Health Tips: ಉತ್ತಮ ಆರೋಗ್ಯದ ಬಗ್ಗೆ ಕಾಳಜಿ ಹೊಂದಿರುವ ಯಾರಾದರೂ ತಮ್ಮ ಹಲ್ಲುಗಳ ಬಗ್ಗೆ ನಿರ್ಲಕ್ಷ್ಯವಹಿಸಲು ಸಾಧ್ಯವೇ ಇಲ್ಲ. ಪ್ರತಿ ವ್ಯಕ್ತಿಯ ಆರೋಗ್ಯ ಸಮಸ್ಯೆಗೆ ಮೂಲ ಅವರ ಬಾಯಿಯೇ ಆಗಿರುತ್ತದೆ. ಓರಲ್ ಹೆಲ್ತ್ ಎಂದರೆ ಹಲ್ಲುಗಳ ಸ್ವಚ್ಚತೆಯು ನಮ್ಮ ಆರೋಗ್ಯದ ಮೇಲೂ ಪರಿಣಾಮ ಬೀರುತ್ತದೆ. ಅದಕ್ಕಾಗಿಯೇ ಪ್ರತಿನಿತ್ಯ ಎಲ್ಲರೂ ಬೆಳಿಗ್ಗೆ ಎದ್ದ ಬಳಿಕ ತಪ್ಪದೇ ಹಲ್ಲುಜ್ಜುವ ಅಭ್ಯಾಸವನ್ನು ರೂಢಿಸಿಕೊಂಡಿರುತ್ತಾರೆ. ಆದರೆ, ಬೆಳಿಗ್ಗೆ ಎದ್ದಾಗ ಮಾತ್ರವಲ್ಲ, ರಾತ್ರಿ ವೇಳೆ ಮಲಗುವ ಮೊದಲು ಕೂಡ ಹಲ್ಲುಜ್ಜುವುದು ಬಹಳ ಮುಖ್ಯ. ರಾತ್ರಿ ವೇಳೆ ಹಲ್ಲುಜ್ಜದಿದ್ದರೆ ನೀವು ಹಲವು ರೋಗಗಳಿಗೆ ಬಲಿಯಾಗಬಹುದು ಎಂದು ನಿಮಗೆ ತಿಳಿದಿದೆಯೇ?
ರಾತ್ರಿ ವೇಳೆ ಹಲ್ಲುಜ್ಜದೇ ಇದ್ದರೆ ಆಗುವ ಅನಾನುಕೂಲಗಳ ಬಗ್ಗೆ ಇಲ್ಲಿದೆ ಮಾಹಿತಿ:
ಪ್ರತಿಯೊಬ್ಬರಿಗೂ ನಿತ್ಯ ಬೆಳಿಗ್ಗೆ ಹಲ್ಲುಜ್ಜುವ ಅಭ್ಯಾಸ ಇದ್ದೇ ಇರುತ್ತದೆ. ಆದರೆ, ನಮ್ಮಲ್ಲಿ ಕೆಲ ಮಂದಿಯಷ್ಟೇ ರಾತ್ರಿಯ ಹೊತ್ತು ಕೂಡ ಹಲ್ಲುಜ್ಜುವ ಅಭ್ಯಾಸವನ್ನು ಹೊಂದಿರುತ್ತಾರೆ. ಕೆಲವರಿಗೆ ರಾತ್ರಿ ವೇಳೆ ಹಲ್ಲುಜ್ಜುವುದೆಂದರೆ ಸೋಮಾರಿತನ. ಆದರೆ, ನಿಮ್ಮ ಸೋಮಾರಿತನ ಹಲವು ರೋಗಗಳಿಗೆ ನಿಮ್ಮನ್ನು ಬಲಿಪಶು ಮಾಡಬಹುದು. ಹಾಗಿದ್ದರೆ ರಾತ್ರಿ ಹಲ್ಲುಜ್ಜದೆ ಇರುವುದರಿಂದ ಆಗುವ ದುಷ್ಪರಿಣಾಮಗಳೇನು ಎಂದು ತಿಳಿಯಿರಿ....
* ಸೋಂಕಿನ ಅಪಾಯ:
ರಾತ್ರಿ ಮಲಗುವ ಮೊದಲು ನಮ್ಮ ಬಾಯಿಯನ್ನು, ಹಲ್ಲುಗಳನ್ನು ಸ್ವಚ್ಛಗೊಳಿಸದಿದ್ದರೆ ಸೋಂಕಿನ ಅಪಾಯ ಹೆಚ್ಚಿರುತ್ತದೆ. ನಾವು ಆಹಾರ ಸೇವಿಸಿದ ಬಳಿಕ ಬಾಯಿಯಲ್ಲಿ ಬ್ಯಾಕ್ಟೀರಿಯಾಗಳು ಸಂಗ್ರಹವಾಗಿರುತ್ತದೆ. ನಾವು ಅದನ್ನು ಸ್ವಚ್ಛಗೊಳಿಸದೆ ರಾತ್ರಿಯಿಡೀ ಅದನ್ನು ಹಾಗೆಯೇ ಬಿಡುವುದರಿಂದ ಸೋಂಕಿನ ಅಪಾಯ ಹೆಚ್ಚುತ್ತದೆ.
ಇದನ್ನೂ ಓದಿ- Drinking Water After Fruits: ಹಣ್ಣುಗಳನ್ನು ತಿಂದರೆ ಅಪ್ಪಿತಪ್ಪಿಯೂ ಈ ಕೆಲಸ ಮಾಡಬೇಡಿ
* ಬಾಯಿಯ ದುರ್ವಾಸನೆ:
ರಾತ್ರಿ ಮಲಗುವ ಮೊದಲು ಹಲ್ಲುಜ್ಜದೇ ಇರುವುದು ಬಾಯಿಯ ದುರ್ವಾಸನೆಗೆ ಪ್ರಮುಖ ಕಾರಣವಾಗಿದೆ. ರಾತ್ರಿ ಊಟದ ಬಳಿಕ ಹಲ್ಲುಜ್ಜದೆ ಇರುವುದರಿಂದ ಕೆಲವು ಬ್ಯಾಕ್ಟೀರಿಯಾಗಳು ಲಾಲಾರಸದೊಂದಿಗೆ ಬೇರೆಯುತ್ತವೆ. ಇದರಿಂದ ಬಿಡುಗಡೆಯಾಗುವ ಅನಿಲಗಳು ದುರ್ವಾಸನೆಗೆ ಕಾರಣವಾಗುತ್ತದೆ. ಇದನ್ನು ತಪ್ಪಿಸಲು ರಾತ್ರಿ ಹೊತ್ತು ತಪ್ಪದೇ ಬ್ರಶ್ ಮಾಡಿ.
* ದುರ್ಬಲ ಹಲ್ಲು:
ಹಲ್ಲುಗಳ ಆರೋಗ್ಯವನ್ನು ಕಾಪಾಡಿಕೊಳ್ಳಲು ಅವುಗಳನ್ನು ಸ್ವಚ್ಚವಾಗಿಟ್ಟುಕೊಳ್ಳುವುದು ಬಹಳ ಮುಖ್ಯ. ಇಲ್ಲದಿದ್ದರೆ ಅಲ್ಲಿ ಕೊಳಕು ಶೇಖರಣೆ ಆಗಿ ಹಲ್ಲುಗಳು ದುರ್ಬಲಗೊಳ್ಳುತ್ತವೆ. ಇದರ ಪರಿಣಾಮವಾಗಿ ಚಿಕ್ಕ ವಯಸ್ಸಿನಲ್ಲಿಯೇ ಹಲ್ಲುಗಳು ಬೀಳಬಹುದು.
ಇದನ್ನೂ ಓದಿ- ನಿತ್ಯ ಬಳಸುವ ಈ ವಸ್ತುಗಳೇ ನಿಮ್ಮ ಆರೋಗ್ಯಕ್ಕೆ ಮುಳುವಾಗುವುದು.! ಏರಿಸಿಬಿಡುತ್ತದೆ ರಕ್ತದೊತ್ತಡ
* ಒಸಡುಗಳಲ್ಲಿ ಸೋಂಕು:
ರಾತ್ರಿ ಊಟವಾದ ನಂತರ ಮಲಗುವ ಮೊದಲು ಬ್ರಶ್ ಮಾಡದಿದ್ದರೆ ನಾವು ಸ್ಸೇವಿಸಿದ ಆಹಾರ ಅಲ್ಲಿಯೇ ಸಂಗ್ರಹಗೊಂಡು ಒಸಡುಗಳಿಗೆ ಸೋಂಕು ಹರಡುತ್ತವೆ. ಇದು ನಮ್ಮನ್ನು ಹಲವು ರೋಗಗಳಿಗೂ ಬಲಿಯಾಗುವಂತೆ ಮಾಡಬಹುದು.
ರಾತ್ರಿ ಮಲಗುವ ಮೊದಲು ಹಲ್ಲುಜ್ಜದಿದ್ದರೆ ಈ ರೋಗಗಳಿಗೆ ಬಲಿಪಶುವಾಗಬಹುದು:
ರಾತ್ರಿಯಲ್ಲಿ ಹಲ್ಲುಜ್ಜದ ಕಾರಣ, ನ್ಯುಮೋನಿಯಾ, ಬುದ್ಧಿಮಾಂದ್ಯತೆ ಮತ್ತು ಉಸಿರಾಟದ ಕಾಯಿಲೆಗಳು ಸಹ ಸಂಭವಿಸಬಹುದು ಎಂದು ಹೇಳಲಾಗುತ್ತದೆ. ಇದನ್ನು ತಪ್ಪಿಸಲು ನಿತ್ಯ ರಾತ್ರಿ ಮಲಗುವ ಮೊದಲು ತಪ್ಪದೇ ಹಲ್ಲುಜ್ಜುವ ಅಭ್ಯಾಸವನ್ನು ರೂಢಿಸಿಕೊಳ್ಳಿ.
ಸೂಚನೆ: ಇಲ್ಲಿ ನೀಡಲಾದ ಮಾಹಿತಿಯು ಮನೆಮದ್ದುಗಳು ಮತ್ತು ಸಾಮಾನ್ಯ ಜ್ಞಾನವನ್ನು ಆಧರಿಸಿದೆ. ಅದನ್ನು ಅಳವಡಿಸಿಕೊಳ್ಳುವ ಮೊದಲು ತಪ್ಪದೇ ವೈದ್ಯಕೀಯ ಸಲಹೆಯನ್ನು ಪಡೆಯಿರಿ. ZEE ಮೀಡಿಯಾ ಇದನ್ನು ಖಚಿತಪಡಿಸುವುದಿಲ್ಲ.
ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook, Youtube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.