Rashi Parivartan 2021: ಡಿಸೆಂಬರ್ ತಿಂಗಳಿನಿಂದ ಈ 5 ರಾಶಿಗಳ ಜನರ ಭಾಗ್ಯ ನಕ್ಷತ್ರಗಳಂತೆ ಬೆಳಗಲಿದೆ

Rashi Parivartan 2021 - ಗ್ರಹಗಳು ಮತ್ತು ನಕ್ಷತ್ರಪುಂಜಗಳ (Astrology Today) ವಿಷಯದಲ್ಲಿ ಡಿಸೆಂಬರ್ ತಿಂಗಳು ತುಂಬಾ ವಿಶೇಷವಾಗಿದೆ. ಅನೇಕ ಗ್ರಹಗಳು ಮತ್ತು ನಕ್ಷತ್ರಪುಂಜಗಳು ಈ ತಿಂಗಳು ರಾಶಿಯನ್ನು ಬದಲಾಯಿಸುತ್ತಿವೆ (Rashi Parivartan-2021). ಗ್ರಹಗಳ ರಾಶಿಚಕ್ರದಲ್ಲಿನ (Planatary Transition 2021) ಈ ಬದಲಾವಣೆಯ ಪರಿಣಾಮವು ಎಲ್ಲಾ 12 ರಾಶಿಚಕ್ರದ ಚಿಹ್ನೆಗಳ (Zodiac Signs) ಮೇಲೆ ಬೀರಲಿದೆ. 

Written by - Nitin Tabib | Last Updated : Nov 23, 2021, 06:55 PM IST
  • ಗ್ರಹಗಳು ಮತ್ತು ನಕ್ಷತ್ರಪುಂಜಗಳ ವಿಷಯದಲ್ಲಿ ಡಿಸೆಂಬರ್ ತಿಂಗಳು ತುಂಬಾ ವಿಶೇಷವಾಗಿದೆ.
  • ಅನೇಕ ಗ್ರಹಗಳು ಮತ್ತು ನಕ್ಷತ್ರಪುಂಜಗಳು ಈ ತಿಂಗಳು ರಾಶಿಯನ್ನು ಬದಲಾಯಿಸುತ್ತಿವೆ
  • ಗ್ರಹಗಳ ರಾಶಿಚಕ್ರದಲ್ಲಿನ ಈ ಬದಲಾವಣೆಯ ಪರಿಣಾಮವು ಎಲ್ಲಾ 12 ರಾಶಿಚಕ್ರದ ಚಿಹ್ನೆಗಳ ಮೇಲೆ ಬೀರಲಿದೆ.
Rashi Parivartan 2021: ಡಿಸೆಂಬರ್ ತಿಂಗಳಿನಿಂದ ಈ 5 ರಾಶಿಗಳ ಜನರ ಭಾಗ್ಯ ನಕ್ಷತ್ರಗಳಂತೆ ಬೆಳಗಲಿದೆ title=
Rashi Parivartan 2021 (File Photo)

Rashi Parivartan 2021 - ಗ್ರಹಗಳು ಮತ್ತು ನಕ್ಷತ್ರಪುಂಜಗಳ (Astrology Today) ವಿಷಯದಲ್ಲಿ ಡಿಸೆಂಬರ್ ತಿಂಗಳು ತುಂಬಾ ವಿಶೇಷವಾಗಿದೆ. ಅನೇಕ ಗ್ರಹಗಳು ಮತ್ತು ನಕ್ಷತ್ರಪುಂಜಗಳು ಈ ತಿಂಗಳು ರಾಶಿಯನ್ನು ಬದಲಾಯಿಸುತ್ತಿವೆ (Rashi Parivartan-2021). ಗ್ರಹಗಳ ರಾಶಿಚಕ್ರದಲ್ಲಿನ (Planatary Transition 2021) ಈ ಬದಲಾವಣೆಯ ಪರಿಣಾಮವು ಎಲ್ಲಾ 12 ರಾಶಿಚಕ್ರದ ಚಿಹ್ನೆಗಳ (Zodiac Signs) ಮೇಲೆ ಬೀರಲಿದೆ. ಡಿಸೆಂಬರ್ 5 ರಂದು ಮಂಗಳ () ವೃಶ್ಚಿಕ ರಾಶಿಗೆ ಪ್ರವೇಶಿಸಲಿದ್ದಾನೆ. ಅದರ ನಂತರ, ಡಿಸೆಂಬರ್ 8 ರಂದು ಶುಕ್ರನು ಶನಿಯ ರಾಶಿಯಾಗಿರುವ ಮಕರ ರಾಶಿಯನ್ನು  ಪ್ರವೇಶಿಸುತ್ತಾನೆ. ನಂತರ ಡಿಸೆಂಬರ್ 10 ರಂದು ಧನು ರಾಶಿಯಲ್ಲಿ ಬುಧ ಸಂಕ್ರಮಣ ನಡೆಯಲಿದೆ. ಇದಾದ ನಂತರ ಡಿಸೆಂಬರ್ 16 ರಂದು ಸೂರ್ಯ ಮತ್ತು ಬುಧ ಗ್ರಹಗಳ ಸಂಯೋಗದಿಂದ ಧನು ರಾಶಿಯಲ್ಲಿ ಬುಧಾದಿತ್ಯ ಯೋಗ ನಿರ್ಮಾಣಗೊಳ್ಳಲಿದೆ. ಡಿಸೆಂಬರ್ ತಿಂಗಳಿನಲ್ಲಿ ಶುಕ್ರ (Shukra Rashi Parivartan)ಕೂಡ ಹಿಮ್ಮುಖವಾಗಿ ಚಲಿಸಲು ಪ್ರಾರಂಭಿಸುತ್ತಾನೆ. ಡಿಸೆಂಬರ್ 19 ರಂದು, ಶುಕ್ರನು ಮಕರ ಸಂಕ್ರಾಂತಿಯಲ್ಲಿ (Shukra Gochar 2021) ವಕ್ರನಾಗಲಿದ್ದಾನೆ. ನಂತರ ಡಿಸೆಂಬರ್ 29 ರಂದು ಬುಧನು ಧನು ರಾಶಿಯನ್ನು ತೊರೆದು ಮಕರ ರಾಶಿಯನ್ನು ಪ್ರವೇಶಿಸುತ್ತಾನೆ. ಅದರ ನಂತರ, ಡಿಸೆಂಬರ್ 30 ರಂದು, ಶುಕ್ರ ಹಿಮ್ಮುಖ ಚಲನೆಯಲ್ಲಿ ಧನು ರಾಶಿಯಲ್ಲಿ ಮತ್ತೆ ಹಿಂದಿರುಗಲಿದ್ದಾನೆ.  ಗ್ರಹಗಳು ಮತ್ತು ನಕ್ಷತ್ರಪುಂಜಗಳ ಬದಲಾವಣೆಯಿಂದ ಯಾವ ರಾಶಿಯ (Horoscope 2021)  ಜನರ ಭಾಗ್ಯ ಬೆಳಗಲಿದೆ ಎಂಬುದನ್ನೊಮ್ಮೆ ತಿಳಿದುಕೊಳ್ಳೋಣ ಬನ್ನಿ.

1. ಮೇಷ - ಡಿಸೆಂಬರ್ ತಿಂಗಳು ಮೇಷ ರಾಶಿಯ ಜಾತಕದವರ ಜೀವನದಲ್ಲಿ ಅನೇಕ ಮಹತ್ವದ ಬದಲಾವಣೆಗಳನ್ನು ತರಲಿದೆ. ಈ ಸಮಯದಲ್ಲಿ, ಗುರುವಿನ ಸಾಥ್ (Guru Gochar 2021) ನಿಮಗೆ ಸಿಗಲಿದೆ. ಗುರುವಿನ ಪ್ರಭಾವದಿಂದ ನೀವು ಉದ್ಯೋಗ ಮತ್ತು ವ್ಯವಹಾರದಲ್ಲಿ ಬಡ್ತಿ ಪಡೆಯಬಹುದು. ಈ ಸಮಯದಲ್ಲಿ ಮಾನಸಿಕ ಒತ್ತಡ ಕಡಿಮೆಯಾಗುತ್ತದೆ. ಅನೇಕ ಆಸೆಗಳನ್ನು ಈಡೇರಬಹುದು ಸಹೋದರ ಮತ್ತು ಸಹೋದರಿಯ ಬೆಂಬಲ ಸಿಗಲಿದೆ.

2. ಮಿಥುನ - ಮಿಥುನ ರಾಶಿಯವರಿಗೆ ಡಿಸೆಂಬರ್ ತಿಂಗಳು ಉತ್ತಮವಾಗಿರುತ್ತದೆ. ಶಿಕ್ಷಣ ಇಲಾಖೆಗೆ ಸಂಬಂಧಿಸಿದವರಿಗೆ ಈ ಅವಧಿಯಲ್ಲಿ ಬಡ್ತಿ ದೊರೆಯುವ ಸಾಧ್ಯತೆ ಇದೆ. ಪೋಷಕರೊಂದಿಗೆ ಸಂಬಂಧ ಸುಧಾರಿಸುತ್ತದೆ. ಈ ತಿಂಗಳು ಅದೃಷ್ಟವು ನಿಮ್ಮನ್ನು ಬೆಂಬಲಿಸಲಿದೆ. ನಿಂತುಹೋದ ಹಣ ನಿಮ್ಮ ಬಳಿ ವಾಪಸ್ ಬರುವ ಎಲ್ಲಾ ಲಕ್ಷಣಗಳು ಗೋಚರಿಸುತ್ತಿವೆ.

3. ಸಿಂಹ - ನಿಮ್ಮ ವೈವಾಹಿಕ ಜೀವನದಲ್ಲಿ ಆಹ್ಲಾದಕರ ಬದಲಾವಣೆಗಳಾಗಬಹುದು. ಪಾಲುದಾರರೊಂದಿಗಿನ ವಿವಾದಗಳು ಬಗೆಹರಿಯಲಿವೆ. ಪಾಲುದಾರಿಕೆ ವ್ಯವಹಾರದಲ್ಲಿ ಲಾಭವಾಗಬಹುದು. ಘನತೆ-ಗೌರವ ಪ್ರಾಪ್ತಿಯಾಗಲಿದೆ. ನಿಮ್ಮ ಜೀವನವನ್ನು ಸುಧಾರಿಸಲು ನೀವು ಯೋಜನೆಗಳನ್ನು ಮಾಡಬಹುದು.

ಇದನ್ನೂ ಓದಿ-Surya Grahan : 10 ದಿನಗಳಲ್ಲಿ ಸೂರ್ಯಗ್ರಹಣ; ಇಂದಿನಿಂದ ಜಾಗರೂಕರಾಗಿರಿ, ಈ 5 ರಾಶಿಯವರಿಗೆ ಬೀರಲಿದೆ ಅಶುಭ ಪರಿಣಾಮ!

4. ಧನು - ಧನು ರಾಶಿಯ ಜನರಿಗೆ ಈ ತಿಂಗಳು ಅವರ ಕಠಿಣ ಪರಿಶ್ರಮಕ್ಕೆ ಸಂಪೂರ್ಣ ಫಲ ಪ್ರಾಪ್ತಿಯಾಗಲಿದೆ. ಈ ಸಮಯದಲ್ಲಿ ನಿಮ್ಮ ಆತ್ಮವಿಶ್ವಾಸ ಮತ್ತು ಶಕ್ತಿ ಹೆಚ್ಚಾಗಲಿದೆ. ಧನು ರಾಶಿಯವರು ತಮ್ಮ ಭಾವನೆಗಳನ್ನು ವ್ಯಕ್ತಪಡಿಸಬಹುದು. ಕೌಟುಂಬಿಕ ಜೀವನ ಸುಖಮಯವಾಗಿರುತ್ತದೆ. ನೀವು ಹೊಸ ವ್ಯವಹಾರವನ್ನು ಪ್ರಾರಂಭಿಸಲು ಯೋಜಿಸುತ್ತಿದ್ದರೆ ಈ ತಿಂಗಳು ಉತ್ತಮವಾಗಿರುತ್ತದೆ.

ಇದನ್ನೂ ಓದಿ-Tulsi Plant: ಶುಭ-ಅಶುಭ ಘಟನೆಗಳ ಸೂಚನೆ ನೀಡುತ್ತೆ ತುಳಸಿ, ಈ ಬದಲಾವಣೆಗಳನ್ನು ನಿರ್ಲಕ್ಷಿಸಬೇಡಿ

5. ಕುಂಭ - ಕುಂಭ ರಾಶಿಯವರಿಗೆ ಅವರ ಕಾರ್ಯಕ್ಷೇತ್ರದಲ್ಲಿ ಪ್ರಗತಿಯಾಗುವ ಸಾಧ್ಯತೆ ಇದೆ. ಈ ಸಮಯದಲ್ಲಿ, ಕಠಿಣ ಪರಿಶ್ರಮವು ಪೂರ್ಣ ಫಲವನ್ನು ನೀಡುತ್ತದೆ. ನೀವು ಮೊದಲು ಮಾಡಿದ ಹೂಡಿಕೆಯ ಲಾಭವನ್ನು ಪಡೆಯಬಹುದು. ಮನೆಯ ಯಾವುದೇ ಸದಸ್ಯರ ಆರೋಗ್ಯವು ಕೆಟ್ಟದಾಗಿದ್ದರೆ ಅದನ್ನು ಗುಣಪಡಿಸಬಹುದು. ಈ ರಾಶಿಯ ಜನರಿಗೆ ಧನಪ್ರಾಪ್ತಿಯ ಎಲ್ಲಾ ಲಕ್ಷಣಗಳು ಗೋಚರಿಸುತ್ತಿದೆ.

ಇದನ್ನೂ ಓದಿ-ಈ ವಿಷಯಗಳು ಶ್ರೀಮಂತನನ್ನು ಬಡವನನ್ನಾಗಿ ಮಾಡುತ್ತದೆ: ನೀವು ಈ ತಪ್ಪುಗಳನ್ನು ಮಾಡಬೇಡಿ

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News