How To Remove Blackness Of Underarms: ಅಡುಗೆ ಮನೆಯಲ್ಲಿರುವ ಈ ವಸ್ತುಗಳಿಂದ ಕಂಕುಳಿನ ಕೆಳಗಿನ ಕಪ್ಪು ಬಣ್ಣ ನಿವಾರಿಸಿ

How To Remove Blackness Of Underarms: ಅಡುಗೆಮನೆಯಲ್ಲಿರುವ ಕೆಲವು ವಸ್ತುಗಳ ಮೂಲಕ ನೀವು ಅಂಡರ್ ಆರ್ಮ್ಸ್ ಕಪ್ಪು ಬಣ್ಣವನ್ನು ಸುಲಭವಾಗಿ ತೆಗೆದುಹಾಕಬಹುದು.

Written by - Yashaswini V | Last Updated : Aug 4, 2021, 10:45 AM IST
  • ಅಂಡರ್ ಆರ್ಮ್ಸ್\ ಕಂಕುಳನ್ನು ಸ್ವಚ್ಛವಾಗಿಡಲು, ಅನೇಕ ಜನರು ಮಾರುಕಟ್ಟೆಯಿಂದ ದುಬಾರಿ ಸೌಂದರ್ಯ ಉತ್ಪನ್ನಗಳನ್ನು ಖರೀದಿಸುತ್ತಾರೆ
  • ಅದಾಗ್ಯೂ ಬಹುತೇಕ ಜನರಿಗೆ ನಿರೀಕ್ಷಿತ ಫಲಿತಾಂಶ ಸಿಗದೆ ನಿರಾಸೆಗೊಳ್ಳುವುದೂ ಉಂಟು
  • ಆದರೆ ನಿಮ್ಮ ಈ ಸಮಸ್ಯೆಯನ್ನು ನಿವಾರಿಸಲು ಅಡುಗೆ ಮನೆಯಲ್ಲಿಯೇ ಸಿಗುವ ಕೆಲವು ವಸ್ತುಗಳು ಬಹಳ ಪ್ರಯೋಜನಕಾರಿಯಾಗಿದೆ
How To Remove Blackness Of Underarms: ಅಡುಗೆ ಮನೆಯಲ್ಲಿರುವ ಈ ವಸ್ತುಗಳಿಂದ ಕಂಕುಳಿನ ಕೆಳಗಿನ ಕಪ್ಪು ಬಣ್ಣ ನಿವಾರಿಸಿ title=
How To Remove Dark Underarms

How To Remove Blackness Of Underarms: ಅಂಡರ್ ಆರ್ಮ್ಸ್ ಕಪ್ಪು ಬಣ್ಣವನ್ನು ಮರೆಮಾಚಲು ಹೆಚ್ಚಿನ ಮಹಿಳೆಯರು ತೋಳಿಲ್ಲದ ಬಟ್ಟೆಗಳನ್ನು ಅಂದರೆ ಸ್ಲೀವ್ ಲೆಸ್ ಉಡುಪುಗಳನ್ನು ಧರಿಸುವುದನ್ನು ತಪ್ಪಿಸುತ್ತಾರೆ. ಅಂಡರ್ ಆರ್ಮ್ಸ್\ ಕಂಕುಳನ್ನು ಸ್ವಚ್ಛವಾಗಿಡಲು, ಅನೇಕ ಜನರು ಮಾರುಕಟ್ಟೆಯಿಂದ ದುಬಾರಿ ಸೌಂದರ್ಯ ಉತ್ಪನ್ನಗಳನ್ನು ಖರೀದಿಸುತ್ತಾರೆ. ಅದಾಗ್ಯೂ ಬಹುತೇಕ ಜನರಿಗೆ ನಿರೀಕ್ಷಿತ ಫಲಿತಾಂಶ ಸಿಗದೆ ನಿರಾಸೆಗೊಳ್ಳುವುದೂ ಉಂಟು. ಆದರೆ ನಿಮ್ಮ ಈ ಸಮಸ್ಯೆಯನ್ನು ನಿವಾರಿಸಲು ಮಾರುಕಟ್ಟೆಯಲ್ಲಿ ಸಿಗುವ ವಸ್ತುಗಳಿಗಿಂತ ನಿಮ್ಮ ಅಡುಗೆ ಮನೆಯಲ್ಲಿಯೇ ಸಿಗುವ ಕೆಲವು ವಸ್ತುಗಳು ಬಹಳ ಪ್ರಯೋಜನಕಾರಿಯಾಗಿದೆ ಎಂದು ನಿಮಗೆ ತಿಲಿಸಿದೆಯೇ?

ಈ ವಸ್ತುಗಳು ಚಿಟಿಕೆಗಳಲ್ಲಿ ಅಂಡರ್ ಆರ್ಮ್ಸ್ ಕಪ್ಪು ಬಣ್ಣವನ್ನು ತೆಗೆದುಹಾಕುತ್ತವೆ   (These things will remove the blackness of underarms): 
1. ಆಲೂಗಡ್ಡೆ ಬಳಸಿ ಅಂಡರ್ ಆರ್ಮ್ಸ್ ನ ಕಪ್ಪು ಬಣ್ಣವನ್ನು ತೆಗೆದುಹಾಕಿ:
ಆರೋಗ್ಯದೊಂದಿಗೆ ಆಲೂಗಡ್ಡೆ ಚರ್ಮಕ್ಕೆ (Skin) ಕೂಡ ಪ್ರಯೋಜನಕಾರಿ. ಆಲೂಗಡ್ಡೆ ಆಮ್ಲೀಯವಾಗಿದೆ. ಅವು ನೈಸರ್ಗಿಕ ಬ್ಲೀಚಿಂಗ್ ಏಜೆಂಟ್‌ಗಳನ್ನು ಹೊಂದಿರುತ್ತವೆ. ನಿಮ್ಮ ಅಂಡರ್ ಆರ್ಮ್ಸ್ ಕಪ್ಪು ಬಣ್ಣವನ್ನು ತೊಡೆದುಹಾಕಲು ನೀವು ಆಲೂಗಡ್ಡೆಯನ್ನು ಕೂಡ ಬಳಸಬಹುದು.

ಇದನ್ನೂ ಓದಿ- Weight Loss Diet: ಒಂದು ತಿಂಗಳು ಈ ಆಹಾರ ಕ್ರಮ ಅನುಸರಿಸಿದರೆ 2KG ತೂಕ ಕಡಿಮೆಯಾಗುತ್ತೆ!

ಅದನ್ನು ಬಳಸುವ ವಿಧಾನ:
>> ತೆಳುವಾದ ಆಲೂಗಡ್ಡೆಯನ್ನು ತೆಗೆದುಕೊಂಡು ನಿಮ್ಮ ಅಂಡರ್ ಆರ್ಮ್ಸ್ (Underarms) ಮೇಲೆ ಉಜ್ಜಿಕೊಳ್ಳಿ.
>> ಇದರ ಹೊರತಾಗಿ ಆಲೂಗಡ್ಡೆ ರಸವನ್ನು ಫಿಲ್ಟರ್ ಮಾಡಿ.
>> ಹತ್ತಿಯ ಉಂಡೆಯನ್ನು ತೆಗೆದುಕೊಂಡು ಅದನ್ನು ರಸದಲ್ಲಿ ಅದ್ದಿ ಮತ್ತು ಅಂಡರ್ ಆರ್ಮ್ಸ್ ಗೆ ಹಚ್ಚಿ.
>> ಅದನ್ನು ಒಣಗಲು ಬಿಡಿ ಮತ್ತು ನಂತರ ಬೆಚ್ಚಗಿನ ನೀರಿನಿಂದ ತೊಳೆಯಿರಿ.

2. ಸೌತೆಕಾಯಿಯನ್ನು ಈ ರೀತಿ ಬಳಸಿ:
ಸೌತೆಕಾಯಿ (Cucumber) ಆರೋಗ್ಯಕ್ಕೆ ಮಾತ್ರವಲ್ಲ ಚರ್ಮಕ್ಕೂ ಕೂಡ ಪ್ರಯೋಜನಕಾರಿ. ಕಂಕುಳಿನ ಕೆಳಗಿನ ಕಪ್ಪು ಬಣ್ಣವನ್ನು ತೆಗೆದುಹಾಕಲು ನೀವು ಸೌತೆಕಾಯಿಯನ್ನು ಸಹ ಬಳಸಬಹುದು. ಇದು ನೈಸರ್ಗಿಕ ಬ್ಲೀಚಿಂಗ್ ಏಜೆಂಟ್‌ಗಳನ್ನು ಹೊಂದಿರುತ್ತದೆ, ಇದು ಕಪ್ಪು ಚರ್ಮವನ್ನು ಸ್ವಚ್ಛಗೊಳಿಸುತ್ತದೆ.

ಇದನ್ನು ಬಳಸುವ ವಿಧಾನ: 
* ಸೌತೆಕಾಯಿಯನ್ನು ತುರಿ ಮಾಡಿ ಅಥವಾ ಮಿಕ್ಸರ್ ಗ್ರೈಂಡರ್‌ನಲ್ಲಿ ಪುಡಿ ಮಾಡಿ.
* ನಂತರ ಈ ಸೌತೆಕಾಯಿ ರಸವನ್ನು ಚೆನ್ನಾಗಿ ಫಿಲ್ಟರ್ ಮಾಡಿ.
* ಈಗ ಹತ್ತಿ ಉಂಡೆ ತೆಗೆದುಕೊಂಡು ರಸದಲ್ಲಿ ಅದ್ದಿ.
* ಇದನ್ನು ನಿಮ್ಮ ಡಾರ್ಕ್ ಅಂಡರ್ ಆರ್ಮ್ಸ್ ಮೇಲೆ ಪ್ರತಿದಿನ ಹಚ್ಚಿ
* ಇದನ್ನು ದಿನನಿತ್ಯ ಮಾಡುವುದರಿಂದ ಕೇವಲ ಕಪ್ಪುತನ ನಿವಾರಣೆಯಾಗುವುದಿಲ್ಲ.
ಇದು ಕೆಟ್ಟ ವಾಸನೆಯ ಸಮಸ್ಯೆಯನ್ನು ಸಹ ತೆಗೆದುಹಾಕುತ್ತದೆ.

ಇದನ್ನೂ ಓದಿ- Weight Loss With Chocolate: ಪ್ರತಿದಿನ ಈ ಸಮಯದಲ್ಲಿ ಚಾಕೊಲೇಟ್ ತಿನ್ನುವ ಮೂಲಕ ಹೊಟ್ಟೆಯ ಕೊಬ್ಬನ್ನು ಕರಗಿಸಿ!

3. ನಿಂಬೆ ಹೇಗೆ ಬಳಸುವುದು?
- ನಿಂಬೆಹಣ್ಣಿನಲ್ಲಿ ನೈಸರ್ಗಿಕ ಬ್ಲೀಚಿಂಗ್ ಏಜೆಂಟ್ ಇರುತ್ತದೆ. ಇದು ಡಾರ್ಕ್ ಅಂಡರ್ ಆರ್ಮ್ಸ್ ಅನ್ನು ತೆಗೆದುಹಾಕಲು ಸಹಾಯ ಮಾಡುತ್ತದೆ.
- ನೀವು ನಿಂಬೆಹಣ್ಣನ್ನು ಕತ್ತರಿಸಿ ಅಂಡರ್ ಆರ್ಮ್ಸ್ ಮೇಲೆ ಕೆಲವು ನಿಮಿಷಗಳ ಕಾಲ ಮಸಾಜ್ ಮಾಡಿ.
- ನೀವು ಇದನ್ನು ವಾರಕ್ಕೆ ಎರಡು ಬಾರಿ ಮಾಡಬಹುದು.
- ನಿಂಬೆ ರಸಕ್ಕೆ ನೀವು ಸ್ವಲ್ಪ ಅರಿಶಿನ ಪುಡಿಯನ್ನು ಕೂಡ ಸೇರಿಸಬಹುದು.
ಇದು ಡಾರ್ಕ್ ಅಂಡರ್ ಆರ್ಮ್ಸ್ ಅನ್ನು ನೈಸರ್ಗಿಕವಾಗಿ ತೆಗೆದುಹಾಕಲು ಸಹಾಯ ಮಾಡುತ್ತದೆ.

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ

Trending News