ಕೇವಲ ಒಂದೇ ವಾರದಲ್ಲಿ ಬಿಳಿ ಕೂದಲು ನೈಸರ್ಗಿಕವಾಗಿ ಮತ್ತು ಶಾಶ್ವತವಾಗಿ ಕಪ್ಪಾಗುವುದು! ಹೇಗೆ ಗೊತ್ತಾ ?

How To Darken White Hair : ಈ ವಸ್ತುಗಳನ್ನು ಬಳಸುವುದರಿಂದ ನೈಸರ್ಗಿಕವಾಗಿ ಕೂದಲು ಕಪ್ಪು ಬಣ್ಣವನ್ನು ಪಡೆಯುವುದು ಮಾತ್ರವಲ್ಲದೆ ಇದರಿಂದ ಯಾವ ರೀತಿಯ ಅಡ್ಡ ಪರಿಣಾಮವೂ ಆಗುವುದಿಲ್ಲ. 

Written by - Ranjitha R K | Last Updated : Sep 26, 2023, 09:40 AM IST
  • ಬಿಳಿ ಕೂದಲಿಗೆ ಹೇರ್ ಕಲರ್ ಒಂದೇ ಪರಿಹಾರವಲ್ಲ
  • ಈ ಮನೆಮದ್ದುಗಳು ಬಿಳಿ ಕೂದಲಿನ ಸಮಸ್ಯೆಯಿಂದ ಪರಿಹಾರವನ್ನು ನೀಡುತ್ತದೆ.
  • ರಾಸಾಯನಿಕಗಳಿಲ್ಲದೆ ಬಿಳಿ ಕೂದಲಿಗೆ ಪರಿಹಾರ
ಕೇವಲ ಒಂದೇ ವಾರದಲ್ಲಿ ಬಿಳಿ ಕೂದಲು ನೈಸರ್ಗಿಕವಾಗಿ ಮತ್ತು ಶಾಶ್ವತವಾಗಿ ಕಪ್ಪಾಗುವುದು! ಹೇಗೆ ಗೊತ್ತಾ ? title=

ಬೆಂಗಳೂರು : ಮಾನಸಿಕ ಒತ್ತಡ ಮತ್ತು ಅನಾರೋಗ್ಯಕರ ಜೀವನಶೈಲಿಯಿಂದಾಗಿ ಚಿಕ್ಕ ವಯಸ್ಸಿನಲ್ಲೇ ಕೂದಲು ಬೆಳ್ಳಗಾಗುತ್ತದೆ. ಆದ್ದರಿಂದ, ಬಿಳಿ ಕೂದಲನ್ನು ಮತ್ತೆ ಕಪ್ಪಾಗಿಸಲು, ಜನರು ಅನೇಕ ರಾಸಾಯನಿಕ ಕಲರ್ ಗಳ ಮೊರೆ ಹೋಗುತ್ತಾರೆ. ಅದು ಕೂದಲಿಗೆ ಹಾನಿ ಮಾಡುವುದಲ್ಲದೆ, ಕೆಲವೊಮ್ಮೆ ನಿಮ್ಮ ತ್ವಚೆಗೂ ಹಾನಿ ಉಂಟು ಮಾಡುತ್ತದೆ. 

ಬಿಳಿ ಕೂದಲಿಗೆ ಹೇರ್ ಕಲರ್ ಒಂದೇ ಪರಿಹಾರವಲ್ಲ. ನಮ್ಮ ಸುತ್ತ ಮುತ್ತ ಇರುವ ಅಥವಾ ನಮ್ಮ ಅಡುಗೆ ಮನೆಯಲ್ಲಿ ನಿತ್ಯ ಬಳಸುವ ವಸ್ತುಗಳೇ ಬಿಳಿ ಕೂದಲಿನ ಸಮಸ್ಯೆಗೆ ಪರಿಹಾರವಾಗಿ ಕೆಲಸ ಮಾಡಬಲ್ಲದು. ಈ ವಸ್ತುಗಳನ್ನು ಬಳಸುವುದರಿಂದ ನೈಸರ್ಗಿಕವಾಗಿ ಕೂದಲು ಕಪ್ಪು ಬಣ್ಣವನ್ನು ಪಡೆಯುವುದು ಮಾತ್ರವಲ್ಲದೆ, ಇದರಿಂದ ಯಾವ ರೀತಿಯ ಅಡ್ಡ ಪರಿಣಾಮವೂ ಆಗುವುದಿಲ್ಲ. ಇಂದು ನಾವು ಇಲ್ಲಿ ಹೇಳುತ್ತಿರುವ ವಸ್ತುಗಳನ್ನು ಬಿಳಿ ಕೂದಲಿಗೆ ಹಚ್ಚುವುದರಿಂದ ಬಿಳಿ ಕೂದಲು ಶಾಶ್ವತವಾಗಿ ಕಪ್ಪಾಗುತ್ತದೆ. 

ಇದನ್ನೂ ಓದಿ : ಹಣೆ, ಕೆನ್ನೆಯಲ್ಲಿ ಮಾತ್ರ ಮೊಡವೆ ಕಾಣಿಸಿಕೊಳ್ಳುತ್ತಿವೆಯೇ? ಈ ಆರೋಗ್ಯ ಸಮಸ್ಯೆಯೂ ಕಾರಣವಾಗಿರಬಹುದು, ಎಚ್ಚರ!

ಈ ಮನೆಮದ್ದುಗಳು ಬಿಳಿ ಕೂದಲಿನ ಸಮಸ್ಯೆಯಿಂದ ಪರಿಹಾರವನ್ನು ನೀಡುತ್ತದೆ. (Home remedy for white hair) 

1. ಮೊಸರು : 
ಮೊಸರು ಕೂದಲಿಗೆ ತುಂಬಾ ಪ್ರಯೋಜನಕಾರಿಯಾಗಿದೆ. ಮೊದಲು  ಟೊಮೆಟೊ ಹಣ್ಣುಗಳನ್ನು ರುಬ್ಬಿಕೊಂಡು ಅದರಲ್ಲಿ ಮೊಸರನ್ನು ಮಿಶ್ರಣ ಮಾಡಿ. ಅದಕ್ಕೆ ಸ್ವಲ್ಪ ನಿಂಬೆ ರಸ ಮತ್ತು ನೀಲಗಿರಿ ಎಣ್ಣೆಯನ್ನು ಸೇರಿಸಿ. ಇವೆಲ್ಲವನ್ನೂ ಚೆನ್ನಾಗಿ ಮಿಶ್ರಣ ಮಾಡಿ. ಈಗ ಈ  ಮಿಶ್ರಣದಿಂದ ಕೂದಲಿಗೆ ಮಸಾಜ್ ಮಾಡಿ. ವಾರಕ್ಕೆ 2-3 ಬಾರಿ ಈ ಮಿಶ್ರಣದಿಂದ ಕೂದಲಿಗೆ ಮಸಾಜ್ ಮಾಡುತ್ತಾ ಬನ್ನಿ. ಇದು ಕೂದಲು ಬಿಳಿಯಾಗುವುದನ್ನು ತಡೆಯುವುದು ಮಾತ್ರವಲ್ಲದೆ, ಕೂದಲು ಉದುರುವುದನ್ನು ಕೂಡಾ ತಡೆಯುತ್ತದೆ. 

2.ಶುಂಠಿ ಮತ್ತು ಜೇನು : 
ಶುಂಠಿಯನ್ನು ರುಬ್ಬಿ ಜೇನು ರಸದೊಂದಿಗೆ ಬೆರೆಸಿ ವಾರಕ್ಕೆ ಎರಡು ಬಾರಿಯಾದರೂ ಕೂದಲಿಗೆ ಹಚ್ಚಿ. ಇದು ಬಿಳಿ ಕೂದಲು ಕ್ರಮೇಣ  ಕಪ್ಪಾಗುವಂತೆ ಮಾಡುತ್ತದೆ. ಮಾತ್ರವಲ್ಲ ಮತ್ತೆ ಬಿಳಿ ಕೂದಲು ಹುಟ್ಟಿಕೊಳ್ಳದಂತೆ ನೋಡಿಕೊಳ್ಳುತ್ತದೆ. 

ಇದನ್ನೂ ಓದಿ :  ಬಿಳಿ ಕೂದಲು ಕಪ್ಪಾಗಿಸುತ್ತದೆ ಈ ಹಸಿರು ಹಣ್ಣು, ಮೆಹಂದಿ ಬಳಸುವ ಅವಶ್ಯಕತೆ ಬೀಳುವುದಿಲ್ಲ!

3. ತೆಂಗಿನ ಎಣ್ಣೆ ಮತ್ತು ಕರ್ಪೂರ:
ತೆಂಗಿನ ಎಣ್ಣೆ ಅಥವಾ ಆಲಿವ್ ಎಣ್ಣೆಯನ್ನು ಲಘುವಾಗಿ ಬಿಸಿ ಮಾಡಿ  ಅದಕ್ಕೆ 4 ಗ್ರಾಂ ಕರ್ಪೂರವನ್ನು ಬೆರೆಸಿ ಮಿಶ್ರಣ ಮಾಡಿ. ಕರ್ಪೂರವನ್ನು ಎಣ್ಣೆಯೊಂದಿಗೆ ಚೆನ್ನಾಗಿ ಬೆರೆಸಿ, ನಿಮ್ಮ ಕೂದಲನ್ನು  ಈ ಮಿಶ್ರಣದಿಂದ ಮಸಾಜ್ ಮಾಡಿ.  ಬಿಳಿ ಕೂದಲನ್ನು ಮತ್ತೆ ಕಪ್ಪಾಗಿಸುವಲ್ಲಿ ಸಹಾಯ ಮಾಡುತ್ತದೆ ಈ ಮ್ಯಾಜಿಕ್ ಮಿಶ್ರಣ. 

4. ಸೋರೆಕಾಯಿ ಮತ್ತು ತೆಂಗಿನ ಎಣ್ಣೆ:
ಕೂದಲನ್ನು ಕಪ್ಪಾಗಿಸಲು ಇನ್ನೊಂದು ಪಾಕವಿಧಾನವೆಂದರೆ ತೆಂಗಿನ ಎಣ್ಣೆ ಮತ್ತು ಸೋರೆಕಾಯಿ. ಸೋರೆಕಾಯಿಯನ್ನು ತುರಿದು ತೆಂಗಿನ ಎಣ್ಣೆಯಲ್ಲಿ ಹಾಕಿ ಚೆನ್ನಾಗಿ ಕುದಿಸಿ. ನಂತರ ಈ ಎಣ್ಣೆಯನ್ನು ಫಿಲ್ಟರ್ ಮಾಡಿ. ಈಗ ಈ ಎಣ್ಣೆಯಿಂದ ಕೂದಲನ್ನು ಮಸಾಜ್ ಮಾಡಿ. ಇದು ಬಿಳಿ ಕೂದಲಿನ ಸಮಸ್ಯೆಗೆ ಪರಿಹಾರ ನೀಡುತ್ತದೆ.

ಇದನ್ನೂ ಓದಿ : ಫೇಶಿಯಲ್‌ಗಿಂತಲೂ ಅಧಿಕ ಹೊಳಪನ್ನು ಬಯಸುತ್ತಿದ್ದೀರಾ? ಹಾಗಾದರೆ ಸಿಂಪಲ್‌ ಯೋಗಾಸನಗಳು ನಿಮಗಾಗಿ

5. ನೆಲ್ಲಿಕಾಯಿ :
ನೆಲ್ಲಿ ಕಾಯಿ ಕೂದಲಿನ ಆರೈಕೆಗೆ ಬೆಸ್ಟ್ ಔಷಧ. ಒಣ ನೆಲ್ಲಿಕಾಯಿಯನ್ನು ನೀರಿನಲ್ಲಿ ಹಾಕಿ ಕುದಿಸಿ. ಇಲ್ಲಿ ನೀರು ಅರ್ಧಕ್ಕೆ ಬರುವವರೆಗೆ ಕುದಿಸಿ. ಈಗ ಅದಕ್ಕೆ ಗೋರಂಟಿ ಮತ್ತು ನಿಂಬೆ ರಸವನ್ನು ಬೆರೆಸಿ. ಈ ಮಿಶ್ರಣವನ್ನು  ಕೂದಲಿಗೆ ಹಚ್ಚಿ. ಹೀಗೆ ಮಾಡುವುದರಿಂದ ಚಿಕ್ಕವಯಸ್ಸಿನಲ್ಲಿಯೇ ಕೂದಲು ಬಿಳಿಯಾಗುವುದನ್ನು  ಶಾಶ್ವತಾವಾಗಿ ತಡೆಯಬಹುದು.

(ಸೂಚನೆ : ಈ ಲೇಖನದಲ್ಲಿ ನೀಡಲಾಗಿರುವ ಮಾಹಿತಿ ಸಾಮಾನ್ಯ ಜ್ಞಾನ ಹಾಗೂ ಮನೆಮದ್ದು ಮಾಹಿತಿಯನ್ನು ಆಧರಿಸಿದೆ. ಜೀ ಕನ್ನಡ ನ್ಯೂಸ್ ಈ ಮಾಹಿತಿಯನ್ನು ಖಚಿತಪಡಿಸುವುದಿಲ್ಲ. ಅನುಸರಿಸುವ ಮುನ್ನ ವಿಷಯ ತಜ್ಞರ ಸಲಹೆ ಪಡೆದುಕೊಳ್ಳಲು ಮರೆಯಬೇಡಿ) .

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/watch?v=q9auZ2eqeZo

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್.

Trending News