Cooking in Microwave : ಈ ಒತ್ತಡದ ಜೀವನದಲ್ಲಿ, ಪ್ರತಿಯೊಬ್ಬರೂ ಬ್ಯುಸಿಯಾಗಿದ್ದು, ಸಮಯದ ಅಭಾವ ಪ್ರತಿಯೊಬ್ಬರನ್ನೂ ಕಾಡುತ್ತಿದೆ. ಇನ್ನು ಹೊಸ ಹೊಸ ತಂತ್ರಜ್ಞಾನವನ್ನು ಜನ ಅಳವಡಿಸಿಕೊಳ್ಳುವ ಮೂಲಕ, ಬಿಡುವಿಲ್ಲದ ಜೀವನವನ್ನು ಸ್ವಲ್ಪ ಸುಲಭವಾಗಿಸಲು ಪ್ರಯತ್ನಿಸಿಕೊಳ್ಳುತ್ತಿರುತ್ತೇವೆ. ಬಿಡುವಿಲ್ಲದ ವೇಳಾಪಟ್ಟಿಯಿಂದಾಗಿ ಜನರಿಗೆ ಅಡುಗೆ ಮಾಡಲು ಕೂಡಾ ಸಮಯವಿರುವುದಿಲ್ಲ. ಹೀಗಾಗಿ ಸಮಯವನ್ನು ಉಳಿಸುವ ಸಲುವಾಗಿ ಮಹಿಳೆಯರು ಮೈಕ್ರೋವೇವ್ ಬಳಸುತ್ತಾರೆ. ಮೈಕ್ರೋವೇವ್ ಬಳಸುವ ಮೂಲಕ ಬಹಳ ಕಡಿಮೆ ಸಮಯದಲ್ಲಿ ಆಹಾರವನ್ನು ತಯಾರಿಸುವುದು ಸುಲಭವಾಗುತ್ತದೆ. ಆದರೆ ಕೆಲವೊಂದು ಆಹಾರವನ್ನು ಮೈಕ್ರೋವೇವ್ ನಲ್ಲಿ ಬಿಸಿ ಮಾಡಬಾರದು. ಇದರಿಂದ ಕ್ಯಾನ್ಸರ್ ಅಪಾಯ ಎದುರಾಗಬಹುದು.
ಅಣಬೆಗಳು :
ಅಣಬೆ ತಿನ್ನಲು ಎಷ್ಟು ರುಚಿಯಾಗಿರುತ್ತದೆಯೋ ಆರೋಗ್ಯಕ್ಕೂ ಅಷ್ಟೇ ಒಳ್ಳೆಯದು. ಇದರಲ್ಲಿ ಅನೇಕ ಪೋಷಕಾಂಶಗಳು ಕಂಡುಬರುತ್ತವೆ. ಮಶ್ರೂಮ್ ಅನ್ನು ಮೈಕ್ರೋವೇವ್ ನಲ್ಲಿ ಬಿಸಿ ಮಾಡಿದಾಗ, ಅದರ ಎಲ್ಲಾ ಪೋಷಕಾಂಶಗಳು ಕಳೆದುಹೋಗುತ್ತವೆ. ಇದಲ್ಲದೆ, ಮೈಕ್ರೋವೇವ್‌ನಲ್ಲಿ ಬಿಸಿಮಾಡಿದ ಅಣಬೆಗಳನ್ನು ತಿನ್ನುವುದು ಹೊಟ್ಟೆಯ ಸಮಸ್ಯೆಗಳನ್ನು ಉಂಟುಮಾಡುತ್ತದೆ.
ಇದನ್ನೂ ಓದಿ : Tips to Remove Onion Smell: ಎಷ್ಟು ತೊಳೆದರೂ ಈರುಳ್ಳಿ ವಾಸನೆ ಹೋಗುತ್ತಿಲ್ಲವೇ? ಹಾಗಾದ್ರೆ ಈ ಸುಲಭ ಟ್ರಿಕ್ಸ್ ಪಾಲಿಸಿ
ಮೊಟ್ಟೆ :
ಮೈಕ್ರೋವೇವ್‌ನಲ್ಲಿ ಮೊಟ್ಟೆಯನ್ನು ಇಟ್ಟು ಬಾಯಿಲ್ ಮಾಡಬಾರದು. ಯಾಕೆಂದರೆ ಮೈಕ್ರೋವೇವ್‌ನಲ್ಲಿ ಮೊಟ್ಟೆ ಬೇಯುವುದಿಲ್ಲ. ಅಲ್ಲದೆ, ಮೈಕ್ರೋವೇವ್‌ನಲ್ಲಿ ಮೊಟ್ಟೆಯನ್ನು ಬೇಯಿಸಲು ಇಟ್ಟರೆ, ಅದರೊಳಗಿನ ತಾಪಮಾನದಿಂದಾಗಿ, ಮೊಟ್ಟೆಯು ಒಡೆದು ಹೋಗುತ್ತದೆ. ಇದಲ್ಲದೆ, ಮೈಕ್ರೊವೇವ ನಲ್ಲಿ ಬಿಸಿ ಮಾಡಿದಾಗ, ಅದರ ಪೌಷ್ಟಿಕಾಂಶವೂ ಕಡಿಮೆಯಾಗುತ್ತದೆ.
ಅಕ್ಕಿ :
ಅಕ್ಕಿಯನ್ನು ಮೈಕ್ರೊವೇವ್‌ನಲ್ಲಿ ಮತ್ತೆ ಮತ್ತೆ ಬಿಸಿ ಮಾಡುವ ತಪ್ಪನ್ನು ಯಾರೂ ಮಾಡಬೇಡಿ. ಮೈಕ್ರೊವೇವ್‌ನಲ್ಲಿ ಅಕ್ಕಿಯನ್ನು ಬಿಸಿ ಮಾಡುವುದರಿಂದ ಬ್ಯಾಸಿಲಸ್ ಬ್ಯಾಕ್ಟೀರಿಯಾವನ್ನು ಕೊಲ್ಲುತ್ತದೆ. ಇದು ಅತಿಸಾರ ಮತ್ತು ಜೀರ್ಣಕ್ರಿಯೆಯಂತಹ ಸಮಸ್ಯೆಗಳನ್ನು ಉಂಟುಮಾಡುತ್ತದೆ.
ಇದನ್ನೂ ಓದಿ : ಬಿಳಿ ಬಟ್ಟೆಯಲ್ಲಾಗುವ ಹಠಮಾರಿ ಕಲೆಗಳನ್ನು ನಿಮಿಷಗಳಲ್ಲಿ ತೆಗೆದು ಹಾಕುವ ಟ್ರಿಕ್ ಇಲ್ಲಿದೆ
( ಸೂಚನೆ : ಇಲ್ಲಿ ನೀಡಲಾದ ಮಾಹಿತಿಯು ಸಾಮಾನ್ಯ ಮಾಹಿತಿಯನ್ನು ಆಧರಿಸಿದೆ. ಅದನ್ನು ಅಳವಡಿಸಿಕೊಳ್ಳುವ ಮೊದಲು ವೈದ್ಯಕೀಯ ಸಲಹೆಯನ್ನು ತೆಗೆದುಕೊಳ್ಳಿ. ZEE NEWS ಇದನ್ನು ಖಚಿತಪಡಿಸುವುದಿಲ್ಲ.)
ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook, Youtube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.