Guru Gochar September 2021: ಮಕರ ರಾಶಿಗೆ ಗುರುವಿನ ಪ್ರವೇಶ, ನೀಚಭಂಗ ರಾಜಯೋಗದಿಂದ ಈ ನಾಲ್ಕು ರಾಶಿಗಳ ಪರಿಸ್ಥಿತಿಯಲ್ಲಿ ಬದಲಾವಣೆ

Guru Gochar September 2021:14 ಸೆಪ್ಟೆಂಬರ್ 2021 ರ ಮಂಗಳವಾರ ಬೆಳಗ್ಗೆ 11:43 ಕ್ಕೆ ದೇವಗುರು 'ಗುರು' ಮಕರ ರಾಶಿಗೆ ಪ್ರವೇಶಿಸಲಿದ್ದಾರೆ. ಗುರುವಿನ ಈ ರಾಶಿ ಪರಿವರ್ತನೆ ಎಲ್ಲಾ 12 ರಾಶಿಗಳ ಮೇಲೆ ದೊಡ್ಡ ಪ್ರಭಾವ ಬೀರುತ್ತದೆ.

Written by - Nitin Tabib | Last Updated : Sep 10, 2021, 06:42 PM IST
  • ದೇವ ಗುರು 'ಗುರು' ಮಕರ ರಾಶಿಗೆ ಪ್ರವೇಶ.
  • ಸೆ.14ರಂದು ಮಕರ ರಾಶಿ ಪ್ರವೇಶಿಸಲಿರುವ ಗುರು
  • 4 ರಾಶಿಯ ಜಾತಕದವರ ಮೇಲೆ ವಿಶೇಷ ಪ್ರಭಾವ.
Guru Gochar September 2021: ಮಕರ ರಾಶಿಗೆ ಗುರುವಿನ ಪ್ರವೇಶ, ನೀಚಭಂಗ ರಾಜಯೋಗದಿಂದ ಈ ನಾಲ್ಕು ರಾಶಿಗಳ ಪರಿಸ್ಥಿತಿಯಲ್ಲಿ ಬದಲಾವಣೆ title=
Guru Rashi Parivartan (Representational Image)

ನವದೆಹಲಿ: Guru Gochar September 2021 - ಈ ತಿಂಗಳಲ್ಲಿ, ನಾಲ್ಕು ರಾಶಿಚಕ್ರದ ಜನರು ಜಾಗರೂಕರಾಗಿರಬೇಕು ಏಕೆಂದರೆ ದೇವಗುರು 'ಗುರು' ಮಂಗಳವಾರ, ಸೆಪ್ಟೆಂಬರ್ 14, 2021 ರಂದು ಮಕರ ರಾಶಿಗೆ (Guru Rashi Parivartan) ಪ್ರವೇಶಿಸುತ್ತಾರೆ. ಆದ್ದರಿಂದ, ಗುರುವಿನ ಈ ರಾಶಿ (Astrology) ಪರಿವರ್ತನೆ  ಎಲ್ಲಾ 12 ರಾಶಿಚಕ್ರಗಳ ಮೇಲೆ ದೊಡ್ಡ ಪರಿಣಾಮ ಬೀರುತ್ತದೆ. ಪ್ರಸ್ತುತ ಶನಿಯು ತನ್ನ ರಾಶಿ ಮಕರ ರಾಶಿಯಲ್ಲಿ ವಿರಾಜಮಾನನಾಗಿದ್ದಾನೆ, ಇಂತಹ ಪರಿಸ್ಥಿತಿಯಲ್ಲಿ, ಮಕರ ರಾಶಿಯಲ್ಲಿ ಗುರುವಿನ ಆಗಮನದಿಂದಾಗಿ ಇಬ್ಬರೂ ಹಿನ್ನಡೆಯ ವಕ್ರ ನಡೆಯಲ್ಲಿ ಇರುತ್ತಾರೆ. ಗುರು ಮಕರ ರಾಶಿಯಲ್ಲಿ 'ನೀಚ್‌ ಭಂಗ ರಾಜ್ ಯೋಗ'  (Neechbhang Raj Yog) ನಿರ್ಮಿಸಲಿದ್ದಾರೆ.  4 ರಾಶಿಚಕ್ರದ ಜನರು  ಗ್ರಹಗಳ ಈ ವಕ್ರ ನಡೆಯಿಂದ ವಿಶೇಷ ಪ್ರಯೋಜನಗಳನ್ನು ಪಡೆಯುತ್ತಾರೆ, ಆದರೆ ಇತರ ರಾಶಿಚಕ್ರದ (Zodiac Sign) ಜನರು ಜಾಗರೂಕರಾಗಿರಲು ಸೂಚಿಸಲಾಗಿದೆ.

ಈ ನಾಲ್ಕು ಜಾತಕದವರಿಗೆ ಶುಭ
ದೇವಗುರು ಗುರು ಮಂಗಳವಾರ, 14 ಸೆಪ್ಟೆಂಬರ್ 2021 ರಂದು ಬೆಳಗ್ಗೆ 11:43 ಕ್ಕೆ ಮಕರ ರಾಶಿಯನ್ನು ಪ್ರವೇಶಿಸುತ್ತಾರೆ. ಈ ಬದಲಾವಣೆಯಿಂದಾಗಿ, ವೃಷಭ, ಕರ್ಕಾಟಕ, ತುಲಾ ಮತ್ತು ಮಕರ ರಾಶಿಯ ಜನರಿಗೆ ಲಾಭ ಸಿಗಲಿದೆ. ಈ ಜನರ ದೀರ್ಘಾವಧಿಯ ಬಾಕಿಯಿರುವ ಕೆಲಸವು ಪೂರ್ಣಗೊಳ್ಳುತ್ತದೆ. ವೃತ್ತಿ ಮತ್ತು ವ್ಯಾಪಾರದಲ್ಲಿ ಲಾಭ ಇರುತ್ತದೆ ಹಾಗೂ ಪ್ರೀತಿಪಾತ್ರರ ಬೆಂಬಲವೂ ಇವರಿಗೆ ಸಿಗಲಿದೆ.

ಇದನ್ನೂ ಓದಿ-Eating Habits: ಹಣ್ಣುಗಳನ್ನು ತಿನ್ನಬೇಕು, ಆದರೆ ಅವುಗಳನ್ನು ತಿನ್ನುವ ಸರಿಯಾದ ಸಮಯ ಯಾವುದು?

ಈ ರಾಶಿಯ ಜನರು ವಿಶೇಷ ಎಚ್ಚರಿಕೆ ವಹಿಸಬೇಕು
ಮಕರ ರಾಶಿಯಲ್ಲಿ ಶನಿ ಮತ್ತು ಗುರುಗಳ ಸಂಯೋಗವು ಮೇಷ, ಮಿಥುನ, ಸಿಂಹ ಮತ್ತು ವೃಶ್ಚಿಕ ರಾಶಿಯವರಿಗೆ ತೊಂದರೆ ಉಂಟು ಮಾಡಲಿದೆ. ಈ 4 ರಾಶಿಯ ಜನರು ಆರ್ಥಿಕ ನಷ್ಟವನ್ನು ಅನುಭವಿಸಬಹುದು. ಯಾವುದೇ ರೀತಿಯ ವಿಶೇಷವಾಗಿ ದೂರ ಉಳಿಯಿರಿ. ವಾಹನ ಚಾಲನೆ ಮಾಡುವಾಗ ಜಾಗರೂಕರಾಗಿರಿ.

ಇದನ್ನೂ ಓದಿ-Benefits Of Sweet Potato: ಸಿಹಿಗೆಣಸಿನ ಸೇವನೆ ಆರೋಗ್ಯಕ್ಕೆ ಎಷ್ಟು ಆರೋಗ್ಯಕರ? ಅದಕ್ಕೆ ಸಂಬಂಧಿಸಿದ ಪ್ರಮುಖ ವಿಷಯವನ್ನು ತಿಳಿಯಿರಿ

ಶುಭ ಸಮಾಚಾರ ಪ್ರಾಪ್ತಿ
ಇದಲ್ಲದೆ ಕನ್ಯಾರಾಶಿ, ಧನು, ಕುಂಭ ಮತ್ತು ಮೀನ ರಾಶಿಯವರಿಗೆ ಈ ಬದಲಾವಣೆಯ ಪರಿಣಾಮವು ಸಾಮಾನ್ಯವಾಗಿರುತ್ತದೆ. ಆದರೂ ಕೂಡ ಈ ರಾಶಿಚಕ್ರದ ಜನರು ಉದ್ಯೋಗ ಮತ್ತು ವ್ಯವಹಾರದಲ್ಲಿ ಒಳ್ಳೆಯ ಸುದ್ದಿಯನ್ನು ಪಡೆಯಬಹುದು. ಆರೋಗ್ಯದ ಬಗ್ಗೆ ಜಾಗರೂಕರಾಗಿರಿ.

ಇದನ್ನೂ ಓದಿ-Ganesh Chaturthi 2021: ನಿಮ್ಮ ಮನೋಕಾಮನೆಗಳನ್ನು ಈಡೇರಿಸಲು ಮುಂದಿನ 10 ದಿನಗಳವರೆಗೆ ಗಣೇಶನನ್ನು ಈ ರೀತಿ ಪೂಜಿಸಿ

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News