Parenting Tips: ನಿಮ್ಮ ಮಕ್ಕಳಲ್ಲಿ ಆತ್ಮವಿಶ್ವಾಸ ಹೆಚ್ಚಿಸುವ 5 ಪವರ್ ಫುಲ್ ಶಬ್ಧಗಳಿವು!

Parenting Tips: ತಮ್ಮ ಮಕ್ಕಳು ಆತ್ಮವಿಶ್ವಾಸದಿಂದ ಕೂಡಿರಬೇಕು ಎಂದು ಪ್ರತಿಯೊಬ್ಬರೂ ಬಯಸುತ್ತಾರೆ. ನೀವೂ ಅಂತಹವರಲ್ಲಿ ಒಬ್ಬರಾಗಿದ್ದರೆ ಮಕ್ಕಳಲ್ಲಿ ಆತ್ಮವಿಶ್ವಾಸವನ್ನು ಹೆಚ್ಚಿಸಲು ಸಹಾಯಕವಾಗುವ ಕೆಲವು ಶಬ್ದಗಳ ಬಗ್ಗೆ ಇಲ್ಲಿ ತಿಳಿಸಲಿದ್ದೇವೆ. 

Written by - Yashaswini V | Last Updated : Jun 11, 2024, 03:28 PM IST
  • ಮಗು ಸಣ್ಣ ಪುಟ್ಟ ಸಹಾಯ ಮಾಡಿದಾಗ ಅವರಿಗೆ ಭೌತಿಕ ಉಡುಗೊರೆಗಳನ್ನೇ ನೀಡಬೇಕೆಂದಿಲ್ಲ.
  • ಅವರ ಸಾಧನೆಯನ್ನು ಬಾಯಿತುಂಬಾ ಹೊಗಳಿದರೂ ಸಾಕು.
  • ಮಕ್ಕಳು ಒಳ್ಳೆಯ ಕೆಲಸಗಳನ್ನು ಮಾಡಿದಾಗ ಅವರನ್ನು ನೀವು ತುಂಬಾ ಒಳ್ಳೆಯವರು ಎಂದು ಹೇಳುವುದರಿಂದ ಅವರಲ್ಲಿ ತಾವು ಮಾಡುವ ಕೆಲಸ ಒಳ್ಳೆಯದು ಎಂಬ ಭಾವನೆಯನ್ನು ಮೂಡಿಸಬಹುದು.
Parenting Tips: ನಿಮ್ಮ ಮಕ್ಕಳಲ್ಲಿ ಆತ್ಮವಿಶ್ವಾಸ ಹೆಚ್ಚಿಸುವ 5 ಪವರ್ ಫುಲ್ ಶಬ್ಧಗಳಿವು! title=

Parenting Tips: ಪ್ರತಿಯೊಬ್ಬರ ಜೀವನದಲ್ಲಿ ಆತ್ಮವಿಶ್ವಾಸವು ಬಹಳ ಮುಖ್ಯ ಪಾತ್ರ ವಹಿಸುತ್ತದೆ. ಹಾಗಾಗಿ, ಚಿಕ್ಕ ವಯಸ್ಸಿನಿಂದಲೂ ಮಕ್ಕಳಲ್ಲಿ ಆತ್ಮವಿಶ್ವಾಸವನ್ನು (Confidence in children) ಹೆಚ್ಚಿಸಲು ಪೋಷಕರು ವಿಶೇಷ ಗಮನಹರಿಸಬೇಕಾಗುತ್ತದೆ. ಆತ್ಮವಿಶ್ವಾಸವು ಮಕ್ಕಳಲ್ಲಿ ಮೊದಲಿಗೆ ಅವರ ಮೇಲೆ ಅವರಿಗೆ ನಂಬಿಕೆಯನ್ನು ಹುಟ್ಟಿಸುತ್ತದೆ. ಇದರಿಂದ ಎಂತಹುದೇ ಸಂದರ್ಭದಲ್ಲಿ, ಯಾವುದೇ ಸನ್ನಿವೇಶದಲ್ಲಿ ಎದುರಾಗುವ ಸವಾಲುಗಳನ್ನು ನಿವಾರಿಸಲು, ತಮ್ಮ ಗುರಿಯನ್ನು ಸಾಧಿಸಲು ಅವರಿಗೆ ಸಾಧ್ಯವಾಗುತ್ತದೆ. 

ಮೊದಲೇ ತಿಳಿಸಿದಂತೆ ಎಲ್ಲರಿಗಿಂತ ಮುಖ್ಯವಾಗಿ ಪೋಷಕರು ಮಕ್ಕಳಲ್ಲಿ ಆತ್ಮವಿಶ್ವಾಸ (Confidence in children)  ಎಂಬ ಬೀಜವನ್ನು ಬಿತ್ತುವಲ್ಲಿ ಪ್ರಮುಖ ಪಾತ್ರವನ್ನು ವಹಿಸುತ್ತಾರೆ. ನೀವು ನಿಮ್ಮ ಮಕ್ಕಳಲ್ಲಿ ಆತ್ಮವಿಶ್ವಾಸ ಹೆಚ್ಚಿಸಲು ಬಯಸಿದರೆ ದೈನಂದಿನ ಜೀವನದಲ್ಲಿ ಕೆಲವು ಪದಗಳನ್ನು ಬಳಸುವುದು ಹೆಚ್ಚು ಸಹಕಾರಿ ಆಗಿದೆ. ಈ ಲೇಖನದಲ್ಲಿ ಮಕ್ಕಳಲ್ಲಿ ಆತ್ಮವಿಶ್ವಾಸವನ್ನು ಹೆಚ್ಚಿಸಲು ಪೋಷಕರಿಗೆ ಸಹಕಾರಿಯಾಗುವ (Parenting Tips) ಐದು ಪವರ್ ಫುಲ್ ಶಬ್ದಗಳ ಬಗ್ಗೆ ತಿಳಿಯೋಣ... 

ಮಕ್ಕಳಲ್ಲಿ ಆತ್ಮವಿಶ್ವಾಸ ಹೆಚ್ಚಿಸುವ ಪಂಚ ಪವರ್ಫುಲ್ ಶಬ್ಧಗಳೆಂದರೆ:- 
ನಮಗೆ ನಿನ್ನ ಮೇಲೆ ನಂಬಿಕೆ ಇದೆ: 

ನಮಗೆ ನಿನ್ನ ಮೇಲೆ ನಂಬಿಕೆ ಇದೆ ಎಂಬ ಶಬ್ಧವು ನಿಮ್ಮ ಮಗುವಿನ ಸಾಮರ್ಥ್ಯಗಳನ್ನು ನೀವು ನಂಬುತ್ತೀರಿ ಎಂದು ಮನವರಿಕೆ ಮಾಡುವಲ್ಲಿ ಬಹಳ ಪರಿಣಾಮಕಾರಿಯಾಗಿ ಕಾರ್ಯನಿರ್ವಹಿಸುತ್ತದೆ. ಇದು ಮಕ್ಕಳು ತಮ್ಮ ಕಾರ್ಯಗಳನ್ನು ಸಮರ್ಥವಾಗಿ ಪೂರ್ಣಗೊಳಿಸಲು ಅವರನ್ನು ಪ್ರೋತ್ಸಾಹಿಸುತ್ತದೆ. 

ಇದನ್ನೂ ಓದಿ- Parenting Tips: ಯಶಸ್ವಿ ಪೋಷಕರಾಗಲು 5 ನಿಯಮಗಳನ್ನು ಪಾಲಿಸಿ..ನಿಮ್ಮ ಮಕ್ಕಳು ಸುಸಂಸ್ಕೃತರಾಗುತ್ತಾರೆ...!

ನೀವು ತುಂಬಾ ಒಳ್ಳೆಯವರು: 
ಮಗು ಸಣ್ಣ ಪುಟ್ಟ ಸಹಾಯ ಮಾಡಿದಾಗ ಅವರಿಗೆ ಭೌತಿಕ ಉಡುಗೊರೆಗಳನ್ನೇ ನೀಡಬೇಕೆಂದಿಲ್ಲ. ಅವರ ಸಾಧನೆಯನ್ನು ಬಾಯಿತುಂಬಾ ಹೊಗಳಿದರೂ ಸಾಕು. ಮಕ್ಕಳು ಒಳ್ಳೆಯ ಕೆಲಸಗಳನ್ನು ಮಾಡಿದಾಗ ಅವರನ್ನು ನೀವು ತುಂಬಾ ಒಳ್ಳೆಯವರು ಎಂದು ಹೇಳುವುದರಿಂದ ಅವರಲ್ಲಿ ತಾವು ಮಾಡುವ ಕೆಲಸ ಒಳ್ಳೆಯದು ಎಂಬ ಭಾವನೆಯನ್ನು ಮೂಡಿಸಬಹುದು. ಅಷ್ಟೇ ಅಲ್ಲ, ಮುಂದೆಯೂ ಒಳ್ಳೊಳ್ಳೆಯ ಕೆಲಸಗಳನ್ನು ಮಾಡಬೇಕು ಎಂದು ಅವರನ್ನು ಪ್ರೋತ್ಸಾಹಿಸಲು ಇದು ಸಹಾಯಕವಾಗಿದೆ. 

ನೀವು ಇದನ್ನು ಮಾಡಬಹುದು: 
ಯಾವುದೇ ಕೆಲಸವನ್ನು ಮಾಡಲು ಮಕ್ಕಳು ತಮ್ಮಿಂದಾಗುವುದಿಲ್ಲ ಎಂದು ಹಿಂಜರಿಯುತ್ತಿದ್ದರೆ ನೀವು ಇದನ್ನು ಮಾಡಬಹುದು ಎಂದು ಅವರ ಸಾಮರ್ಥ್ಯವನ್ನು ಅವರಿಗೆ ಮನವರಿಕೆ ಮಾಡಲು ಪ್ರಯತ್ನಿಸಿ. ಇದರಿಂದ ಮಕ್ಕಳು ಬೆಟ್ಟದಂತ ಸಮಸ್ಯೆ ತಮ್ಮ ಮುಂದಿದ್ದರೂ ಅದನ್ನು ಪರಿಹಾರಿಸಲು ಧೈರ್ಯದಿಂದ ಮುನ್ನುಗ್ಗುವ ಸ್ವಭಾವವನ್ನು ಬೆಳೆಸಿಕೊಳ್ಳುತ್ತಾರೆ. 

ಇದನ್ನೂ ಓದಿ- Parenting tips:ನಿಮ್ಮ ಮಗು ಕೋಪಗೊಳ್ಳುತ್ತದೆಯೇ? ಹಾಗಾದರೆ ಈ 4 ಸುಲಭ ಸಲಹೆಗಳನ್ನು ತಪ್ಪದೇ ಪಾಲಿಸಿ

ತಪ್ಪುಗಳನ್ನು ಮಾಡಲು ಹಿಂಜರಿಯಬೇಡಿ: 
ನಡೆಯುವ ಮಗು ಎಡವುದು ಸಹಜ. ಅಂತೆಯೇ ಹೊಸತನ್ನು ಮಾಡುವಾಗ ತಪ್ಪುಗಲಾಗುವುದು ಸಹ ಸಹಜವೇ. ಇಂತಹ ತಪ್ಪುಗಳಿಗಾಗಿ ಮಕ್ಕಳನ್ನು ಬೈಯಬೇಡಿ. ಬದಲಿಗೆ ತಪ್ಪುಗಳಾದರೆ ಹಿಂಜರಿಯಬೇಡಿ, ಮರಳಿ ಪ್ರಯತ್ನಿಸಿ ಎಂದು ಅವರನ್ನು ಪ್ರೋತ್ಸಾಹಿಸಿ. ಇದು ಅವರಿಗೆ ಹೊಸತನ್ನು ಕಲಿಸಲು ಸಹಕಾರಿ ಆಗಿದೆ. 

ಭಯ ಪಡುವ ಅಗತ್ಯವಿಲ್ಲ: 
ಮಕ್ಕಳನ್ನು ಅತಿಯಾಗಿ ಹೆದರಿಸುವ ಬದಲಿಗೆ ಅವರು ನಿಮ್ಮೊಂದಿಗೆ ಸುರಕ್ಷಿತವಾಗಿದ್ದಾರೆ ಮತ್ತು ಮಕ್ಕಳು ತಂದೆ-ತಾಯಿಯೊಂದಿಗೆ ಏನು ಬೇಕಾದರೂ ಹೇಳಬಹುದು ಎಂಬುದನ್ನು ಪದೇ ಪದೇ ಅವರಿಗೆ ಮನವರಿಕೆ ಮಾಡಿಸುತ್ತಿರಿ. ಇದು ಮಕ್ಕಳಲ್ಲಿ ಭಯವನ್ನು ನಿವಾರಿಸಿ ಅವರು ಪೋಷಕರೊಂದಿಗೆ ಪ್ರತಿ ವಿಷಯದಲ್ಲೂ ಸಲಹೆಯಿಂದ ಇರಲು, ಭಯ ಮುಕ್ತರಾಗಿ ಮಾತನಾಡಲು ಪ್ರೋತ್ಸಾಹಿಸುತ್ತದೆ. 

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://tinyurl.com/7jmvv2nz

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News