ಇಂಡೋ-ಇಂಗ್ಲೆಂಡ್ ಸೆಮೀಸ್’ಗಿಲ್ಲ ಮೀಸಲು ದಿನ: ಮಳೆಯಿಂದ ಪಂದ್ಯ ರದ್ದಾದ್ರೆ ಫೈನಲ್ ತಲುಪುವ ತಂಡ ಯಾವುದು?

IND vs ENG Guyana Weather Updates: ಎಲ್ಲಾ ಕ್ರಿಕೆಟ್ ಅಭಿಮಾನಿಗಳು ಸೆಮಿಫೈನಲ್ ಪಂದ್ಯಕ್ಕಾಗಿ ಕಾಯುತ್ತಿದ್ದಾರೆ. ಇನ್ನೊಂದೆಡೆ ಪಂದ್ಯದ ವೇಳೆ ಭಾರೀ ಮಳೆಯಾಗುವ ಮುನ್ಸೂಚನೆ ಇದೆ. Weather.com ಪ್ರಕಾರ, ಗಯಾನಾದಲ್ಲಿ ಪಂದ್ಯದ ದಿನದಂದು 60% ಮಳೆ ಬೀಳುವ ಸಾಧ್ಯತೆಯಿದೆ.

Written by - Bhavishya Shetty | Last Updated : Jun 27, 2024, 02:22 PM IST
    • ಟೂರ್ನಿಯಲ್ಲಿ ಭಾರತ ಇದುವರೆಗೆ ಒಂದೇ ಒಂದು ಪಂದ್ಯವನ್ನು ಸೋತಿಲ್ಲ.
    • ಗುಂಪು ಸುತ್ತಿನಲ್ಲಿ 4 ಪಂದ್ಯಗಳಲ್ಲಿ 3 ರಲ್ಲಿ ಗೆದ್ದಿದ್ದು, ಒಂದು ಪಂದ್ಯ ರದ್ದಾಗಿದೆ
    • ಸೆಮಿಫೈನಲ್‌’ನಲ್ಲಿ ಬಲಿಷ್ಠ ಇಂಗ್ಲೆಂಡ್‌’ನ ಸವಾಲು ಎದುರಿಸುತ್ತಿದೆ
ಇಂಡೋ-ಇಂಗ್ಲೆಂಡ್ ಸೆಮೀಸ್’ಗಿಲ್ಲ ಮೀಸಲು ದಿನ: ಮಳೆಯಿಂದ ಪಂದ್ಯ ರದ್ದಾದ್ರೆ ಫೈನಲ್ ತಲುಪುವ ತಂಡ ಯಾವುದು? title=
IND vs ENG

IND vs ENG Guyana Weather Updates: ಭಾರತವು T20 ವಿಶ್ವಕಪ್ 2024ರ ಸೆಮಿಫೈನಲ್‌’ನಲ್ಲಿ ಇಂಗ್ಲೆಂಡ್ ತಂಡವನ್ನು ಎದುರಿಸಲಿದೆ. ಉಭಯ ತಂಡಗಳ ನಡುವಿನ ಈ ಪಂದ್ಯ ಬುಧವಾರ ಅಂದರೆ ಇಂದು ಗಯಾನಾದಲ್ಲಿ ನಡೆಯಲಿದೆ. ಈ ಟೂರ್ನಿಯಲ್ಲಿ ಭಾರತ ಇದುವರೆಗೆ ಒಂದೇ ಒಂದು ಪಂದ್ಯವನ್ನು ಸೋತಿಲ್ಲ. ಗುಂಪು ಸುತ್ತಿನಲ್ಲಿ 4 ಪಂದ್ಯಗಳಲ್ಲಿ 3 ರಲ್ಲಿ ಗೆದ್ದಿದ್ದು, ಒಂದು ಪಂದ್ಯ ರದ್ದಾಗಿದೆ. ಆ ಬಳಿಕ ಸೂಪರ್-8ರಲ್ಲಿ ಟೀಂ ಇಂಡಿಯಾ ಅಫ್ಘಾನಿಸ್ತಾನ, ಬಾಂಗ್ಲಾದೇಶ ಹಾಗೂ ಇಂಗ್ಲೆಂಡ್ ತಂಡವನ್ನು ಸೋಲಿಸಿತ್ತು. ಇದೀಗ ಸೆಮಿಫೈನಲ್‌’ನಲ್ಲಿ ಬಲಿಷ್ಠ ಇಂಗ್ಲೆಂಡ್‌’ನ ಸವಾಲು ಎದುರಿಸುತ್ತಿದೆ.

ಇದನ್ನೂ ಓದಿ: Rohith Sharma: ಒಂದೇ ಪಂದ್ಯದಲ್ಲಿ ಮೂರು ದಾಖಲೆ ಬರೆದ ಹಿಟ್‌ಮ್ಯಾನ್‌..!

ಸದ್ಯ ಎಲ್ಲಾ ಕ್ರಿಕೆಟ್ ಅಭಿಮಾನಿಗಳು ಸೆಮಿಫೈನಲ್ ಪಂದ್ಯಕ್ಕಾಗಿ ಕಾಯುತ್ತಿದ್ದಾರೆ. ಇನ್ನೊಂದೆಡೆ ಪಂದ್ಯದ ವೇಳೆ ಭಾರೀ ಮಳೆಯಾಗುವ ಮುನ್ಸೂಚನೆ ಇದೆ. Weather.com ಪ್ರಕಾರ, ಗಯಾನಾದಲ್ಲಿ ಪಂದ್ಯದ ದಿನದಂದು 60% ಮಳೆ ಬೀಳುವ ಸಾಧ್ಯತೆಯಿದೆ. ಸ್ಥಳೀಯ ಸಮಯ ಬೆಳಗ್ಗೆ 10:30ಕ್ಕೆ ಆಟ ಪ್ರಾರಂಭವಾದಾಗ 33% ರಿಂದ ಮಳೆಯ ಮುನ್ಸೂಚನೆ ಪ್ರಾರಂಭವಾಗುತ್ತದೆ. ಮಧ್ಯಾಹ್ನ 1 ಗಂಟೆಯ ಸುಮಾರಿಗೆ 59% ತಲುಪುತ್ತದೆ. ಆದ್ದರಿಂದ, ಪಂದ್ಯಕ್ಕೆ ಮಳೆ ಅಡ್ಡಿಯಾಗುವ ಸಾಧ್ಯತೆ ಇದ್ದು, ರದ್ದಾಗುವ ಸಂಭವವೂ ಇದೆ.

ಒಂದು ವೇಳೆ ಪಂದ್ಯ ರದ್ದಾದರೆ ಮೀಸಲು ದಿನವೂ ಇಲ್ಲ. ಹೀಗಿರುವಾಗ ಐಸಿಸಿ ಎರಡೂ ಸೆಮಿ-ಫೈನಲ್‌’ಗಳಿಗೆ ಒಟ್ಟು 250 ನಿಮಿಷಗಳ ಹೆಚ್ಚುವರಿ ಸಮಯವನ್ನು ನಿಗದಿಪಡಿಸಿತ್ತು. ಆದರೆ ಇಡೀ ದಿನ ಮಳೆ ಅಡ್ಡಿಪಡಿಸಿದರೆ ಪಂದ್ಯ ರದ್ದಾಗಲಿದೆ.

ಇದನ್ನೂ ಓದಿ:IND vs AUS: ಭಾರತದ ಎದುರು ಮಂಡಿಯೂರಿದ ಆಸ್ಟ್ರೇಲಿಯಾ! ಸೆಮಿಫೈನಲ್ ತಲುಪಿದ ಟೀಮ್ ಇಂಡಿಯಾ!

ಒಂದು ವೇಳೆ ಪಂದ್ಯ ಮಳೆಯಿಂದ ರದ್ದಾದರೆ ಸೂಪರ್ 8 ಗುಂಪಿನಲ್ಲಿ ಅಗ್ರ ಸ್ಥಾನದಲ್ಲಿರುವ ತಂಡ ಫೈನಲ್‌’ಗೆ ಅರ್ಹತೆ ಪಡೆಯುತ್ತದೆ. ಅಂದರೆ ಭಾರತವು ಸೂಪರ್-8 ಗ್ರೂಪ್ 1 ರಲ್ಲಿ ತನ್ನ ಎಲ್ಲಾ ಪಂದ್ಯಗಳನ್ನು ಗೆದ್ದ ಕಾರಣ ಇಂಗ್ಲೆಂಡ್‌’ಗಿಂತ ಉತ್ತಮ ಸ್ಥಾನದಲ್ಲಿದೆ. ಮತ್ತೊಂದೆಡೆ, ಇಂಗ್ಲೆಂಡ್ ತಂಡವು ಮೂರರಲ್ಲಿ ಎರಡು ಗೆಲುವುಗಳೊಂದಿಗೆ ಗುಂಪು 2 ರಲ್ಲಿ ಎರಡನೇ ಸ್ಥಾನ ಗಳಿಸಿದೆ. ಆದರೆ, ಎರಡೂ ತಂಡಗಳು ಮತ್ತು ಅಭಿಮಾನಿಗಳು ಪೂರ್ಣ ಪಂದ್ಯದ ವೀಕ್ಷಿಸುವ ನಿರೀಕ್ಷೆಯಲ್ಲಿದ್ದಾರೆ.

 

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News