ಇಂಥ ಗುಣಗಳಿರುವ ಹುಡುಗರನ್ನೇ ಮೆಚ್ಚುವುದು ಹುಡುಗಿಯರು.! ಸಂಗಾತಿಯಾಗಿ ಸುಲಭವಾಗಿ ಒಪ್ಪಿಕೊಳ್ಳುತ್ತಾರೆ

Qualities for Good Husband: ತನ್ನ ಮದುವೆಯ ನಿರ್ಧಾರವನ್ನು ಯಾವ ಹೆಣ್ಣು ಕೂಡಾ ಆತುರವಾಗಿ ತೆಗೆದುಕೊಳ್ಳುವುದಿಲ್ಲ. ತನ್ನ ಜೀವನ ಸಂಗಾತಿಯಲ್ಲಿ ಈ ಐದು ಮೂಲಭೂತ ಗುಣಗಳನ್ನು ಹುಡುಕುತ್ತಾರೆಯಂತೆ    

Written by - Ranjitha R K | Last Updated : Oct 21, 2022, 09:01 AM IST
  • ಮದುವೆ ಎನ್ನುವ ವಿಚಾರ ಬಂದಾಗ ಹುಡುಗಿಯರು ಬಹಳ ಯೋಚಿಸುತ್ತಾರೆ.
  • ಮದುವೆಯ ನಿರ್ಧಾರವನ್ನು ಆತುರವಾಗಿ ತೆಗೆದುಕೊಳ್ಳುವುದಿಲ್ಲ.
  • ಈ ಐದು ಮೂಲಭೂತ ಗುಣಗಳನ್ನು ಹುಡುಕುತ್ತಾರೆಯಂತೆ.
 ಇಂಥ ಗುಣಗಳಿರುವ ಹುಡುಗರನ್ನೇ ಮೆಚ್ಚುವುದು ಹುಡುಗಿಯರು.! ಸಂಗಾತಿಯಾಗಿ ಸುಲಭವಾಗಿ ಒಪ್ಪಿಕೊಳ್ಳುತ್ತಾರೆ   title=
Qualities for Good Husband

Qualities for Good Husband : ಹುಡುಗ-ಹುಡುಗಿಯ ನಡುವಿನ ಸ್ನೇಹ ಮತ್ತು ಮದುವೆ ಈ ಎರಡೂ ಸಂಬಂಧಕ್ಕೂ ಬಹಳ ವ್ಯತ್ಯಾಸವಿದೆ. ಹುಡುಗಿಯರು ತಮಗೆ ಗೊತ್ತಿರುವ ಹುಡುಗರೊಂದಿಗೆ ಸ್ನೇಹಕ್ಕೆ  ಮುಂದಾಗಬಹುದು. ಆದರೆ, ಪ್ರೀತಿ-ಪ್ರೇಮ, ಮದುವೆ ಎನ್ನುವ ವಿಚಾರ ಬಂದಾಗ ಬಹಳ ಯೋಚಿಸುತ್ತಾರೆ. ಮದುವೆ ಅನ್ನುವುದು ಜೀವನದ ಅತಿ ದೊಡ್ಡ ನಿರ್ಧಾರ. ಇಂದು ಮದುವೆಯಾಗಿ ನಾಳೆ ನನಗೆ ಈ ಸಂಬಂಧ ಇಷ್ಟವಿಲ್ಲ ಎನ್ನುವುದು ಸುಲಭದ ಮಾತಲ್ಲ.  ಈ ಕಾರಣಕ್ಕಾಗಿಯೇ ತನ್ನ ಮದುವೆಯ ನಿರ್ಧಾರವನ್ನು ಯಾವ ಹೆಣ್ಣು ಕೂಡಾ ಆತುರವಾಗಿ ತೆಗೆದುಕೊಳ್ಳುವುದಿಲ್ಲ. ತನ್ನ ಜೀವನ ಸಂಗಾತಿಯಲ್ಲಿ ಈ ಐದು ಮೂಲಭೂತ ಗುಣಗಳನ್ನು ಹುಡುಕುತ್ತಾರೆಯಂತೆ.  ಹುಡುಗನಲ್ಲಿ ಈ ಗುಣಗಳಿದ್ದರೆ ಆತನನ್ನು ತನ್ನ ಸಂಗಾತಿ ಎಂದು ಒಪ್ಪಿಕೊಳ್ಳಲು ಕೊಂಚವೂ ಹಿಂಜರಿಕೆ ತೋರುವುದಿಲ್ಲವಂತೆ. 

ಸಮಾನತೆಯ ಕಾಳಜಿ : 
ತಾನು ಯಾರನ್ನು ತನ್ನ ಜೀವನ ಸಂಗಾತಿಯನ್ನಾಗಿ ಆರಿಸಿಕೊಳ್ಳುತ್ತೇನೋ, ಆತ  ಜೀವನದುದ್ದಕ್ಕೂ ತನಗೆ ಸಮಾನ ಸ್ಥಾನಮಾನವನ್ನು ನೀಡಬೇಕು ಎಂಬ ಬಯಕೆ ಹೆಣ್ಣು ಮಕ್ಕಳಲ್ಲಿ ಇರುತ್ತದೆ. ತಾನೇ ಮೇಲು, ತನ್ನ ಮಾತೇ ನಡೆಯಬೇಕು, ತಾನು ಹೇಳಿದಂತೆ ಕೇಳಬೇಕು, ನಡೆಯಬೇಕು ಎನ್ನುವ ಮನೋಭಾವ ಹುಡುಗಿಯರಿಗೆ ಇಷ್ಟವಾಗುವುದಿಲ್ಲ. ಹುಡುಗಿಯರಿಗೆ ಗೌರವ ನೀಡುವ  ಅವರ ಮಾತನ್ನು ಕೂಡಾ ಗಣನೆಗೆ ತೆಗೆದುಕೊಳ್ಳುವ ಹುಡುಗರು ಹೆಣ್ಣು ಮಕ್ಕಳ ಮೆಚ್ಚುಗೆ ಪಡೆಯುತ್ತಾರೆ. 

ಇದನ್ನೂ ಓದಿ :  Personality Test: ಮೊಸಳೆ/ಹಡಗು? ನೀವು ನೋಡಿದ ಮೊದಲ ಚಿತ್ರ ನಿಮ್ಮ ವ್ಯಕ್ತಿತ್ವದ ರಹಸ್ಯ ತಿಳಿಸುತ್ತೆ!

ಜವಾಬ್ದಾರಿಯ ನಡವಳಿಕೆ : 
ಹುಡುಗಿಯರು ಜವಾಬ್ದಾರಿಯುತ ವ್ಯಕ್ತಿಯನ್ನು ಮದುವೆಯಾಗಲು ಇಷ್ಟಪಡುತ್ತಾರೆ. ತನ್ನ ಕುಟುಂಬದ ಜವಾಬ್ದಾರಿಯನ್ನು ಗಂಭೀರವಾಗಿ ತೆಗೆದುಕೊಂಡು ಕೆಲಸ ಮಾಡುವ ಹುಡುಗನತ್ತ ಹುಡುಗಿಯರು ಆಕರ್ಷಿತರಾಗುತ್ತಾರೆ. ಅಸಡ್ಡೆ ಮನೋಭಾವಾದ ಹುಡುಗರನ್ನು ಹುಡುಗಿಯರು ಇಷ್ಟಪಡುವುದಿಲ್ಲ. 

ವಿಶ್ವಾಸ ಉಳಿಸಿಕೊಳ್ಳಬೇಕು : 
ಯಾವುದೇ ಸಂಬಂಧವಾಗಲಿ ಅದು ಉಳಿಯುವುದು ವಿಶ್ವಾಸದ ಮೇಲೆ. ಮದುವೆಯ ವಿಚಾರದಲ್ಲಿ ವಿಶ್ವಾಸ ಎನ್ನುವುದು ಬಹಳ ಮುಖ್ಯ. ಹುಡುಗ ನಂಬಿಗಸ್ಥನಾಗಿರಬೇಕೆನ್ನುವುದೇ  ಹೆಣ್ಣುಮಕ್ಕಳ ಮೂಲ ಷರತ್ತು ಆಗಿರುತ್ತದೆ. 

ಇದನ್ನೂ ಓದಿ :   Hair Care tips : ಸಿಲ್ಕಿ ಸ್ಮೂತ್‌ ಕೂದಲಿಗಾಗಿ ಅಲೋವೆರಾ ಜೆಲ್ ಅನ್ನು ಈ ರೀತಿ ಬಳಸಿ

ಮಹಿಳೆ ಮತ್ತು ಹೆಣ್ಣು ಮಕ್ಕಳನ್ನು ಗೌರವಿಸುವವನು  : 
ಮಹಿಳೆಯರು ಮತ್ತು ಹುಡುಗಿಯರನ್ನು ಗೌರವಿಸುವ ಹುಡುಗರೆಂದರೆ ಹೆಣ್ಣು ಮಕ್ಕಳಿಗೂ ಇಷ್ಟವ್ಚಾಗುತ್ತಾರೆ.  ಇಂಥಹ ಹುಡುಗರು ಬಹಳ ಬೇಗನೆ ಹೆಣ್ಣು ಮಕ್ಕಳ ಮನಸ್ಸನ್ನು ಗೆಲ್ಲುತ್ತಾರೆ. ಯಾವ ಹುಡುಗಿಯೂ ತನ್ನ ಸ್ವಾಭಿಮಾನದ ವಿಚಾರದಲ್ಲಿ ರಾಜಿ ಮಾಡಿಕೊಳ್ಳುವುದಿಲ್ಲ. ಈ ಕಾರಣದಿಂದ ಹುಡುಗಿಯರಿಗೆ ಗೌರವ ತೋರಿಸುವ ಹುಡುಗರನ್ನು ತಮ್ಮ ಜೀವನ ಸಂಗಾತಿಯನ್ನಾಗಿ ಮಾಡಿಕೊಳ್ಳುವುಡು ಹುಡುಗಿಯರ ಕನಸಾಗಿರುತ್ತದೆ. 

 

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ

Trending News