Mahashivaratri: ಮಹಾಶಿವರಾತ್ರಿಯಂದು 'ಮಹಾಸಂಯೋಗ'! ಈ 5 ರಾಶಿಯವರ ಮೇಲೆ ಶಿವನ ಕೃಪೆ!

Mahashivaratri: ಈ ವರ್ಷದ ಮಹಾಶಿವರಾತ್ರಿಯಂದು ಗ್ರಹಗಳ ಮಹಾ ಸಂಯೋಗ ನಿರ್ಮಾಣವಾಗುತ್ತಿದೆ. ಒಂದೇ ರಾಶಿಯಲ್ಲಿ 5 ಗ್ರಹಗಳ ಉಪಸ್ಥಿತಿಯು 5 ರಾಶಿಗಳ ಅದೃಷ್ಟವನ್ನು ಬೆಳಗಿಸುತ್ತದೆ.

Written by - Yashaswini V | Last Updated : Feb 28, 2022, 02:23 PM IST
  • ಈ ಮಹಾಶಿವರಾತ್ರಿಯಲ್ಲಿ 5 ರಾಶಿಗಳ ಜನರ ಮೇಲೆ ಶಿವನ ವಿಶೇಷ ಕೃಪೆ ಇರುತ್ತದೆ
  • ಮಹಾಶಿವರಾತ್ರಿಯಂದು ರೂಪುಗೊಳ್ಳುತ್ತಿರುವ ಈ ಅಪರೂಪದ ಸಂಯೋಗದಿಂದ ಈ ರಾಶಿಯವರು ಶ್ರೀಮಂತರಾಗುತ್ತಾರೆ
  • ಈ ರಾಶಿಯವರ ಅದೃಷ್ಟ ಬೆಳಗಲಿದೆ
Mahashivaratri: ಮಹಾಶಿವರಾತ್ರಿಯಂದು 'ಮಹಾಸಂಯೋಗ'! ಈ 5 ರಾಶಿಯವರ ಮೇಲೆ ಶಿವನ ಕೃಪೆ! title=
Shivaratri Rashiphal

Mahashivaratri: ನಾಳೆ ಅಂದರೆ 1ನೇ ಮಾರ್ಚ್ 2022, ಮಂಗಳವಾರ ಮಹಾಶಿವರಾತ್ರಿ ಆಚರಿಸಲಾಗುವುದು. ಭಗವಾನ್ ಶಿವ ಮತ್ತು ತಾಯಿ ಪಾರ್ವತಿಯ ವಿವಾಹದ ದಿನ, ಗ್ರಹಗಳ ಮಹಾ ಸಂಯೋಗ ರೂಪುಗೊಳ್ಳುತ್ತಿದೆ. ಜ್ಯೋತಿಷ್ಯ ಶಾಸ್ತ್ರದ ಪ್ರಕಾರ ಮಹಾಶಿವರಾತ್ರಿಯ ದಿನದಂದು ಶನಿಯ ಮಕರ ರಾಶಿಯಲ್ಲಿ ಚಂದ್ರ, ಶನಿ, ಶುಕ್ರ, ಬುಧ ಮತ್ತು ಮಂಗಳ ಸೇರಿ ಪಂಚ ಗ್ರಾಹಿ ಯೋಗ (Panchagrahi Yoga) ಉಂಟಾಗುತ್ತದೆ. ಗ್ರಹಗಳ ಈ ಮಹಾನ್ ಸಂಯೋಜನೆಯು 5 ರಾಶಿಯ ಜನರಿಗೆ ತುಂಬಾ ಮಂಗಳಕರವಾಗಿದೆ. ಈ ರಾಶಿಚಕ್ರದ ಜನರ ಮೇಲೆ ಶಿವನ ಅಪಾರ ಆಶೀರ್ವಾದ ಸುರಿಸಲ್ಪಡುತ್ತದೆ. ಅವರು ಹಣವನ್ನು ಗಳಿಸುತ್ತಾರೆ ಮತ್ತು ಅದ್ಭುತ ಯಶಸ್ಸನ್ನು ಸಹ ಪಡೆಯುತ್ತಾರೆ ಎಂದು ಹೇಳಲಾಗುತ್ತಿದೆ. 

ಮಹಾಶಿವರಾತ್ರಿಯಂದು ಈ ರಾಶಿಯವರ ಮೇಲೆ ಶಿವನ ಕೃಪೆ:
ಮೇಷ ರಾಶಿ :
ಮೇಷ ರಾಶಿಯವರಿಗೆ ಈ ಮಹಾಶಿವರಾತ್ರಿಯಂದು ಶಿವನ  (Lord Shiva) ವಿಶೇಷ ಅನುಗ್ರಹವಿರುತ್ತದೆ. ಹಣವು ಇರುತ್ತದೆ, ಇದು ಆರ್ಥಿಕ ಪರಿಸ್ಥಿತಿಯನ್ನು ಬಲಪಡಿಸುತ್ತದೆ. ವ್ಯಾಪಾರಸ್ಥರು ವಿಶೇಷವಾಗಿ ಲಾಭವನ್ನು ಗಳಿಸುವ ಸಾಧ್ಯತೆಯಿದೆ. ಈ ಸಮಯವು ಅದೃಷ್ಟವನ್ನು ಹೆಚ್ಚಿಸುತ್ತದೆ, ಇದರಿಂದಾಗಿ ಸ್ಥಗಿತಗೊಂಡ ಕೆಲಸಗಳು ಸಹ ಪ್ರಾರಂಭವಾಗುತ್ತವೆ. 

ವೃಷಭ ರಾಶಿ: ವೃಷಭ ರಾಶಿಯವರಿಗೆ ಮಹಾಶಿವರಾತ್ರಿಯಂದು ಸಂಭವಿಸುವ ಗ್ರಹಗಳ ಸಂಯೋಜನೆಯು ಅದೃಷ್ಟದ ಬದಲಾವಣೆಯನ್ನು ಸಾಬೀತುಪಡಿಸುತ್ತದೆ. ಅದೃಷ್ಟದ ಸಹಾಯದಿಂದ ಅವರು ಎಲ್ಲದರಲ್ಲೂ ಯಶಸ್ಸನ್ನು ಪಡೆಯುತ್ತಾರೆ. ಇಷ್ಟು ದಿನ ನಿಮ್ಮ ಕೈ ಸೇರದೆ ಸಿಲುಕಿರುವ ಹಣ ಲಭ್ಯವಾಗಲಿದೆ. ಲಾಭದ ಮೂಲಗಳು ಸೃಷ್ಟಿಯಾಗಲಿವೆ. ಪ್ರೇಮ ಜೀವನ ಚೆನ್ನಾಗಿರುತ್ತದೆ. ಒಳಿತಿಗಾಗಿ, ಮಹಾಶಿವರಾತ್ರಿಯಂದು, ಶಿವನಿಗೆ ಕಬ್ಬಿನ ರಸ ಮತ್ತು ಹಾಲಿನಿಂದ ಅಭಿಷೇಕ ಮಾಡಿ. 

ಇದನ್ನೂ ಓದಿ- Mahashivratri 2022: ಮಹಾಶಿವರಾತ್ರಿಯ ದಿನ ಈ ಒಂದು ಕೆಲಸ ಮಾಡಿ ಸಾಕು, ಬಯಸಿದ ವರ ನಿಮ್ಮದಾಗಲಿದೆ!

ಮಿಥುನ ರಾಶಿ:  ಮಹಾಶಿವರಾತ್ರಿಯ (Maha Shivaratri) ದಿನ ಮಿಥುನ ರಾಶಿಯವರಿಗೆ ಒಳ್ಳೆಯ ಸುದ್ದಿ ಸಿಗಬಹುದು. ಇದರೊಂದಿಗೆ ಈ ದಿನದಂದು ಭೋಲೆನಾಥನ ವಿಶೇಷ ಆಶೀರ್ವಾದವನ್ನು ಪಡೆಯಲಾಗುತ್ತದೆ. ವೈವಾಹಿಕ ಜೀವನದಲ್ಲಿ ಸಂತೋಷ ಇರುತ್ತದೆ. 

ತುಲಾ ರಾಶಿ : ಈ ಮಹಾಶಿವರಾತ್ರಿಯು ತುಲಾ ರಾಶಿಯವರಿಗೆ ಸಾಂಸಾರಿಕ ಸುಖವನ್ನು ಹೆಚ್ಚಿಸಲಿದೆ. ಹಣವು ಪ್ರಯೋಜನಕಾರಿಯಾಗಲಿದೆ. ನೀವು ಐಷಾರಾಮಿ ವಸ್ತುಗಳನ್ನು ಖರೀದಿಸಬಹುದು. ನೀವು ಕೆಲಸದ ಪ್ರಸ್ತಾಪವನ್ನು ಪಡೆಯಬಹುದು. ಈ ಸಮಯವು ವೃತ್ತಿಜೀವನಕ್ಕೆ ತುಂಬಾ ಒಳ್ಳೆಯದು. ಪ್ರಯಾಣಕ್ಕೆ ತೆರಳುವ ಸಾಧ್ಯತೆಯೂ ಇದ್ದು, ಪ್ರಯಾಣ ಲಾಭದಾಯಕವಾಗಿರುತ್ತದೆ. 

ಇದನ್ನೂ ಓದಿ- Weekly Horoscope : ಮುಂದಿನ ವಾರ ಈ 3 ರಾಶಿಯವರಿಗೆ ಅದ್ಭುತವಾಗಿದೆ : ನಿಮ್ಮ ವಾರದ ಭವಿಷ್ಯ ಹೇಗಿದೆ ನೋಡಿ

ಮಕರ ರಾಶಿ : ಮಕರ ರಾಶಿಯಲ್ಲಿ ಗ್ರಹಗಳ ಸಂಯೋಗ ಆಗುತ್ತಿರುವುದರಿಂದ ಈ ರಾಶಿಯವರಿಗೆ ಅತ್ಯಂತ ಶುಭ ಫಲ ಸಿಗಲಿದೆ. ಅವರು ವೃತ್ತಿ ಮತ್ತು ವ್ಯವಹಾರದಲ್ಲಿ ದೊಡ್ಡ ಪ್ರಗತಿಯನ್ನು ಪಡೆಯಬಹುದು. ಬಡ್ತಿ, ಹೊಸ ಉದ್ಯೋಗ, ಇನ್‌ಕ್ರಿಮೆಂಟ್ ಪಡೆಯುವ ಬಲವಾದ ಅವಕಾಶಗಳಿವೆ. 

ಸೂಚನೆ: ಇಲ್ಲಿ ನೀಡಲಾದ ಮಾಹಿತಿಯು ಸಾಮಾನ್ಯ ಮಾಹಿತಿಯನ್ನು ಆಧರಿಸಿದೆ. ZEE ಮೀಡಿಯಾ ಇದನ್ನು ಖಚಿತಪಡಿಸುವುದಿಲ್ಲ.

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News