ಈ ದಿನಾಂಕಗಳಲ್ಲಿ ಜನಿಸಿದವರಿಗೆ ಭಾರೀ ಶುಭಾವಾಗಿರಲಿದೆ ಅಕ್ಟೋಬರ್ ತಿಂಗಳು, ನಿಮ್ಮ ಜನ್ಮದಿನ ಯಾವುದು ?

ಅಕ್ಟೋಬರ್ ತಿಂಗಳು  ಕೆಲವು ಮೂಲಾಂಕ ಹೊಂದಿರುವ ಜನರಿಗೆ ಬಹಳ ವಿಶೇಷವಾಗಿರುತ್ತದೆ. ಈ ತಿಂಗಳಲ್ಲಿ, ಈ ಜನರು ತಮ್ಮ ಜೀವನವನ್ನೇ  ಬದಲಿಸುವಂತಹ ಅನೇಕ ಸಂತೋಷವನ್ನು ಪಡೆಯುತ್ತಾರೆ. 

Written by - Ranjitha R K | Last Updated : Oct 1, 2021, 02:05 PM IST
  • ಮೂಲಾಂಕ 1, 3 ಮತ್ತು 5 ಹೊಂದಿರುವವರಿಗೆ ಶುಭ ಸಮಯ
  • ಅಕ್ಟೋಬರ್ 2021 ರಲ್ಲಿ ಅನೇಕ ಉಡುಗೊರೆಗಳು ಸಿಗಬಹುದು
  • ವೃತ್ತಿಜೀವನದಲ್ಲಿ ಭಾರೀ ಯಶಸ್ಸು ಸಿಗಲಿದೆ
ಈ ದಿನಾಂಕಗಳಲ್ಲಿ ಜನಿಸಿದವರಿಗೆ ಭಾರೀ ಶುಭಾವಾಗಿರಲಿದೆ ಅಕ್ಟೋಬರ್ ತಿಂಗಳು, ನಿಮ್ಮ ಜನ್ಮದಿನ ಯಾವುದು ? title=
ಮೂಲಾಂಕ 1, 3 ಮತ್ತು 5 ಹೊಂದಿರುವವರಿಗೆ ಶುಭ ಸಮಯ (file photo)

ನವದೆಹಲಿ : ಜ್ಯೋತಿಷ್ಯದಲ್ಲಿ (Astrology) ಗ್ರಹಗಳ ಆಧಾರದ ಮೇಲೆ  ರಾಶಿಚಕ್ರದ ಆಧಾರದ ಮೇಲೆ ಭವಿಷ್ಯ ನುಡಿಯಲಾಗುತ್ತದೆ.  ಸಂಖ್ಯಾಶಾಸ್ತ್ರವು (Numerology) ಮುಲಾಂಕದ ಪ್ರಕಾರ ವ್ಯಕ್ತಿಯ ಭವಿಷ್ಯವನ್ನು ಹೇಳುತ್ತದೆ. ಮೂಲಾಂಕ ಅಂದರೆ  ವ್ಯಕ್ತಿಯ ಹುಟ್ಟಿದ ದಿನಾಂಕದ ಮೊತ್ತವಾಗಿರುತ್ತದೆ. ಉದಾಹರಣೆಗೆ, 15 ರಂದು ಜನಿಸಿದ ವ್ಯಕ್ತಿಯ  ಮೂಲಾಂಕ ಆಗಿರುತ್ತದೆ. ಅಕ್ಟೋಬರ್ ತಿಂಗಳು (October horoscope), ಕೆಲವು ಮೂಲಾಂಕ ಹೊಂದಿರುವ ಜನರಿಗೆ ಬಹಳ ವಿಶೇಷವಾಗಿರುತ್ತದೆ. ಈ ತಿಂಗಳಲ್ಲಿ, ಈ ಜನರು ತಮ್ಮ ಜೀವನವನ್ನೇ  ಬದಲಿಸುವಂತಹ ಅನೇಕ ಸಂತೋಷವನ್ನು ಪಡೆಯುತ್ತಾರೆ. 

ಈ ಮೂಲಾಂಕದವರಿಗೆ ಅದೃಷ್ಟವೇ ಅದೃಷ್ಟ :  
ಮೂಲಾಂಕ 1 : ಯಾವುದೇ ತಿಂಗಳ 1, 10, 19 ಅಥವಾ 28 ರಂದು ಜನಿಸಿದವರ  ಮೂಲಾಂಕ1. ಅಕ್ಟೋಬರ್ 2021 ಈ ಜನರಿಗೆ ಬಹಳ ಮಂಗಳಕರವಾಗಿದೆ. ಇವರಿಗೆ ಆರ್ಥಿಕ ಲಾಭವಾಗಲಿದೆ (Financial benefit). ವೃತ್ತಿಜೀವನದಲ್ಲಿ ದೊಡ್ಡ ಅವಕಾಶಗಳನ್ನು ಪಡೆಯಬಹುದು.  

ಇದನ್ನೂ ಓದಿ : Vastu tips for Main Gate: ನಿತ್ಯ ಬೆಳಿಗ್ಗೆ ಮನೆಯ ಮುಖ್ಯ ದ್ವಾರದಲ್ಲಿ ಈ 5 ಕೆಲಸ ಮಾಡಿದರೆ, ಶಾಶ್ವತವಾಗಿ ದೂರವಾಗುತ್ತೆ ಆರ್ಥಿಕ ಬಿಕ್ಕಟ್ಟು

ಮೂಲಾಂಕ 3 : ಯಾವುದೇ ತಿಂಗಳ 3, 12, 21 ಅಥವಾ 30 ನೇ ತಾರೀಖಿನಂದು ಜನಿಸಿದವರ ಮೂಲಾಂಕ 3 ಆಗಿರುತ್ತದೆ. ಈ ಜನರ ವೃತ್ತಿಜೀವನಕ್ಕೆ ಅಕ್ಟೋಬರ್ ತಿಂಗಳು (October horoscope) ಉತ್ತಮವಾಗಿರುತ್ತದೆ. ವೃತ್ತಿ ಬದುಕಿನಲ್ಲಿ ಉತ್ತಮ ಯಶಸ್ಸು ಸಿಗಲಿದೆ. ಹಣಕಾಸಿನ ಸ್ಥಿತಿ ಉತ್ತಮವಾಗಿರುತ್ತದೆ. ಮನೆಯಲ್ಲಿ ಸಂತೋಷ ಇರುತ್ತದೆ. 

ಮೂಲಾಂಕ 5 : ಯಾವುದೇ ತಿಂಗಳ 5, 14 ಅಥವಾ 23 ರಂದು ಜನಿಸಿದ ಜನರು 5 ಮೂಲಾಂಕವನ್ನು ಹೊಂದಿರುತ್ತಾರೆ. ಅಕ್ಟೋಬರ್ 2021  5 ಮೂಲಾಂಕ ಹೊಂದಿರುವ ಜನರಿಗೆ ಅನೇಕ ಉಡುಗೊರೆಗಳನ್ನು ಹೊತ್ತು ತರಬಹುದು. ಅವರ ವೃತ್ತಿ ಮತ್ತು ಆರ್ಥಿಕ ಸ್ಥಿತಿಯ ಹೊರತಾಗಿ, ಅವರ ಆರೋಗ್ಯದ (Health) ಮೇಲೆ ಧನಾತ್ಮಕ ಪರಿಣಾಮವನ್ನು (Positive effect) ಕಾಣಬಹುದು. ವಿಶೇಷವಾಗಿ ಉದ್ಯಮಿಗಳಿಗೆ, ಈ ಸಮಯವು ತುಂಬಾ ಪ್ರಯೋಜನಕಾರಿಯಾಗಿರುತ್ತದೆ. 

ಇದನ್ನೂ ಓದಿ : Navratri Vrat Rules : ನವರಾತ್ರಿಯ ಉಪವಾಸದ ಸಮಯದಲ್ಲಿ ಅಪ್ಪಿತಪ್ಪಿಯೂ ಸೇವಿಸಬೇಡಿ ಈ ಆಹಾರಗಳನ್ನ!

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News