Vastu Tips: ಮನೆಗೆ ಶ್ರೆಯೋಭಿವೃದ್ಧಿ ತರುತ್ತದೆ ಈ ವೃಕ್ಷ, ಆದರೆ ವಾಸ್ತು ನಿಯಮಗಳ ಬಗ್ಗೆ ಕಾಳಜಿವಹಿಸಿ

Shami Plants: ಹಿಂದೂ ಧರ್ಮಗ್ರಂಥಗಳಲ್ಲಿ ಶಮಿ ಗಿಡಕ್ಕೆ ವಿಶೇಷ ಮಹತ್ವವಿದೆ. ಅನೇಕ ರೀತಿಯ ವಾಸ್ತು ದೋಷಗಳು ಶಮಿ ಸಸ್ಯವನ್ನು ತೊಡೆದುಹಾಕುತ್ತದೆ ಎಂಬುದು ಜೋತಿಷ್ಯ ಪಂಡಿತರ ನಂಬಿಕೆಯಾಗಿದೆ.  

Written by - Nitin Tabib | Last Updated : Sep 3, 2022, 10:17 PM IST
  • ಹಿಂದೂ ಧರ್ಮ ಶಾಸ್ತ್ರಗಳಲ್ಲಿ ಶಮಿ ವೃಕ್ಷಕ್ಕೆ ವಿಶೇಷ ಮಹತ್ವವಿದೆ.
  • ಈ ವೃಕ್ಷ ಶನಿ ದೇವರೊಂದಿಗೆ ನೇರ ಸಂಬಂಧ ಹೊಂದಿದೆ.
  • ಶಿವನ ಆರಾಧನೆಯಲ್ಲಿ ಶಮಿ ಹೂವನ್ನು ನೀರಿನಲ್ಲಿ ಹಾಕಿ ಅರ್ಪಿಸಬೇಕು.
Vastu Tips: ಮನೆಗೆ ಶ್ರೆಯೋಭಿವೃದ್ಧಿ ತರುತ್ತದೆ ಈ ವೃಕ್ಷ, ಆದರೆ ವಾಸ್ತು ನಿಯಮಗಳ ಬಗ್ಗೆ ಕಾಳಜಿವಹಿಸಿ title=
Shami Tree Benefits

Shami Plants Benefits: ಹಿಂದೂ ಧರ್ಮ ಶಾಸ್ತ್ರಗಳಲ್ಲಿ ಶಮಿ ವೃಕ್ಷಕ್ಕೆ ವಿಶೇಷ ಮಹತ್ವವಿದೆ. ಈ ವೃಕ್ಷ ಶನಿ ದೇವರೊಂದಿಗೆ ನೇರ ಸಂಬಂಧ ಹೊಂದಿದೆ. ಶಿವನ ಆರಾಧನೆಯಲ್ಲಿ ಶಮಿ ಹೂವನ್ನು ನೀರಿನಲ್ಲಿ ಹಾಕಿ ಅರ್ಪಿಸಬೇಕು. ಇದರಿಂದ ಶಿವನು ಪ್ರಸನ್ನನಾಗುತ್ತಾನೆ ಮತ್ತು ಆತನ ಕೃಪೆಯು ಭಕ್ತರ ಮೇಲೆ ಉಳಿಯುತ್ತದೆ ಎನ್ನಲಾಗುತ್ತದೆ. ಮನೆಯಲ್ಲಿ ಶಮಿ ಗಿಡವನ್ನು ನೆಟ್ಟರೆ ಅನೇಕ ವಾಸ್ತು ದೋಷಗಳು ನಿವಾರಣೆಯಾಗುತ್ತವೆ. ಮನೆಯಲ್ಲಿ ಅದನ್ನು ನೆಡುವ ಮೊದಲು ಈ ಪ್ರಮುಖ ವಾಸ್ತು ನಿಯಮಗಳು ನಿಮಗೆ ತಿಳಿದಿರಬೇಕು.

ಶಮಿ ವೃಕ್ಷ ಸಾಕಷ್ಟು ಪ್ರಯೋಜನಗಳನ್ನು ನೀಡುತ್ತದೆ
ಶಮಿ ಗಿಡವನ್ನು ನೆಟ್ಟರೆ ಮನೆಯಲ್ಲಿನ ದೀರ್ಘಕಾಲದ ಸಮಸ್ಯೆಗಳು ನಿವಾರಣೆಯಾಗುತ್ತವೆ. ಹಣಕಾಸಿಗೆ ಸಂಬಂಧಿಸಿದ ಮನೆಯ ಸಮಸ್ಯೆಯು ಬಗೆಹರಿಯುತ್ತದೆ ಮತ್ತು ಹಣದ ಮನೆ ಪ್ರವೇಶಕ್ಕೆ ಈ ವೃಕ್ಷ ದಾರಿ ಮಾಡಿಕೊಡುತ್ತದೆ. ಮನೆಯಲ್ಲಿ ಶಾಂತಿ ಮತ್ತು ಸಂತೋಷ ಇರುತ್ತದೆ. ಶಮಿ ಗಿಡವು ವಾಸ್ತು ದೋಷಗಳನ್ನು ಹೋಗಲಾಡಿಸುವ ಮೂಲಕ ನಿಮ್ಮ ಕೆಲಸವನ್ನು ಸುಲಭಗೊಳಿಸುತ್ತದೆ.

ವಿವಾಹದಲ್ಲಿನ ಅಡೆತಡೆಗಳನ್ನು ನಿವಾರಿಸುತ್ತದೆ
ವಿವಾಹ ವಯಸ್ಸಿಗೆ ಬಂದ ನಂತರವೂ ಉತ್ತಮ ಸಂಬಂಧ ಕೂಡಿ ಬರದೆ ಇದ್ದಲ್ಲಿ  ಅಥವಾ ಈಗಾಗಲೇ ನಿಶ್ಚಯವಾಗಿರುವ ಮದುವೆಯಲ್ಲಿ ಅಡೆತಡೆಗಳು ಉಂಟಾಗುತ್ತಿದ್ದರೆ ಅಥವಾ ಮದುವೆಯ ವಯಸ್ಸು ಮೀರಿದ್ದರೆ, ಶಮಿ ಗಿಡದಿಂದ ಈ ಸಮಸ್ಯೆಯಿಂದ ಮುಕ್ತಿ ಪಡೆಯಬಹುದು.

ಶನಿಯಸಾಡೇ ಸಾತಿ ಪ್ರಭಾವ ಕಡಿಮೆಯಾಗುತ್ತದೆ
ಶನಿದೇವನ ಸಾಡೇಸಾತಿಯ ಪರಿಣಾಮಗಳು ಹೇಗಿರುತ್ತವೆ ಎಂಬುದು ಎಲ್ಲರಿಗೂ ತಿಳಿದೇ ಇದೆ. ಯಾರ ಜೀವನದಲ್ಲಿ ಅದು ಬಂದು ವಕ್ಕರಿಸುತ್ತದೆಯೋ  ಅವರ ಜೀವನವು ಸಾಕಷ್ಟು ತೊಂದರೆಗೆಳು ಬಂದೊದಗುತ್ತವೆ. ನಿಮ್ಮ ಜೀವನದಲ್ಲಿ ಸಾಡೆ ಸಾತಿಯ ಪ್ರಭಾವವಿದ್ದರೆ, ಶಮಿ ವೃಕ್ಷವು ನಿಮಗೆ ತುಂಬಾ ಪ್ರಯೋಜನಕಾರಿ ಎಂದು ಸಾಬೀತುಪಡಿಸುತ್ತದೆ. ಇದು ಸಾಡೇಸಾತಿಯ ಪರಿಣಾಮವನ್ನು ಕಡಿಮೆ ಮಾಡುತ್ತದೆ. ಶನಿವಾರದಂದು ಶಮಿ ಗಿಡವನ್ನು ಪೂಜಿಸುವುದರಿಂದ ಶ್ರೇಯೋಭಿವೃದ್ಧಿ ನಿಮ್ಮನ್ನು ಹುಡುಕಿಕೊಂಡು ಬರುತ್ತದೆ.

ಇದನ್ನೂ ಓದಿ-Chanakya Niti: ಇಂತಹ ಪರಿಸ್ಥಿತಿಯಲ್ಲಿ ಮನುಷ್ಯನಿಗೆ ಜ್ಞಾನವೂ ವಿಷಕ್ಕೆ ಸಮಾನ

ಶಮಿ ಗಿಡ ನೆಡುವ ನಿಯಮಗಳೇನು?
ಮನೆಯಲ್ಲಿ ಶನಿವಾರದಂದು ಶಮಿ ಗಿಡ ನೆಟ್ಟರೆ ಲಾಭದಾಯಕ. ನೀವು ಇದನ್ನು ದಸರಾ ದಿನದಂದು ಸಹ ಅನ್ವಯಿಸಬಹುದು. ಶಮಿ ಗಿಡವನ್ನು ಮನೆಯ ಮುಖ್ಯ ದ್ವಾರದಲ್ಲಿ ಇರಿಸಲು ಪ್ರಯತ್ನಿಸಿ ಮತ್ತು ಮನೆಯಿಂದ ಹೊರಡುವಾಗ ಅದು ನಿಮ್ಮ ಬಲಗೈಗೆ ಬೀಳುವ ರೀತಿಯಲ್ಲಿ ಅದರ ದಿಕ್ಕನ್ನು ಇರಿಸಿ. ನೀವು ಛಾವಣಿಯ ಮೇಲೆ ಸಸ್ಯವನ್ನು ಇರಿಸುತ್ತಿದ್ದರೆ, ಯಾವಾಗಲೂ ಅದರ ದಿಕ್ಕನ್ನು ದಕ್ಷಿಣಕ್ಕೆ ಇರಿಸಿ. ನೀವು ಈ ಗಿಡವನ್ನು ನೆಡುವ ಸ್ಥಳದಲ್ಲಿ ಯಾವಾಗಲೂ ಶುಚಿತ್ವವನ್ನು ಕಾಪಾಡಿಕೊಳ್ಳಿ.

ಇದನ್ನೂ ಓದಿ-Mercury Retrograde 2022: ಶೀಘ್ರದಲ್ಲಿಯೇ ಕನ್ಯಾ ರಾಶಿಯಲ್ಲಿ ಬುಧನ ವಕ್ರನಡೆ ಆರಂಭ, ಯಾರಿಗೆ ಏನು ಲಾಭ-ನಷ್ಟ?

(ಹಕ್ಕುತ್ಯಾಗ- ಈ ಲೇಖನದಲ್ಲಿ ನೀಡಲಾಗಿರುವ ಮಾಹಿತಿ ಸಾಮಾನ್ಯ ಜ್ಞಾನ ಹಾಗೂ ಧಾರ್ಮಿಕ ನಂಬಿಕೆಯನ್ನು ಆಧರಿಸಿದೆ. ಜೀ ಕನ್ನಡ ನ್ಯೂಸ್ ಈ ಮಾಹಿತಿಯನ್ನು ಪುಷ್ಠಿಕರಿಸುವುದಿಲ್ಲ)

ಇದನ್ನೂ ನೋಡಿ-

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News