Vastu tips for home: ಮನೆಯ ಮುಖ್ಯ ದ್ವಾರದಲ್ಲಿ ಈ ಒಂದು ಫೋಟೋ ಹಾಕಿದರೆ ಸಾಕು ಹರಿದು ಬರುತ್ತದೆ ಸುಖ ಸಮೃದ್ದಿ! ಕಷ್ಟ ನಷ್ಟಗಳನ್ನೆಲ್ಲಾ ತಳ್ಳುತ್ತದೆ ದೂರ

Vastu tips for attracting good luck : ವಾಸ್ತುವಿನ ಪ್ರಕಾರ ಮನೆಗೆ ಸುಖ ಸಮೃದ್ದಿ ಬರಬೇಕಾದರೆ ಏನನ್ನು ಹಾಕಬೇಕು ಎನ್ನುವುದನ್ನು ವಾಸ್ತು ಪ್ರಕಾರ ನೋಡೋಣ. 

Written by - Ranjitha R K | Last Updated : Jan 31, 2024, 11:29 AM IST
  • ವಾಸ್ತು ಶಾಸ್ತ್ರದಲ್ಲಿ, ಕೆಲವು ಫೋಟೋಗಳನ್ನು ಮನೆಯ ಮುಖ್ಯ ದ್ವಾರದಲ್ಲಿ ಹಾಕುವಂತೆ ಸೂಚಿಸಲಾಗಿದೆ.
  • ಈ ಫೋಟೋಗಳನ್ನು ಹಾಕುವುದರಿಂದ ಅನೇಕ ರೀತಿಯ ಸಮಸ್ಯೆಗಳಿಂದ ಪರಿಹಾರ ದೊರೆಯುತ್ತದೆ
  • ಪ್ರತಿಯೊಬ್ಬರೂ ತಮ್ಮ ಇಚ್ಛೆಯಂತೆ ಮನೆಯ ಮುಖ್ಯ ದ್ವಾರವನ್ನು ಅಲಂಕರಿಸುತ್ತಾರೆ.
Vastu tips for home: ಮನೆಯ ಮುಖ್ಯ ದ್ವಾರದಲ್ಲಿ ಈ ಒಂದು ಫೋಟೋ ಹಾಕಿದರೆ ಸಾಕು ಹರಿದು ಬರುತ್ತದೆ ಸುಖ ಸಮೃದ್ದಿ!  ಕಷ್ಟ ನಷ್ಟಗಳನ್ನೆಲ್ಲಾ ತಳ್ಳುತ್ತದೆ  ದೂರ title=

Best way to invite positive energy into the home : ವಾಸ್ತು ಶಾಸ್ತ್ರದಲ್ಲಿ, ಕೆಲವು ಫೋಟೋಗಳನ್ನು ಮನೆಯ ಮುಖ್ಯ ದ್ವಾರದಲ್ಲಿ ಹಾಕುವಂತೆ ಸೂಚಿಸಲಾಗಿದೆ. ಈ ಫೋಟೋಗಳನ್ನು ಹಾಕುವುದರಿಂದ ಅನೇಕ ರೀತಿಯ ಸಮಸ್ಯೆಗಳಿಂದ ಪರಿಹಾರ ದೊರೆಯುತ್ತದೆ ಎಂದು ಹೇಳಲಾಗುತ್ತದೆ. ಪ್ರತಿಯೊಬ್ಬರೂ ತಮ್ಮ ಇಚ್ಛೆಯಂತೆ ಮನೆಯ ಮುಖ್ಯ ದ್ವಾರವನ್ನು ಅಲಂಕರಿಸುತ್ತಾರೆ. ಕೆಲವರು ಸಸಿಗಳನ್ನು ನೆಡುತ್ತಾರೆ, ಇನ್ನು ಕೆಲವರು ವಿಂಡ್ ಚೈನ್ ಹಾಕಿದರೆ ಮತ್ತೆ ಕೆಲವರು ದೇವರ ಫೋಟೋಗಳನ್ನು ಹಾಕುತ್ತಾರೆ. ಹಾಗಿದ್ದರೆ ವಾಸ್ತುವಿನ ಪ್ರಕಾರ ಮನೆಗೆ ಸುಖ ಸಮೃದ್ದಿ ಬರಬೇಕಾದರೆ ಏನನ್ನು ಹಾಕಬೇಕು ಎನ್ನುವುದನ್ನು ವಾಸ್ತು ಪ್ರಕಾರ ನೋಡೋಣ. 

ಮಾರುಕಟ್ಟೆಯಲ್ಲಿ ಅನೇಕ ರೀತಿಯ ದೇವರ ಫೋಟೋಗಳು ಇರುತ್ತವೆ. ಆದರೆ ಯಾವುದೇ ಫೋಟೋವನ್ನು ಹಾಕುವ ಮೊದಲು ವಾಸ್ತು ಜ್ಞಾನವನ್ನು ಹೊಂದಿರುವುದು ಅವಶ್ಯಕ.  ವಾಸ್ತು ಗೊತ್ತಿಲ್ಲದೇ ಚೆಂದ ಕಾಣುತ್ತಿದೆ ಎನ್ನುವ ಕಾರಣಕ್ಕೆ ಯಾವುದೋ ಫೋಟೋ ತಂದು ಹಾಕಿದರೆ ಹಲವಾರು ರೀತಿಯ ಸಮಸ್ಯೆಗಳನ್ನು ಎದುರಿಸಬೇಕಾಗಬಹುದು.ಆರೋಗ್ಯ,  ಆರ್ಥಿಕ ಹೀಗೆ ಬೇರೆ ಬೇರೆ ರೀತಿಯ ಸಮಸ್ಯೆಗಳನ್ನು ಎದುರಿಸಬೇಕಾಗಿ ಬರಬಹುದು.  ಮನೆಯ ಮುಖ್ಯ ದ್ವಾರದ ಮೇಲೆ ಯಾವ ರೀತಿಯ ಫೋಟೋಗಳನ್ನು ಹಾಕಿದರೆ ಅನುಕೂಲವಾಗುತ್ತದೆ ಎನ್ನುವುದನ್ನು ವಾಸ್ತುವಿನಲ್ಲಿ ವಿವರವಾಗಿ ಹೇಳಲಾಗಿದೆ. 

ಇದನ್ನೂ ಓದಿ : Vastu Tips:ತಾಯಿ ಲಕ್ಷ್ಮಿ ಸದಾ ನಿಮ್ಮ ಮನೆಯಲ್ಲಿ ನೆಲಸಬೇಕು ಎಂದಾದರೆ? ಮಲಗುವ ಮುನ್ನ ಈ ಕೆಲಸ ಮಾಡಿ!

ಲಕ್ಷ್ಮೀ ದೇವಿಯ ಫೋಟೋ : 
ವಾಸ್ತು ಪ್ರಕಾರ, ಸಂಪತ್ತಿನ ದೇವತೆಯಾದ ಲಕ್ಷ್ಮೀ ದೇವಿಯ ಫೋಟೋವನ್ನು ಮನೆಯ ಮುಖ್ಯ ದ್ವಾರದಲ್ಲಿ ಇರಿಸಬಹುದು. ಅನುಕೂಲವಿದ್ದರೆ ಫೋಟೋ ಬದಲು ವಿಗ್ರಹವನ್ನು ಬೇಕಾದರೂ ಸ್ಥಾಪಿಸಬಹುದು. ಲಕ್ಷ್ಮೀ ದೇವಿಯ ಫೋಟೋವನ್ನು ಲಕ್ಷ್ಮಿ ದೇವಿಯ ಫೋಟೋವನ್ನು ಇರಿಸುವುದರಿಂದ ಮನೆಯಲ್ಲಿ ಧನಾತ್ಮಕ ಶಕ್ತಿಯು ಹರಿಯುತ್ತದೆ. ಲಕ್ಷ್ಮೀ ದೇವಿಯ ಆಶೀರ್ವಾದ ಸದಾ ಮನೆ ಮತ್ತು ಮನೆ ಮಂದಿ ಮೇಲೆ ಇರುತ್ತದೆ. ಇದರಿಂದ ಜೀವನದಲ್ಲಿ ಎಂದಿಗೂ ಆರ್ಥಿಕ ಸಮಸ್ಯೆ ಎದುರಾಗುವುದಿಲ್ಲ. 

ಮನೆಯ ಮುಖ್ಯ ದ್ವಾರಕ್ಕೆ ಹಾಕುವ ಲಕ್ಷ್ಮೀ ದೇವಿಯ ಫೋಟೋ ಹೀಗಿರಬೇಕು :
ಪೋಟೋದಲ್ಲಿ ಲಕ್ಷ್ಮೀ ದೇವಿ ನಗುತ್ತಿರಬೇಕು. ಹಾಗೆಯೇ ಯಾವುದೇ ಕಾರಣಕ್ಕೂ ಮನೆಯಲ್ಲಿ ಲಕ್ಷ್ಮೀ ನಿಂತಿರುವ ಭಂಗಿಯ ಫೋಟೋ ಹಾಕಬಾರದು.  

ಗಣೇಶನ ಚಿತ್ರ :
ಮನೆಯಲ್ಲಿ ಸಂತೋಷ ಮತ್ತು ಸಮೃದ್ಧಿಯನ್ನು ಕಾಪಾಡಿಕೊಳ್ಳಲು, ಮುಖ್ಯ ಬಾಗಿಲಲ್ಲಿ ಗಣೇಶನ ಚಿತ್ರವನ್ನು ಕೂಡಾ ಹಾಕಬಹುದು. ಈ ಫೋಟೋ ಹಾಕಿದರೆ ಮನೆಯಲ್ಲಿ ಸಂತಸ ಮೂಡುತ್ತದೆ.

ಇದನ್ನೂ ಓದಿ : ಮನಿ ಪ್ಲಾಂಟ್ ಅಲ್ಲ, ಈ ಗಿಡ ಮನೆಯಲ್ಲಿ ಬೆಳಸಿ..! ಅದೃಷ್ಟ ಬೆನ್ನತ್ತುವುದಂತು ಗ್ಯಾರಂಟಿ..

ಗಣೇಶನ ಚಿತ್ರ ಹೇಗಿರಬೇಕು? :
 ನೀವು ಮನೆಯ ಮುಖ್ಯ ದ್ವಾರಕ್ಕೆ ಹಾಕುವ ಗಣೇಶನ ಫೋಟೋದಲ್ಲಿ ದಂತ ಎಡಭಾಗದಲ್ಲಿರ ಬೇಕು. ಅಲ್ಲದೆ ಈ ಫೋಟೋವನ್ನು ಮನೆಯ ಈಶಾನ್ಯ ದಿಕ್ಕಿನಲ್ಲಿ ಇರಿಸಬೇಕು. 

 

 ( ಸೂಚನೆ : ಇಲ್ಲಿ ನೀಡಲಾದ ಮಾಹಿತಿಯು ಸಾಮಾನ್ಯ ನಂಬಿಕೆಗಳು ಮತ್ತು ಮಾಹಿತಿಯನ್ನು ಆಧರಿಸಿದೆ. ZEE NEWS ಇದನ್ನು ಖಚಿತಪಡಿಸುವುದಿಲ್ಲ.) 

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://t.co/lCSPNypK2U

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ

Trending News