Morning Mantra: ಬೆಳಗ್ಗೆ ಎದ್ದ ತಕ್ಷಣ ಈ ಕೆಲಸ ಮಾಡಿದ್ರೆ ಪ್ರತಿದಿನ ಶುಭವಾಗುವುದರ ಜೊತೆಗೆ ಮನೆಗೆ ಐಶ್ವರ್ಯ ಬರುತ್ತೆ!

ನಿಮ್ಮ ಇಡೀ ದಿನವು ಬೆಳಗಿನ ಆರಂಭದ ಮೇಲೆ ಅವಲಂಬಿತವಾಗಿರುತ್ತದೆ ಎಂದು ಹೇಳಲಾಗುತ್ತದೆ. ಆದ್ದರಿಂದ ಬೆಳಗ್ಗೆ ಎದ್ದ ತಕ್ಷಣವೇ ನೀವು ಕೆಲವು ವಿಷಯಗಳ ಬಗ್ಗೆ ಕಾಳಜಿ ವಹಿಸಿದರೆ ನಿಮ್ಮ ಇಡೀ ದಿನವೂ ಮಂಗಳಕರ ಮತ್ತು ಸಮೃದ್ಧವಾಗಿರುತ್ತದೆ.

Written by - Puttaraj K Alur | Last Updated : Jul 10, 2022, 05:29 PM IST
  • ಬೆಳಗ್ಗೆ ಬೇಗ ಏಳುವ ಕೆಲವು ನಿಯಮಗಳ ಬಗ್ಗೆ ಧರ್ಮಗ್ರಂಥಗಳಲ್ಲಿ ಉಲ್ಲೇಖಿಸಲಾಗಿದೆ
  • ಬೆಳಗ್ಗೆ ಎದ್ದ ಕೂಡಲೇ ಓಂಕಾರ & ಗಾಯತ್ರಿ ಮಂತ್ರ ಪಠಿಸಿದರೆ ಇಡೀ ದಿನ ಮಂಗಳಕರವಾಗಿರುತ್ತದೆ
  • ಬ್ರಾಹ್ಮಿ ಮುಹೂರ್ತದಲ್ಲಿ ಏಳುವುದರಿಂದ ವ್ಯಕ್ತಿಗೆ ತುಂಬಾ ಒಳಿತಾಗುತ್ತದೆ
Morning Mantra: ಬೆಳಗ್ಗೆ ಎದ್ದ ತಕ್ಷಣ ಈ ಕೆಲಸ ಮಾಡಿದ್ರೆ ಪ್ರತಿದಿನ ಶುಭವಾಗುವುದರ ಜೊತೆಗೆ ಮನೆಗೆ ಐಶ್ವರ್ಯ ಬರುತ್ತೆ! title=
Astro Tips For Morning

ನವದೆಹಲಿ: ಬೆಳಗ್ಗೆ ಬೇಗ ಏಳುವ ಕೆಲವು ನಿಯಮಗಳ ಬಗ್ಗೆ ಧರ್ಮಗ್ರಂಥಗಳಲ್ಲಿ ಹೇಳಲಾಗಿದೆ. ಈ ವಿಷಯಗಳ ಬಗ್ಗೆ ಕಾಳಜಿ ವಹಿಸಿದರೆ ಯಾವುದೇ ವ್ಯಕ್ತಿಗೆ ಇಡೀ ದಿನವು ಮಂಗಳಕರವಾಗಿರುತ್ತದೆ. ಪ್ರತಿದಿನವನ್ನೂ ಶುಭಕರವಾಗಿ ಇರಿಸಿಕೊಳ್ಳಲು ಮತ್ತು ಮನಸ್ಸನ್ನು ಸದೃಢವಾಗಿಡಲು ಬೆಳಗ್ಗೆ ಎದ್ದ ನಂತರ ಕೆಲವು ವಿಷಯಗಳ ಬಗ್ಗೆ ವಿಶೇಷ ಕಾಳಜಿ ವಹಿಸಬೇಕು.  

ಬೆಳಗ್ಗೆ ಎದ್ದ ತಕ್ಷಣ ಓಂಕಾರ ಮತ್ತು ಗಾಯತ್ರಿ ಮಂತ್ರವನ್ನು ಪಠಿಸಿದರೆ ವ್ಯಕ್ತಿಯ ಇಡೀ ದಿನ ಮಂಗಳಕರವಾಗಿರುತ್ತದೆ ಎಂದು ನಂಬಲಾಗಿದೆ. ಇದರೊಂದಿಗೆ ಇತರ ಕೆಲವು ವಿಷಯಗಳಿದ್ದು, ಅವುಗಳ ಬಗ್ಗೆ ನೀವು ಗಮನಹರಿಸಬೇಕು. ನೀವು ಬೆಳಗ್ಗೆ ಎದ್ದ ತಕ್ಷಣ ಹೀಗೆ ಮಾಡುವುದರಿಂದ ಆ ದಿನ ಮಂಗಳಕರವಾಗಿರುತ್ತದೆ. 

ಇದನ್ನೂ ಓದಿ: 24 ಗಂಟೆಗಳ ಅಂತರದಲ್ಲಿ 2 ಪ್ರಮುಖ ಗ್ರಹಗಳ ರಾಶಿ ಬದಲಾವಣೆ, ಈ 5 ರಾಶಿಯವರಿಗೆ ಮಹಾ ಯೋಗ ..!

ಬ್ರಾಹ್ಮಿ ಮುಹೂರ್ತದಲ್ಲಿ ಏಳುವುದು  

ಒಬ್ಬ ವ್ಯಕ್ತಿಯು ಸೂರ್ಯೋದಯಕ್ಕೂ 2 ಗಂಟೆಗಳ ಮುಂಚಿತವಾಗಿ ಏಳಬೇಕು ಎಂದು ಶಾಸ್ತ್ರಗಳಲ್ಲಿ ಹೇಳಲಾಗಿದೆ. ಸೂರ್ಯೋದಯಕ್ಕೆ 2 ಗಂಟೆಗಳ ಮೊದಲಿನ ಸಮಯವನ್ನು ಬ್ರಾಹ್ಮಿ ಮುಹೂರ್ತವೆಂದು ಹೇಳಲಾಗಿದೆ. ಈ ಸಮಯವನ್ನು ದೇವತೆಗಳ ಸಮಯವೆಂದು ಪರಿಗಣಿಸಲಾಗಿದೆ. ಈ ಸಮಯದಲ್ಲಿ ಎಚ್ಚರಗೊಳ್ಳುವುದರಿಂದ ವ್ಯಕ್ತಿಯ ಮನಸ್ಸಿಗೆ ಧನಾತ್ಮಕ ಶಕ್ತಿ ಬರುತ್ತದೆ ಮತ್ತು ವ್ಯಕ್ತಿಯು ದಿನವಿಡೀ ಉಲ್ಲಾಸದಿಂದ ಇರುತ್ತಾನೆಂದು ಹೇಳಲಾಗುತ್ತದೆ.

ಧ್ಯಾನ ಮಾಡುವುದು

ಇಂದಿನ ಜಂಜಾಟದ ಬದುಕಿನಲ್ಲಿ ಬ್ರಾಹ್ಮಿ ಮುಹೂರ್ತದಲ್ಲಿ ಎದ್ದೇಳಲು ಸಾಧ್ಯವಾಗುತ್ತಿಲ್ಲ. ಇಂತಹ ಪರಿಸ್ಥಿತಿಯಲ್ಲಿ ಮನಸ್ಸು ಕ್ರಿಯಾಶೀಲವಾಗಿರಲು ಶಾಸ್ತ್ರಗಳಲ್ಲಿ ನಿರಂತರ ಧ್ಯಾನ ಮಾಡಬೇಕೆಂದು ಹೇಳಲಾಗಿದೆ. ನಿರಂತರವಾಗಿ ಧ್ಯಾನ ಮಾಡುವುದರಿಂದ ವ್ಯಕ್ತಿಯ ಮನಸ್ಸು ಸದೃಢವಾಗಿರುತ್ತದೆ ಎಂದು ಅನೇಕ ಗ್ರಂಥಗಳಲ್ಲಿ ಉಲ್ಲೇಖಿಸಲಾಗಿದೆ. ಹಾಗೆಯೇ ಓಂಕಾರ ಮತ್ತು ಗಾಯತ್ರಿ ಮಂತ್ರವನ್ನು ಭಕ್ತಿಯಿಂದ ಜಪಿಸಬೇಕು.

ಇದನ್ನೂ ಓದಿ: ಚಾಣಕ್ಯ ನೀತಿ: ವಿಷಕಾರಿ ಹಾವಿಗಿಂತಲೂ ಅಪಾಯಕಾರಿಯಂತೆ ಇಂತಹ ಜನರು

ಈ ಫೋಟೋವನ್ನು ಕೋಣೆಯಲ್ಲಿ ಇರಿಸಿ

ಜ್ಯೋತಿಷ್ಯದಲ್ಲಿ ಇಡೀ ದಿನವನ್ನು ಶುಭ ಮತ್ತು ಸಮೃದ್ಧವಾಗಿಸಲು ಅನೇಕ ಸಲಹೆಗಳನ್ನು ನೀಡಲಾಗಿದೆ. ಕೊಠಡಿಯಲ್ಲಿ ಧನಾತ್ಮಕ ಶಕ್ತಿ ತುಂಬಿರಲು ಗೋಡೆಗಳ ಮೇಲೆ ದೇವರ ಅಥವಾ ಮಹಾನ್ ವ್ಯಕ್ತಿಯ ಫೋಟೋವನ್ನು ಹಾಕಬೇಕು. ವ್ಯಕ್ತಿಯು ಎದ್ದ ತಕ್ಷಣ ಆ ಫೋಟೋದ ದರ್ಶನ ಪಡೆಯಬೇಕು. ಇದರಿಂದ ನಿಮ್ಮ ಮನಸ್ಸಿನಲ್ಲಿ ಧನಾತ್ಮಕ ಶಕ್ತಿಯು ಸೃಷ್ಟಿಯಾಗುತ್ತದೆ.

ಮನೆಯನ್ನು ಸ್ವಚ್ಛವಾಗಿಡಿ

ಮನೆಯನ್ನು ಶುಚಿಗೊಳಿಸುವುದರಿಂದ ದೇವರು ಮನೆಯಲ್ಲಿ ನೆಲೆಸುತ್ತಾನೆ ಎಂದು ಹೇಳಲಾಗುತ್ತದೆ. ಅಲ್ಲದೆ ಮನೆಯಲ್ಲಿ ಧನಾತ್ಮಕ ಶಕ್ತಿ ನೆಲೆಸಿರುತ್ತದೆ. ಮುಂಜಾನೆ ಸ್ವಚ್ಛತೆ ಇರುವ ಮನೆಯಲ್ಲಿ ಲಕ್ಷ್ಮಿದೇವಿ ನೆಲೆಸುತ್ತಾಳೆಂಬ ನಂಬಿಕೆ ಇದೆ. ಅಲ್ಲದೆ ಮನೆಯಲ್ಲಿ ಸಂತೋಷ ಮತ್ತು ಸಮೃದ್ಧಿ ಸಹ ಇರುತ್ತದೆ.

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ

Trending News