Food For Strong Bones: ದುರ್ಬಲ ಮೂಳೆಗಳನ್ನು ಬಲಿಷ್ಠಗೊಳಿಸುವ ಪ್ರಮುಖ ಆಹಾರಗಳಿವು

Food For Strong Bones: ನಿಮ್ಮ ಆಹಾರದಲ್ಲಿ ಮೂಳೆಗಳನ್ನು ಬಲಪಡಿಸುವಲ್ಲಿ ಪ್ರಮುಖ ಪಾತ್ರ ವಹಿಸುವ ಆಹಾರ ಪದಾರ್ಥಗಳನ್ನು ಸೇರಿಸುವುದು ಬಹಳ ಮುಖ್ಯ.

Written by - Yashaswini V | Last Updated : Jul 23, 2021, 02:20 PM IST
  • ನೀವು ಸೇವಿಸುವ ಆಹಾರವು ನಿಮ್ಮ ಮೂಳೆಗಳ ಮೇಲೆ ನೇರ ಪರಿಣಾಮ ಬೀರುತ್ತದೆ
  • ಮೂಳೆಗಳು ಆರೋಗ್ಯವಾಗಿರಲು ಕ್ಯಾಲ್ಸಿಯಂ ಬಹಳ ಮುಖ್ಯ
  • ಬಲವಾದ ಮೂಳೆಗಳಿಗೆ ಮೆಗ್ನೀಸಿಯಮ್ ಮತ್ತು ಪೊಟ್ಯಾಸಿಯಮ್ ಸಹ ಬಹಳ ಮುಖ್ಯ
Food For Strong Bones: ದುರ್ಬಲ ಮೂಳೆಗಳನ್ನು ಬಲಿಷ್ಠಗೊಳಿಸುವ ಪ್ರಮುಖ ಆಹಾರಗಳಿವು  title=
Food For Strong Bones

Food For Strong Bones: ದೇಹವನ್ನು ಆರೋಗ್ಯಕರವಾಗಿ ಮತ್ತು ಸದೃಢವಾಗಿಡಲು ನಿಮ್ಮ ಎಲುಬುಗಳನ್ನು ದೃಢವಾಗಿರಿಸಿಕೊಳ್ಳಬೇಕು. ನೀವು ಸೇವಿಸುವ ಆಹಾರವು ನಿಮ್ಮ ಮೂಳೆಗಳ ಮೇಲೆ ನೇರ ಪರಿಣಾಮ ಬೀರುತ್ತದೆ. ನಿಮ್ಮ ಮೂಳೆಗಳು ದುರ್ಬಲವಾಗಿದ್ದರೆ ಅದು ನಿಮ್ಮ ಆರೋಗ್ಯದ ಮೇಲೂ ನಕಾರಾತ್ಮಕ ಪರಿಣಾಮ ಬೀರಬಹುದು. ಹಾಗಾಗಿ ನಿತ್ಯ ನಮ್ಮ ಆಹಾರದಲ್ಲಿ  ಮೂಳೆಗಳನ್ನು (Bones) ಬಲಪಡಿಸುವಲ್ಲಿ ಪ್ರಮುಖ ಪಾತ್ರ ವಹಿಸುವ ಆಹಾರ ಪದಾರ್ಥಗಳನ್ನು ಸೇರಿಸುವುದು ಬಹಳ ಮುಖ್ಯ. ಬಲವಾದ ಮೂಳೆಗಳನ್ನು ಪಡೆಯಲು ಕ್ಯಾಲ್ಸಿಯಂ ಮಾತ್ರ ಬೇಕಾಗುತ್ತದೆ ಎಂದು ಕೆಲವರು ಭಾವಿಸುತ್ತಾರೆ, ಆದರೆ ಇದರರ್ಥ ನಿಮಗೆ ಇತರ ಅನೇಕ ಪೋಷಕಾಂಶಗಳು ಬೇಕಾಗಿಲ್ಲ ಎಂದಲ್ಲ ಎಂದು ಆಹಾರ ತಜ್ಞರಾದ ಡಾ.ರಂಜನಾ ಸಿಂಗ್ ಹೇಳುತ್ತಾರೆ.

ಮೂಳೆಗಳು ಆರೋಗ್ಯವಾಗಿರಲು ಪೋಷಕಾಂಶಗಳು ಬೇಕಾಗುತ್ತವೆ (Nutrients needed to keep bones healthy):
1. ಮೂಳೆಗಳಿಗೆ ವಿಟಮಿನ್ ಡಿ  (Vitamin D for Bones) :

ದೇಹವು ಕ್ಯಾಲ್ಸಿಯಂ ಹೀರಿಕೊಳ್ಳಲು ಸಾಕಷ್ಟು ವಿಟಮಿನ್ ಡಿ (Vitamin D) ಹೊಂದಿರಬೇಕು. ಏಕೆಂದರೆ ಮೂಳೆಗಳು ಬಲವಾಗಲು ವಿಟಮಿನ್ ಡಿ ಕೂಡ ಬಹಳ ಮುಖ್ಯ. ವಿಟಮಿನ್ ಡಿ ಯ ನೈಸರ್ಗಿಕ ಮೂಲವೆಂದರೆ ಸೂರ್ಯ, ಆದರೆ ನೀವು ಅದನ್ನು ಸುಟ್ಟ/ಬೇಯಿಸಿದ ಸಾಲ್ಮನ್ ಮೀನು (Grilled Salmon Fish) ಅಥವಾ ಹುಳಿ ಪದಾರ್ಥಗಳಿಂದ ಕೂಡ ಪಡೆಯಬಹುದು.

ಇದನ್ನೂ ಓದಿ- Food To Increase Memory: ನೆನಪಿನ ಶಕ್ತಿಯನ್ನು ಹೆಚ್ಚಿಸಲು ಈ 5 ಆಹಾರವನ್ನು ತಪ್ಪದೇ ಸೇವಿಸಿ

2. ಮೂಳೆಗಳಿಗೆ ಕ್ಯಾಲ್ಸಿಯಂ (Calcium for Bones) :
ಮೂಳೆಗಳು ಆರೋಗ್ಯವಾಗಿರಲು ಕ್ಯಾಲ್ಸಿಯಂ ಬಹಳ ಮುಖ್ಯ ಎಂದು ಆಹಾರ ತಜ್ಞರಾದ ಡಾ.ರಂಜನಾ ಸಿಂಗ್ ಹೇಳಿದ್ದಾರೆ. ದೇಹದಲ್ಲಿ ಸಾಕಷ್ಟು ಕ್ಯಾಲ್ಸಿಯಂ ಇಲ್ಲದಿದ್ದರೆ, ಮೂಳೆಗಳು ದುರ್ಬಲಗೊಳ್ಳಬಹುದು. ಆದ್ದರಿಂದ, ಆಹಾರದಲ್ಲಿ ಕ್ಯಾಲ್ಸಿಯಂ (Calcium) ಸಮೃದ್ಧವಾಗಿರುವ ಪದಾರ್ಥಗಳನ್ನು ಸೇರಿಸಿ. ಡೈರಿ ಉತ್ಪನ್ನಗಳು, ಚೀಸ್, ಮೊಸರಿನಂತಹ ಹಾಲಿನ ಉತ್ಪನ್ನಗಳನ್ನು ನಿಮ್ಮ ಆಹಾರದಲ್ಲಿ ಸೇರಿಸಿಕೊಳ್ಳಬೇಕು. ಇದು ಆಸ್ಟಿಯೊಪೊರೋಸಿಸ್ ನಿಂದ ರಕ್ಷಿಸುವ ಒಂದು ಮಾರ್ಗವಾಗಿದೆ. ಕ್ಯಾಲ್ಸಿಯಂಗಾಗಿ, ನೀವು ಬಾದಾಮಿ, ಅಕ್ಕಿ ಅಥವಾ ಸೋಯಾದಿಂದ ತಯಾರಿಸಿದ ವಸ್ತುಗಳನ್ನು ಸಹ ಆಹಾರದಲ್ಲಿ ಸೇವಿಸಬಹುದು. ಕೋಸುಗಡ್ಡೆ, ಸಾಲ್ಮನ್ ಮೀನು, ಹಸಿರು ಸೊಪ್ಪು ತರಕಾರಿಗಳು ಮತ್ತು ದ್ವಿದಳ ಧಾನ್ಯಗಳಲ್ಲಿಯೂ ಕ್ಯಾಲ್ಸಿಯಂ ಕಂಡುಬರುತ್ತದೆ.

3. ಮೂಳೆಗಳಿಗೆ ಪ್ರೋಟೀನ್  (Protein for Bones) :
ಡಾ. ರಂಜನಾ ಸಿಂಗ್ ಅವರ ಪ್ರಕಾರ, ಮೂಳೆಗಳಿಗೆ ಶಕ್ತಿ ತರಲು ಪ್ರೋಟೀನ್  (Protein for Bones) ಕೂಡ ಅಗತ್ಯ. ಮೂಳೆ ಮುರಿತದ ನಂತರ ನಿಮ್ಮ ದೇಹವನ್ನು ಸರಿಪಡಿಸಲು ಪ್ರೋಟೀನ್ ಕೆಲಸ ಮಾಡುತ್ತದೆ. ಹಾಲು, ಚೀಸ್, ಮೊಸರು ಪ್ರೋಟೀನ್‌ನ ಉತ್ತಮ ಮೂಲಗಳಾಗಿವೆ. ಇದಲ್ಲದೆ ಕುಂಬಳಕಾಯಿ ಬೀಜಗಳು, ಕಡಲೆಕಾಯಿ ಮತ್ತು ಸೀಗಡಿಗಳಲ್ಲಿಯೂ ಉತ್ತಮ ಪ್ರಮಾಣದ ಪ್ರೋಟೀನ್ ಕಂಡುಬರುತ್ತದೆ.

ಇದನ್ನೂ ಓದಿ- ಹಾಲು ಯಾವಾಗ ಕುಡಿದರೆ ಒಳ್ಳೆಯದು..! ಸಿಂಪಲ್ ಹೆಲ್ತ್ ಟಿಪ್ಸ್

4. ಮೆಗ್ನೀಸಿಯಮ್ ಮತ್ತು ಪೊಟ್ಯಾಸಿಯಮ್ ಸಹ ಬಹಳ ಮುಖ್ಯ (Magnesium and Potassium):
ಬಲವಾದ ಮೂಳೆಗಳಿಗೆ ಮೆಗ್ನೀಸಿಯಮ್ ಮತ್ತು ಪೊಟ್ಯಾಸಿಯಮ್ ಸಹ ಬಹಳ ಮುಖ್ಯ. ಇದಕ್ಕಾಗಿ ಪಾಲಕ ಮತ್ತು ಸೋಯಾಬೀನ್ ಮುಂತಾದವುಗಳನ್ನು ನೀವು ಆಹಾರದಲ್ಲಿ ಸೇರಿಸಿಕೊಳ್ಳಬಹುದು. ಮೂಳೆಗಳಿಗೆ ವಿಟಮಿನ್ ಕೆ, ವಿಟಮಿನ್ ಸಿ ಮತ್ತು ವಿಟಮಿನ್ ಎ ಕೂಡ ಬಹಳ ಮುಖ್ಯ. ಹಾಗಾಗಿ ನಿಮ್ಮ ಆಹಾರದಲ್ಲಿ ಸಿಟ್ರಸ್ ಹಣ್ಣುಗಳು, ಟೊಮ್ಯಾಟೊ, ಕ್ಯಾರೆಟ್, ಹಸಿರು ತರಕಾರಿಗಳು, ಮಾಂಸ, ಮೊಟ್ಟೆ, ಬಾದಾಮಿ ಮತ್ತು ಗೋಡಂಬಿ ಮುಂತಾದವುಗಳನ್ನು ಸೇರಿಸಿಕೊಳ್ಳಬಹುದು.

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ

Trending News