ಇಂದಿನಿಂದ ಈ ರಾಶಿಯವರಿಗೆ ಏಳೂವರೆ ಮತ್ತು ಎರಡೂವರೆ ವರ್ಷದ ಶನಿ ಕಾಟ ಆರಂಭ

ಎರಡೂವರೆ ವರ್ಷಗಳ ನಂತರ, ಶನಿ ಗ್ರಹ ತನ್ನ ರಾಶಿಚಕ್ರವನ್ನು ಬದಲಾಯಿಸುತ್ತಿದ್ದಾನೆ. ಮಾತ್ರವಲ್ಲ 30 ವರ್ಷಗಳ ನಂತರ ತನ್ನದೇ ಆದ ಕುಂಭ ರಾಶಿಯನ್ನು ಪ್ರವೇಶಿಸುತ್ತಾನೆ. 

Written by - Ranjitha R K | Last Updated : Apr 29, 2022, 11:06 AM IST
  • ಶನಿ ಗ್ರಹವು ಇಂದು ಕುಂಭ ರಾಶಿಯನ್ನು ಪ್ರವೇಶಿಸುತ್ತಿದೆ
  • 30 ವರ್ಷಗಳ ನಂತರ ತನ್ನದೇ ಆದ ಕುಂಭ ರಾಶಿಯನ್ನು ಪ್ರವೇಶಿಸುತ್ತಾನೆ.
  • ಶನಿಯು ಜುಲೈ 12 ರವರೆಗೆ ಕುಂಭ ರಾಶಿಯಲ್ಲಿರುತ್ತಾನೆ.
ಇಂದಿನಿಂದ ಈ ರಾಶಿಯವರಿಗೆ ಏಳೂವರೆ ಮತ್ತು ಎರಡೂವರೆ ವರ್ಷದ ಶನಿ ಕಾಟ ಆರಂಭ title=
Shani sade sati (file photo)

ಬೆಂಗಳೂರು  : ಶನಿ ಗ್ರಹವು ಇಂದು ಕುಂಭ ರಾಶಿಯನ್ನು ಪ್ರವೇಶಿಸುತ್ತಿದೆ. ಎರಡೂವರೆ ವರ್ಷಗಳ ನಂತರ, ಶನಿ ಗ್ರಹ ತನ್ನ ರಾಶಿಚಕ್ರವನ್ನು ಬದಲಾಯಿಸುತ್ತಿದ್ದಾನೆ. ಮಾತ್ರವಲ್ಲ 30 ವರ್ಷಗಳ ನಂತರ ತನ್ನದೇ ಆದ ಕುಂಭ ರಾಶಿಯನ್ನು ಪ್ರವೇಶಿಸುತ್ತಾನೆ. ಶನಿಯು ಜುಲೈ 12 ರವರೆಗೆ ಕುಂಭ ರಾಶಿಯಲ್ಲಿರುತ್ತಾನೆ. ನಂತರ ಕೆಲವು ತಿಂಗಳುಗಳವರೆಗೆ ಹಿಮ್ಮುಖವಾಗಿ ಚಲಿಸುತ್ತಾನೆ. ಶನಿಯು ಕುಂಭ ರಾಶಿಗೆ ಪ್ರವೇಶಿಸಿದ ಕೂಡಲೇ ಕೆಲವು ರಾಶಿಯವರಿಗೆ ಸಾಡೇಸಾತಿ ಮತ್ತು ಶನಿ ಧೈಯ್ಯಾ ಅಂದರೆ ಎರಡೂವರೆ ವರ್ಷದ ಶನಿ ದೆಸೆ ಆರಂಭವಾಗಲಿದೆ. 

ಮೀನ ರಾಶಿಯವರಿಗೆ ಆರಂಭವಾಗಲಿದೆ ಶನಿ ಸಾಡೇಸಾತಿ :  
ಶನಿಯ ರಾಶಿ ಬದಲಾದ ತಕ್ಷಣ ಮೀನ ರಾಶಿಯವರಿಗೆ ಶನಿಯ ಸಾಡೇಸಾತಿ ಶುರುವಾಗುತ್ತದೆ. ಸಾಡೇಸಾತಿಗೆ ಎರಡೂವರೆ ವರ್ಷಗಳ ಮೂರು ಹಂತಗಳಿವೆ. ಇದಲ್ಲದೆ, ಕುಂಭ ರಾಶಿಗೆ ಶನಿ ಗ್ರಹದ ಪ್ರವೇಶದಿಂದ ಕರ್ಕಾಟಕ ಮತ್ತು ವೃಶ್ಚಿಕ ರಾಶಿಯವರಿಗೆ ಎರಡೂವರೆ ವರ್ಷದ ಶನಿ ದೆಸೆ ಆರಂಭವಾಗುತ್ತದೆ.  ಈ ಸಮಯದಲ್ಲಿ, ಈ ರಾಶಿಯವರು ತುಂಬಾ ಜಾಗರೂಕರಾಗಿರಬೇಕು ಏಕೆಂದರೆ ಶನಿಯು ಆರ್ಥಿಕ, ದೈಹಿಕ, ಗೌರವದ ನಷ್ಟವಾಗುವ ಸಾಧ್ಯತೆಗಳು ಹೆಚ್ಚಿರುತ್ತವೆ. ಇದು ಮಾನಸಿಕ ಒತ್ತಡವನ್ನೂ ನೀಡುತ್ತದೆ. 

ಇದನ್ನೂ ಓದಿ : ಇಂದಿನಿಂದ ಕುಂಭ ರಾಶಿಯಲ್ಲಿ ಶನಿಯ ಸಂಚಾರ: ಈ ರಾಶಿಯವರಿಗೆ ಹಣದ ಸುರಿಮಳೆ

ಈ ರಾಶಿಯವರಿಗೆ ಸಿಗಲಿದೆ ಮುಕ್ತಿ : 
ಶನಿಯು ಇನ್ನೂ ಮಕರ ರಾಶಿಯಲ್ಲಿದ್ದ ಕಾರಣ ಧನು, ಮಕರ, ಕುಂಭ ರಾಶಿಯವರಿಗೆ ಸಾಡೇ ಸಾತಿಯ ಪ್ರಭಾವವಿತ್ತು. ಆದರೆ 29 ಏಪ್ರಿಲ್ 2022 ರಂದು ಅಂದರೆ ಇಂದು ಶನಿಯ ರಾಶಿ ಬದಲಾದ ತಕ್ಷಣ ಧನು ರಾಶಿಯವರಿಗೆ ಸಾಡೇಸಾತಿಯಿಂದ ಮುಕ್ತಿ ಸಿಗುತ್ತದೆ. ಇದರೊಂದಿಗೆ ಮಕರ ರಾಶಿಯವರಿಗೆ ಶನಿದೆಸೆಯ ಕೊನೆಯ ಘಟ್ಟವೂ ಕುಂಭ ರಾಶಿಯವರಿಗೆ ಎರಡನೇ ಘಟ್ಟದ ​​ಸಾಡೇಸಾತಿಯೂ ಆರಂಭವಾಗಲಿದೆ. ಇದಲ್ಲದೆ, ಮಿಥುನ ಮತ್ತು ತುಲಾ ರಾಶಿಯವರ  ಧೈಯ್ಯಾ ಕೂಡಾ  ಕೊನೆಗೊಳ್ಳುತ್ತದೆ. 

ಶನಿಯು ಕರ್ಮಕ್ಕೆ ತಕ್ಕಂತೆ ಫಲವನ್ನು ನೀಡುತ್ತಾನೆ :  
ಶನಿ ಗ್ರಹವು ಕಾರ್ಯಗಳಿಗೆ ಅನುಗುಣವಾಗಿ ಫಲವನ್ನು ಕರುಣಿಸುತ್ತಾನೆ. ಆದ್ದರಿಂದ, ಕಾರ್ಯಗಳು ಉತ್ತಮವಾಗಿದ್ದರೆ ಮತ್ತು ಜಾತಕದಲ್ಲಿ ಶನಿಯು ಶುಭ ಸ್ಥಾನದಲ್ಲಿದ್ದರೆ, ವ್ಯಕ್ತಿಯು ಸಾಡೇಸಾತಿ ಮತ್ತು ಧೈಯ್ಯಾದ ಸಮಯದಲ್ಲಿಯೂ ಕೂಡಾ ಬಹಳಷ್ಟು ಹಣವನ್ನು, ಗೌರವ ಮತ್ತು ಸಂತೋಷವನ್ನು ಪಡೆಯುತ್ತಾನೆ. ಇದಲ್ಲದೇ ಶನಿ ಸಾಡೇಸಾತಿಯ  ಸಮಯದಲ್ಲಿ ತುಲಾ, ಮಕರ, ಕುಂಭ, ಮೀನ, ಧನು ರಾಶಿಯವರಿಗೆ ಉಳಿದ ರಾಶಿಯವರಿಗಿರುವಷ್ಟು ತೊಂದರೆ ಇರುವುದಿಲ್ಲ. ಏಕೆಂದರೆ ತುಲಾ ರಾಶಿ ಶನಿಯ ಉತ್ಕೃಷ್ಟ ಚಿಹ್ನೆ. ಮತ್ತೊಂದೆಡೆ, ಶನಿಯು ಮಕರ ರಾಶಿ ಮತ್ತು  ಕುಂಭ ರಾಶಿಯ ಅಧಿಪತಿ. ಇದಲ್ಲದೆ, ಶನಿಯು ಧನು ರಾಶಿ ಮತ್ತು ಮೀನ ರಾಶಿಯ ಅಧಿಪತಿಯಾದ ಗುರುವಿನ ಜೊತೆಗೆ ಸ್ನೇಹವನ್ನು ಹೊಂದಿದ್ದಾನೆ . ಈ ಕಾರಣದಿಂದಾಗಿ, ಈ ರಾಶಿಯವರಿಗೆ ಸಾಡೇಸಾತಿ ಸಮಯದಲ್ಲೂ ಅಂಥಹ ಕಷ್ಟವನ್ನು ಶನಿ ನೀಡುವುದಿಲ್ಲ ಎನ್ನಲಾಗಿದೆ. 

ಇದನ್ನೂ ಓದಿ : Shani Gochar 2022 : ಈ ರಾಶಿಯವರ ಮೇಲೆ ಶನಿ ಕೆಟ್ಟ ಪರಿಣಾಮ : ಅದಕ್ಕೆ ಇಲ್ಲಿವೆ ಪರಿಹಾರ ಕ್ರಮಗಳು!

 

( ಸೂಚನೆ : ಇಲ್ಲಿ ನೀಡಲಾದ ಮಾಹಿತಿಯು ಸಾಮಾನ್ಯ ನಂಬಿಕೆ ಮತ್ತು ಮಾಹಿತಿಯನ್ನು ಆಧರಿಸಿದೆ. ZEE NEWS ಅದನ್ನು ಖಚಿತಪಡಿಸುವುದಿಲ್ಲ.) 

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News