ಮಂಗಳವಾರದಂದು ಈ ವಸ್ತುಗಳನ್ನು ದಾನ ಮಾಡುವುದರಿಂದ ಸಂಪತ್ತಿನ ಸುರಿಮಳೆ

Tuesday Remedies: ಹಿಂದೂ ಧರ್ಮದಲ್ಲಿ ದಾನಕ್ಕೆ ಬಹಳ ಮಹತ್ವವಿದೆ. ಅದರಲ್ಲೂ ಮಂಗಳವಾರದ ದಿನ ಕೆಲವು ಪದಾರ್ಥಗಳನ್ನು ದಾನ ಮಾಡುವುದರಿಂದ ಅಂತಹ ಮನೆಯಲ್ಲಿ ಧನ-ಸಂಪತ್ತು ತುಂಬಿ ತುಳುಕುತ್ತದೆ ಎಂದು ಹೇಳಲಾಗುತ್ತದೆ. 

Written by - Yashaswini V | Last Updated : Jun 13, 2023, 10:46 AM IST
  • ಧಾರ್ಮಿಕ ನಂಬಿಕೆಗಳ ಪ್ರಕಾರ, ಭಗವಾನ್ ಹನುಮಂತನಿಗೆ ಲಾಡು ಎಂದರೆ ಬಲು ಪ್ರೀತಿ.
  • ಹಾಗಾಗಿ, ಮಂಗಳವಾರದ ದಿನ ಆಂಜನೇಯನ ಪೂಜೆಯಲ್ಲಿ ಲಾಡುವನ್ನು ನೇವೇದ್ಯವಾಗಿ ಅರ್ಪಿಸಿ, ಬಳಿಕ ಅದನ್ನು ಬೇರೆಯವರಿಗೆ ಹಂಚಿರಿ.
  • ಈ ರೀತಿ ಮಾಡುವುದರಿಂದ ಸ್ಥಗಿತಗೊಂಡಿರುವ ಕೆಲಸಗಳು ಶೀಘ್ರವೇ ಪುನರಾರಂಭಗೊಳ್ಳುವುದು.
ಮಂಗಳವಾರದಂದು ಈ ವಸ್ತುಗಳನ್ನು ದಾನ ಮಾಡುವುದರಿಂದ ಸಂಪತ್ತಿನ ಸುರಿಮಳೆ  title=

Daan On Mangalawar: ಹಿಂದೂ ಧರ್ಮದಲ್ಲಿ ಪ್ರತಿ ವಾರವೂ ಒಂದೊಂದು ದೇವರಿಗೆ ಮೀಸಲಾಗಿದೆ. ಅಂತೆಯೇ, ಮಂಗಳವಾರವನ್ನು ಶ್ರೀರಾಮನ ಪರಮ ಭಕ್ತ ಆಂಜನೇಯನಿಗೆ ಮೀಸಲಿಡಲಾಗಿದೆ. ಧಾರ್ಮಿಕ ನಂಬಿಕೆಗಳ ಪ್ರಕಾರ, ಮಂಗಳವಾರದಂದು ಕೆಲವು ಪದಾರ್ಥಗಳನ್ನು ದಾನ ಮಾಡುವುದರಿಂದ ಅಂತಯ ಮನೆಯಲ್ಲಿ ಸುಖ-ಶಾಂತಿಯ ಜೊತೆಗೆ ಸಂಪತ್ತು ಕೂಡ ತುಂಬಿ ತುಳುಕುತ್ತದೆ ಎಂದು ಹೇಳಲಾಗುತ್ತದೆ. ಹಾಗಿದ್ದರೆ, ಮಂಗಳವಾರದ ದಿನ ಯಾವ ವಸ್ತುಗಳನ್ನು ದಾನ ಮಾಡುವುದು ಮಂಗಳಕರ ಎಂದು ತಿಳಿಯೋಣ... 

ಆರ್ಥಿಕ ಮುಗ್ಗಟ್ಟಿನಿಂದ ಹೊರಬರಲು ಮಂಗಳವಾರದ ದಿನ ಈ ವಸ್ತುಗಳನ್ನು ದಾನ ಮಾಡಿ:- 
ಕಾರ್ಯ ಸಿದ್ಧಿಗಾಗಿ ಲಾಡು ದಾನ ಮಾಡಿ: 

ಧಾರ್ಮಿಕ ನಂಬಿಕೆಗಳ ಪ್ರಕಾರ, ಭಗವಾನ್ ಹನುಮಂತನಿಗೆ ಲಾಡು ಎಂದರೆ ಬಲು ಪ್ರೀತಿ. ಹಾಗಾಗಿ, ಮಂಗಳವಾರದ ದಿನ ಆಂಜನೇಯನ ಪೂಜೆಯಲ್ಲಿ ಲಾಡುವನ್ನು ನೇವೇದ್ಯವಾಗಿ ಅರ್ಪಿಸಿ, ಬಳಿಕ ಅದನ್ನು ಬೇರೆಯವರಿಗೆ ಹಂಚಿರಿ. ಈ ರೀತಿ ಮಾಡುವುದರಿಂದ ಸ್ಥಗಿತಗೊಂಡಿರುವ ಕೆಲಸಗಳು ಶೀಘ್ರವೇ ಪುನರಾರಂಭಗೊಳ್ಳುವುದು. ಮಾತ್ರವಲ್ಲ, ಭಜರಂಗಬಲಿಯ ಅಪಾರ ಆಶೀರ್ವಾದವೂ ಪ್ರಾಪ್ತಿಯಾಗಲಿದೆ ಎಂದು ನಂಬಲಾಗಿದೆ. 

ಇದನ್ನೂ ಓದಿ- ಸಂಪತ್ತಿನ ಅಧಿದೇವತೆ ಲಕ್ಷ್ಮೀದೇವಿಯ ಪ್ರಿಯ ರಾಶಿಗಳಿವು: ಇವರಿಗಿರಲ್ಲ ಎಂದಿಗೂ ಹಣದ ಕೊರತೆ

ಆರೋಗ್ಯ ಸಮಸ್ಯೆಗಳಿಂದ ಮುಕ್ತಿ ಪಡೆಯಲು ತೆಂಗಿನ ಕಾಯಿ ದಾನ: 
ಹಿಂದೂ ಧರ್ಮದಲ್ಲಿ ತೆಂಗಿನ ಕಾಯಿಗೂ ಕೂಡ ವಿಶೇಷ ಪ್ರಾಮುಖ್ಯತೆ ಇದೆ. ಜ್ಯೋತಿಷ್ಯ ಶಾಸ್ತ್ರದ ಪ್ರಕಾರ ಮಂಗಳವಾರದಂದು ತೆಂಗಿನಕಾಯಿ ದಾನವನ್ನು ಮಂಗಳಕರವೆಂದು ಪರಿಗಣಿಸಲಾಗುತ್ತದೆ.  ಈ ರೀತಿ ಮಾಡುವುದರಿಂದ ನಿಮ್ಮ ಕುಟುಂಬದಲ್ಲಿ ಯಾರಾದರೂ ದೀರ್ಘ ಸಮಯದಿಂದ ಅನಾರೋಗ್ಯದಿಂದ ಬಳಲುತ್ತಿದ್ದರೆ ಮಂಗಳವಾರದ ದಿನ ದೇವಸ್ಥಾನದಲ್ಲಿ ಪೂಜೆ ಸಲ್ಲಿಸಿ ತೆಂಗಿನಕಾಯಿಯನ್ನು ದಾನ ಮಾಡುವುದರಿಂದ ಆರೋಗ್ಯ ವೃದ್ಧಿಯಾಗುತ್ತದೆ. 

ಮಂಗಳನ ದೋಷ ಪರಿಹಾರಕ್ಕೆ ಕೆಂಪು ಬಣ್ಣದ ವಸ್ತುಗಳ ದಾನ: 
ಧಾರ್ಮಿಕ ನಂಬಿಕೆಗಳ ಪ್ರಕಾರ, ಹನುಮಂತನಿಗೆ ಕೆಂಪು ಬಣ್ಣ ಎಂದರೆ ಅಚ್ಚು-ಮೆಚ್ಚು ಎಂದು ಹೇಳಲಾಗುತ್ತದೆ. ಹಾಗಾಗಿ, ಮಂಗಳವಾರದ ದಿನ ಕೆಂಪು ಬಣ್ಣದ ವಸ್ತ್ರ, ಹೂವು, ಹಣ್ಣನ್ನು ದಾನ ಮಾಡುವುದನ್ನು ಶುಭಕರ ಎನ್ನಲಾಗುತ್ತದೆ. ಇದರಿಂದ ಮಂಗಳ ದೋಷಕ್ಕೆ ಸಂಬಂಧಿಸಿದ ಸಮಸ್ಯೆಗಳಿಂದ ಮುಕ್ತಿ ಪಡೆಯಬಹುದು ಎಂದು ನಂಬಲಾಗಿದೆ. 

ಇದನ್ನೂ ಓದಿ- ಧನ ಲಾಭಕ್ಕಾಗಿ ಯೋಗಿನಿ ಏಕಾದಶಿಯಂದು ನಿಮ್ಮ ರಾಶಿಗನುಸಾರವಾಗಿ ತಪ್ಪದೇ ಈ ಕೆಲಸ ಮಾಡಿ

ತುಳಸಿ ಎಲೆಗಳ ದಾನ: 
ಮಂಗಳವಾರದ ದಿನ ಹನುಮಂತನ ಪೂಜೆಯಲ್ಲಿ ತುಳಸಿ ದಳ, ತುಳಸಿ ಮಾಲೆಯನ್ನು ಅರ್ಪಿಸಬೇಕು. ಬಳಿಕ ಇದನ್ನು ಬೇರೆಯವರಿಗೆ ದಾನ ಮಾಡುವುದರಿಂದ ಆರ್ಥಿಕ ಸಂಕಷ್ಟಗಳಿಂದ ಮುಕ್ತಿ ಹೊಂದಬಹುದು ಎಂದು ಹೇಳಲಾಗುತ್ತದೆ. 

ಸೂಚನೆ: ಇಲ್ಲಿ ನೀಡಲಾದ ಎಲ್ಲಾ ಮಾಹಿತಿಯು ಸಾಮಾಜಿಕ ಮತ್ತು ಧಾರ್ಮಿಕ ನಂಬಿಕೆಗಳನ್ನು ಆಧರಿಸಿದೆ. Zee ಮೀಡಿಯಾ ಇದನ್ನು ಖಚಿತಪಡಿಸುವುದಿಲ್ಲ. 

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://bit.ly/3LwfnhK 

Instagram Link -  https://bit.ly/3LyfY2l 
Sharechat Link - https://bit.ly/3LCjokI ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ

Trending News