ಈ ರಾಶಿಯವರಿಗೆ ಆರಂಭವಾಗಲಿದೆ ಏಳೂವರೆ ಶನಿ ದೆಸೆ, ಯಾರಿಗೆ ಎದುರಾಗಲಿದೆ ಅತಿ ಹೆಚ್ಚು ಸಂಕಷ್ಟ ?

 ಶನಿಯ ಸಾಡೇ ಸತಿ ಅಥವಾ  ಎರಡೂವರೆ ವರ್ಷದ ಶನಿ ದೆಸೆ ಪ್ರಾರಂಭವಾದರೆ, ವ್ಯಕ್ತಿಯು ಅನೇಕ ರೀತಿಯ ತೊಂದರೆಗಳನ್ನು ಎದುರಿಸಬೇಕಾಗುತ್ತದೆ. ಈ ಸಮಯದಲ್ಲಿ, ವ್ಯಕ್ತಿಯ ಘನತೆ ಕಡಿಮೆಯಾಗುತ್ತದೆ.

Written by - Ranjitha R K | Last Updated : Jan 31, 2022, 05:09 PM IST
  • ಶನಿದೇವನು ವ್ಯಕ್ತಿಯ ಕರ್ಮವನ್ನು ನೋಡಿ, ಕರ್ಮಕ್ಕೆ ತಕ್ಕಂತೆ ಫಲ ನೀಡುತ್ತಾನೆ.
  • ಸಾಡೇಸಾತಿ, ಎರಡೂವರೆ ವರ್ಷದ ಶನಿ ದೆಸೆ ಪ್ರಾರಂಭವಾದರೆ, ತೊಂದರೆಗಳನ್ನು ಎದುರಿಸಬೇಕಾಗುತ್ತದೆ.
  • ಯಾವಾಗ ಆಗಲಿದೆ ಶನಿದೇವನ ರಾಶಿ ಪರಿವರ್ತನೆ
ಈ ರಾಶಿಯವರಿಗೆ ಆರಂಭವಾಗಲಿದೆ ಏಳೂವರೆ ಶನಿ ದೆಸೆ,  ಯಾರಿಗೆ ಎದುರಾಗಲಿದೆ ಅತಿ ಹೆಚ್ಚು ಸಂಕಷ್ಟ ? title=
ಯಾವಾಗ ಆಗಲಿದೆ ಶನಿದೇವನ ರಾಶಿ ಪರಿವರ್ತನೆ (file photo)

ನವದೆಹಲಿ : ಶನಿ ದೇವನನ್ನು (Shani deva) ಕರ್ಮದ ದೇವರು ಅಥವಾ ಕರ್ಮ ಫಲದಾತ ಎಂದು ಕರೆಯುತ್ತಾರೆ. ಶನಿದೇವನು ವ್ಯಕ್ತಿಯ ಕರ್ಮವನ್ನು ನೋಡಿ, ಕರ್ಮಕ್ಕೆ ತಕ್ಕಂತೆ ಫಲ ನೀಡುತ್ತಾನೆ. ಶನಿ ದೇವನನ್ನು ಮೆಚ್ಚಿಸುವುದು ಸುಲಭವಲ್ಲ. ಆ ಕಾರಣದಿಂದಲೇ ಆತನನ್ನು ಕಠೋರ ದೇವ ಎಂದು ಪರಿಗಣಿಸಲಾಗಿದೆ. ವಿಶೇಷವಾಗಿ ಶನಿಯ ಸಾಡೇ ಸತಿ (Shani sade sathi) ಅಥವಾ  ಎರಡೂವರೆ ವರ್ಷದ ಶನಿ ದೆಸೆ ಪ್ರಾರಂಭವಾದರೆ, ವ್ಯಕ್ತಿಯು ಅನೇಕ ರೀತಿಯ ತೊಂದರೆಗಳನ್ನು ಎದುರಿಸಬೇಕಾಗುತ್ತದೆ. ಈ ಸಮಯದಲ್ಲಿ, ವ್ಯಕ್ತಿಯ ಘನತೆ ಕಡಿಮೆಯಾಗುತ್ತದೆ. ಉದ್ಯೋಗ ಜೀವನದಲ್ಲಿ ಅನೇಕ ಸವಾಲುಗಳನ್ನು ಎದುರಿಸಬೇಕಾಗುತ್ತದೆ.  

ಶನಿ ಸಾಡೇಸಾತಿ:
ಸಾಡೇಸಾತಿ (Sade sathi) ಅಥವಾ ಏಳೂವರೆ ವರ್ಷದ ಶನಿ ದೆಸೆ,  ಯಾವುದಾದರೂ ರಾಶಿಯಲ್ಲಿ ಆರಂಭವಾದರೆ, ಶನಿದೇವನು (Shanideva) ಆ ರಾಶಿಯ ಮೇಲೆ ಏಳೂವರೆ ವರ್ಷಗಳ ಕಾಲ ತನ್ನ ಪ್ರಭಾವ ಬೀರುತ್ತಾನೆ. ಇದು ಒಳ್ಳೆಯ ಮತ್ತು ಕೆಟ್ಟ ಎರಡೂ ಪರಿಣಾಮಗಳನ್ನು ಒಳಗೊಂಡಿರುತ್ತದೆ.  ಸದ್ಯ ಧನು (Sagitarius), ಮಕರ, ಕುಂಭ ರಾಶಿಯಲ್ಲಿ ಶನಿದೇವನ ಸಾಡೇ ಸತಿ ನಡೆಯುತ್ತಿದೆ. 

ಇದನ್ನೂ ಓದಿ : Planet Mercury: ಈ ಎರಡು ರಾಶಿಗಳ ಜನರ ಮೇಲೆ ಬುಧನ ವಿಶೇಷ ಕೃಪೆ ಇರುತ್ತದೆ, ಇವರಿಗೆ ಜೀವನದಲ್ಲಿ ಎಲ್ಲಾ ಸುಖ-ಸೌಕರ್ಯಗಳು ಸಿಗುತ್ತವೆ

ಎರಡೂವರೆ ವರ್ಷದ ಶನಿ ದೆಸೆ : 
ಎರಡೂವರೆ ವರ್ಷದ ಶನಿ ದೆಸೆ ಮಿಥುನ (Gemini)ಮತ್ತು ತುಲಾ ರಾಶಿಯಲ್ಲಿ (Libra) ನಡೆಯುತ್ತಿದೆ. 

ಯಾವಾಗ  ಆಗಲಿದೆ ಶನಿದೇವನ ರಾಶಿ ಪರಿವರ್ತನೆ : 
ಶನಿ ದೇವನನ್ನು ಮಕರ ರಾಶಿ ಮತ್ತು  ಕುಂಭ ರಾಶಿಯ ಅಧಿಪತಿ ಎಂದು ಕರೆಯಲಾಗುತ್ತದೆ. ಪ್ರಸ್ತುತ ಶನಿದೇವನು ಮಕರ ರಾಶಿಯಲ್ಲಿ ಸಂಚಾರ ಮಾಡುತ್ತಿದ್ದು, ಏಪ್ರಿಲ್ 29, 222 ರಂದು ಮಕರ ರಾಶಿಯಿಂದ ಕುಂಭ ರಾಶಿಗೆ ಪ್ರವೇಶಿಸಲಿದ್ದಾನೆ. ಶನಿದೇವನು (Shanideva) ಕುಂಭಕ್ಕೆ ಪ್ರವೇಶಿಸಿದ ತಕ್ಷಣ, ಮಿಥುನ, ತುಲಾ ಮತ್ತು ಧನು ರಾಶಿಯವರಿಗೆ ಶನಿ  ದೆಸೆಯಿಂದ ಮುಕ್ತಿ ಸಿಗಲಿದೆ. ಇದರಲ್ಲಿ ಮಿಥುನ ಮತ್ತು ತುಲಾ ರಾಶಿಯವರಿಗೆ ಶನಿ ಧೈಯದಿಂದ ಮುಕ್ತಿ ದೊರೆಯುತ್ತದೆ. ಅಂದರೆ ಮಿಥುನ, ತುಲಾ ರಾಶಿಯವರಿಗೆ ಎರಡೂವರೆ ವರ್ಷದ ಶನಿ ದೆಸೆಯಿಂದ ಮುಕ್ತಿ ಸಿಕ್ಕಿದರೆ, ಧನು ರಾಶಿ ಶನಿಯ ಸಾಡೇ ಸಾತಿಯಿಂದ (Shani sade sathi) ಮುಕ್ತಿ ಹೊಂದಲಿದೆ. 

ಯಾರ ಮೇಲಿರಲಿದೆ ಸಾಡೆಸಾತಿ ಮತ್ತು ಎರಡೂವರೆ  ವರ್ಷದ ಶನಿ ದೆಸೆ :  
ಶನಿದೇವರು ಕುಂಭ ರಾಶಿಯನ್ನು (Aquarius) ಪ್ರವೇಶಿಸಿದ ಕೂಡಲೇ ಶನಿದೇವನ ಸಾಡೇಸಾತಿ ಮಕರ ರಾಶಿಯಲ್ಲಿ (Capricorn) ಆರಂಭವಾಗುತ್ತದೆ.  ಮಕರ ರಾಶಿಯಲ್ಲಿ ಸಾಡೇಸಾತಿಯ ಕೊನೆಯ ಹಂತವು ಪ್ರಾರಂಭವಾಗುತ್ತದೆ. ಇನ್ನು ಕುಂಭ ರಾಶಿಯಲ್ಲಿ ಎರಡನೇ ಹಂತ ಶುರುವಾಗಲಿದೆ. ಮೀನ ರಾಶಿಯಲ್ಲಿ ಇದರ ಮೊದಲ ಹಂತ ಪ್ರಾರಂಭವಾಗಲಿದೆ. 

ಇದನ್ನೂ ಓದಿ : ಮದುವೆಯ ನಂತರ ಯಶಸ್ಸಿನ ಉತ್ತುಂಗಕ್ಕೆ ಏರುತ್ತಾರೆ ಇವರು, ನಿಮ್ಮ ಹೆಸರಿನ ಅಕ್ಷರವನ್ನೊಮ್ಮೆ ನೋಡಿಕೊಳ್ಳಿ

ಶನಿ ಸಾಡೇಸಾತಿಯ ಎರಡನೇ ಹಂತವು ಅತ್ಯಂತ ನೋವಿನಿಂದ ಕೂಡಿರುತ್ತದೆ. ವ್ಯಕ್ತಿಯು ಎಲ್ಲೆಡೆ ತೊಂದರೆಗಳನ್ನು ಅನುಭವಿಸಬೇಕಾಗುತ್ತದೆ. ವೃತ್ತಿಜೀವನದ ಯಶಸ್ಸಿನಲ್ಲಿ ಇದು ತೊಡಕಾಗಲಿದೆ. 

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News