ನೀವು ಬಳಸುವ ಟೀ ಸೊಪ್ಪು ಅಸಲಿಯೋ? ನಕಲಿಯೋ? ನೀರಿನಿಂದ ಈ ರೀತಿ ಪತ್ತೆ ಹಚ್ಚಿ

ಕಲಬೆರಕೆ ಚಹಾ ಎಲೆಗಳು: ಇತ್ತೀಚಿನ ದಿನಗಳಲ್ಲಿ ಮಾರುಕಟ್ಟೆಯಲ್ಲಿ ಸಿಗುವ ಪದಾರ್ಥಗಳಲ್ಲಿ ಯಾವುದು ಅಸಲಿ? ಯಾವುದು ನಕಲಿ ಎಂದು ಗೊತ್ತಾಗುವುದೇ ಇಲ್ಲ. ಮನೆಯಲ್ಲಿ ಸಾಮಾನ್ಯವಾಗಿ ಬಳಸಲಾಗುವ ಚಹಾ ಎಲೆಗಳು ಅಂದರೆ ಟೀ ಸೊಪ್ಪು ಸಹ ಇದಕ್ಕೆ ಹೊರತಾಗಿಲ್ಲ. ಆದರೆ, ನೀವು ಬಳಸುವ ಟೀ ಸೊಪ್ಪು ಅಸಲಿಯೋ? ನಕಲಿಯೋ? ಎಂದು ತಣ್ಣನೆಯ ನೀರಿನಿಂದ ಸುಲಭವಾಗಿ ತಿಳಿಯಬಹುದು.

Written by - Yashaswini V | Last Updated : Jul 26, 2022, 12:45 PM IST
  • ಮಾರುಕಟ್ಟೆಯಲ್ಲಿ ನೈಜವಾದ ಚಹಾ ಎಲೆಗಳ ಜೊತೆಗೆ ಕಲಬೆರಕೆ ಚಹಾ ಎಲೆಗಳು ಸಹ ಲಭ್ಯವಿವೆ.
  • ಅಂತಹ ಪರಿಸ್ಥಿತಿಯಲ್ಲಿ, ನೀವು ಯಾವ ರೀತಿಯ ಚಹಾ ಎಲೆಯನ್ನು ಬಳಸುತ್ತೀರಿ ಎಂದು ತಿಳಿದಿರುವುದು ಬಹಳ ಮುಖ್ಯ.
  • ಚಹಾ ಎಲೆಗಳು ನೈಜವೋ ಅಥವಾ ನಕಲಿಯೋ ಎಂದು ತಣ್ಣೀರಿನಿಂದ ತಿಳಿಯಿರಿ
ನೀವು ಬಳಸುವ ಟೀ ಸೊಪ್ಪು ಅಸಲಿಯೋ? ನಕಲಿಯೋ? ನೀರಿನಿಂದ ಈ ರೀತಿ ಪತ್ತೆ ಹಚ್ಚಿ  title=
Adulterated tea leaves

ಕಲಬೆರಕೆ ಚಹಾ ಎಲೆಗಳು: ನಮ್ಮಲ್ಲಿ ಹಲವರಿಗೆ ಚಹಾ ಇಲ್ಲದೆ ದಿನ ಪ್ರಾರಂಭವಾಗುವುದೇ ಇಲ್ಲ. ಆದರೆ ಮಾರುಕಟ್ಟೆಯಲ್ಲಿ ಸಿಗುವ ಚಹಾ ಎಲೆಗಳು ನೈಜವೋ ಅಥವಾ ಕಲಬೆರಕೆಯೋ ಎಂದು ನಿಮಗೆ ತಿಳಿದಿದೆಯೇ? ವಾಸ್ತವವಾಗಿ, ಮಾರುಕಟ್ಟೆಯಲ್ಲಿ ನೈಜವಾದ ಚಹಾ ಎಲೆಗಳ ಜೊತೆಗೆ ಕಲಬೆರಕೆ ಚಹಾ ಎಲೆಗಳು ಸಹ ಲಭ್ಯವಿವೆ. ಅಂತಹ ಪರಿಸ್ಥಿತಿಯಲ್ಲಿ, ನೀವು ಯಾವ ರೀತಿಯ ಚಹಾ ಎಲೆಯನ್ನು ಬಳಸುತ್ತೀರಿ ಎಂದು ತಿಳಿದಿರುವುದು ಬಹಳ ಮುಖ್ಯ. 

ನಿಜವಾದ ಚಹಾ ಎಲೆಗಳು ರುಚಿಯಲ್ಲಿ ಉತ್ತಮವಾಗಿರುತ್ತವೆ ಮತ್ತು ಪರಿಮಳದಲ್ಲಿ ವಿಭಿನ್ನವಾಗಿವೆ. ಕಲಬೆರಕೆ  ಚಹಾ ಎಲೆಗಳಿಂದ ನೀವು ಅನೇಕ ರೀತಿಯ ಸಮಸ್ಯೆಗಳನ್ನು ಎದುರಿಸಬೇಕಾಗುತ್ತದೆ. ಹಾಗಾಗಿ, ನೀವು ಬಳಸುವ ಚಹಾ ಎಲೆಗಳು ಅಸಲಿಯೋ ಅಥವಾ ಕಲಬೆರಕೆಯೋ ಎಂದು ಮೊದಲು ಅರ್ಥಮಾಡಿಕೊಳ್ಳಬೇಕು. ಇದಕ್ಕಾಗಿ ನೀವು ಹೆಚ್ಚು ಕಷ್ಟಪಡುವ ಅಗತ್ಯವಿಲ್ಲ. ತಣ್ಣೀರಿನಿಂದ ಇದನ್ನು ಸುಲಭವಾಗಿ ತಿಳಿಯಬಹುದು.

ಇದನ್ನೂ ಓದಿ- ಮಾನ್ಸೂನ್ನಲ್ಲಿ ಡ್ಯಾಂಡ್ರಫ್ ಸಮಸ್ಯೆ ನಿವಾರಣೆಗೆ ಸರಳ ಮನೆಮದ್ದು

ಕಲಬೆರಕೆ ಚಹಾ ಎಲೆಗಳನ್ನು ಪತ್ತೆ ಹಚ್ಚುವ ಸುಲಭ ವಿಧಾನ:
* ತಣ್ಣೀರು ಬಳಸಿ ಚಹಾ ಎಲೆಗಳ ನೈಜ ಗುರುತನ್ನು ಗುರುತಿಸಬಹುದು. ಅದಕ್ಕಾಗಿ ಒಂದು ಲೋಟ ತಣ್ಣೀರು ತೆಗೆದುಕೊಂಡು ಅದರಲ್ಲಿ ಎರಡು ಚಮಚ ಚಹಾ ಎಲೆಗಳನ್ನು ಮಿಶ್ರಣ ಮಾಡಿ. 1 ನಿಮಿಷದ ನಂತರ ನೀರಿನಲ್ಲಿ ಬಣ್ಣ ಬಂದರೆ, ನಿಮ್ಮ ಚಹಾ ಎಲೆಗಳು ಕಲಬೆರಕೆ ಎಂದು ನೀವು ಅರ್ಥಮಾಡಿಕೊಳ್ಳಿ ಮತ್ತು ಚಹಾ ಎಲೆಗಳು ಕ್ರಮೇಣ ತಮ್ಮ ಬಣ್ಣವನ್ನು ಬಿಟ್ಟರೆ, ಅದು ನಿಜವಾದ ಚಹಾ ಎಲೆಗಳು ಎಂದು ಅರ್ಥಮಾಡಿಕೊಳ್ಳಿ.

* ನೀವು ಕಲಬೆರಕೆ ಚಹಾ ಎಲೆಗಳನ್ನು ಪರಿಶೀಲಿಸಲು ಬಯಸಿದರೆ, ಮೊದಲನೆಯದಾಗಿ ನೀವು ಗಾಜಿನ ಪಾತ್ರೆಯನ್ನು ತೆಗೆದುಕೊಂಡು ಅದರಲ್ಲಿ ಕೆಲವು ಹನಿ ನಿಂಬೆ ರಸವನ್ನು ಹಾಕಿ. ಬಳಿಕ ಚಹಾ ಎಲೆಗಳನ್ನು ತೆಗೆದುಕೊಂಡು ಅವುಗಳನ್ನು ನಿಂಬೆ ರಸದಲ್ಲಿ ಹಾಕಿ ಮತ್ತು ಅದು ಯಾವ ಬಣ್ಣವನ್ನು ನೀಡುತ್ತದೆ ಎಂಬುದನ್ನು ಗಮನಿಸಿ. ಚಹಾ ಎಲೆಗಳು ಕಿತ್ತಳೆ ಅಥವಾ ಇನ್ನಾವುದೇ ಬಣ್ಣ ಬಿಟ್ಟರೆ ಅದು ನಕಲಿ ಟೀ ಸೊಪ್ಪು. ಇದೇ ವೇಳೆ ಹಸಿರು ಮತ್ತು ಹಳದಿ ಮಿಶ್ರಿತ ಬಣ್ಣ ಕಂಡುಬಂದರೆ ಅದು ನಿಜವಾದ ಚಹಾ ಎಲೆ ಎಂದು ಅರ್ಥಮಾಡಿಕೊಳ್ಳಿ.

ಇದನ್ನೂ ಓದಿ- ಈ ಮಣ್ಣಿನಿಂದ ಕೂದಲು ತೊಳೆಯಿರಿ: ನೀವು ಊಹಿಸಿರದಷ್ಟು ಅದ್ಭುತ ಪ್ರಯೋಜನ ಸಿಗುತ್ತೆ

* ಟೀ ಎಲೆಗಳು ಕಲಬೆರಕೆಯಾಗಿದೆಯೇ ಅಥವಾ ಇಲ್ಲವೇ ಎಂಬುದನ್ನು ಪರಿಶೀಲಿಸಲು ನೀವು ಟಿಶ್ಯೂ ಪೇಪರ್ ಅನ್ನು ಸಹ ಬಳಸಬಹುದು. ಇದಕ್ಕಾಗಿ ಒಂದು ಟಿಶ್ಯೂ ಪೇಪರ್‌ನಲ್ಲಿ ಎರಡು ಚಮಚ ಚಹಾ ಎಲೆಗಳನ್ನು ಹಾಕಿ ಅದರಲ್ಲಿ ಕೆಲವು ಹನಿ ನೀರನ್ನು ಹಾಕಿ ಬಿಸಿಲಿನಲ್ಲಿ ಇರಿಸಿ. ಸ್ವಲ್ಪ ಸಮಯದ ನಂತರ ಚಹಾ ಎಲೆಯಿಂದ ಟಿಶ್ಯೂ ಪೇಪರ್ ಅನ್ನು ತೆಗೆದುಹಾಕಿ ಮತ್ತು ಕಲೆ ಇದೆಯೇ ಅಥವಾ ಇಲ್ಲವೇ ಎಂದು ನೋಡಿ. ಕಲೆ ಕಂಡರೆ ಚಹಾ ಎಲೆ ಕಲಬೆರಕೆ ಎಂದು ಅರ್ಥಮಾಡಿಕೊಳ್ಳಿ ಮತ್ತು ಕಲೆ ಕಾಣಿಸದಿದ್ದರೆ ಅದು ನೈಜವಾದ ಚಹಾ ಎಲೆ ಎಂದು ಅರ್ಥಮಾಡಿಕೊಳ್ಳಿ.

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News