ಬೆಂಗಳೂರು : ಶುಕ್ರವಾರ ಅಂದರೆ ಲಕ್ಷ್ಮಿ ದೇವಿಗೆ (Godess Lakshmi) ಅರ್ಪಿತ. ಶುಕ್ರವಾರದ ಲಕ್ಷ್ಮೀ ಪೂಜೆಯನ್ನು (Friday Lakshmi pooja) ಮಾಡಿದರೆ, ಸುಖ ಶಾಂತಿ ಸಮೃದ್ಧಿ ನೆಲೆಯಾಗುತ್ತದೆಯಂತೆ. ಹಾಗಾಗಿಯೇ ಶುಕ್ರವಾರ ಲಕ್ಷ್ಮೀಗೆ ವಿಶೇಷ ಪೂಜೆ ಸಲ್ಲಿಸಲಾಗುತ್ತದೆ. ಪೂಜೆಯಿಂದ ಲಕ್ಷ್ಮೀ ಪ್ರಸನ್ನಳಾದಳೆಂದರೆ, ಧನಪ್ರಾಪ್ತಿ ಖಂಡಿತಾ.. ಬಹುತೇಕ ಮಮದಿ ಶುಕ್ರವಾರದ ವೃತವನ್ನು ಕೂಡಾ ಆಚರಿಸುತ್ತಾರೆ. ಯಾರು ಶುಕ್ರವಾರದ ವೃತವನ್ನು ಆಚರಿಸಬೇಕು. ವೃತದ ವಿಧಾನ ಏನು ಎಂಬುದರ ಸಂಪೂರ್ಣ ಮಾಹಿತಿ ಇಲ್ಲಿದೆ.
- ಶುಕ್ರ ಗ್ರಹವು ಎರಡು ರಾಶಿ ಚಿಹ್ನೆಗಳನ್ನು ಒಳಗೊಂಡಿದೆ. ಅವುಗಳೆಂದರೆ ವೃಷಭ (Taurus) ಮತ್ತು ತುಲಾ (Libra) . ಹಾಗಾಗಿ ಈ ಎರಡೂ ರಾಶಿಯವರು ಶುಕ್ರವಾರದ ವೃತವನ್ನು ಆಚರಿಸಬೇಕು.
ಇದನ್ನೂ ಓದಿ : ಈ ನಾಲ್ಕು ಚಿಹ್ನೆ ಕೈಯಲ್ಲಿದ್ದರೆ ಹಣದ ಕೊರತೆಯಾಗುವುದೇ ಇಲ್ಲ; ದೇವರ ಕೃಪೆ ಸದಾ ಇವರ ಮೇಲಿರುತ್ತದೆ
- ಒಂದು ವೇಳೆ ನಿಮ್ಮ ಜಾತಕದಲ್ಲಿ ಶುಕ್ರನ ಜೊತೆಗೆ ಶುಕ್ರನ ಶತ್ರು ಗ್ರಹಗಳಾದ ಸೂರ್ಯ ಮತ್ತು ಚಂದ್ರರಿದ್ದರೆ, ಶುಕ್ರವಾರ ಉಪವಾಸವನ್ನು ಆಚರಿಸಬೇಕು.
-ಹಣಕಾಸಿನ ಸಮಸ್ಯೆ ಕಾಡುತ್ತಿದ್ದರೆ ಅಥವಾ ಬಡತನ ಬೆನ್ನು ಬಿಡದಿದ್ದಲ್ಲಿ ಶುಕ್ರವಾರದ ವೃತ, ಶುಕ್ರವಾರದ ಪೂಜೆಯನ್ನು (friday Pooja) ವಿಧಿ ವಿಧಾನಗಳೊಂದಿಗೆ ನೆರವೇರಿಸಬೇಕು, ಃಇಗೆ ಮಾಡಿದ್ದಲ್ಲಿ ಲಕ್ಷ್ಮೀ (Godess Lakshmi) ಪ್ರಸನ್ನಳಾಗಿ ಆರ್ಥಿಕ ಬಿಕ್ಕಟ್ಟಿನಿಂದ ಮುಕ್ತಿ ಸಿಗುತ್ತದೆ ಎಂದು ನಂಬಲಾಗಿದೆ.
-ಇನ್ನು ಯಾರ ಜಾತಕದಲ್ಲಿ ಶುಕ್ರನ ಜೊತೆಗೆ ರಾಹು ಇರುತ್ತದೆಯೋ ಅವರ ಜೀವನದಲ್ಲೂ ಸಂಪತ್ತಿನ ಪ್ರಭಾವ ಕೊನೆಯಾಗುತ್ತದೆ. ಹಾಗಾಗಿ ಇಂಥವರು, ಶುಕ್ರವಾರದ ವೃತವನ್ನು ಆಚರಿಸಬೇಕು.
ಇದನ್ನೂ ಓದಿ : ಸುಖ ಶಾಂತಿ ಸಮೃದ್ಧಿಗಾಗಿ ಮನೆಯಿಂದ ತಕ್ಷಣ ಹೊರ ಹಾಕಿ ಈ ವಸ್ತುಗಳನ್ನು
- ನಿಮ್ಮ ವೈವಾಹಿಕ ಜೀವನದಲ್ಲಿ (Marriage Life) ತೊಂದರೆಗಳನ್ನು ಎದುರಿಸುತ್ತಿದ್ದರೆ, ಅದರ ಪರಿಹಾರವಾಗಿ ನೀವು ಶುಕ್ರವಾರ ಉಪವಾಸವಿರಬೇಕು. ಶುಕ್ರವಾರದ ಪೂಜೆ ನೆರವೇರಿಸಬೇಕು.
-ಇನ್ನು ನಿಮ್ಮ ಕೆನ್ನೆ, ಗಲ್ಲ, ಹೆಬ್ಬೆರಳು, ಮೂತ್ರಪಿಂಡ, ನರಗಳು ಮತ್ತು ರಕ್ತನಾಳಗಳಲ್ಲಿ ಯಾವುದೇ ಸಮಸ್ಯೆ ಇದ್ದರೆ, ನೀವು ಶುಕ್ರವಾರದ ವೃತವನ್ನು ಆಚರಿಸಬೇಕು. ಇವೆಲ್ಲವೂ ಶುಕ್ರಗೃಹಕ್ಕೆ ಸಂಬಂಧಿಸಿದ್ದಾಗಿದೆ. ಹಾಗಾಗಿ ಈ ಸಮಸ್ಯೆಗಳಿಂದ ಬಳಲುತ್ತಿರುವವರು ಕೂಡಾ ಶುಕ್ರವಾರದ (Friday) ಪೂಜೆಯನ್ನು ನೆರವೇರಿಸಬೇಕು.
ಇದನ್ನೂ ಓದಿ : Budh Rashi Parivartan: ಬುಧ ರಾಶಿ ಪರಿವರ್ತನೆ, ಈ ರಾಶಿಗಳಿಗೆ ಒಳ್ಳೆಯ ಸಮಯ
ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3loQYe
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.