Papaya Seeds: ಈ ರೋಗಗಳಿಗೆ ರಾಮಬಾಣ ಪಪ್ಪಾಯ ಬೀಜ, ಎಸೆಯುವ ಮುನ್ನ ಈ ರೀತಿಯೂ ಬಳಸಬಹುದು ಎನ್ನುವುದು ತಿಳಿದಿರಲಿ

ಹೊಟ್ಟೆಯ ಹುಳುಗಳನ್ನು ತೆಗೆದುಹಾಕುವಲ್ಲಿ ಇದು ಪರಿಣಾಮಕಾರಿಯಾಗಿದೆ. ಮತ್ತೊಂದೆಡೆ, ಪಪ್ಪಾಯಿ ಬೀಜಗಳನ್ನು ತಿನ್ನುವ ದೊಡ್ಡ ಪ್ರಯೋಜನವೆಂದರೆ ಅದು ಹೊಟ್ಟೆಯಲ್ಲಿ ಉತ್ತಮ ಬ್ಯಾಕ್ಟೀರಿಯಾವನ್ನು ಹೆಚ್ಚಿಸಲು ಸಹಾಯ ಮಾಡುತ್ತದೆ. 

Written by - Ranjitha R K | Last Updated : Nov 9, 2021, 04:52 PM IST
  • ಪಪ್ಪಾಯಿ ಬೀಜಗಳ ಸೇವನೆಯು ಹೊಟ್ಟೆಗೆ ಸಂಬಂಧಿಸಿದ ಅನೇಕ ಸಮಸ್ಯೆಗಳಿಗೆ ಪರಿಹಾರ ನೀಡುತ್ತದೆ
  • ಹೊಟ್ಟೆಯ ಹುಳುಗಳನ್ನು ತೆಗೆದುಹಾಕುವಲ್ಲಿ ಇದು ಪರಿಣಾಮಕಾರಿಯಾಗಿದೆ.
  • ಹೊಟ್ಟೆಯಲ್ಲಿ ಉತ್ತಮ ಬ್ಯಾಕ್ಟೀರಿಯಾವನ್ನು ಹೆಚ್ಚಿಸಲು ಸಹಾಯ ಮಾಡುತ್ತದೆ.
Papaya Seeds:  ಈ ರೋಗಗಳಿಗೆ ರಾಮಬಾಣ ಪಪ್ಪಾಯ ಬೀಜ, ಎಸೆಯುವ ಮುನ್ನ ಈ ರೀತಿಯೂ ಬಳಸಬಹುದು ಎನ್ನುವುದು ತಿಳಿದಿರಲಿ   title=
Papaya Seeds (file photo)

ನವದೆಹಲಿ : ನೀವು ಕೂಡಾ ಪಪ್ಪಾಯಿ ತಿಂದು ಬೀಜಗಳನ್ನು (PapayaSeeds)ಎಸೆಯುತ್ತಿರಾ? ಹಾಗಾದರೆ ಈ ವಿಷಯ ನಿಮಗೂ ಗೊತ್ತಿರಲಿ. ಪಪ್ಪಾಯಿ ಹಣ್ಣಿನಲ್ಲಿ ಮಾತ್ರವಲ್ಲ ಅದರ ಬೀಜದಲ್ಲೂ ಸಾಕಷ್ಟು ಪ್ರಮಾಣದ  ಪೋಷಕಾಂಶಗಳಿವೆ.  ಇದನ್ನು ತಿನ್ನುವುದರಿಂದ ಅನೇಕ ಪ್ರಯೋಜನಗಳನ್ನು (Papaya Seeds Benefits) ಪಡೆಯಬಹುದು. ಪಪ್ಪಾಯಿಯಲ್ಲಿ ವಿಶೇಷ ರೀತಿಯ ಕಿಣ್ವ ಪಪೈನ್ ಕಂಡುಬರುತ್ತದೆ. ಇದು ಅದರ ಬೀಜಗಳಲ್ಲಿಯೂ ಸಹ ಹೇರಳವಾಗಿರುತ್ತದೆ. ಇದು ಪ್ರೋಟೀನ್‌ಗಳನ್ನು ಪೆಪ್ಟೈಡ್‌ಗಳು ಮತ್ತು ಅಮೈನೋ ಆಮ್ಲಗಳಾಗಿ ವಿಭಜಿಸುತ್ತದೆ ಮತ್ತು ದೇಹದಿಂದ ಕೆಟ್ಟ ಹೊಟ್ಟೆಯ ಬ್ಯಾಕ್ಟೀರಿಯಾವನ್ನು ಹೊರಹಾಕಲು ಸಹಾಯ ಮಾಡುತ್ತದೆ.

ಹೊಟ್ಟೆಯ ಹುಳುಗಳಿಗೆ ಪರಿಣಾಮಕಾರಿ ಚಿಕಿತ್ಸೆ : 
ಹೊಟ್ಟೆಯ ಹುಳುಗಳನ್ನು ತೆಗೆದುಹಾಕುವಲ್ಲಿ ಇದು ಪರಿಣಾಮಕಾರಿಯಾಗಿದೆ. ಮತ್ತೊಂದೆಡೆ, ಪಪ್ಪಾಯಿ ಬೀಜಗಳನ್ನು ತಿನ್ನುವ ದೊಡ್ಡ ಪ್ರಯೋಜನವೆಂದರೆ (Papaya Seeds Benefits) ಅದು ಹೊಟ್ಟೆಯಲ್ಲಿ ಉತ್ತಮ ಬ್ಯಾಕ್ಟೀರಿಯಾವನ್ನು ಹೆಚ್ಚಿಸಲು ಸಹಾಯ ಮಾಡುತ್ತದೆ. ಪಪ್ಪಾಯಿ ಬೀಜಗಳ ಸೇವನೆಯು ಹೊಟ್ಟೆಗೆ ಸಂಬಂಧಿಸಿದ ಅನೇಕ ಸಮಸ್ಯೆಗಳಿಂದ ಮುಕ್ತಿ ಕೊಡಿಸುತ್ತದೆ. ಇದರೊಂದಿಗೆ, ಆಸಿಡಿಟಿ (Acidity) ಯಂಥಹ ಜೀರ್ಣಕ್ರಿಯೆಗೆ ಸಂಬಂಧಿಸಿದ ಸಮಸ್ಯೆಗಳಿಗೆ ಶಾಶ್ವತ ಪರಿಹಾರ ಸಿಗುತ್ತದೆ. 

ಇದನ್ನೂ ಓದಿ Workout Precautions - ವರ್ಕ್ ಔಟ್ ಮೊದಲು ಹಾಗೂ ನಂತರ ನಿಮ್ಮೀ ಅಭ್ಯಾಸಗಳು ಅತಿ ಹೆಚ್ಚು ಹಾನಿ ತಲುಪಿಸುತ್ತವೆ, ಕೂಡಲೇ ಬದಲಾಯಿಸಿ

ಪಪ್ಪಾಯಿ ಬೀಜಗಳನ್ನು ಜೇನುತುಪ್ಪ (Honey) ಅಥವಾ ಹಾಲಿನೊಂದಿಗೆ (milk) ಸೇವಿಸಿದರೆ ಹೊಟ್ಟೆ ಹುಳುಗಳ ಸಮಸ್ಯೆ ನಿವಾರಣೆಯಾಗುತ್ತದೆ. ಪಪ್ಪಾಯಿ ಬೀಜಗಳನ್ನು ಸ್ಮೂಥಿಗಳು ಅಥವಾ ಜ್ಯೂಸ್‌ಗಳಲ್ಲಿ ಬೆರೆಸಿ ತಿನ್ನಬಹುದು. ಆದರೆ ಅವು ಕಹಿ ರುಚಿಯನ್ನು ಹೊಂದಿರುತ್ತವೆ ಎಂಬುದನ್ನು ನೆನಪಿನಲ್ಲಿಡಿ. ರುಚಿಯಲ್ಲಿ ಕಹಿ ತಪ್ಪಿಸಲು, ಪಪ್ಪಾಯಿ ಬೀಜಗಳನ್ನು ಪುಡಿಮಾಡಿ ಮತ್ತು ನಿಂಬೆ, ಜೇನುತುಪ್ಪ ಅಥವಾ ಬೆಲ್ಲದೊಂದಿಗೆ (Jaggery) ತಿನ್ನಬಹುದು. 

ಪೀರಿಯೇಡ್ಸ್ ನೋವಿಗೆ ರಾಮಬಾಣ : 
ಮುಟ್ಟಿನಸಂದರ್ಭದಲ್ಲಿ ಕಾಣಿಸಿಕೊಳ್ಳುವ ನೋವಿಗೂ ಇದು ರಾಮಬಾಣವಾಗಿದೆ.  ಮುಟ್ಟಿನ ನೋವಿನ ನಿವಾರಣೆಗೆ ಪಪ್ಪಾಯಿ ಬೀಜಗಳನ್ನು ಸೇವಿಸುವಂತೆ ಸಲಹೆ ನೀಡಲಾಗುತ್ತದೆ.  

ತೂಕವನ್ನು ಕಳೆದುಕೊಳ್ಳಲು ಸಹಕಾರಿ :  
ಪಪ್ಪಾಯಿ ಬೀಜಗಳನ್ನು ತಿನ್ನುವುದರಿಂದ ಜೀರ್ಣಕ್ರಿಯೆಯು ಉತ್ತಮವಾಗುತ್ತದೆ. ಇದು ಚಯಾಪಚಯವನ್ನು ಹೆಚ್ಚಿಸುತ್ತದೆ. ಇದು ಕ್ಯಾಲೊರಿಗಳನ್ನು ಬರ್ನ್ ಮಾಡಲು ಸಹಾಯ ಮಾಡುತ್ತದೆ. 

ಇದನ್ನೂ ಓದಿ : High Blood Pressure: ಗೊತ್ತಿಲ್ಲದೆ ಈ ಆಹಾರ ಸೇವಿಸುವುದರಿಂದ ನಿಮ್ಮ ರಕ್ತದೊತ್ತಡ ಹೆಚ್ಚುತ್ತದೆ..!

ಈ ಅಂಶಗಳು ಕೂಡಾ ನೆನಪಿರಲಿ : 
ಪಪ್ಪಾಯಿ ಬೀಜಗಳನ್ನು ಹೆಚ್ಚಿನ ಪ್ರಮಾಣದಲ್ಲಿ ಸೇವಿಸಬೇಡಿ. ಇದು ನಿಮಗೆ ಹಾನಿಯುಟು ಮಾಡಬಹುಡು ಎನ್ನುವುದನ್ನು ನೆನಪಿನಲ್ಲಿಟ್ಟುಕೊಳ್ಳಿ. ಇನ್ನು ನಿಮಗೆ ಈಗಾಗಲೇ ಆರೋಗ್ಯ ಸಮಸ್ಯೆ ಇದ್ದರೆ, ಪಪ್ಪಾಯ ಬೀಜ ತಿನ್ನುವ ಮುನ್ನ ವೈದ್ಯರ ಸಲಹೆ ಪಡೆಯುವುದು ಉತ್ತಮ. 

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ

Trending News