ಇನ್ಸ್ಟಂಟ್ ಡೆಲಿವೆರಿ ಕ್ಷೇತ್ರಕ್ಕೂ ಕಾಲಿಟ್ಟ ಮುಖೇಶ್ ಅಂಬಾನಿ : ಆರ್ಡರ್ ಮಾಡಿದ ನಿಮಿಷಗಳಲ್ಲಿ ಮನೆ ಬಾಗಿಲಿಗೆ ಸಾಮಾಗ್ರಿ ತಲುಪಿಸಲಿದೆ ಜಿಯೋ!

Reliance Retail Jio Mart: ಕಂಪನಿಯು JioMart ಮೂಲಕ ತ್ವರಿತ ವಿತರಣೆಯನ್ನು ಪ್ರಾರಂಭಿಸುತ್ತಿದೆ.ಕಂಪನಿಯು ಮುಂಬೈ, ನವಿ ಮುಂಬೈನಲ್ಲಿ ಪ್ರಾಯೋಗಿಕ ಯೋಜನೆಯನ್ನು ಪ್ರಾರಂಭಿಸಿದೆ. 

Written by - Ranjitha R K | Last Updated : Jun 27, 2024, 09:18 AM IST
  • ರಿಲಯನ್ಸ್ ಇಂಡಸ್ಟ್ರಿ ಕಂಪನಿಯು ಚಿಲ್ಲರೆ ಕ್ಷೇತ್ರದಲ್ಲಿ ತನ್ನ ಅಸ್ತಿತ್ವವನ್ನು ನಿರಂತರವಾಗಿ ವಿಸ್ತರಿಸುತ್ತಿದೆ.
  • ಕಂಪನಿಯು JioMart ಮೂಲಕ ತ್ವರಿತ ವಿತರಣೆಯನ್ನು ಪ್ರಾರಂಭಿಸುತ್ತಿದೆ.
  • ಕಂಪನಿಯು ಮುಂಬೈ, ನವಿ ಮುಂಬೈನಲ್ಲಿ ಪ್ರಾಯೋಗಿಕ ಯೋಜನೆಯನ್ನು ಪ್ರಾರಂಭಿಸಿದೆ.
ಇನ್ಸ್ಟಂಟ್ ಡೆಲಿವೆರಿ ಕ್ಷೇತ್ರಕ್ಕೂ ಕಾಲಿಟ್ಟ ಮುಖೇಶ್ ಅಂಬಾನಿ : ಆರ್ಡರ್ ಮಾಡಿದ ನಿಮಿಷಗಳಲ್ಲಿ ಮನೆ ಬಾಗಿಲಿಗೆ ಸಾಮಾಗ್ರಿ ತಲುಪಿಸಲಿದೆ ಜಿಯೋ! title=

Reliance Retail Jio Mart : ರಿಲಯನ್ಸ್ ಇಂಡಸ್ಟ್ರಿ ಕಂಪನಿಯು ಚಿಲ್ಲರೆ ಕ್ಷೇತ್ರದಲ್ಲಿ ತನ್ನ ಅಸ್ತಿತ್ವವನ್ನು ನಿರಂತರವಾಗಿ ವಿಸ್ತರಿಸುತ್ತಿದೆ.ರಿಲಯನ್ಸ್ ರಿಟೇಲ್ ಮುಖ್ಯಸ್ಥರಾಗಿರುವ ಇಶಾ ಅಂಬಾನಿ ಈಗ ಫಾಸ್ಟ್ ಡೆಲಿವೆರಿ ಪರಿಕಲ್ಪನೆಯಲ್ಲಿ ತಮ್ಮ ಪ್ರಾಬಲ್ಯವನ್ನು ಹೆಚ್ಚಿಸುವಲ್ಲಿ ನಿರತರಾಗಿದ್ದಾರೆ.ಕಂಪನಿಯು JioMart ಮೂಲಕ ತ್ವರಿತ ವಿತರಣೆಯನ್ನು ಪ್ರಾರಂಭಿಸುತ್ತಿದೆ.ಕಂಪನಿಯು ಮುಂಬೈ, ನವಿ ಮುಂಬೈನಲ್ಲಿ ಪ್ರಾಯೋಗಿಕ ಯೋಜನೆಯನ್ನು ಪ್ರಾರಂಭಿಸಿದೆ. 

ಜಿಯೋ ಮಾರ್ಟ್ ಇನ್ಸ್ಟಂಟ್ ಡೆಲಿವೆರಿ : 
ದಿನಸಿಯ ಇನ್ಸ್ಟಂಟ್ ಡೆಲಿವೆರಿ ಪರಿಕಲ್ಪನೆಯು ವೇಗವಾಗಿ ಬೆಳೆಯುತ್ತಿದೆ. Blinkit, Zepto,Swiggyನಂಥಹ ಹಲವಾರು ಪ್ಲಾಟ್‌ಫಾರ್ಮ್‌ಗಳಿವೆ.ಇದು ಕೆಲವೇ ನಿಮಿಷಗಳಲ್ಲಿ ಆರ್ಡರ್ ಮಾಡಿದ ಸಾಮಗ್ರಿಗಳನ್ನು ಇನ್ಸ್ಟಂಟ್ ಆಗಿ ಡೆಲಿವೆರಿ ಮಾಡುತ್ತದೆ.ಇದೀಗ ಇಶಾ ಅಂಬಾನಿ ಕೂಡಾ ಈ ರೇಸ್‌ಗೆ ತಮ್ಮನ್ನು ಸೇರಿಸಿಕೊಂಡಿದ್ದಾರೆ.ಜಿಯೋ ಮಾರ್ಟ್ ಇನ್ಸ್ಟಂಟ್ ಡೆಲಿವೆರಿಯನ್ನು ಪ್ರಾರಂಭಿಸಿದೆ.ಇದಕ್ಕಾಗಿ ಮುಂಬೈ ಮತ್ತು ನವಿ ಮುಂಬೈನಲ್ಲಿ ಪ್ರಾಯೋಗಿಕ ಯೋಜನೆ ಆರಂಭಿಸಲಾಗಿದೆ.ಜಿಯೋ ಮಾರ್ಟ್ ಮೂಲಕ ಮುಂಬೈ ಮತ್ತು ನವಿ ಮುಂಬೈನಲ್ಲಿ ದಿನಸಿ ಮತ್ತು ಫಾಸ್ಟ್ ಮೂವಿಂಗ್ ಕನ್ಸೂಮರ್ ಗೂಡ್ಸ್ ಗಳ ತ್ವರಿತ ವಿತರಣೆಯನ್ನು ಮಾಡಲಾಗುತ್ತದೆ.ಮುಂಬೈ, ನವಿ ಮುಂಬೈನಲ್ಲಿ ಪ್ರಾಯೋಗಿಕ ಯೋಜನೆಯ ನಂತರ,ದೇಶದ ವಿವಿಧ ನಗರಗಳಲ್ಲಿ ಇದನ್ನು ಜಾರಿಗೊಳಿಸಲಾಗುವುದು.

ಇದನ್ನೂ ಓದಿ : GT Texa: 1 ರೂ. ಖರ್ಚಿಲ್ಲದೆ ನಿತ್ಯ 130KM ಚಲಿಸಬಲ್ಲ ಹೊಸ ಬೈಕ್ ಬಿಡುಗಡೆ 

 ಹೆಚ್ಚಾಯಿತು ಈ ಕಂಪನಿಗಳ  ಟೆನ್ಶನ್ :
ಆರಂಭದಲ್ಲಿ ಯೋಜನೆಯು ಆರ್ಡರ್ ಮಾಡಿದ ಒಂದು ಗಂಟೆಯೊಳಗೆ ನಿಮ್ಮ ಮನೆ ಬಾಗಿಲಿಗೆ ಸಾಮಾಗ್ರಿಗಳನ್ನು ತಲುಪಿಸುತ್ತದೆ.ನಂತರ ಅದನ್ನು 30 ನಿಮಿಷಕ್ಕೆ ಇಳಿಸಲಾಗುತ್ತದೆ.ಜನ JioMart ಅಪ್ಲಿಕೇಶನ್ ಮೂಲಕ ಈ ಸೌಲಭ್ಯವನ್ನು ಪಡೆಯಬಹುದು. ಮೊದಲಿನ ಫಾಸ್ಟ್ ಡೆಲಿವೆರಿ ಕನಿಷ್ಠ 12 ಗಂಟೆಗಳನ್ನು ತೆಗೆದುಕೊಳ್ಳುತ್ತದೆ.ನಂತರ ಅದನ್ನು 1 ಗಂಟೆ ಮತ್ತು ನಂತರ 30 ನಿಮಿಷಗಳಿಗೆ ಇಳಿಸಲಾಗುತ್ತದೆ.ತ್ವರಿತ ವಿತರಣೆಯ ರೇಸ್‌ನಲ್ಲಿ ಜಿಯೋ ಮಾರ್ಟ್‌ನ ಪ್ರವೇಶದೊಂದಿಗೆ, ಬ್ಲಿಂಕಿಟ್,ಸ್ವಿಗ್ಗಿ ಇನ್‌ಸ್ಟಾಮಾರ್ಟ್,ಜೆಪ್ಟೊದಂತಹ ಕಂಪನಿಗಳ ಟೆನ್ಷನ್ ಹೆಚ್ಚಾಗಿದೆ.    ಜಿಯೋಮಾರ್ಟ್ ಆಗಮನದೊಂದಿಗೆ ಸ್ಪರ್ಧೆಯು ಹೆಚ್ಚಾಗುತ್ತದೆ. 

ಟಾಟಾ ಒಡೆತನದ ಬಿಗ್‌ಬಾಸ್ಕೆಟ್, ಝೊಮಾಟೋಸ್ ಬ್ಲಿಂಕಿಟ್,ಸ್ವಿಗ್ಗಿ ಇನ್‌ಸ್ಟಾಮಾರ್ಟ್,ಜೆಪ್ಟೊ ಮತ್ತು ಬಿಬಿ ನೌ ಮುಂತಾದ ತ್ವರಿತ ವಾಣಿಜ್ಯ ಕಂಪನಿಗಳಿಗೆ ಸ್ಪರ್ಧೆಯು ಹೆಚ್ಚಾಗುತ್ತದೆ.ಈ ಕಂಪನಿಗಳು 10 ನಿಮಿಷಗಳಲ್ಲಿ ಸಾಮಾಗ್ರಿಗಳನ್ನು  ತಲುಪಿಸುತ್ತದೆಯಾದರೂ ಈ ಇನ್ಸ್ಟಂಟ್ ಡೆಲಿವೆರಿ ರೇಸ್ ಗೆ ಜಿಯೋ ಕಾಲಿಟ್ಟಿರುವ ಕಾರಣ ಇವುಗಳ ತಲೆನೋವು ಹೆಚ್ಚಾಗಿದೆ. ಪ್ರಸ್ತುತ,ಜಿಯೋ ಈ 10-ನಿಮಿಷದ ರೇಸ್‌ಗೆ ಪ್ರವೇಶಿಸುತ್ತಿಲ್ಲ ಎನ್ನಲಾಗಿದೆ. ಏಕೆಂದರೆ,ಇದಕ್ಕೆ ಡಾರ್ಕ್ ಸ್ಟೋರ್‌ಗಳ ಹೆಚ್ಚಿನ ವ್ಯಾಪ್ತಿಯ ಅಗತ್ಯವಿರುತ್ತದೆ.ವಿತರಣಾ ಸಿಬ್ಬಂದಿಯನ್ನು ಹೆಚ್ಚಿನ ಸಂಖ್ಯೆಯಲ್ಲಿ ನೇಮಿಸಿಕೊಳ್ಳಬೇಕಾಗುತ್ತದೆ. ಆದರೆ ಜಿಯೋದ 30 ನಿಮಿಷಗಳ ಯೋಜನೆ ಯಶಸ್ವಿಯಾದರೆ, ಮಾರುಕಟ್ಟೆಯಲ್ಲಿ ಈಗಾಗಲೇ ಇರುವ ಕಂಪನಿಗಳ ಸಮಸ್ಯೆಗಳು ಹೆಚ್ಚಾಗುವುದು ಖಚಿತ. 

ಇದನ್ನೂ ಓದಿ :  ಕೇವಲ 2 ಲಕ್ಷ ರೂ.ನಲ್ಲಿ ಅಮುಲ್‌ ಫ್ರಾಂಚೈಸಿ ಬ್ಯುಸಿನೆಸ್! ಖಂಡಿತ ಒಳ್ಳೆಯ ಲಾಭ ಸಿಗುತ್ತೆ

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ. 
  

Trending News