ಸ್ಟೀಲ್ ಪಾತ್ರೆಯಲ್ಲಿ ಈ ಆಹಾರವನ್ನು ಎಂದಿಗೂ ಬೇಯಿಸಬಾರದು ! ಒಮ್ಮೆ ಚೆಕ್ ಮಾಡಿಕೊಳ್ಳಿ

Don't Cook These Foods in Steel Utensils:ಕಬ್ಬಿಣ ಮತ್ತು ಅಲ್ಯೂಮಿನಿಯಂ ಪಾತ್ರೆಗಳಲ್ಲಿ ಅಡುಗೆ ಮಾಡುವಲ್ಲಿ ಅಪಾಯವಿದೆ ಎನ್ನುವುದು ಅನೇಕ ತಜ್ಞರ ಅಭಿಪ್ರಾಯ. ಹಾಗೆಯೇ ಸ್ಟೀಲ್ ಪಾತ್ರೆಗಳಲ್ಲಿ ಆಹಾರ ಬೇಯಿಸುವುದು ಕೂಡಾ  ಅಪಾಯವೇ.   

Written by - Ranjitha R K | Last Updated : Sep 29, 2023, 11:06 AM IST
  • ಪ್ರಾಚೀನ ಕಾಲದಲ್ಲಿ, ಮಣ್ಣಿನ ಪಾತ್ರೆಗಳನ್ನು ಆಹಾರವನ್ನು ಬೇಯಿಸಲು ಬಳಸಲಾಗುತ್ತಿತ್ತು
  • ಉಕ್ಕಿನ ಪಾತ್ರೆಗಳಲ್ಲಿ ಅಡುಗೆ ಮಾಡುವ ಅನಾನುಕೂಲಗಳು
  • ಸ್ಟೀಲ್ ಪಾತ್ರೆಗಳಲ್ಲಿ ಈ ವಸ್ತುಗಳನ್ನು ಬೇಯಿಸಬೇಡಿ
ಸ್ಟೀಲ್ ಪಾತ್ರೆಯಲ್ಲಿ ಈ ಆಹಾರವನ್ನು ಎಂದಿಗೂ ಬೇಯಿಸಬಾರದು ! ಒಮ್ಮೆ ಚೆಕ್ ಮಾಡಿಕೊಳ್ಳಿ  title=

Don't Cook These Foods in Steel Utensils : ಪ್ರಾಚೀನ ಕಾಲದಲ್ಲಿ, ಮಣ್ಣಿನ ಪಾತ್ರೆಗಳನ್ನು ಆಹಾರವನ್ನು ಬೇಯಿಸಲು ಬಳಸಲಾಗುತ್ತಿತ್ತು. ಆದರೆ ಬದಲಾಗುತ್ತಿರುವ ಕಾಲಕ್ಕೆ ತಕ್ಕಂತೆ, ಮಣ್ಣಿನ ಪಾತ್ರೆಗಳ ಜಾಗಕ್ಕೆ  ಸ್ಟೀಲ್ ಪಾತ್ರೆಗಳು ಬಂದವು.   ಇಂದು ಬಹುತೇಕರ ಮನೆಯಲ್ಲಿ ಸ್ಟೀಲ್ ಪಾತ್ರೆಗಳ ಬಳಕೆಯೇ ಜಾಸ್ತಿ.  ಈ ಪಾತ್ರೆಗಳ ಬಳಕೆಯೂ ಸುಲಭ ಅದನ್ನು ಸ್ವಚ್ಚಗೊಳಿಸುವುದು ಕೂಡಾ ಸುಲಭ. ಕಬ್ಬಿಣ ಮತ್ತು ಅಲ್ಯೂಮಿನಿಯಂ ಪಾತ್ರೆಗಳಲ್ಲಿ ಅಡುಗೆ ಮಾಡುವಲ್ಲಿ ಅಪಾಯವಿದೆ ಎನ್ನುವುದು ಅನೇಕ ತಜ್ಞರ ಅಭಿಪ್ರಾಯ. ಹಾಗೆಯೇ ಸ್ಟೀಲ್ ಪಾತ್ರೆಗಳಲ್ಲಿ ಆಹಾರ ಬೇಯಿಸುವುದು ಕೂಡಾ  ಅಪಾಯವೇ. 

ಉಕ್ಕಿನ ಪಾತ್ರೆಗಳಲ್ಲಿ ಅಡುಗೆ ಮಾಡುವ ಅನಾನುಕೂಲಗಳು : 
ಸ್ಟೀಲ್ ಪಾತ್ರೆಗಳಲ್ಲಿ ಆಹಾರವನ್ನು ಬೇಯಿಸುವುದರಿಂದ ಅದರ ಕಣಗಳು ಆಹಾರಕ್ಕೆ ಸೇರುತ್ತವೆ. ಸ್ಟೀಲ್ ಪಾತ್ರೆಗಳ ತಳವು ಬಹಳ ಬೇಗನೆ ತುಂಬಾ ಬಿಸಿಯಾಗುತ್ತದೆ. ಆದ್ದರಿಂದ ಕಡಿಮೆ ಉರಿಯಲ್ಲಿ ದೀರ್ಘಕಾಲ ಬೇಯಿಸಬೇಕಾದ ಆಹಾರವನ್ನು ಸ್ಟೀಲ್ ಪಾತ್ರೆಗಳಲ್ಲಿ ಬೇಯಿಸದೆ ಇರುವುದೇ ಒಳ್ಳೆಯದು. 

ಇದನ್ನೂ ಓದಿ : ಕೂದಲು ದಟ್ಟವಾಗಿ ಬೆಳೆಯಲು ಈ ಆಹಾರಗಳನ್ನು ತಪ್ಪದೇ ಸೇವಿಸಿ...ಬದಲಾವಣೆ ನೋಡಿ!!

-ಉಕ್ಕಿನ ಪಾತ್ರೆಯನ್ನು ಅದರ  ಸ್ಮೋಕ್ ಪಾಯಿಂಟ್ ಮೀರಿ ಬಿಸಿಮಾಡಿದರೆ, ಅದರಲ್ಲಿರುವ ಟ್ರೈಗ್ಲಿಸರೈಡ್‌ಗಳು ಒಡೆಯಲು ಪ್ರಾರಂಭಿಸುತ್ತವೆ. ಹೀಗಾದಾಗ ಅದು ಫ್ರೀ ಫ್ಯಾಟಿ ಆಸಿಡ್ ಆಗಿ ಬದಲಾಗುತ್ತದೆ. ಅವು ನೀರಿನಲ್ಲಿ ಕರಗುವುದಿಲ್ಲ. ಮಾತ್ರವಲ್ಲ ಇದನ್ನು ನಮ್ಮ ಹೊಟ್ಟೆಯು ಸರಿಯಾಗಿ ಜೀರ್ಣಿಸಿಕೊಳ್ಳಲು ಸಾಧ್ಯವಾಗುವುದಿಲ್ಲ. 

ಸ್ಟೀಲ್ ಪಾತ್ರೆಗಳಲ್ಲಿ ಈ ವಸ್ತುಗಳನ್ನು ಬೇಯಿಸಬೇಡಿ : 
ನೀರು ಮತ್ತು ಉಪ್ಪನ್ನು ಕರಗಿಸಿ ತಯಾರಿಸಿದ ಸ್ಟೀಲ್ ಪಾತ್ರೆಗಳಲ್ಲಿ ಕೆಲವೊಂದು ವಸ್ತುಗಳನ್ನು ಬೇಯಿಸುವುದು ಸೂಕ್ತವಲ್ಲ. ಸಾಮಾನ್ಯವಾಗಿ ನಾವು ಸ್ಟೀಲ್ ಪ್ಯಾನ್‌ಗಳಲ್ಲಿ ನೂಡಲ್ಸ್, ಪಾಸ್ತಾ, ಮೆಕರೋನಿಗಳನ್ನು ತಯಾರಿಸುತ್ತೇವೆ. ಇದರ ಉಪ್ಪು ಮತ್ತು ಎಣ್ಣೆಯು  ಪ್ಯಾನ್ ನ ತಳದಲ್ಲಿ  ಸೇರಿಕೊಳ್ಳುತ್ತದೆ. ಇದು ಉಪ್ಪು ನೀರಿನ ಕಲೆಗಳು ಉಳಿಯುತ್ತವೆ. ಅಲ್ಲದೆ ಇದು ರಿಯಾಕ್ಟ್ ಮಾಡಲು ಆರಂಭಿಸುತ್ತದೆ. 

ಇದನ್ನೂ ಓದಿ : ರಾತ್ರಿ ಮಲಗುವಾಗ ಈ ಕೆಲಸಗಳನ್ನು ಮಾಡಿ ಸಾಕು, ಕೆಲವೇ ದಿನಗಳಲ್ಲಿ ತೂಕ ಇಳಿಕೆ ಗ್ಯಾರಂಟಿ!

ಸ್ಟೀಲ್ ಪಾತ್ರೆಗಳನ್ನು ಓವನ್ ನಲ್ಲಿ ಇಡಬೇಡಿ :
ನಾವು ಅನೇಕ ಬಾರಿ ಸ್ಟೀಲ್ ಪಾತ್ರೆಗಳನ್ನು ಓವನ್ ನಲ್ಲಿ ಇಡುತ್ತೇವೆ. ಅದು ಹಾನಿಕಾರಕ ಮತ್ತು ಅಪಾಯಕಾರಿ. ಯಾವುದೇ ಲೋಹವು ವಿದ್ಯುತ್ ವಾಹಕವಾಗಿರುವುದರಿಂದ,  ಬೆಂಕಿ ಹೊತ್ತಿಕೊಳ್ಳುವ ಅಪಾಯವಿರುತ್ತದೆ.  ಇದು ನಮ್ಮ ಜೀವನಕ್ಕೆ ಸಂಚಕಾರವನ್ನು ಉಂಟು ಮಾಡಬಹುದು. 

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://tinyurl.com/7jmvv2nz

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್.

Trending News