Health Tips: ವಯಸ್ಸಿಗೆ ಅನುಗುಣವಾಗಿ ನಿಮ್ಮ ತೂಕ ಹೇಗಿರಬೇಕು..?

ವಯಸ್ಸಿನ ಪ್ರಕಾರ ತೂಕ ಮತ್ತು ಎತ್ತರದ ಮಾಹಿತಿಯನ್ನು ನ್ಯಾಷನಲ್ ಇನ್‌ಸ್ಟಿಟ್ಯೂಟ್ ಆಫ್ ಹೆಲ್ತ್‌ನ ಚಾರ್ಟ್‌ನಲ್ಲಿ ನೀಡಲಾಗಿದೆ. ಈ ಚಾರ್ಟ್‌ನ ಸಹಾಯದಿಂದ ನಿಮ್ಮ ಕುಟುಂಬದ ಸದಸ್ಯರ ತೂಕ ಮತ್ತು ಎತ್ತರವನ್ನು ನೀವು ಅಳೆಯಬೇಕು.

Written by - Puttaraj K Alur | Last Updated : Dec 20, 2022, 12:05 PM IST
  • ವಯಸ್ಸಿಗೆ ಅನುಗುಣವಾಗಿ ನಿಮ್ಮ ತೂಕ ಮತ್ತು ಎತ್ತರ ಹೇಗಿರಬೇಕು ಗೊತ್ತಾ?
  • ನಿಮ್ಮ ತೂಕ & ಎತ್ತರ ವಯಸ್ಸಿಗನುಗುಣವಾಗಿ ಸರಿಯಾಗಿದೆಯೇ ಅಥವಾ ಇಲ್ಲವೇ ತಿಳಿಯಿರಿ
  • ನ್ಯಾಷನಲ್ ಇನ್‌ಸ್ಟಿಟ್ಯೂಟ್ ಆಫ್ ಹೆಲ್ತ್‌ನ ಚಾರ್ಟ್‌ನಲ್ಲಿದೆ ಉಪಯುಕ್ತ ಮಾಹಿತಿ
 Health Tips: ವಯಸ್ಸಿಗೆ ಅನುಗುಣವಾಗಿ ನಿಮ್ಮ ತೂಕ ಹೇಗಿರಬೇಕು..? title=
Height Weight Chart

ನವದೆಹಲಿ: ಇಂದಿನ ಕಾಲದಲ್ಲಿ ಪ್ರತಿಯೊಬ್ಬರೂ ವಿದ್ಯಾವಂತರಾಗುತ್ತಿದ್ದಾರೆ. ಆದರೆ ತಮ್ಮ ಕುಟುಂಬದ ಅನೇಕ ಪ್ರಮುಖ ವಿಷಯಗಳ ಬಗ್ಗೆ ಕಾಳಜಿ ವಹಿಸುವುದಿಲ್ಲ. ಯಾವುದೇ ಆರೋಗ್ಯವಂತ ಮಗುವಿಗೆ ಅಥವಾ ವಯಸ್ಸಾದವರಿಗೆ ತೂಕ ಮತ್ತು ಎತ್ತರ ಬಹಳ ಮುಖ್ಯ. ಈ ವಿಷಯಗಳ ಬಗ್ಗೆ ಸರಿಯಾದ ಸಮಯದಲ್ಲಿ ಕಾಳಜಿ ವಹಿಸದಿದ್ದರೆ ಹಲವು ರೋಗಗಳು ನಿಮ್ಮನ್ನು ಸುತ್ತುವರೆಯುತ್ತವೆ. ಹೀಗಾಗಿ ವಯಸ್ಸಿಗೆ ಅನುಗುಣವಾಗಿ ಕುಟುಂಬದ ಎಲ್ಲಾ ಸದಸ್ಯರ ತೂಕ ಮತ್ತು ಎತ್ತರ ಸರಿಯಾಗಿರಬೇಕು. ವಯಸ್ಸಿನ ತೂಕ ಮತ್ತು ಎತ್ತರ ಹೇಗಿರಬೇಕು ಅನ್ನೋದರ ಕುರಿತ ಉಪಯುಕ್ತ ಚಾರ್ಟ್‌ ಅನ್ನು ನಾವು ಇಲ್ಲಿ ನಿಮಗೆ ನೀಡುತ್ತಿದ್ದೇವೆ.  

ಇತ್ತೀಚಿನ ದಿನಗಳಲ್ಲಿ ಅನೇಕ ಮಕ್ಕಳಲ್ಲಿ ಅಪೌಷ್ಟಿಕತೆ ಮತ್ತು ಬೆಳವಣಿಗೆಯಲ್ಲಿ ಕುಂಠಿತ ಸಮಸ್ಯೆ ಕಂಡುಬರುತ್ತಿದೆ. ಇಂತಹ ಪರಿಸ್ಥಿತಿಯಲ್ಲಿ ಈ ಚಾರ್ಟ್ ನಿಮಗೆ ಸಹಾಯಕವಾಗಬಹುದು. ಇದು ಮಕ್ಕಳಿಂದ ಹಿಡಿದು ಹಿರಿಯರವರೆಗೆ ಎಲ್ಲರಿಗೂ ಉಪಯುಕ್ತವಾಗಿದೆ. ಆರೋಗ್ಯವಂತ ವ್ಯಕ್ತಿಯ ತೂಕ ಮತ್ತು ಎತ್ತರವು ಆತನ ವಯಸ್ಸಿಗೆ ಅನುಗುಣವಾಗಿ ಸರಿಯಾಗಿದೆಯೇ ಅಥವಾ ಇಲ್ಲವೇ ಎಂಬುದನ್ನು ನೀವು ತಿಳಿಯಬಹುದು. ತೂಕ ಅಥವಾ ಎತ್ತರವು ಕಡಿಮೆ ಅಥವಾ ಹೆಚ್ಚಿದ್ದರೆ ನೀವು ಎಚ್ಚರಿಕೆ ವಹಿಸಬೇಕು. ನಿಮ್ಮ ಮನೆಯಲ್ಲಿ 5 ವರ್ಷದ ಮಗು ಇರಲಿ ಅಥವಾ 60 ವರ್ಷದ ವ್ಯಕ್ತಿ ಇರಲಿ, ಈ ವಿಷಯ ಎಲ್ಲರಿಗೂ ಅನ್ವಯಿಸುತ್ತದೆ. ವಯಸ್ಸಿನ ಪ್ರಕಾರ ತೂಕ ಮತ್ತು ಎತ್ತರದ ಮಾಹಿತಿಯನ್ನು ನ್ಯಾಷನಲ್ ಇನ್‌ಸ್ಟಿಟ್ಯೂಟ್ ಆಫ್ ಹೆಲ್ತ್‌ನ ಚಾರ್ಟ್‌ನಲ್ಲಿ ನೀಡಲಾಗಿದೆ. ಈ ಚಾರ್ಟ್‌ನ ಸಹಾಯದಿಂದ ನಿಮ್ಮ ಕುಟುಂಬದ ಸದಸ್ಯರ ತೂಕ ಮತ್ತು ಎತ್ತರವನ್ನು ನೀವು ಅಳೆಯಬೇಕು.

ಇದನ್ನೂ ಓದಿ: Men Health Tips: ಪುರುಷರು ಇದನ್ನು ಅತಿಯಾಗಿ ಸೇವಿಸಬಾರದು, ಈ ಸಮಸ್ಯೆಗಳಿಗೆ ಆಹ್ವಾನ ಕೊಟ್ಟಂತೆ!

ನಿಮ್ಮ ವಯಸ್ಸು ಪುರುಷರ ತೂಕ ಮಹಿಳೆಯರ ತೂಕ
ನವಜಾತ ಶಿಶು 3.3 ಕೆ.ಜಿ 3.3 ಕೆ.ಜಿ
2 ರಿಂದ 5 ತಿಂಗಳು 6 ಕೆ.ಜಿ 5.4 ಕೆ.ಜಿ
6 ರಿಂದ 8 ತಿಂಗಳು 7.2 ಕೆ.ಜಿ 6.5 ಕೆ.ಜಿ
9 ತಿಂಗಳಿಂದ 1 ವರ್ಷ 10 ಕೆ.ಜಿ 9.5 ಕೆ.ಜಿ
2 ರಿಂದ 5 ವರ್ಷ 12. 5 ಕೆ.ಜಿ 11. 8 ಕೆ.ಜಿ
6 ರಿಂದ 8 ವರ್ಷ 14- 18.7 ಕೆ.ಜಿ 14-17 ಕೆ.ಜಿ
9 ರಿಂದ 11 ವರ್ಷ 28- 31 ಕೆ.ಜಿ 28- 31 ಕೆ.ಜಿ
12 ರಿಂದ 14 ವರ್ಷ 32- 38 ಕೆ.ಜಿ 32- 36 ಕೆ.ಜಿ
15 ರಿಂದ 20 ವರ್ಷ 40-50 ಕೆ.ಜಿ 45 ಕೆ.ಜಿ
21 ರಿಂದ 30 ವರ್ಷ 60-70 ಕೆ.ಜಿ 50-60 ಕೆ.ಜಿ
31 ರಿಂದ 40 ವರ್ಷ 59-75 ಕೆ.ಜಿ 60-65 ಕೆ.ಜಿ
41 ರಿಂದ 50 ವರ್ಷ 60-70 ಕೆ.ಜಿ 59- 63 ಕೆ.ಜಿ
51 ರಿಂದ 60 ವರ್ಷ 60-70 ಕೆ.ಜಿ 59- 63 ಕೆ.ಜಿ

ಇದನ್ನೂ ಓದಿ: Health Care : ಈ ರೀತಿಯ ಆಹಾರಗಳು ನಿಮ್ಮನ್ನು ಮರೆವಿನ ಕಾಯಿಲೆಗೆ ದೂಡಬಹುದು!

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News