ಬೆಂಗಳೂರು: ಪ್ರೀತಿಯಲ್ಲಿ ಚಿನಕುರುಳಿಯಂತೆ ಮಾತನಾಡುವ ಮುದ್ದು ಚಲುವೆ ಯಾವಾಗ ಮೌನಕ್ಕೆ ಜಾರುತ್ತಾಳೋ ಮನಸ್ಸು ಬಾರವಾಗಿದೆ ಎಂದರ್ಥ. ಮೌನ ಎಂದಿಗೂ ಪ್ರೀತಿಯ ಎರಡನೇ ಹಂತ. ಯಾವಾಗ ಮೌನ ಶುರುವಾಗತ್ತೋ ಅಲ್ಲಿ ನೂರಾರು ನೋವುಗಳ ಮಜಲು ಹುಟ್ಟಿಕೊಂಡಿರುತ್ತೆ. ಪ್ರೀತಿ ಮಾಡಿದ್ದು ತಪ್ಪೋ ಸರಿನೋ ಅನ್ನೋ ಭಾವನೆಗಳು ಯೋಚನೆಗೆ ಬಂದಾಗ ಮನಸ್ಸು ಮೌನವಾಗಿ, ಹೃದಯ ಕಲ್ಲಾಗಿ, ಉಸಿರು ಬಿಗಿಯಾಗಿ ನಮ್ಮನ್ನ ಆವರಿಸುತ್ತದೆ.
ಮನೆಯಲ್ಲಿ ರಾಣಿಯಾಗಿ ಬೆಳೆದ ಗೊಂಬೆಗೆ ಪ್ರೀಯಕರನ ಚುಚ್ಚು ಮಾತುಗಳು ನರಕದ ಬಾಗಿಲು ತೋರಿಸುತಿತ್ತು. ನಂಬಿಕೆಯೇ ಇಲ್ಲದ ಆ ಪ್ರೀತಿಯ ಪಯಣದಲ್ಲಿ ನೋವುಗಳೇ ಜೊತೆಯಾಗಿತ್ತು. ಪ್ರೀತಿಯಲ್ಲಿ ಅದೆಷ್ಟೋ ನಕ್ಕು ನಲಿದು ಹಾಡಿ ಕುಣಿದಿದ್ದ ಮನಸ್ಸಿಗೆ ಸಾವು ಸನಿಹವಾಗಬೇಕು ಎಂದೆನಿಸಿತ್ತು. ಧರೆ ಹತ್ತಿ ಉರಿದು ಸಂತೋಷದ ಪ್ರಾಣ ಹೋಗಬೇಕು ಎಂದೆನಿಸಿತ್ತು. ಆ ಮನಸ್ಸು ಅಂದು ಮೌನವಾಗಿ ಎಲ್ಲವನ್ನೂ ಮತ್ತೆ ಮತ್ತೆ ನೆನಪಿಸಿಕೊಂಡಿತ್ತು. ಗೊತ್ತಿಲ್ಲದೇ ಕಣ್ಣುಗಳು ಕೂಡ ಒದ್ದೆಯಾಗಿತ್ತು.
ಇದನ್ನೂ ಓದಿ- Valentine's Day 2023 ಪ್ರಯುಕ್ತ ಐಆರ್ಸಿಟಿಸಿ ವಿಶೇಷ ಕೊಡುಗೆ, ಸಂಗಾತಿ ಜೊತೆಗೆ ಗೋವಾದಲ್ಲಿ 5 ದಿನ ಸುತ್ತಾಡುವ ಅವಕಾಶ
ಪ್ರೀತಿ ಅಂದ್ರೆನೆ ಹಾಗೆ ನೂರಾರು ಹೊಸತನ, ಪ್ರತಿದಿನ ರೋಮಾಂಚನ, ಆದ್ರೆ ಒಂದೊಂದು ದಿನಗಳು ಕಳೆಯುತ್ತ ಹೊಂದಂತೆ ಅನುಮಾನ, ಅಪನಂಬಿಕೆ ಅನ್ನೋದು ಕೆಟ್ಟ ಮನಸ್ಸಿನಲ್ಲಿ ಹುಟ್ಟಿಕೊಳ್ಳುತ್ತ ಹೋಗುತ್ತೆ. ಒಂದೆಮ್ಮೆ ನಂಬಿಕೆ ಕಳೆದುಕೊಂಡ ಪ್ರೀತಿಯ ದೋಣಿಯಲ್ಲಿ ಪಯಣ ಮಾಡುವ ಪ್ರತಿಯೊಬ್ಬರಿಗೂ ಸಿಗುವದು ಕಷ್ಟಗಳ ಸರಮಾಲೆ. ಹಾಗೆಯೇ ಅಂದು ಅವಳ ಸ್ಥಿತಿಯಿತ್ತು. ತುಂಬಾ ಪ್ರೀತಿಯಿಂದ ಮಾತನಾಡುತ್ತಿದ್ದ ಪ್ರಿಯಕರನ ಮಾತು ಅವಳ ಹೃದಯಕ್ಕೆ ಘಾಸಿ ಮಾಡುತ್ತಿತ್ತು. ಬೇರೆಯವರ ಜೊತೆ ಸಲುಗೆಯಿಂದ ಮಾತನಾಡಿದ್ದಕ್ಕೆ ಈತನ ಮಾತುಗಳಲ್ಲಿ ಬೆಂಕಿ ಹುಟ್ಟಿತ್ತು. ಬೆಂಕಿಯ ಬಾವಲಿಯಲ್ಲಿ ಮಾತುಗಳು ಬೇಯ್ದು ಹೊರ ಬಂದಾಗ ಪ್ರೀತಿಯಲ್ಲಿ ನಲಿದಾಡಿದ್ದ ಹುಡಗಿಯ ಮನಸ್ಸು ಸುಟ್ಟು ಮಾಯದ ಗಾಯವಾಗಿತ್ತು.
ಒಂದು ಕ್ಷಣ ಇದೇ ಹುಡಗನಾ ನಾನು ಪ್ರೀತಿಸಿದ್ದು ಅನ್ನಿಸುವಷ್ಟು ಅಂದು ನೋವಿನ ಸಂಕಷ್ಟ ಕಾಡುತ್ತೆ. ನಂಬಿಕೆಯೇ ಇಲ್ಲದ ಮೇಲೆ ಮರುಳುಗಾಡಿನಲ್ಲಿ ಪಯಣ ಮಾಡಬೇಕೆ ಅನ್ನೋ ಪ್ರಶ್ನೆ ಮೂಡತ್ತೆ. ಸರಿ ಮಾಡಿದ್ದು, ತಪ್ಪು ಒಪ್ಪಿಕೊಂಡಿದ್ದು ಒಟ್ಟಾರೆ ಒಮ್ಮೆ ಅನುಮಾನ, ಅಪನಂಬಿಕೆ ಮನಸ್ಸಿನಲ್ಲಿ ಮೂಡಿದಾಗ ಇಬ್ಬರ ಸಂಬಂಧ ಮುಂಜಾನೆಯ ಮಂಜಿನಂತೆ ಕರಗುತ್ತ ಹೋಗತ್ತೆ. ಸವಿ ಮಾತುಗಳು ಆಡುವ ತುಟಿಯಿಂದ ಬರೀ ನೋವು ಮಾಡುವ ಶಬ್ಧಗಳು ಒಂದರ ಹಿಂದೆ ಒಂದರಂತೆ ಬಂದು ಮನಸ್ಸು ಹಿಂಡಿ ಹೀಯಾಳಿಸುತ್ತೆ.
ಇದನ್ನೂ ಓದಿ- Valentine's Day 2023: ಈ ರಾಶಿಗಳ ಜನರ ಪಾಲಿಗೆ ಪ್ರೇಮಿಗಳ ದಿನ ವಿಶೇಷವಾಗಿದೆ, ನೈಜ ಪ್ರೀತಿಯ ಹುಡುಕಾಟ ಅಂತ್ಯ!
ಹೀಗಾದಾಗ ಹೇಗೆ ಅನ್ನೋ ಮಾತಿಗೆ ಕೊನೆಯ ಉತ್ತರವೂ ಇದೆ. ಬದಲಾವಣೆ ಆಗುವ ಭಾವನೆಗಳಿದ್ದರೆ ಪ್ರೇಮಿಯ ಜೊತೆ ಹಂಚಿಕೊಳ್ಳಿ, ಸಮಯವೂ ಕೊಡಿ. ಬದಲಾವಣೆಯ ಮರೆಯಲ್ಲಿ ಮತ್ತೆ ಮತ್ತೆ ನೋವುಗಳೇ ನಿಮ್ಮ ಮನಸ್ಸಲ್ಲಿ ಉಳಿಯಲು ಆರಂಭಿಸಿದಾದ ಸಂಬಂಧದ ಕೊಂಡಿ ಕಳಚಿ ಹೊಸ ಜೀವನದ ಹಾದಿಗೆ ಮುನ್ನುಗ್ಗಲು ಯೋಚಿಸಿ.
ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook, Youtube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.