Jupiter Transit: ಮುಂದಿನ 3 ತಿಂಗಳು ಈ 5 ರಾಶಿಯವರಿಗೆ ಗುರುವಿನ ಆಶೀರ್ವಾದ, ಅಪಾರ ಯಶಸ್ಸು

Jupiter Transit: ಗುರು ಗ್ರಹವನ್ನು ಬಹಳ ಶುಭ ಗ್ರಹ ಎಂದು ಪರಿಗಣಿಸಲಾಗುತ್ತದೆ. ಆತನ ಕೃಪೆಯಿಂದಾಗಿ ಜೀವನದಲ್ಲಿ ಎಲ್ಲಾ ರೀತಿಯ ಸುಖಗಳು ಕಂಡುಬರುವುದರಿಂದ ಗುರುವಿನ ರಾಶಿ ಬದಲಾವಣೆಯನ್ನು ಬಹುಮುಖ್ಯ ಎಂದು ಪರಿಗಣಿಸಲಾಗಿದೆ. ಈಗ ಬೃಹಸ್ಪತಿಯು ಮುಂದಿನ 3 ತಿಂಗಳ ಕಾಲ ಕುಂಭ ರಾಶಿಯಲ್ಲಿ ಇರುತ್ತಾರೆ. ಇದರ ಫಲಾಫಲಗಳನ್ನು ತಿಳಿಯೋಣ.

Written by - Yashaswini V | Last Updated : Dec 6, 2021, 08:03 AM IST
  • ಕುಂಭ ರಾಶಿಗೆ ಗುರುವಿನ ಪ್ರವೇಶ
  • ಏಪ್ರಿಲ್ 2022 ರವರೆಗೆ ಕುಂಭ ರಾಶಿಯಲ್ಲಿಯೇ ಉಳಿಯಲಿರುವ ಗುರು
  • ಈ ಸಮಯದಲ್ಲಿ 5 ರಾಶಿಚಕ್ರ ಚಿಹ್ನೆಗಳ ಭವಿಷ್ಯವನ್ನು ಬದಲಾಯಿಸುತ್ತದೆ
Jupiter Transit: ಮುಂದಿನ 3 ತಿಂಗಳು ಈ 5 ರಾಶಿಯವರಿಗೆ ಗುರುವಿನ ಆಶೀರ್ವಾದ, ಅಪಾರ ಯಶಸ್ಸು title=
Guru will shower blessings on these 5 zodiac signs for the next 3 months

Jupiter Transit: ಜ್ಯೋತಿಷ್ಯ ಶಾಸ್ತ್ರದಲ್ಲಿ ಅತ್ಯಂತ ಮಂಗಳಕರ ಗ್ರಹ ಎಂದು ಪರಿಗಣಿಸಲಾದ ಗುರು ಗ್ರಹವು ಕುಂಭ ರಾಶಿಯನ್ನು ಪ್ರವೇಶಿಸಿದೆ. ಗುರು ಎಂದರೆ ಬೃಹಸ್ಪತಿಯೂ ಈ ರಾಶಿಚಕ್ರದಲ್ಲಿ 13ನೇ ಏಪ್ರಿಲ್ 2022 ರವರೆಗೆ ಇರುತ್ತಾರೆ ಮತ್ತು ಕೆಲವು ರಾಶಿಚಕ್ರ ಚಿಹ್ನೆಗಳಿಗೆ ತುಂಬಾ ಮಂಗಳಕರವೆಂದು ಸಾಬೀತುಪಡಿಸುತ್ತಾರೆ. ಜಾತಕದಲ್ಲಿ ಗುರುವಿನ ಉತ್ತಮ ಸ್ಥಾನವು ಜೀವನದ ಎಲ್ಲಾ ಪ್ರಮುಖ ಅಂಶಗಳ ಮೇಲೆ ಉತ್ತಮ ಫಲಿತಾಂಶಗಳನ್ನು ನೀಡುತ್ತದೆ. ಆದ್ದರಿಂದ, ಗುರುವಿನ ರಾಶಿಚಕ್ರದ ಚಿಹ್ನೆಯ ಬದಲಾವಣೆಯನ್ನು ಬಹಳ ಮುಖ್ಯವೆಂದು ಪರಿಗಣಿಸಲಾಗುತ್ತದೆ. ಕುಂಭ ರಾಶಿಯಲ್ಲಿ ವಾಸಿಸುತ್ತಿದ್ದರೂ ಸಹ, ಗುರುವು ಕೆಲವು ರಾಶಿಚಕ್ರ ಚಿಹ್ನೆಗಳ ಅದೃಷ್ಟವನ್ನು ಬೆಳಗಿಸಲಿದ್ದಾನೆ. ಮುಂದಿನ 3 ತಿಂಗಳುಗಳಲ್ಲಿ ಯಾವ ರಾಶಿಚಕ್ರದ ಜನರಿಗೆ ಗುರುವಿನ ಆಶೀರ್ವಾದದ ಜೊತೆಗೆ ಅಪಾರ ಯಶಸ್ಸು ಪ್ರಾಪ್ತಿಯಾಗಲಿದೆ ಎಂದು ತಿಳಿಯೋಣ.

ಈ ರಾಶಿಯವರ ಅದೃಷ್ಟದ ಬಾಗಿಲು ತೆರೆಯಲಿದೆ:
ಮೇಷ ರಾಶಿ:
ಕುಂಭ ರಾಶಿಗೆ ಗುರುವಿನ ಪ್ರವೇಶವು (Jupiter Transit) ಮೇಷ ರಾಶಿಯವರಿಗೆ ಈ ಸಮಯ ಲಾಭದಾಯಕವಾಗಿರುತ್ತದೆ. ಅವರು ಉದ್ಯೋಗ-ವ್ಯವಹಾರದಲ್ಲಿ ಉತ್ತಮ ಯಶಸ್ಸನ್ನು ಪಡೆಯುತ್ತಾರೆ. ಈ ಸಮಯದಲ್ಲಿ ಈ ರಾಶಿಯ ಜನರು ಮನೆ ಕಾರು ಖರೀದಿಸಬಹುದು. ಈ ಸಮಯವು ಜೀವನದ ಪ್ರತಿಯೊಂದು ಕ್ಷೇತ್ರಕ್ಕೂ ಉತ್ತಮವಾಗಿರುತ್ತದೆ. 

ಮಿಥುನ ರಾಶಿ: ಗುರುವಿನ ರಾಶಿ ಪರಿವರ್ತನೆಯು (Guru Rashi Parivartan) ಮಿಥುನ ರಾಶಿಯವರಿಗೆ ಉತ್ತಮವಾಗಿದ್ದು ಆದಾಯ ಹೆಚ್ಚಾಗಲಿದೆ. ಮಿಥುನ ರಾಶಿಯವರ ಆರ್ಥಿಕ ಸ್ಥಿತಿಯೂ ಸದೃಢವಾಗಿರುತ್ತದೆ. ಕುಟುಂಬದಲ್ಲಿ ಸಂತೋಷ ಇರುತ್ತದೆ. ಬಡ್ತಿ-ಗೌರವ ಸಿಗಲಿದೆ. ಅದೃಷ್ಟ ಹೆಚ್ಚಲಿದೆ.  

ಇದನ್ನೂ ಓದಿ- ರೂಪುಗೊಳ್ಳುತ್ತಿದೆ ಸೂರ್ಯಗ್ರಹಣ ಮತ್ತು ಶನಿ ಅಮಾವಾಸ್ಯೆಯ ದುರ್ಲಭ ಯೋಗ, ತಪ್ಪಿಯೂ ಮಾಡದಿರಿ ಈ ಕೆಲಸ

ಸಿಂಹ ರಾಶಿ: ಸಿಂಹ ರಾಶಿಯವರಿಗೆ ಜೀವನದಲ್ಲಿ ಏನೇ ಸಮಸ್ಯೆಗಳಿದ್ದರೂ ಅವು ಕೊನೆಗೊಳ್ಳುವ ಸಮಯ ಬಂದಿದೆ. ಬಹಳ ಸಮಯದ ನಂತರ ಜೀವನವನ್ನು ಆನಂದಿಸುವಿರಿ. ಆದಾಯ ಹೆಚ್ಚಲಿದೆ. ಸ್ವಂತ ಕಾರು ಖರೀದಿಸುವ ಕನಸು ಕೂಡ ನನಸಾಗಬಹುದು.

ತುಲಾ ರಾಶಿ: ತುಲಾ ರಾಶಿಯವರಿಗೆ ಈ ಸಮಯವು ಚಿನ್ನದ ದಿನಗಳಂತೆ ಸ್ಮರಣೀಯವಾಗಿರುತ್ತದೆ. ಪ್ರತಿಯೊಂದು ಕೆಲಸದಲ್ಲಿಯೂ ಯಶಸ್ಸು ಕಾಣುವಿರಿ. ಹಲವು ರೀತಿಯಲ್ಲಿ ಧನಲಾಭವಾಗಲಿದೆ. ವೃತ್ತಿಜೀವನ ಉತ್ತಮವಾಗಿರಲಿದೆ. ನೀವು ಹೊಸ ಅವಕಾಶಗಳನ್ನು ಪಡೆಯುತ್ತೀರಿ ಅದು ನಿಮಗೆ ಪ್ರಚಂಡ ಪ್ರಯೋಜನಗಳನ್ನು ನೀಡುತ್ತದೆ.  

ಇದನ್ನೂ ಓದಿ- ಗ್ರಹಣ 2022: ಯಾವಾಗ ಗೋಚರಿಸುತ್ತದೆ ಮುಂದಿನ ಗ್ರಹಣ?, ಯಾವ ರಾಶಿಗಳಿಗೆ ಹೆಚ್ಚು ಪರಿಣಾಮ!

ವೃಶ್ಚಿಕ ರಾಶಿ: ಈ ಸಮಯವು ವೃಶ್ಚಿಕ ರಾಶಿಯವರಿಗೆ ಗೌರವ, ಸ್ಥಾನ ಮತ್ತು ಹಣವನ್ನು ತರುತ್ತದೆ. ಜನರು ನಿಮ್ಮ ಕೆಲಸವನ್ನು ಮೆಚ್ಚುತ್ತಾರೆ. ವೈವಾಹಿಕ ಜೀವನವೂ ಉತ್ತಮವಾಗಿರುತ್ತದೆ. ಜನರು ಮುಂದೆ ಬಂದು ನಿಮ್ಮನ್ನು ಬೆಂಬಲಿಸುತ್ತಾರೆ.

ಸೂಚನೆ: ಇಲ್ಲಿ ನೀಡಲಾದ ಮಾಹಿತಿಯು ಸಾಮಾನ್ಯ ಊಹೆಗಳು ಮತ್ತು ಮಾಹಿತಿಯನ್ನು ಆಧರಿಸಿದೆ. ZEE ಮೀಡಿಯಾ ಇದನ್ನು ಖಚಿತಪಡಿಸುವುದಿಲ್ಲ. 

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ

Trending News