Kartik Purnima 2021: ಕಾರ್ತಿಕ ಹುಣ್ಣಿಮೆ ದಿನ ಮಾಡುವ ಈ ತಪ್ಪುಗಳು ಭಾರೀ ಕೆಟ್ಟ ಪರಿಣಾಮಗಳನ್ನು ಬೀರುತ್ತವೆ

ಕಾರ್ತಿಕ ಹುಣ್ಣಿಮೆಯನ್ನು ತ್ರಿಪುರಾರಿ ಹುಣ್ಣಿಮೆ  ಎಂದೂ ಕರೆಯಲಾಗುತ್ತದೆ. ಈ ದಿನದಂದು ಶಿವನು ತ್ರಿಪುರಾಸುರ ಎಂಬ ರಾಕ್ಷಸನನ್ನು ಕೊಂದನು ಎನ್ನುವುದು ಇದರ ಹಿಂದಿನ ನಂಬಿಕೆ.

Written by - Ranjitha R K | Last Updated : Nov 12, 2021, 05:16 PM IST
  • ನವೆಂಬರ್ 11 ರಂದು ಕಾರ್ತಿಕ ಹುಣ್ಣಿಮೆ
  • ಈ ದಿನ ದೀಪದಾನ ಮಾಡಿದರೆ ಒಳ್ಳೆಯದು
  • ಕಾರ್ತಿಕ ಹುಣ್ಣಿಮೆಯ ದಿನ ಕೆಲವು ನಿಯಮಗಳನ್ನು ಪಾಲಿಸಬೇಕು
Kartik Purnima 2021: ಕಾರ್ತಿಕ ಹುಣ್ಣಿಮೆ ದಿನ ಮಾಡುವ ಈ ತಪ್ಪುಗಳು ಭಾರೀ ಕೆಟ್ಟ ಪರಿಣಾಮಗಳನ್ನು ಬೀರುತ್ತವೆ  title=
ನವೆಂಬರ್ 11 ರಂದು ಕಾರ್ತಿಕ ಹುಣ್ಣಿಮೆ (file photo)

ನವದೆಹಲಿ : ಕಾರ್ತಿಕ ಮಾಸದ ಅಮಾವಾಸ್ಯೆಯಂದು ದೀಪಾವಳಿ ಹಬ್ಬವನ್ನು ಆಚರಿಸಿದ ನಂತರ ಕಾರ್ತಿಕ ಹುಣ್ಣಿಮೆಯ(Kartik Month 2021)  ನಿರೀಕ್ಷೆ ಆರಂಭವಾಗುತ್ತದೆ. ಕಾರ್ತಿಕ ಹುಣ್ಣಿಮೆಯನ್ನು ಎಲ್ಲಾ ಹುಣ್ಣಿಮೆಗಳಲ್ಲಿ ಅತ್ಯಂತ ಪವಿತ್ರ ಮತ್ತು ಪ್ರಮುಖ ಎಂದು  ಪರಿಗಣಿಸಲಾಗುತ್ತದೆ. ಕಾರ್ತಿಕ ಪೂರ್ಣಿಮೆಯ  (Kartik Purnima 2021) ದಿನದಂದು ದೀಪವನ್ನು ದಾನ ಮಾಡಲಾಗುತ್ತದೆ. ವಿಷ್ಣು ಪುರಾಣದ ಪ್ರಕಾರ, ಭಗವಾನ್ ವಿಷ್ಣುವು  (Lord Vishnu) ಕಾರ್ತಿಕ ಪೂರ್ಣಿಮೆಯ ದಿನದಂದು ಮತ್ಸ್ಯಾವತಾರವನ್ನು ತಾಳಿದ್ದನು. ಈ ದಿನ ಪವಿತ್ರ ನದಿಗಳಲ್ಲಿ ಸ್ನಾನವನ್ನು ಮಾಡಲಾಗುತ್ತದೆ. ಇದಲ್ಲದೆ ವಿಷ್ಣು ಮತ್ತು ಲಕ್ಷ್ಮೀ ದೇವಿಯನ್ನು ಪೂಜಿಸಲಾಗುತ್ತದೆ. 

ತ್ರಿಪುರಾರಿ ಹುಣ್ಣಿಮೆ ಎಂದೂ ಕರೆಯಲಾಗುತ್ತದೆ : 
ಕಾರ್ತಿಕ ಹುಣ್ಣಿಮೆಯನ್ನು ತ್ರಿಪುರಾರಿ ಹುಣ್ಣಿಮೆ  (Tripuri Purnima 2021) ಎಂದೂ ಕರೆಯಲಾಗುತ್ತದೆ. ಈ ದಿನದಂದು ಶಿವನು ತ್ರಿಪುರಾಸುರ ಎಂಬ ರಾಕ್ಷಸನನ್ನು ಕೊಂದನು ಎನ್ನುವುದು ಇದರ ಹಿಂದಿನ ನಂಬಿಕೆ. ಆದ್ದರಿಂದ ಇದನ್ನು ತ್ರಿಪುರಾರಿ ಹುಣ್ಣಿಮೆ ಎಂದು ಕರೆಯಲಾಗುತ್ತದೆ. ಈ ದಿನದಂದು ದಾನ ಮಾಡುವುದು ಬಹಳ ಫಲಪ್ರದ ಎಂದು ಪರಿಗಣಿಸಲಾಗುತ್ತದೆ.

ಇದನ್ನೂ ಓದಿ : Chandra Grahan November 2021 : ಈ ದಿನ ಸಂಭವಿಸಲಿದೆ ಚಂದ್ರಗ್ರಹಣ : ಈ ರಾಶಿಯವರು 1 ತಿಂಗಳು ಜಾಗರೂಕರಾಗಿರಬೇಕು!

ಕಾರ್ತಿಕ ಹುಣ್ಣಿಮೆಯನ್ನು ಈ ಬಾರಿ ನವೆಂಬರ್ 19 ರಂದು ಆಚರಿಸಲಾಗುತ್ತದೆ. ಈ ದಿನ ಶುಭ ಸಮಯವು ಬ್ರಹ್ಮ ಮುಹೂರ್ತದಿಂದ ಮಧ್ಯಾಹ್ನ 02:29 ರವರೆಗೆ ಇರುತ್ತದೆ. 

ಕಾರ್ತಿಕ ಹುಣ್ಣಿಮೆಯ ದಿನ ಈ ತಪ್ಪುಗಳನ್ನು ಮಾಡಬೇಡಿ : 
ಧರ್ಮ ಮತ್ತು ಜ್ಯೋತಿಷ್ಯ ಶಾಸ್ತ್ರದ (Astrology) ಪ್ರಕಾರ, ಕಾರ್ತಿಕ ಹುಣ್ಣಿಮೆಯ ದಿನದಂದು ಪವಿತ್ರ ನದಿಯಲ್ಲಿ ಸ್ನಾನ ಮಾಡುವುದು ಮತ್ತು ಉದಯಿಸುವ ಸೂರ್ಯನಿಗೆ ಪ್ರಾರ್ಥನೆ ಸಲ್ಲಿಸಿದರೆ ಬಹಳ ಫಲಪ್ರದ ಎಂದು ನಂಬಲಾಗುತ್ತದೆ. ಅಲ್ಲದೆ ಈ ದಿನ ದಾನ ಮಾಡುವುದರಿಂದ ಪಾಪಗಳು ನಾಶವಾಗುತ್ತವೆ ಎನ್ನಲಾಗಿದೆ. ಜಾತಕದಲ್ಲಿ ಚಂದ್ರ ಬಲಹೀನನಾಗಿದ್ದರೆ ಕಾರ್ತಿಕ ಪೂರ್ಣಿಮೆಯ ದಿನದಂದು ಅನ್ನದಾನ ಮಾಡುವುದು ತುಂಬಾ ಪ್ರಯೋಜನಕಾರಿ. ಇದಲ್ಲದೆ ಈ ದಿನ ದೀಪದಾನ ಮತ್ತು ತುಳಸಿ ಪೂಜೆಯನ್ನು ಮಾಡಬೇಕು. ಕಾರ್ತಿಕ ಪೂರ್ಣಿಮೆಯ ದಿನದಂದು ಏನು ಮಾಡಬೇಕು ಎಂಬುದನ್ನು ತಿಳಿದುಕೊಳ್ಳುವುದರ ಜೊತೆಗೆ ಈ ದಿನ ಏನು ಮಾಡಬಾರದು ಎನ್ನುವುದನ್ನು ತಿಳಿದುಕೊಳ್ಳುವುದು ಸಹ ಮುಖ್ಯವಾಗಿದೆ. ಇದಕ್ಕಾಗಿ ಧರ್ಮ ಮತ್ತು ಜ್ಯೋತಿಷ್ಯದಲ್ಲಿ ಕೆಲವು ಮುಖ್ಯ ನಿಯಮಗಳನ್ನು ನೀಡಲಾಗಿದೆ. 

ಇದನ್ನೂ ಓದಿ : Secrets: ಈ 5 ರಾಶಿಯವರ ಬಳಿ ಮರೆತೂ ಸಹ ನಿಮ್ಮ ರಹಸ್ಯ ಬಿಚ್ಚಿಡಬೇಡಿ

-ಕಾರ್ತಿಕ ಪೂರ್ಣಿಮೆಯಂತಹ ಪವಿತ್ರ ದಿನದಂದು ಯಾರೊಂದಿಗೂ ವಾದ ಮಾಡಬೇಡಿ.
-ಅಲ್ಲದೆ, ಯಾರನ್ನಾದರೂ ನಿಂದನೀಯ ಎಂದು ಕರೆಯುವ ತಪ್ಪನ್ನು ಮಾಡಬೇಡಿ. 
-ಈ ದಿನದಂದು ಮಾಂಸಾಹಾರಿ ಮತ್ತು ಮದ್ಯ ಸೇವನೆ ನಿಷಿದ್ಧ  
-ಈ ದಿನ ಅಸಹಾಯಕ ಅಥವಾ ಬಡವರನ್ನು ಅವಮಾನಿಸಿದರೆ ಪುಣ್ಯ ನಾಶವಾಗುತ್ತದೆ.
-ಈ ದಿನ ಉಗುರುಗಳು ಮತ್ತು ಕೂದಲು ಕತ್ತರಿಸುವುದನ್ನು ತಪ್ಪಿಸಬೇಕು. 

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ

Trending News