ಇಂದು ಉದಯಿಸಲಿರುವ ಗುರು ಈ ರಾಶಿಯವರಿಗೆ ನೀಡಲಿದ್ದಾನೆ ಸಂಕಷ್ಟ

ಜ್ಯೋತಿಷ್ಯ ಶಾಸ್ತ್ರದಲ್ಲಿ ಗುರುವಿನ ಉದಯವನ್ನು ಮಂಗಳಕರವೆಂದು ಪರಿಗಣಿಸಲಾಗುತ್ತದೆ. ಹಾಗೆಯೇ ದೇವಗುರು ಬ್ರಹಸ್ಪತಿ ಕುಂಭ ರಾಶಿಯಲ್ಲಿ ಉದಯಿಸುತ್ತಿರುವುದು ಕೆಲವು ರಾಶಿಗಳಿಗೆ ಸಂಕಷ್ಟಗಳನ್ನು ಕೂಡಾ ನೀಡಲಿದೆ. 

Written by - Ranjitha R K | Last Updated : Mar 26, 2022, 02:47 PM IST
  • ಗುರುಗ್ರಹದ ಉದಯವು ಸಂಜೆ 06.38 ಕ್ಕೆ ಸಂಭವಿಸುತ್ತದೆ
  • ಗುರು ಉದಯ ಕೆಲವರಿಗೆ ಲಾಭದಾಯಕವಾಗಿರಲಿದೆ
  • ಇನ್ನು ಕೆಲವರಿಗೆ ಎದುರಾಗಲಿದೆ ಸಂಕಷ್ಟ
ಇಂದು ಉದಯಿಸಲಿರುವ ಗುರು ಈ ರಾಶಿಯವರಿಗೆ ನೀಡಲಿದ್ದಾನೆ ಸಂಕಷ್ಟ  title=
ಗುರುಗ್ರಹದ ಉದಯವು ಸಂಜೆ 06.38 ಕ್ಕೆ ಸಂಭವಿಸುತ್ತದೆ (file photo)

ಬೆಂಗಳೂರು : ಗುರು ಉದಯವು ಮಾರ್ಚ್ 26 ರಂದು ಅಂದರೆ ಇಂದು ಕುಂಭ ರಾಶಿಯಲ್ಲಿ ನಡೆಯಲಿದೆ (Guru Uday). ಗುರುಗ್ರಹದ ಉದಯವು ಸಂಜೆ 06.38 ಕ್ಕೆ ಸಂಭವಿಸುತ್ತದೆ. . ಗುರುಗ್ರಹದ ಉದಯವು ಎಲ್ಲಾ 12 ರಾಶಿಚಕ್ರಗಳ ಮೇಲೆ ಪರಿಣಾಮ ಬೀರುತ್ತದೆ (Guru Uday Effects). ದೇವಗುರು ಉದಯದಿಂದಾಗಿ ಜನರ ಭವಿಷ್ಯವು ಬದಲಾಗಲು ಪ್ರಾರಂಭಿಸುತ್ತದೆ. 

ಜ್ಯೋತಿಷ್ಯ ಶಾಸ್ತ್ರದಲ್ಲಿ (Astrology) ಗುರುವಿನ ಉದಯವನ್ನು ಮಂಗಳಕರವೆಂದು ಪರಿಗಣಿಸಲಾಗುತ್ತದೆ (Guru Uday). ಹಾಗೆಯೇ ದೇವಗುರು ಬ್ರಹಸ್ಪತಿ ಕುಂಭ ರಾಶಿಯಲ್ಲಿ ಉದಯಿಸುತ್ತಿರುವುದು ಕೆಲವು ರಾಶಿಗಳಿಗೆ ಸಂಕಷ್ಟಗಳನ್ನು ಕೂಡಾ ನೀಡಲಿದೆ. ಹಾಗಿದ್ದರೆ ಗುರು ಉದಯದಿಂದ ತೊಂದರೆಗೆ ಒಳಗಾಗುವ ರಾಶಿಗಳು ಯಾವುವು ನೋಡೋಣ (Guru Udaya Bad Effects). 

ಇದನ್ನೂ ಓದಿ : Astrology: ಶನಿಯ ಸಾಡೇಸಾತಿಯಿಂದ ಮುಕ್ತಿ ಪಡೆಯಬೇಕೇ? ಮಕರ, ಕುಂಭ, ಧನು, ಮಿಥುನ, ತುಲಾ ರಾಶಿಯವರು ಈ ಕೆಲಸ ಮಾಡಿ

ಕಟಕ : ಗುರು ನಿಮ್ಮ ರಾಶಿಯಿಂದ ಎಂಟನೇ ಮನೆಯಲ್ಲಿ ಉದಯಿಸುತ್ತಾನೆ. ಗುರುವಿನ ಉದಯವು ನಿಮ್ಮ ಮನಸ್ಸಿನಲ್ಲಿ ಗೊಂದಲವನ್ನು ಉಂಟುಮಾಡಬಹುದು. ಈ ಸಮಯದಲ್ಲಿ, ಆರೋಗ್ಯದಲ್ಲಿ ಋಣಾತ್ಮಕ ಬದಲಾವಣೆಗಳು ಸಂಭವಿಸಬಹುದು. ಆದ್ದರಿಂದ ನಿಮ್ಮ ಆರೋಗ್ಯದತ್ತ ವಿಶೇಷ ಗಮನ ಹರಿಸಬೇಕು (Guru Transit). ಉದ್ಯೋಗದಲ್ಲಿ ತೊಡಗಿರುವವರಿಗೆ ಗುರು ಉದಯದ ನಂತರ ವರ್ಗಾವಣೆಯಾಗಬಹುದು.  ಹಾಗೆಯೇ ಕೆಲವರು ಇಚ್ಛಾಶಕ್ತಿ ಇಲ್ಲದಿದ್ದರೂ ಕೆಲಸ ಬದಲಾಯಿಸಬಹುದು. 

ಕನ್ಯಾ: ಗುರು ನಿಮ್ಮ ರಾಶಿಯಿಂದ ಆರನೇ ಮನೆಯಲ್ಲಿ ಉದಯಿಸುತ್ತಾನೆ. ಈ ಅವಧಿಯಲ್ಲಿ ನಿಮ್ಮ ವಿರೋಧಿಗಳು ನಿಮಗೆ ಅನಗತ್ಯ ತೊಂದರೆಗಳನ್ನು ನೀಡಬಹುದು. ಆದ್ದರಿಂದ ಜಾಗರೂಕರಾಗಿರಿ. ಕನ್ಯಾ ರಾಶಿಯವರು ಕೆಲಸದ ಸ್ಥಳದಲ್ಲಿ ಅನಗತ್ಯ ರಾಜಕೀಯದಿಂದ ದೂರವಿರುವುದು ಒಳ್ಳೆಯದು. ಎದೆ ಮತ್ತು ಗಂಟಲಿಗೆ ಸಂಬಂಧಿಸಿದ ಕೆಲವು ಆರೋಗ್ಯ ಸಮಸ್ಯೆಗಳು ಈ ರಾಶಿಯವರನ್ನು ಕಾಡಬಹುದು.  ನಿಮ್ಮ ಮಾತಿನ ಮೇಲೆ ಹಿಡಿತ ಇಟ್ಟುಕೊಳ್ಳುವುದು ಒಳ್ಳೆಯದು. 

ಇದನ್ನೂ ಓದಿ : ದೇವರ ಮನೆಯಲ್ಲಿ ಈ ವಸ್ತುಗಳಿದ್ದರೆ ಪೂಜಾಫಲ ಸಿಗುವುದೇ ಇಲ್ಲ

ಕುಂಭ: ಗುರು ನಿಮ್ಮ ಸ್ವಂತ ರಾಶಿಯಲ್ಲಿ ಉದಯಿಸುತ್ತಾನೆ. ಆದ್ದರಿಂದ ಈ ಸಮಯವನ್ನು ನಿಮಗೆ ಕೆಟ್ಟ ಸಮಯ ಎಂದು ಪರಿಗಣಿಸಲಾಗುತ್ತದೆ. ಈ  ರಾಶಿಯವರು  ಅತಿಯಾದ ಆತ್ಮವಿಶ್ವಾಸದಿಂದ ದೂರವಿರಬೇಕು. ಗುರುಗ್ರಹದ ಉದಯವು ನಿಮ್ಮ ವೈವಾಹಿಕ ಜೀವನದಲ್ಲಿ ಉತ್ತಮ ಬದಲಾವಣೆಗಳನ್ನು ತರುತ್ತದೆ. ಈ ರಾಶಿಚಕ್ರದ ಕೆಲವು ಚಿಹ್ನೆಗಳು ಈ ಸಮಯದಲ್ಲಿ ಆಧ್ಯಾತ್ಮಿಕ ಹಾದಿಯಲ್ಲಿ ಹೋಗಬಹುದು.

ಮೀನ: ಗುರುವು ನಿಮ್ಮ ಸ್ವಂತ ರಾಶಿಯ ಅಧಿಪತಿಯಾಗಿದ್ದು, ಹನ್ನೆರಡನೇ ಮನೆಯಲ್ಲಿ ಉದಯಿಸುತ್ತಾನೆ. ಜ್ಯೋತಿಷ್ಯದಲ್ಲಿ (Astrology), ಹನ್ನೆರಡನೆಯ ಮನೆಯನ್ನು ಅತ್ಯಂತ ಮಂಗಳಕರವೆಂದು ಪರಿಗಣಿಸಲಾಗುವುದಿಲ್ಲ.  ಅದನ್ನು ವೆಚ್ಚದ ಮನೆ ಎಂದು ಕರೆಯಲಾಗುತ್ತದೆ. ಆದ್ದರಿಂದ, ಗುರುವಿನ ಉದಯದ ನಂತರ, ನಿಮ್ಮ ಖರ್ಚುಗಳು ಹೆಚ್ಚಾಗಬಹುದು ಮತ್ತು ಈ ವೆಚ್ಚಗಳು ಅನಗತ್ಯವಾಗಿರಬಹುದು. ಮೀನ ರಾಶಿಯವರು ಸಿಹಿ ಪದಾರ್ಥಗಳನ್ನು ಹೆಚ್ಚು ಸೇವಿಸುವುದರಿಂದ ದೂರವಿರಿ.  

ಸೂಚನೆ: ಇಲ್ಲಿ ನೀಡಲಾದ ಮಾಹಿತಿಯು ಸಾಮಾನ್ಯ ಮಾಹಿತಿಯನ್ನು ಆಧರಿಸಿದೆ. ZEE ಮೀಡಿಯಾ ಇದನ್ನು ಖಚಿತಪಡಿಸುವುದಿಲ್ಲ.

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News