ಯಾವುದೇ ಸಂಕೇತಗಳನ್ನು ನೀಡದೆಯೆ ಜೀವಕ್ಕೆ ಕುತ್ತು ತರುತ್ತೆ ಈ ಕಾಯಿಲೆ, ಈ ರೀತಿ ಸುಲಭವಾಗಿ ನಿಯಂತ್ರಿಸಿ!

Weight Loss Tips: ಇಂದಿನ ಬದಲಾದ ಜೀವನಶೈಲಿಯಲ್ಲಿ ತೂಕ ಹೆಚ್ಚಳ ಸಾಮಾನ್ಯ ಸಮಸ್ಯೆಯಾಗಿ ಮಾರ್ಪಟ್ಟಿದೆ. ಹೀಗಾಗಿ ರಾತ್ರಿ ಮಲಗುವ ಮೊದಲು, ನೀವು ಕೆಲವು ವಿಷಯಗಳ ಕುರಿತು ಕಾಳಜಿ ವಹಿಸಬೇಕು, ಇದರಿಂದಾಗಿ ತೂಕವು ವೇಗವಾಗಿ ಇಳಿಕೆಯಾಗಲು ಪ್ರಾರಂಭಿಸುತ್ತದೆ (Lifestyle News In Kannada).  

Written by - Nitin Tabib | Last Updated : Aug 10, 2023, 11:08 PM IST
  • ರಾತ್ರಿ ಮಲಗುವ ಮುನ್ನ ನೀವು ಪ್ರೋಟೀನ್ ಶೇಕ್ ಅನ್ನು ಸೇವಿಸಿದರೆ, ನೀವು ಅದರಿಂದ ಅನೇಕ ದೊಡ್ಡ ಪ್ರಯೋಜನಗಳನ್ನು ಪಡೆಯಬಹುದು.
  • ಏಕೆಂದರೆ, ಪ್ರೋಟೀನ್, ಕಾರ್ಬೋಹೈಡ್ರೇಟ್‌ ಅಥವಾ ಕೊಬ್ಬಿಗಿಂತ ಹೆಚ್ಚು ಥರ್ಮೋಜೆನಿಕ್ ಎಂದು ಭಾವಿಸಲಾಗುತ್ತದೆ,
  • ಇದರಿಂದಾಗಿ ನಿಮ್ಮ ದೇಹವು ಹೆಚ್ಚು ಕ್ಯಾಲೊರಿಗಳನ್ನು ಜೀರ್ಣಿಸಿಕೊಳ್ಳಲು ಸಾಧ್ಯವಾಗುತ್ತದೆ.
ಯಾವುದೇ ಸಂಕೇತಗಳನ್ನು ನೀಡದೆಯೆ ಜೀವಕ್ಕೆ ಕುತ್ತು ತರುತ್ತೆ ಈ ಕಾಯಿಲೆ, ಈ ರೀತಿ ಸುಲಭವಾಗಿ ನಿಯಂತ್ರಿಸಿ!  title=

ಬೆಂಗಳೂರು: ಇಂದಿನ ಬದಲಾದ ಜೀವನಶೈಲಿಯ ಕಾರಣ ಸ್ಥೂಲಕಾಯ ಸಮಸ್ಯೆ ಒಂದು ಸಾಮಾನ್ಯ ಸಮಸ್ಯೆಯಾಗಿ ಮಾರ್ಪಟ್ಟಿದೆ. ಇಂತಹ ಪರಿಸ್ಥಿತಿಯಲ್ಲಿ, ಎಲ್ಲಾ ರೀತಿಯ ಸಲಹೆಗಳನ್ನು ಅನುಸರಿಸಿಯೂ ಕೂಡ ನೀವು ತೂಕ ಕಳೆದುಕೊಳ್ಳುವಲ್ಲಿ ವಿಫಲರಾಗಿದ್ದರೆ, ನೀವು ಕೆಲವು ವಿಷಯಗಳನ್ನು ನೆನಪಿನಲ್ಲಿಟ್ಟುಕೊಳ್ಳಬೇಕು (Lifestyle News In Kannada). ಹೌದು, ಇಂತಹ ಪರಿಸ್ಥಿತಿಯಲ್ಲಿ, ರಾತ್ರಿ ಮಲಗುವ ಮೊದಲು ನೀವು ಕೆಲವು ವಿಷಯಗಳ ಬಗ್ಗೆ  ಕಾಳಜಿವಹಿಸಬೇಕು, ಇದರಿಂದಾಗಿ ತೂಕವು ವೇಗವಾಗಿ ಇಳಿಕೆಯಾಗಲು ಪ್ರಾರಂಭಿಸುತ್ತದೆ. ಬನ್ನಿ, ಜಿಮ್‌ಗೆ ಹೋಗದೆ ನೀವು ನಿಮ್ಮ ತೂಕವನ್ನು ಹೇಗೆ ಕಳೆದುಕೊಳ್ಳಬೇಕು ಎಂಬುದನ್ನು ತಿಳಿದುಕೊಳ್ಳೋಣ,

1. ಮಲಗುವ ಮುನ್ನ ಪ್ರೋಟೀನ್ ಶೇಕ್ ಕುಡಿಯಿರಿ
ರಾತ್ರಿ ಮಲಗುವ ಮುನ್ನ ನೀವು ಪ್ರೋಟೀನ್ ಶೇಕ್ ಅನ್ನು ಸೇವಿಸಿದರೆ, ನೀವು ಅದರಿಂದ ಅನೇಕ ದೊಡ್ಡ ಪ್ರಯೋಜನಗಳನ್ನು ಪಡೆಯಬಹುದು. ಏಕೆಂದರೆ, ಪ್ರೋಟೀನ್, ಕಾರ್ಬೋಹೈಡ್ರೇಟ್‌ ಅಥವಾ ಕೊಬ್ಬಿಗಿಂತ ಹೆಚ್ಚು ಥರ್ಮೋಜೆನಿಕ್ ಎಂದು ಭಾವಿಸಲಾಗುತ್ತದೆ, ಇದರಿಂದಾಗಿ ನಿಮ್ಮ ದೇಹವು ಹೆಚ್ಚು ಕ್ಯಾಲೊರಿಗಳನ್ನು ಜೀರ್ಣಿಸಿಕೊಳ್ಳಲು ಸಾಧ್ಯವಾಗುತ್ತದೆ.

ಇದನ್ನೂ ಓದಿ-ಡೈ ಬಳಸದೆಯೇ ನಿಮ್ಮ ಬಿಳಿ ತಲೆಯನ್ನು ಕಪ್ಪಾಗಿಸಬೇಕೆ? ಇಲ್ಲಿದೆ ಸೂಪರ್ ಹಿಟ್ ಉಪಾಯ!

2. ಸ್ಲೀಪ್ ಮಾಸ್ಕ್
ಸ್ಲೀಪ್ ಮಾಸ್ಕ್ ಧರಿಸುವುದರಿಂದ ಕೂಡ ತೂಕ ಇಳಿಕೆಯಾಗುತ್ತದೆ. ಮಂದ ಬೆಳಕಿನಲ್ಲಿ ಮಲಗುವ ಜನರು ಬೊಜ್ಜು ಹೊಂದುವ ಸಾಧ್ಯತೆ ಶೇ.21ರಷ್ಟಿರುತ್ತದೆ ಎನ್ನಲಾಗಿದೆ. ಇಂತಹ ಪರಿಸ್ಥಿತಿಯಲ್ಲಿ, ಬೆಳಕಿನಲ್ಲಿ ಮಲಗುವ ಜನರು ಸ್ಲೀಪ್ ಮಾಸ್ಕ್ ಧರಿಸಿ ಮಲಗಬೇಕು.

ಇದನ್ನೂ ಓದಿ-ವೇಗವಾಗಿ ಕೂದಲು ಉದುರುತ್ತಿವೆಯೇ? ಈ ನೀರಿನಿಂದ ಕೂದಲು ತೊಳೆದರೆ ತಕ್ಷಣಕ್ಕೆ ನಿಂತುಹೋಗುತ್ತವೆ!

3. ರಾತ್ರಿ ಸರಿಯಾಗಿ ನಿದ್ರೆ ಮಾಡಿ
ನೀವು ರಾತ್ರಿಯಲ್ಲಿ ಒಂದು ಗಂಟೆ ಹೆಚ್ಚು ನಿದ್ರೆ ಮಾಡಿದರೆ, ಅದು ತೂಕವನ್ನು ಕಳೆದುಕೊಳ್ಳಲು ಸಹಾಯ ಮಾಡುತ್ತದೆ. ಇದರೊಂದಿಗೆ, ಅರ್ಧಕ್ಕಿಂತ ಹೆಚ್ಚು ಕಾಯಿಲೆಗಳಿಗೆ ನಿಮ್ಮ ನಿದ್ರೆಯೇ ಚಿಕಿತ್ಸೆ. ಅದೇನೆಂದರೆ ಹೆಚ್ಚು ಹೆಚ್ಚು ನಿದ್ದೆ ಮಾಡುವುದರಿಂದ ತೂಕ ಇಳಿಕೆಯಾಗುವುದರ ಜೊತೆಗೆ ಮಾನಸಿಕ ನೆಮ್ಮದಿ ಸಿಗುತ್ತದೆ. ಹೀಗಾಗಿ ನೀವೂ ಕಡಿಮೆ ನಿದ್ದೆ ಮಾಡುತ್ತಿದ್ದರೆ,  ಇಂದೇ ನಿಮ್ಮ ಅಭ್ಯಾಸವನ್ನು ಬದಲಾಯಿಸಿ ಪ್ರತಿದಿನ ಕನಿಷ್ಠ 9 ಗಂಟೆಗಳ ಕಾಲ ಮಲಗುವ ಅಭ್ಯಾಸ ರೂಢಿಸಿಕೊಳ್ಳಿ.

(ಹಕ್ಕುತ್ಯಾಗ- ಈ ಲೇಖನದಲ್ಲಿ ನೀಡಲಾಗಿರುವ ಮಾಹಿತಿ ಸಾಮಾನ್ಯ ಜ್ಞಾನ ಹಾಗೂ ಮನೆಮದ್ದು ಮಾಹಿತಿಯನ್ನು ಆಧರಿಸಿದೆ. ಜೀ ಕನ್ನಡ ನ್ಯೂಸ್ ಈ ಮಾಹಿತಿಯನ್ನು ಖಚಿತಪಡಿಸುವುದಿಲ್ಲ. ಅನುಸರಿಸುವ ಮುನ್ನ ವಿಷಯ ತಜ್ಞರ ಸಲಹೆ ಪಡೆದುಕೊಳ್ಳಲು ಮರೆಯಬೇಡಿ)

ಇದನ್ನೂ ನೋಡಿ-

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/watch?v=uzXzteRDY-k

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ

Trending News