Jupiter Retrograde - ದೇವಗುರು ಬೃಹಸ್ಪತಿಗೆ (Dev Guru) ಜ್ಯೋತಿಷ್ಯ ಶಾಸ್ತ್ರದಲ್ಲಿ (Astrology) ವಿಶೇಷ ಸ್ಥಾನವಿದೆ. ದೇವಗುರು ಬೃಹಸ್ಪತಿಯನ್ನು (Bruhaspati) ಜ್ಞಾನ, ಶಿಕ್ಷಕ, ಮಕ್ಕಳು, ಹಿರಿಯ ಸಹೋದರ, ಶಿಕ್ಷಣ, ಧಾರ್ಮಿಕ ಕೆಲಸ, ಪವಿತ್ರ ಸ್ಥಳ, ಸಂಪತ್ತು, ದಾನ, ಸದ್ಗುಣ ಮತ್ತು ಬೆಳವಣಿಗೆ ಇತ್ಯಾದಿಗಳ ಕಾರಕ ಎಂದು ಹೇಳಲಾಗುತ್ತದೆ. ಗುರು ಗ್ರಹವು 27 ನಕ್ಷತ್ರಗಳ ಪೈಕಿ, ಪುನರ್ವಸು, ವಿಶಾಖಾ ಮತ್ತು ಪೂರ್ವ ಭಾದ್ರಪದ ನಕ್ಷತ್ರಗಳ ಅಧಿಪತಿಯಾಗಿದ್ದಾನೆ. ಗುರು ಮಂಗಳಕರವಾಗಿದ್ದಾಗ, ವ್ಯಕ್ತಿಯ ಜೀವನವು ಸಂತೋಷದಿಂದ ಕೂಡಿರುತ್ತದೆ. ಪ್ರಸ್ತುತ ಗುರು ಮಕರ ರಾಶಿಯಲ್ಲಿ ವಿರಾಜಮಾನನಾಗಿದ್ದಾನೆ. ನವೆಂಬರ್ 21 ರವರೆಗೆ ದೇವಗುರು ಮಕರ ರಾಶಿಯಲ್ಲಿ ಮುಂದುವರೆಯಲಿದ್ದಾನೆ. ದೇವಗುರು ಗುರು ಮಕರ ರಾಶಿಯಲ್ಲಿ ಉಳಿಯುವ ಮೂಲಕ ಕೆಲವು ರಾಶಿಗಳಿಗೆ (Zodiac Signs) ಶುಭ ಫಲಿತಾಂಶಗಳನ್ನು ನೀಡಲಿದ್ದಾನೆ. ಮುಂಬರುವ 63 ದಿನಗಳವರೆಗೆ ಗುರುಗಳ ಅನುಗ್ರಹವು ಯಾವ ರಾಶಿಗಳಲ್ಲಿ (Sun Sign) ಇರಲಿದೆ ತಿಳಿದುಕೊಳ್ಳೋಣ ಬನ್ನಿ.
1. ಮೇಷ ರಾಶಿ
>> ಭಾರಿ ಧನಾಗಮನ, ಇದು ಆರ್ಥಿಕ ಪರಿಸ್ಥಿತಿಯನ್ನು ಬಲಪಡಿಸುತ್ತದೆ.
>> ಪ್ರತಿಷ್ಠೆ ಮತ್ತು ಸ್ಥಾನದಲ್ಲಿ ಹೆಚ್ಚಳ ಕಂಡುಬರಲಿದೆ.
>> ಉದ್ಯೋಗ ಮತ್ತು ವ್ಯಾಪಾರದಲ್ಲಿ ಲಾಭದ ಸಾಧ್ಯತೆಗಳಿವೆ.
>> ಶಿಕ್ಷಣ ಕ್ಷೇತ್ರಕ್ಕೆ ಸಂಬಂಧಿಸಿದ ಜನರು ಶುಭ ಫಲಿತಾಂಶಗಳನ್ನು ಪಡೆಯುತ್ತಾರೆ.
>> ವೈವಾಹಿಕ ಜೀವನ ಸುಖಕರವಾಗಿರುತ್ತದೆ.
>> ಕೆಲಸದ ಸ್ಥಳದಲ್ಲಿ ನಿಮ್ಮ ಕೆಲಸವನ್ನು ಎಲ್ಲರೂ ಪ್ರಶಂಸಿಸುತ್ತಾರೆ.
>> ನೀವು ಕುಟುಂಬ ಸದಸ್ಯರ ಬೆಂಬಲವನ್ನು ಪಡೆಯುತ್ತೀರಿ.
2. ಸಿಂಹ ರಾಶಿ
>> ನೀವು ಉತ್ತಮ ಫಲಿತಾಂಶಗಳನ್ನು ಪಡೆಯುತ್ತೀರಿ.
>> ಲಾಭ ಪ್ರಾಪ್ತಿಯಾಗಲಿದೆ.
>> ಆಧ್ಯಾತ್ಮಿಕ ಮತ್ತು ಧಾರ್ಮಿಕ ಚಟುವಟಿಕೆಗಳಲ್ಲಿ ಭಾಗವಹಿಸಲು ನಿಮಗೆ ಅವಕಾಶ ಸಿಗುತ್ತದೆ.
>> ಉದ್ಯೋಗ ಮತ್ತು ವ್ಯಾಪಾರದಲ್ಲಿ ಪ್ರಗತಿ ಇರುತ್ತದೆ.
>> ವೈವಾಹಿಕ ಜೀವನ ಸುಖಕರವಾಗಿರುತ್ತದೆ.
>> ಹೊಸ ವಾಹನ ಅಥವಾ ಮನೆಯನ್ನು ಖರೀದಿಸುವ ಯೋಗ ನಿರ್ಮಾಣಗೊಳ್ಳುತ್ತಿದೆ.
>> ನೀವು ಕೆಲಸದಲ್ಲಿ ಯಶಸ್ಸನ್ನು ಸಂಪಾದಿಸುವಿರಿ.
3. ವೃಶ್ಚಿಕ ರಾಶಿ
>> ಹಣಕಾಸಿನ ಸಮಸ್ಯೆಗಳಿಂದ ಮುಕ್ತಿ ಸಿಗಲಿದೆ.
>> ಹೊಸ ವಾಹನ ಅಥವಾ ಮನೆ ಖರೀದಿಸುವ ಯೋಗವಿದೆ.
>> ನೀವು ಕೆಲಸದಲ್ಲಿ ಯಶಸ್ಸನ್ನು ಪಡೆಯುವಿರಿ.
>> ವೈವಾಹಿಕ ಜೀವನ ಸುಖಕರವಾಗಿರುತ್ತದೆ.
>> ಕುಟುಂಬ ಸದಸ್ಯರು ಮತ್ತು ಸ್ನೇಹಿತರ ಬೆಂಬಲ ಸಿಗಲಿದೆ.
>> ಈ ಸಮಯವು ನಿಮಗೆ ವರದಾನಕ್ಕಿಂತ ಕಡಿಮೆಯಿಲ್ಲ.
4. ಧನು ರಾಶಿ
>> ಧನು ರಾಶಿಯವರಿಗೆ ಸಮಯವು ತುಂಬಾ ಫಲಪ್ರದವಾಗಲಿದೆ.
>> ಉದ್ಯೋಗ ಮತ್ತು ವ್ಯಾಪಾರಕ್ಕೆ ಈ ಸಮಯ ಶುಭಕರವಾಗಿರುತ್ತದೆ.
>> ವೈವಾಹಿಕ ಜೀವನದಲ್ಲಿ ಸಂತೋಷವನ್ನು ಅನುಭವಿಸುವಿರಿ.
>> ಧನ ಲಾಭದ ಯೋಗವಿದೆ.
>> ಕೆಲಸದ ಸ್ಥಳದಲ್ಲಿ ನಿಮ್ಮ ಕೆಲಸವನ್ನು ಪ್ರಶಂಸಿಸಲಾಗುತ್ತದೆ.
>> ನೀವು ಹೊಸ ಉದ್ಯೋಗಾವಕಾಶಗಳನ್ನು ಪಡೆಯುತ್ತೀರಿ.
>> ಧಾರ್ಮಿಕ ಮತ್ತು ಆಧ್ಯಾತ್ಮಿಕ ಚಟುವಟಿಕೆಗಳಲ್ಲಿ ಭಾಗವಹಿಸಿ.
ಇದನ್ನೂ ಓದಿ-Anant Chaturdashi: ಅನಂತ್ ಚತುರ್ದಶಿಯಂದು ನಿಮ್ಮ ಕೈಗೆ ಕಟ್ಟಿಕೊಳ್ಳಿ ಈ ಸೂತ್ರ, ಕಷ್ಟ-ಕಾರ್ಪಣ್ಯಗಳು ದೂರಾಗಲಿವೆ
5. ಮೀನ ರಾಶಿ
>> ಧನಲಾಭದ ಯೋಗ, ಈ ಕಾರಣದಿಂದಾಗಿ ಆರ್ಥಿಕ ಪರಿಸ್ಥಿತಿ ಸುಧಾರಣೆ.
>> ಅದೃಷ್ಟದ ಸಂಪೂರ್ಣ ಬೆಂಬಲ ಸಿಗುತ್ತದೆ.
>> ಮೀನ ರಾಶಿಯವರಿಗೆ ಈ ಸಮಯ ವರದಾನವಿದ್ದಂತೆ.
>> ವೈವಾಹಿಕ ಜೀವನ ಸುಖಕರವಾಗಿರುತ್ತದೆ.
ಕುಟುಂಬ ಸದಸ್ಯರ ಬೆಂಬಲ ಸಿಗಲಿದೆ.
>> ನಿಮಗೆ ತುಂಬಾ ಗೌರವ ಸಿಗುತ್ತದೆ.
>> ಸ್ಥಾನ ಮತ್ತು ಪ್ರತಿಷ್ಠೆಯಲ್ಲಿ ಹೆಚ್ಚಳವಾಗುವ ಸಾಧ್ಯತೆಗಳಿವೆ.
ಇದನ್ನೂ ಓದಿ-ಶಿವಲಿಂಗ ಪ್ರದಕ್ಷಿಣೆ ವೇಳೆ ಆಗುವ ಈ ದೊಡ್ಡ ತಪ್ಪನ್ನು ಸರಿಪಡಿಸಿಕೊಳ್ಳಿ, ಸರಿಯಾದ ನಿಯಮ ಹೀಗಿದೆ ..!
(ಸೂಚನೆ - ಈ ಲೇಖನದಲ್ಲಿ ನೀಡಲಾಗಿರುವ ಮಾಹಿತಿ ಸಾಮಾನ್ಯ ಜ್ಞಾನ ಹಾಗೂ ಧಾರ್ಮಿಕ ನಂಬಿಕೆಗಳನ್ನು ಆಧರಿಸಿದೆ. ಝೀ ಹಿಂದೂಸ್ತಾನ್ ಕನ್ನಡ ಈ ಮಾಹಿತಿಯನ್ನು ಖಚಿತಪಡಿಸುವುದಿಲ್ಲ. ಅನುಸರಿಸುವುದಕ್ಕೂ ಮುನ್ನ ಕ್ಷೇತ್ರಕ್ಕೆ ಸಂಬಂಧಿಸಿದ ತಜ್ಞರ ಸಲಹೆ ಪಡೆದುಕೊಳ್ಳಿ)
ಇದನ್ನೂ ಓದಿ-ಈ ರಾಶಿಚಕ್ರದ ಜನರು ಮಾನಸಿಕವಾಗಿ ಮತ್ತು ದೈಹಿಕವಾಗಿ ಸದೃಢರಾಗಿರುತ್ತಾರೆ , ಎಂಥಹ ಸವಾಲೇ ಆದರೂ ಎದುರಿಸಿ ಗೆಲ್ಲುತ್ತಾರೆ
ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.