ಆಯುರ್ವೇದದಲ್ಲಿ ಬಳಸುವ ಈ ಎಲೆ ಶುಗರ್ ಅನ್ನು ಸಂಪೂರ್ಣವಾಗಿ ನಿಯಂತ್ರಿಸುತ್ತದೆ

ಇನ್ಸುಲಿನ್ ಸಸ್ಯ ರಕ್ತದಲ್ಲಿನ ಸಕ್ಕರೆಯನ್ನು ನಿಯಂತ್ರಿಸುವುದಲ್ಲದೆ, ಕೆಮ್ಮು, ಶೀತ, ಚರ್ಮದ ಸೋಂಕು, ಕಣ್ಣಿನ ಸೋಂಕು, ಶ್ವಾಸಕೋಶದ ಕಾಯಿಲೆಗಳು, ಅಸ್ತಮಾ, ಅತಿಸಾರ, ಮಲಬದ್ಧತೆ ಮುಂತಾದ ಕಾಯಿಲೆಗಳಲ್ಲಿಯೂ ಇದನ್ನು ಬಳಸಲಾಗುತ್ತದೆ.   

Written by - Ranjitha R K | Last Updated : Jun 14, 2022, 11:16 AM IST
  • ಕ್ಯಾಕ್ಟಸ್ ಪಿಕ್ಟಸ್ ಎಲೆಗಳು ಮಧುಮೇಹ ರೋಗಿಗಳಿಗೆ ತುಂಬಾ ಉಪಯುಕ್ತ ವಾಗಿದೆ.
  • ಇದು ರಕ್ತದಲ್ಲಿನ ಸಕ್ಕರೆಯನ್ನು ನಿಯಂತ್ರಣದಲ್ಲಿಡುತ್ತದೆ.
  • ನೀರು ರಕ್ತದಲ್ಲಿನ ಸಕ್ಕರೆಯನ್ನು ನಿಯಂತ್ರಿಸುತ್ತದೆ
 ಆಯುರ್ವೇದದಲ್ಲಿ ಬಳಸುವ ಈ ಎಲೆ  ಶುಗರ್ ಅನ್ನು ಸಂಪೂರ್ಣವಾಗಿ ನಿಯಂತ್ರಿಸುತ್ತದೆ  title=
cactus benefits (file photo)

ಬೆಂಗಳೂರು : ಆಯುರ್ವೇದದಲ್ಲಿ ಇನ್ಸುಲಿನ್ ಸಸ್ಯಗಳಿಗೆ ಹೆಚ್ಚಿನ ಪ್ರಾಮುಖ್ಯತೆ ಇದೆ. ಇದರ ವೈಜ್ಞಾನಿಕ ಹೆಸರು ಕ್ಯಾಕ್ಟಸ್ ಪಿಕ್ಟಸ್. ಇದನ್ನು ಬೇರೆ ಬೇರೆ ಹೆಸರುಗಳಲ್ಲಿ ಕರೆಯಲಾಗುತ್ತದೆ. ಇದರ ಎಲೆಗಳ ರುಚಿ ಭಾರೀ ಹುಳಿ. ಆದರೂ ಇದು ಮಧುಮೇಹ ರೋಗಿಗಳಿಗೆ  ಇದು ಖಂಡಿತವಾಗಿಯೂ ಪರಿಹಾರವನ್ನು ನೀಡುತ್ತದೆ ಎಂದು ಹೇಳಲಾಗುತ್ತದೆ.  

ಸಕ್ಕರೆ ನಿಯಂತ್ರಣಕ್ಕೆ ಸಹಕಾರಿ :
ಇನ್ಸುಲಿನ್ ಸಸ್ಯ ರಕ್ತದಲ್ಲಿನ ಸಕ್ಕರೆಯನ್ನು ನಿಯಂತ್ರಿಸುವುದಲ್ಲದೆ, ಕೆಮ್ಮು, ಶೀತ, ಚರ್ಮದ ಸೋಂಕು, ಕಣ್ಣಿನ ಸೋಂಕು, ಶ್ವಾಸಕೋಶದ ಕಾಯಿಲೆಗಳು, ಅಸ್ತಮಾ, ಅತಿಸಾರ, ಮಲಬದ್ಧತೆ ಮುಂತಾದ ಕಾಯಿಲೆಗಳಲ್ಲಿಯೂ ಇದನ್ನು ಬಳಸಲಾಗುತ್ತದೆ. ಈ ಸಸ್ಯದ ಒಂದು ಎಲೆಯು ಅನೇಕ ವಿಧದ ಕಾಯಿಲೆಗಳಲ್ಲಿ ಉಪಯುಕ್ತವಾಗಿದೆ. 

ಇದನ್ನೂ ಓದಿ :  ಕೊಲೆಸ್ಟ್ರಾಲ್ ನಿಯಂತ್ರಣದಲ್ಲಿಡಲು ಪರಿಣಾಮಕಾರಿಯಾಗಿವೆ ಈ ನಾಲ್ಕು ಡ್ರೈ ಫ್ರೂಟ್ಸ್ ..!

ರಕ್ತದಲ್ಲಿನ ಸಕ್ಕರೆಯ ಲಕ್ಷಣಗಳು :
ರಕ್ತದಲ್ಲಿನ ಸಕ್ಕರೆಯು ಹೆಚ್ಚಾದಾಗ, ವ್ಯಕ್ತಿಯು ಸರಿಯಾಗಿ ನಿದ್ರಿಸುವುದಿಲ್ಲ. ಪದೇ ಪದೇ ಬಾಯಾರಿಕೆಯಾಗುತ್ತಿರುತ್ತದೆ. ದೃಷ್ಟಿ ಮಂದವಾಗುತ್ತದೆ. ಆಗಾಗ ಮೂತ್ರ ವಿಸರ್ಜನೆ ಮಾಡಬೇಕು ಎಂದು ಅನ್ನಿಸುತ್ತದೆ.  ಮತ್ತೊಂದೆಡೆ, ರಕ್ತದಲ್ಲಿನ ಸಕ್ಕರೆ ಅಂಶ ಕಡಿಮೆಯಾದಾಗ ನಡುಕ, ಹಸಿವು, ಬೆವರು, ಚಡಪಡಿಕೆ ಮತ್ತು ಕಿರಿಕಿರಿಯುಂಟಾಗುತ್ತದೆ.

ನೀರು ರಕ್ತದಲ್ಲಿನ ಸಕ್ಕರೆಯನ್ನು ನಿಯಂತ್ರಿಸುತ್ತದೆ :
ರಕ್ತದಲ್ಲಿನ ಸಕ್ಕರೆಯ ಮಟ್ಟವನ್ನು ಕಡಿಮೆ ಮಾಡಲು ನೀರು ಸಹ ಪ್ರಯೋಜನಕಾರಿ. ಸರಿಯಾದ ಪ್ರಮಾಣದಲ್ಲಿ ನೀರು ಕುಡಿದರೆ ಅದು ಕೂಡಾ ನಿಮ್ಮ ಸಕ್ಕರೆ ಮಟ್ಟವನ್ನು ನಿಯಂತ್ರಿಸುತ್ತದೆ. ಮೂತ್ರಪಿಂಡವು ನೀರಿನ ಮೂಲಕ ದೇಹದಿಂದ ಟಾಕ್ಸಿನ್ ತೆಗೆದುಹಾಕುವ ಕೆಲಸ ಮಾಡುತ್ತದೆ.  

ಇದನ್ನೂ ಓದಿ :  ಈ ಎರಡು ವಿಚಾರಗಳ ಬಗ್ಗೆ ಎಚ್ಚರ ವಹಿಸಿದರೆ ಸಾಕು ಸದಾ ಆರೋಗ್ಯವಾಗಿರುತ್ತದೆ ಹೃದಯ ..!

 

( ಸೂಚನೆ : ಇಲ್ಲಿ ನೀಡಲಾದ ಮಾಹಿತಿಯು ಮನೆಮದ್ದುಗಳು ಮತ್ತು ಸಾಮಾನ್ಯ ಮಾಹಿತಿಯನ್ನು ಆಧರಿಸಿದೆ. ಅದನ್ನು ಅಳವಡಿಸಿಕೊಳ್ಳುವ ಮೊದಲು,  ವೈದ್ಯಕೀಯ ಸಲಹೆಯನ್ನು ತೆಗೆದುಕೊಳ್ಳಿ. ZEE NEWS ಇದನ್ನು ಖಚಿತಪಡಿಸುವುದಿಲ್ಲ.)

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.
  

Trending News