‘ಪಿತೃ ದೋಷ ಯೋಗ’ದ ಕರಿನೆರಳು; ಈ 3 ರಾಶಿಗಳಿಗೆ ಮುಂದಿನ 30 ದಿನಗಳು ತುಂಬಾ ಸಂಕಷ್ಟ!

ಸೂರ್ಯ ಸಂಕ್ರಮಣ 2023: ಜ್ಯೋತಿಷ್ಯದ ಪ್ರಕಾರ ಮೇಷ ರಾಶಿಯಲ್ಲಿ ಸೂರ್ಯನ ಸಂಕ್ರಮಣವಾಗಲಿದೆ. ಸೂರ್ಯನ ಸಂಯೋಗವು ರಾಹು ಜೊತೆ ಇರುತ್ತದೆ. ಈ ಸಮಯದಲ್ಲಿ ಪಿತೃ ದೋಷ ಯೋಗ ರೂಪಿತವಾಗುತ್ತದೆ. ಈ ಸಮಯದಲ್ಲಿ ಕೆಲವು ರಾಶಿಯವರು ಬಹಳ ಜಾಗರೂಕರಾಗಿರಬೇಕು.

Written by - Puttaraj K Alur | Last Updated : Apr 17, 2023, 01:38 PM IST
  • ಕನ್ಯಾ ರಾಶಿಯವರು ಪಿತೃ ದೋಷ ಯೋಗದಿಂದ ದೊಡ್ಡ ನಷ್ಟವನ್ನು ಅನುಭವಿಸಬಹುದು
  • ಪಿತೃ ದೋಷವು ವೃಶ್ಚಿಕ ರಾಶಿಯವರ ಜೀವನದಲ್ಲಿ ಸಮಸ್ಯೆಗಳನ್ನು ಉಂಟುಮಾಡಬಹುದು
  • ಕುಂಭ ರಾಶಿಯವರ ಜೀವನದಲ್ಲಿ ಪಿತೃ ದೋಷವು ಪ್ರತಿಕೂಲ ಫಲಿತಾಂಶಗಳನ್ನು ನೀಡುತ್ತದೆ
‘ಪಿತೃ ದೋಷ ಯೋಗ’ದ ಕರಿನೆರಳು; ಈ 3 ರಾಶಿಗಳಿಗೆ ಮುಂದಿನ 30 ದಿನಗಳು ತುಂಬಾ ಸಂಕಷ್ಟ! title=
ಸೂರ್ಯ ಸಂಕ್ರಮಣ 2023

ನವದೆಹಲಿ: ಜ್ಯೋತಿಷ್ಯ ಶಾಸ್ತ್ರದ ಪ್ರಕಾರ ಸೂರ್ಯನು ಪ್ರತಿ ತಿಂಗಳು ತನ್ನ ರಾಶಿಯನ್ನು ಬದಲಾಯಿಸುತ್ತಾನೆ. ಏಪ್ರಿಲ್ 14ರಂದು ಸೂರ್ಯನು ಮೀನ ರಾಶಿಯನ್ನು ಬಿಟ್ಟು ಮೇಷ ರಾಶಿಯನ್ನು ಪ್ರವೇಶಿಸುತ್ತಿದ್ದಾನೆ. ರಾಹು ಈಗಾಗಲೇ ಮೇಷದಲ್ಲಿ ಕುಳಿತಿದ್ದಾನೆ. ಸೂರ್ಯನ ಪ್ರವೇಶದಿಂದಾಗಿ ಸೂರ್ಯ ಮತ್ತು ರಾಹುವಿನ ಸಂಯೋಗ ಉಂಟಾಗಿದ್ದು, ಇದರಿಂದ ಪಿತೃ ದೋಷ ಯೋಗ ಉಂಟಾಗುತ್ತಿದೆ. ಜ್ಯೋತಿಷ್ಯ ಶಾಸ್ತ್ರದ ಪ್ರಕಾರ ಉನ್ನತ ಸ್ಥಾನ, ಪ್ರತಿಷ್ಠೆ ಮತ್ತು ಗೌರವಕ್ಕಾಗಿ ಜಾತಕದಲ್ಲಿ ಸೂರ್ಯನು ಮಂಗಳಕರವಾಗಿರುವುದು ಬಹಳ ಮುಖ್ಯ. ಈ ಸಮಯದಲ್ಲಿ ಯಾವ ರಾಶಿಯವರು ಜಾಗರೂಕರಾಗಿರಬೇಕು ಎಂದು ತಿಳಿಯಿರಿ. 

ಕನ್ಯಾ ರಾಶಿ: ಜ್ಯೋತಿಷ್ಯ ಶಾಸ್ತ್ರದ ಪ್ರಕಾರ ಕನ್ಯಾ ರಾಶಿಯ ಜನರು ವಿಶೇಷವಾಗಿ ಜಾಗರೂಕರಾಗಿರಬೇಕು. ಈ ರಾಶಿಗಳ ಜನರು ಪಿತೃ ದೋಷ ಯೋಗದಿಂದ ದೊಡ್ಡ ನಷ್ಟವನ್ನು ಅನುಭವಿಸಬಹುದು. ಊಟೋಪಚಾರದಲ್ಲಿ ಎಚ್ಚರಿಕೆ ಅಗತ್ಯ. ಹಳಸಿದ ಆಹಾರ ಅಥವಾ ಜಂಕ್ ಫುಡ್ ತಿನ್ನಬೇಡಿ. ಪ್ರಯಾಣ ಮಾಡುವಾಗ ಅಥವಾ ವಾಹನ ಚಾಲನೆ ಮಾಡುವಾಗ ಎಚ್ಚರದಿಂದಿರಿ. ಅಪಘಾತ ಸಂಭವಿಸುವ ಸಾಧ್ಯತೆ ಇದೆ. ಸಂಗಾತಿಯೊಂದಿಗೆ ಉದ್ವಿಗ್ನತೆ ಹೆಚ್ಚಾಗುತ್ತದೆ.

ಇದನ್ನೂ ಓದಿ: Cholesterol: ಕೆಟ್ಟ ಕೊಲೆಸ್ಟ್ರಾಲ್ ಅನ್ನು ದೇಹದಲ್ಲಿಯೇ ಕರಗಿಸುತ್ತದೆ ಈ ಎಲೆ!

ವೃಶ್ಚಿಕ ರಾಶಿ: ಜ್ಯೋತಿಷ್ಯ ಶಾಸ್ತ್ರದ ಪ್ರಕಾರ ಪಿತೃ ದೋಷವು ಈ ರಾಶಿಯ ಸ್ಥಳೀಯರ ಜೀವನದಲ್ಲಿ ಸಮಸ್ಯೆಗಳನ್ನು ಉಂಟುಮಾಡಬಹುದು. ತಾಯಿಯ ಆರೋಗ್ಯ ಹದಗೆಡಬಹುದು. ನ್ಯಾಯಾಲಯದ ವಿಷಯಗಳಲ್ಲಿ ತೊಂದರೆ ಹೆಚ್ಚಾಗಬಹುದು. ವೆಚ್ಚದಲ್ಲಿ ಹೆಚ್ಚಳವಾಗಲಿದೆ, ಇದರಿಂದಾಗಿ ಬಜೆಟ್‌ನಲ್ಲಿ ವ್ಯತ್ಯಾಸವಾಗಲಿದೆ. ಹಣಕಾಸಿನ ಸಮಸ್ಯೆಗಳನ್ನು ಎದುರಿಸಬೇಕಾಗಬಹುದು. ಈ ಅವಧಿಯಲ್ಲಿ ಹೂಡಿಕೆ ಮಾಡುವುದನ್ನು ತಪ್ಪಿಸಿ. ಉದ್ಯೋಗಸ್ಥರು ಈ ತಿಂಗಳು ಎಚ್ಚರಿಕೆಯಿಂದ ಕೆಲಸ ಮಾಡಬೇಕಾಗುತ್ತದೆ.  

ಕುಂಭ ರಾಶಿ: ಜ್ಯೋತಿಷ್ಯ ಶಾಸ್ತ್ರದ ಪ್ರಕಾರ ಕುಂಭ ರಾಶಿಯವರ ಜೀವನದಲ್ಲಿ ಪಿತೃ ದೋಷವು ಪ್ರತಿಕೂಲ ಫಲಿತಾಂಶಗಳನ್ನು ನೀಡುತ್ತದೆ. ಅನೇಕ ರೀತಿಯ ತೊಂದರೆಗಳನ್ನು ಎದುರಿಸಬೇಕಾಗುತ್ತದೆ. ರಕ್ತದೊತ್ತಡ, ಕೊಲೆಸ್ಟ್ರಾಲ್ ಮತ್ತು ಮಧುಮೇಹದಂತಹ ಸಮಸ್ಯೆಗಳು ನಿಮ್ಮನ್ನು ಸುತ್ತುವರಿಯಬಹುದು. ಹೀಗಾಗಿ ನೀವು ವಿಶೇಷವಾಗಿ ಜಾಗರೂಕರಾಗಿರಬೇಕು. ಪ್ರೇಮ ಸಂಬಂಧಗಳಲ್ಲಿ ತಪ್ಪು ತಿಳುವಳಿಕೆ ಬರುವ ಸಾಧ್ಯತೆ ಇದೆ. 

ಈ ಕ್ರಮಗಳು ನಿಮ್ಮನ್ನು ರಕ್ಷಿಸುತ್ತದೆ

- ಪೂರ್ವಜರ ಫೋಟೋವನ್ನು ಮನೆಯ ದಕ್ಷಿಣ ದಿಕ್ಕಿನಲ್ಲಿ ಇಡಬೇಕೆಂದು ಜ್ಯೋತಿಷಿಗಳು ಹೇಳುತ್ತಾರೆ. 

- ನಿಯಮಿತವಾಗಿ ಪೂರ್ವಜರಿಗೆ ಮಾಲೆಗಳನ್ನು ಅರ್ಪಿಸುವುದರಿಂದ ಪಿತೃ ದೋಷ ಯೋಗದ ಪರಿಣಾಮಗಳು ಕಡಿಮೆಯಾಗುತ್ತವೆ.

- ಜ್ಯೋತಿಷ್ಯಶಾಸ್ತ್ರದ ಪ್ರಕಾರ ಪೂರ್ವಜರ ಮರಣದ ದಿನಾಂಕದಂದು 21 ಅಥವಾ ಅದಕ್ಕಿಂತ ಹೆಚ್ಚಿನ ಬ್ರಾಹ್ಮಣರನ್ನು ಮನೆಗೆ ಕರೆದು ಅವರಿಗೆ ಆಹಾರ ನೀಡಬೇಕು.

- ಬಡವರಿಗೆ, ನಿರ್ಗತಿಕರಿಗೆ ದಾನ ಮತ್ತು ದಕ್ಷಿಣೆಯನ್ನು ನೀಡುವುದು ಸಹ ಪ್ರಯೋಜನಕಾರಿ.

- ಜ್ಯೋತಿಷಿಗಳ ಪ್ರಕಾರ ಚತುರ್ದಶಿಯಂದು ಅರಳಿ ಮರಕ್ಕೆ ಹಾಲನ್ನು ಅರ್ಪಿಸಬೇಕು. 

- ದಕ್ಷಿಣ ದಿಕ್ಕಿನಲ್ಲಿ ಪೂರ್ವಜರ ಹೆಸರಿನಲ್ಲಿ ದೀಪ ಬೆಳಗಿಸುವುದರಿಂದ ಪೂರ್ವಜರು ಪ್ರಸನ್ನರಾಗುತ್ತಾರೆ ಮತ್ತು ಅವರ ಆಶೀರ್ವಾದ ನಿಮಗೆ ಸಿಗುತ್ತದೆ.  

ಇದನ್ನೂ ಓದಿ: Solar Eclipse 2023: ದಶಕದ ಬಳಿಕ ಸಂಭವಿಸುತ್ತಿದೆ ಕಂಕಣಾಕೃತಿ ಸೂರ್ಯಗ್ರಹಣ 5 ಮಹಾಯೋಗಗಳ ರಚನೆ, ಚಿನ್ನದಂತೆ ಹೊಳೆಯಲಿದೆ ಈ ಜನರ ಭಾಗ್ಯ!

(ಗಮನಿಸಿರಿ: ಇಲ್ಲಿ ನೀಡಲಾದ ಮಾಹಿತಿಯು ಸಾಮಾನ್ಯ ನಂಬಿಕೆಗಳು ಮತ್ತು ಮಾಹಿತಿಯನ್ನು ಆಧರಿಸಿದೆ. ZEE NEWS ಇದನ್ನು ದೃಢಪಡಿಸುವುದಿಲ್ಲ.)

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News