಡವನ್ನು ಪಠಿಸಾಲು ಮಂಗಳವಾರ ಮತ್ತು ಶನಿವಾರದಂದು ಶುಭದಿನದಿಂದ ಪ್ರಾರಂಭಿಸಿ ಮತ್ತು ಇದನ್ನು 40 ಮಂಗಳವಾರ ಮತ್ತು ಶನಿವಾರದವರೆಗೆ ಪಠಿಸಿ.

ಶಮಿ ವೃಕ್ಷದ ಮರದಿಂದ ಹವನ ಮಾಡಿ- ಶನಿ ದೇವನಿಗೆ ಶಮಿ ಗಿಡ ತುಂಬಾ ಪ್ರಿಯ. ಶನಿಯ ಮಹಾದೆಸೆಯನ್ನು ತೊಡೆದುಹಾಕಲು, 23 ಸಾವಿರ ಶನಿಯ ವೇದ ಮಂತ್ರ ಅಥವಾ ತಾಂತ್ರಿಕ ಮಂತ್ರವನ್ನು ಜಪಿಸಿ. ಅಲ್ಲದೆ, ಶಮಿ ಮರದ ಕಟ್ಟಿಗೆಯನ್ನು ಬಳಸಿ 230 ಬಾರಿ ಹವನ ಮಾಡಿ. ಇದರಿಂದ ಶನಿಯ ದುಷ್ಪರಿಣಾಮಗಳನ್ನು ಕಡಿಮೆ ಮಾಡಬಹುದು.

ಇದನ್ನೂ ಓದಿ-Drying Plants Indication: ತುಳಸಿಯಂತೆಯೇ ಈ ಸಸ್ಯಗಳ ಒಣಗುವಿಕೆ ಕೂಡ ಶುಭ ಸಂಕೇತಗಳನ್ನು ನೀಡುತ್ತವೆ

ಅತ್ಯಂತ ಪರಿಣಾಮಕಾರಿ ಪರಿಹಾರ- ಯಾವುದೇ ವ್ಯಕ್ತಿಯ ಶನಿದೆಸೆ ನಡೆಯುತ್ತಿದ್ದರೆ, ಒಂದು ಕಪ್ಪು ಬಣ್ಣದ ವಸ್ತ್ರದಲ್ಲಿ ಕಾಡಿಗೆ, ಕಲ್ಲಿದ್ದಲು, ಕಪ್ಪು ಉದ್ದಿನ ಬೇಳೆ, ಕಪ್ಪು ಎಳ್ಳನ್ನು ಕಟ್ಟಿ, ಅದನ್ನು ಆ ವ್ಯಕ್ತಿಯ ಮೇಲೆ ಏಳು ಬಾರಿ ನಿವಾಳಿಸಿ ಅದನ್ನು ಹರಿಯುವ ನದಿಯಲ್ಲಿ ವಿಸರ್ಜಿಸಬೇಕು ಎನ್ನಲಾಗಿದೆ. ಆದರೆ, ಇದನ್ನು ಶನಿವಾರ ಮಾಡಿದರೆ ಉತ್ತಮ.

ಇದನ್ನೂ ಓದಿ-Neem Remedies: ಬೇವಿನ ಮರದ ಈ ಉಪಾಯಗಳು ನಿಮಗೆ ಕೇತು, ಶನಿ ಹಾಗೂ ಪಿತೃದೋಷದಿಂದ ಮುಕ್ತಿ ನೀಡುತ್ತವೆ

(ಹಕ್ಕುತ್ಯಾಗ- ಈ ಲೇಖನದಲ್ಲಿ ನೀಡಲಾಗಿರುವ ಮಾಹಿತಿ ಸಾಮಾನ್ಯ ಜ್ಞಾನ ಹಾಗೂ ಧಾರ್ಮಿಕ ನಂಬಿಕೆಗಳನ್ನು ಆಧರಿಸಿದೆ. ಜೀ ಕನ್ನಡ ನ್ಯೂಸ್ ಈ ಮಾಹಿತಿಯನ್ನು ಪುಷ್ಠಿಕರಿಸುವುದಿಲ್ಲ)

ಇದನ್ನೂ ನೋಡಿ-

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News