Diabetes Test: ಮಧುಮೇಹ ತಪಾಸಣೆಯ ವೇಳೆ ಈ ತಪ್ಪು ಮಾಡಬೇಡಿ, ಫಲಿತಾಂಶದ ಮೇಲೆ ಪರಿಣಾಮ ಬೀರುತ್ತದೆ!

Mistakes While Checking Blood Sugar: ಇತ್ತೀಚಿಗೆ ಹಲವು ಜನರು ಸಕ್ಕರೆ ಕಾಯಿಲೆಗೆ ಗುರಿಯಾಗುತ್ತಿದ್ದಾರೆ. ಹೀಗಿರುವಾಗ ಇಂದು ನಾವು ನಿಮಗೆ ರಕ್ತದಲ್ಲಿನ ಸಕ್ಕರೆ ಪ್ರಮಾಣವನ್ನು ತಿಳಿದುಕೊಳ್ಳುವಾಗ ನಡೆಯುವ ಕೆಲ ತಪ್ಪುಗಳು ಮತ್ತು ಅವುಗಳಿಂದ ಆಗುವ ಹಾನಿಯ ಕುರಿತು ಮಾಹಿತಿ ನೀಡಲಿದ್ದೇವೆ.

Written by - Nitin Tabib | Last Updated : Apr 13, 2023, 11:04 PM IST
  • ಇತ್ತೀಚಿನ ದಿನಗಳಲ್ಲಿ ಮಾರುಕಟ್ಟೆಯಲ್ಲಿ ಸುಧಾರಿತ ಗ್ಲುಕೋಮೀಟರ್‌ಗಳು ಬಂದಿವೆ,
  • ಅವುಗಳಿಂದ ರೀಡಿಂಗ್ ಸರಿಯಾಗಿ ಬರುತ್ತವೆ.
  • ಆದರೆ ಕೆಲವೊಮ್ಮೆ ಕೆಲ ತಪ್ಪುಗಳಿಂದಾಗಿ ಮೀಟರ್ ರಕ್ತದಲ್ಲಿನ ಸಕ್ಕರೆಯ ಪ್ರಮಾಣನವನ್ನು ತಪ್ಪಾಗಿ ತೋರಿಸಬಹುದು.
Diabetes Test: ಮಧುಮೇಹ ತಪಾಸಣೆಯ ವೇಳೆ ಈ ತಪ್ಪು ಮಾಡಬೇಡಿ, ಫಲಿತಾಂಶದ ಮೇಲೆ ಪರಿಣಾಮ ಬೀರುತ್ತದೆ! title=
ಮಧುಮೇಹ ತಪಾಸಣೆಯಲ್ಲಾಗುವ ತಪ್ಪುಗಳು!

Mistakes Made While Checking Blood Sugar: ಮಧುಮೇಹವು ಜಗತ್ತಿನ ಅತಿ ದೊಡ್ಡ ರೋಗಗಳಲ್ಲಿ ಒಂದಾಗಿದೆ. ಇಂದು ಅನೇಕ ಜನರು ಈ ರೋಗಕ್ಕೆ ಬಲಿಯಾಗುತ್ತಿದ್ದಾರೆ. ಮಧುಮೇಹದ ಕಾಯಿಲೆಯನ್ನು ಸಕ್ಕರೆ ಕಾಯಿಲೆ ಎಂದೂ ಸಹ ಕರೆಯಲಾಗುತ್ತದೆ. ಒಂದೊಮ್ಮೆ ವ್ಯಕ್ತಿ ಮಧುಮೇಹಕ್ಕೆ ಒಳಗಾದರೆ,  ವ್ಯಕ್ತಿಯು ತನ್ನ ರಕ್ತದಲ್ಲಿನ ಸಕ್ಕರೆಯ ಮೇಲೆ ನಿರಂತರ ನಿಗಾ ವಹಿಸಬೇಕು. ಆದ್ದರಿಂದ ರಕ್ತದಲ್ಲಿನ ಸಕ್ಕರೆ ಹೆಚ್ಚಾದಾಗ ಅಥವಾ ಕಡಿಮೆಯಾದಾಗ, ಸೂಕ್ತವಾದ ಕ್ರಮಗಳನ್ನು ಅಳವಡಿಸಿಕೊಳ್ಳುವ ಮೂಲಕ ಅದರ ಮಟ್ಟವನ್ನು ನಿಯಂತ್ರಿಸಿಕೊಳ್ಳಬಹುದು. ಇದಕ್ಕಾಗಿ ಗ್ಲೂಕೋಸ್ ಪರೀಕ್ಷೆಯನ್ನು ನಡೆಸಲಾಗುತ್ತದೆ. ಅಂದಹಾಗೆ, ಇತ್ತೀಚಿನ ದಿನಗಳಲ್ಲಿ ಮಾರುಕಟ್ಟೆಯಲ್ಲಿ ಸುಧಾರಿತ ಗ್ಲುಕೋಮೀಟರ್‌ಗಳು ಬಂದಿವೆ, ಅವುಗಳಿಂದ ರೀಡಿಂಗ್ ಸರಿಯಾಗಿ ಬರುತ್ತವೆ. ಆದರೆ ಕೆಲವೊಮ್ಮೆ ಕೆಲ ತಪ್ಪುಗಳಿಂದಾಗಿ ಮೀಟರ್ ರಕ್ತದಲ್ಲಿನ ಸಕ್ಕರೆಯ ಪ್ರಮಾಣನವನ್ನು ತಪ್ಪಾಗಿ ತೋರಿಸಬಹುದು ಮತ್ತು ಇದು ನಿಮ್ಮ ಆರೋಗ್ಯವನ್ನು ಅಪಾಯಕ್ಕೆ ತಳ್ಳುವ ಸಾಧ್ಯತೆ ಇದೆ. ಇಂತಹ ಪರಿಸ್ಥಿತಿಯಲ್ಲಿ, ನೀವು ಮಾಡುವ ತಪ್ಪುಗಳನ್ನು ತಪ್ಪಿಸಬೇಕಾದ ಅವಶ್ಯಕತೆ ಇದೆ. ಆ ತಪ್ಪುಗಳು ಯಾವುವು ತಿಳಿದುಕೊಳ್ಳೋಣ ಬನ್ನಿ, 

ರಕ್ತದಲ್ಲಿನ ಸಕ್ಕರೆ ಪ್ರಮಾಣ ಪರಿಶೀಲಿಸುವಾಗ ಈ ತಪ್ಪುಗಳನ್ನು ಮಾಡಬೇಡಿ
ತುಂಬಾ ಕಾವು ಅಥವಾ ತಂಪಾದ ಪರಿಸ್ಥಿತಿಯಲ್ಲಿ ಪರೀಕ್ಷಿಸಬೇಡಿ

ಹವಾಮಾನವು ತುಂಬಾ ಬಿಸಿಯಾಗಿದ್ದರೆ ಅಥವಾ ತುಂಬಾ ತಂಪಾಗಿದ್ದರೆ, ನಿಮ್ಮ ಗ್ಲುಕೋಮೀಟರ್ ತಪ್ಪಾದ ರೀಡಿಂಗ್ ನಮಗೆ ತೋರಿಸಬಹುದು. ತಂಪಾದ ವಾತಾವರಣದಲ್ಲಿ ಕಡಿಮೆ ರೀಡಿಂಗ್ ಮತ್ತು ಬಿಸಿ ವಾತಾವರಣದಲ್ಲಿ ಹೆಚ್ಚು ರೀಡಿಂಗ್ ಬರುವ ಸಾಧ್ಯತೆ ಇರುತ್ತದೆ.  ಹೀಗಾಗಿ ತಾಪಮಾನವು ಸಾಮಾನ್ಯವಾಗಿರುವ ಸ್ಥಳದಲ್ಲಿ ಕುಳಿತುಕೊಳ್ಳುವ ಮೂಲಕ ನೀವು ರಕ್ತದಲ್ಲಿನ ಸಕ್ಕರೆಯ ರೀಡಿಂಗ್ ತೆಗೆದುಕೊಳ್ಳಲು ಪ್ರಯತ್ನಿಸಬೇಕು.

ಕೈ ತೊಳೆಯದೆ ಸಕ್ಕರೆಯನ್ನು ಪ್ರಮಾಣ ಪರೀಕ್ಷಿಸಬೇಡಿ
ನಿಮ್ಮ ಕೈಗಳನ್ನು ಶುಚಿಗೊಳಿಸಿದ ಬಳಿಕವೇ ನೀವು ರಕ್ತದಲ್ಲಿನ ಸಕ್ಕರೆ ಪ್ರಮಾಣವನ್ನು ಯಾವಾಗಲೂ ಪರಿಶೀಲಿಸಬೇಕು. ಏಕೆಂದರೆ ನಿಮ್ಮ ಕೈಯಲ್ಲಿರುವ ಧೂಳು, ಮಣ್ಣು ಅಥವಾ ಸಿಹಿ ವಸ್ತುಗಳಿಂದಾಗಿ ಅನೇಕ ಬಾರಿ ರೀಡಿಂಗ್ ತಪ್ಪು ಬರುವ ಸಾಧ್ಯತೆ ಇರುತ್ತದೆ.  ರಕ್ತದಲ್ಲಿನ ಸಕ್ಕರೆಯನ್ನು ಪರೀಕ್ಷಿಸುವ ಮೊದಲು ನೀವು ಏನನ್ನಾದರೂ ತಿಂದಿದ್ದರೆ, ನಿಸ್ಸಂಶಯವಾಗಿ ಅದರ ಕೆಲವು ಭಾಗವು ನಿಮ್ಮ ಬೆರಳುಗಳಲ್ಲಿ ಅಂಟಿಕೊಂಡಿರುತ್ತದೆ, ಅವು ರೀಡಿಂಗ್ ಮೇಲೆ ಪ್ರಭಾವ ಬೀರಬಹುದು. ಆದ್ದರಿಂದ, ಯಾವಾಗಲೂ ಕೈಗಳನ್ನು ಚೆನ್ನಾಗಿ ತೊಳೆದ ನಂತರವೇ ರೀಡಿಂಗ್ ತೆಗೆದುಕೊಳ್ಳಿ.

ಇದನ್ನೂ ಓದಿ-Giloy Health Benefits: ಪುರುಷರ ಹಲವು ಲೈಂಗಿಕ ಸಮಸ್ಯೆಗಳಿಗೆ ರಾಮಬಾಣ ಈ ಬಳ್ಳಿ?

ಆಹಾರ-ತಿಂಡಿ ಸೇವಿಸಿದ ತಕ್ಷಣ ರಕ್ತದಲ್ಲಿನ ಸಕ್ಕರೆಯನ್ನು ಪರೀಕ್ಷಿಸುವುದು
ಆಹಾರ- ತಿಂಡಿ ಸೇವನೆಯ ತಕ್ಷಣ ನಿಮ್ಮ ರಕ್ತದಲ್ಲಿನ ಸಕ್ಕರೆಯನ್ನು ನೀವು ಪರಿಶೀಲಿಸಿದರೆ, ನಿಮ್ಮ ರಕ್ತದಲ್ಲಿನ ಸಕ್ಕರೆ ಯಾವಾಗಲೂ ಅಧಿಕವಾಗಿರುತ್ತದೆ. ಆದ್ದರಿಂದ, ಆಹಾರ, ಉಪಹಾರ ಅಥವಾ ಯಾವುದೇ ಭಾರವಾದ ವಸ್ತುಗಳನ್ನು ತಿಂದ ತಕ್ಷಣ ನೀವು ರಕ್ತದಲ್ಲಿನ ಸಕ್ಕರೆ ಪ್ರಮಾಣವನ್ನು ಪರಿಶೀಲಿಸಬಾರದು.

ಇದನ್ನೂ ಓದಿ-Diabetic Sugar: ನಿಮ್ಮ ಆಹಾರದಲ್ಲಿ ಈ ಸಕ್ಕರೆಯನ್ನು ಬಳಸಿ, ಮಧುಮೇಹದಿಂದ ದೂರ ಉಳಿಯಿರಿ!

(ಹಕ್ಕುತ್ಯಾಗ- ಈ ಲೇಖನದಲ್ಲಿ ನೀಡಲಾಗಿರುವ ಮಾಹಿತಿ ಸಾಮಾನ್ಯ ಜ್ಞಾನ ಹಾಗೂ ಮನೆಮದ್ದು ಮಾಹ್ತಿಯನ್ನು ಆಧರಿಸಿವೆ. ಅನುಸರಿಸುವ ಮುನ್ನ ವೈದ್ಯಕೀಯ ಸಲಹೆ ಪಡೆದುಕೊಳ್ಳಿ. ಜೀ ಕನ್ನಡ ನ್ಯೂಸ್ ಈ ಮಾಹಿತಿಯನ್ನು ಪುಷ್ಠಿಕರಿಸುವುದಿಲ್ಲ)

ಇದನ್ನೂ ನೋಡಿ-

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

 

Trending News