ಚರ್ಮದ ಎಲ್ಲಾ ಸಮಸ್ಯೆಗಳಿಗೆ ಪರ್ಫೆಕ್ಟ್‌ ಮನೆಮದ್ದು ಈ ನೀರು..ಟ್ರೈ ಮಾಡಿ ನೋಡಿ!!

Benefits of raisin water: ಒಣದ್ರಾಕ್ಷಿ ತಿನ್ನುವುದರಿಂದ ಹಲವಾರು ಆರೋಗ್ಯ ಪ್ರಯೋಜನಗಳಿವೆ ಎನ್ನುವುದು ಎಲ್ಲರಿಗೂ ಗೊತ್ತು. ಅದರಲ್ಲೂ ದ್ರಾಕ್ಷಿಯನ್ನು ರಾತ್ರಿ ನೀರಿನಲ್ಲೊಇ ನೆನಸಿ ಬೆಳಗಿನ ಜಾವ ತಿನ್ನುವುದು ಇನ್ನು ಉತ್ತಮ ಎನ್ನಲಾಗುತ್ತದೆ. ಆದರೆ ಇದನ್ನು ನೆನಸಿದ ನೀರಿನಿಂದಲೂ ಪ್ರಯೋಜನಗಳಿವೆ ಎಂಬುದು ನಿಮಗೆ ಗೊತ್ತಾ? 

Written by - Savita M B | Last Updated : Oct 3, 2023, 07:19 AM IST
  • ಒಣದ್ರಾಕ್ಷಿ ಯಕೃತ್ತಿನ ಆರೋಗ್ಯಕ್ಕೆ ಪ್ರಯೋಜನಕಾರಿ
  • ಒಣದ್ರಾಕ್ಷಿಯನ್ನು ನೆನಸಿಟ್ಟು ತಿನ್ನುವುದು ಇನ್ನೂ ಉತ್ತಮ
  • ಒಣದ್ರಾಕ್ಷಿ ನೆನಸಿಟ್ಟ ನೀರಿನ ಪ್ರಯೋಜನಗಳ ಬಗ್ಗೆ ತಿಳಿಯಿರಿ
ಚರ್ಮದ ಎಲ್ಲಾ ಸಮಸ್ಯೆಗಳಿಗೆ ಪರ್ಫೆಕ್ಟ್‌ ಮನೆಮದ್ದು ಈ ನೀರು..ಟ್ರೈ ಮಾಡಿ ನೋಡಿ!!  title=

Beauty benefits of raisin water: ಸಾಮಾನ್ಯವಾಗಿ ಒಣದ್ರಾಕ್ಷಿಯನ್ನು ನೆನಸಿಟ್ಟ ನೀರನ್ನು ನೀವು ಚೆಲ್ಲಿರುತ್ತಿರಾ.. ಆದರೆ ಹಾಗೆ ಮಾಡುವ ಮುನ್ನ ಯೋಚಿಸಿ. ಹೌದು ಈ ಒಣದ್ರಾಕ್ಷಿ ಸೇವನೆಯಿಂದ ಮೂತ್ರಪಿಂಡದ ಸಮಸ್ಯೆಗಳು ನಿವಾರಣೆಯಾಗುತ್ತವೆ. ಹಾಗಿದ್ದಾಗ ಅದನ್ನು ನೆನಸಿದ ನೀರಿನಿಂದ ಪ್ರಯೋಜನಗಳಿಲ್ಲದೇ ಇರಲು ಹೇಗೆ ಸಾಧ್ಯ? 

ಹಾಗಾದರೆ ದ್ರಾಕ್ಷಿ ನೆನಸಿಟ್ಟ ನೀರನ್ನು ಹೇಗೆ ಬಳಸಬೇಕು? ಇದು ನಮ್ಮ ಚರ್ಮಕ್ಕೆ ಹೇಗೆ ಉತ್ತಮ? ಇದರಿಂದಾಗುವ ಆರೋಗ್ಯ ಪ್ರಯೋಜನಗಳೇನು ಎನ್ನುವುದನ್ನು ತಿಳಿಯೋಣ. 

* ಚರ್ಮದ ಮೇಲಿನ ಕೊಳೆಯನ್ನು ತೆಗೆದುಹಾಕುತ್ತದೆ
ಪ್ರತಿ ಮಹಿಳೆಯ ಒಂದು ದೊಡ್ಡ ಆಸೆಯೆಂದರೆ ಮೊಡವೆಗಳಿಲ್ಲದ, ಕಾಂತಿಯುತ ತ್ವಚೆಯನ್ನು ಪಡೆಯುವುದು. ಆದರೆ ಇತ್ತೀಚಿನ ಜೀವನ ಶೈಲಿಗಳು, ಮಾಲಿನ್ಯ ಮುಂತಾದ ಕಾರಣಗಳಿಂದ ತ್ವಚೆಯನ್ನು ಸಮಸ್ಯೆ ಮುಕ್ತವಾಗಿಡಲು ಕಷ್ಟವಾಗಿರುತ್ತದೆ. ಹೀಗಿದ್ದಾರ ದ್ರಾಕ್ಷಿ ನೆನಸಿದ ನೀರನ್ನು ಬಳಸಿ. ಏಕೆಕಂದರೆ ಅದರಲ್ಲಿ ಉತ್ಕರ್ಷಣ ನಿರೋಧಕಗಳು, ಚರ್ಮವನ್ನು ಹೊಳೆಯುವಂತೆ ಮಾಡುವ ಪೋಷಕಾಂಶಗಳಿವೆ. 

ಇದನ್ನೂ ಓದಿ-ಕೂದಲಿನ ಎಲ್ಲಾ ಸಮಸ್ಯೆಗಳಿಗೆ ರಾಮಬಾಣ ಈ ಒಂದು ಎಲೆ!

* ಯಂಗ್‌ ಆಗಿ ಕಾಣುವಂತೆ ಮಾಡುತ್ತದೆ
ಕಪ್ಪು ಒಣದ್ರಾಕ್ಷಿಗಳಲ್ಲಿ ಆಂಟಿಆಕ್ಸಿಡೆಂಟ್‌ಗಳಿರುವುದರಿಂದ ಸೂರ್ಯನ ಕಿರಣಗಳಿಂದ ನಮ್ಮ ತ್ವಚೆಗೆ ಯಾವುದೇ ಹಾನಿಯುಂಟಾಗುವುದಿಲ್ಲ. ಜೊತೆಗೆ ಈ ಒಣದ್ರಾಕ್ಷಿಯನ್ನು ಸೇವಿಸುವುದರಿಂದ ನಿಮ್ಮ ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸಬಹುದಾಗಿದೆ. 

* ಒಣದ್ರಾಕ್ಷಿಯನ್ನು ವಿಟಮಿನ್‌ ಎ, ಇ, ಇರುವುದರಿಂದ ಇದು ನಿಮ್ಮ ಚರ್ಮವನ್ನು ಒಳಗಿನಿಂದಲೇ ಪೋಷಿಸುತ್ತದೆ. 

* ಒಣದ್ರಾಕ್ಷಿ ಚರ್ಮದಲ್ಲಿ ಚರ್ಮಕ್ಕೆ ಅಗತ್ಯವಾದ ಪೋಷಕಾಂಶಗಳನ್ನು ನೀಡಿ ತ್ವಚೆ ಒಳಗಿನಿಂದ ಹೊಳೆಯುವಂತೆ ಮಾಡುತ್ತದೆ

* ಒಣದ್ರಾಕ್ಷಿ ದೇಹದಲ್ಲಿ ಕೆಂಪು ರಕ್ತ ಕಣಗಳ ಉತ್ಪಾದನೆಯನ್ನು ಹೆಚ್ಚಸುತ್ತದೆ. ಇದರಿಂದ ನಮ್ಮ ದೇಹ ಬಲಶಾಲಿಯಾಗುತ್ತದೆ

* ಒಣದ್ರಾಕ್ಷಿ ನೀರಿನಲ್ಲಿ ಪೈಬರ್‌ ಇದ್ದು ಅದು ನಮ್ಮ ದೇಹದಲ್ಲಿನ ಕರುಳಿಗೆ ತುಂಬಾ ಒಳ್ಳೆಯದು. 

ಇದನ್ನೂ ಓದಿ-ಈ ಹೂವಿನ ಪೇಸ್ಟ್ ಅನ್ನು ಕೂದಲಿಗೆ ಹಚ್ಚಿದರೆ ಬಿಳಿ ಕೂದಲಿಗೆ ಸಿಗುವುದು ಶಾಶ್ವತ ಪರಿಹಾರ ! ಹಿತ್ತಲಲ್ಲೇ ಅರಳುತ್ತದೆ ಈ ಹೂವು

 

( ಸೂಚನೆ : ಇಲ್ಲಿ ನೀಡಲಾದ ಮಾಹಿತಿಯು ಮನೆಮದ್ದುಗಳು ಮತ್ತು ಸಾಮಾನ್ಯ ಮಾಹಿತಿಯನ್ನು ಆಧರಿಸಿದೆ. ಅದನ್ನು ಅಳವಡಿಸಿಕೊಳ್ಳುವ ಮೊದಲು, ದಯವಿಟ್ಟು ವೈದ್ಯಕೀಯ ಸಲಹೆಯನ್ನು ತೆಗೆದುಕೊಳ್ಳಿ. ZEE NEWS ಇದನ್ನು ಖಚಿತಪಡಿಸುವುದಿಲ್ಲ.)

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/watch?v=uzXzteRDY-k

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ

Trending News