Astrology : ಚಂದ್ರ ಬಲ ಮತ್ತು ಗ್ರಹದ ಬಲಗಳ ಬಗ್ಗೆ ತಿಳಿದುಕೊಳ್ಳಿ!

ಶುಭ ಕಾರ್ಯಗಳಿಗೆ ತಾರಾಬಲ ಮತ್ತು ಚಂದ್ರ ಬಲವನ್ನು ನೋಡುವ ಪದ್ದತಿಯಲ್ಲಿದೆ

Last Updated : May 14, 2021, 02:33 PM IST
  • ತಾರಾಬಲ ಮತ್ತು ಚಂದ್ರ ಬಲವನ್ನು ಸಾಮಾನ್ಯವಾಗಿ ವಿವಾಹ, ಗೃಹ ಪ್ರವೇಶ, ಪ್ರಯಾಣ
  • ಶುಭ ಕಾರ್ಯಗಳಿಗೆ ತಾರಾಬಲ ಮತ್ತು ಚಂದ್ರ ಬಲವನ್ನು ನೋಡುವ ಪದ್ದತಿಯಲ್ಲಿದೆ
  • ಪ್ರತಿ ಶುಭ ಕಾರ್ಯ ಮಾಡುವ ಮೊದಲು ತಾರಾಬಲವನ್ನು ನೋಡಿಕೊಂಡು
Astrology : ಚಂದ್ರ ಬಲ ಮತ್ತು ಗ್ರಹದ ಬಲಗಳ ಬಗ್ಗೆ ತಿಳಿದುಕೊಳ್ಳಿ! title=

ತಾರಾಬಲ ಮತ್ತು ಚಂದ್ರ ಬಲವನ್ನು ಸಾಮಾನ್ಯವಾಗಿ ವಿವಾಹ, ಗೃಹ ಪ್ರವೇಶ, ಪ್ರಯಾಣ ಇನ್ನೂ ಮುಂತಾದ ಶುಭ ಕಾರ್ಯಗಳಿಗೆ ತಾರಾಬಲ ಮತ್ತು ಚಂದ್ರ ಬಲವನ್ನು ನೋಡುವ ಪದ್ದತಿಯಲ್ಲಿದೆ.

ಪ್ರತಿ ಶುಭ ಕಾರ್ಯ ಮಾಡುವ ಮೊದಲು ತಾರಾಬಲ(Planetary Forces)ವನ್ನು ನೋಡಿಕೊಂಡು ಆ ಕಾರ್ಯವನ್ನು ಮಾಡುವುದು ಶ್ರೇಯಸ್ಕರ ಎಂಬುದು ನಂಬಿಕೆ. 27 ನಕ್ಷತ್ರಗಳನ್ನು 9 ವಿಧವಾಗಿ ವಿಭಾಗಿಸಲ್ಪಟ್ಟಿವೆ ಇವುಗಳನ್ನೇ ತಾರೆಗಳೆಂದು ಕರೆಯುತ್ತಾರೆ.

ಇದನ್ನೂ ಓದಿ : Akshaya Tritiya 2021: ಅಕ್ಷಯ ತೃತೀಯದಲ್ಲಿ ನಿಮ್ಮ ಪ್ರೀತಿಪಾತ್ರರಿಗೆ ಈ ರೀತಿ ಶುಭ ಹಾರೈಸಿ

ತಾರಾಬಲ- ಜನ್ಮನಕ್ಷತ್ರ(Moon Force and Planetary Forces) ಮೊದಲು ಇಷ್ಟಕಾಲದ ನಕ್ಷತ್ರದವರೆಗೆ (ಯಾವ ದಿನ ಶುಭ ಕಾರ್ಯ ಮಾಡಬೇಕೆಂದುಕೊಂಡಿರುತ್ತೀರೊ ಆ ದಿನದ ನಕ್ಷತ್ರ) ಎರಡು ಸೇರಿ ಲೆಕ್ಕಮಾಡಿ
ಒಂಭತ್ತರಿಂದ ಭಾಗಿಸಿ ಬಂದ ಶೇಷವು

ಇದನ್ನೂ ಓದಿ : Daily Horoscope: ದಿನಭವಿಷ್ಯ 14-05-2021 Today astrology

1 ಬಂದರೆ ಜನ್ಮತಾರೆ (ಇದು ಒಳ್ಳೆಯದಲ್ಲ ದೇಹಕ್ಕೆ ತೊಂದರೆಗಳು)

2 ಬಂದರೆ ಸಂಪತ್ತಾರೆ (ಸಂಪತ್ತು ಕೊಡುವುದು)

3 ಬಂದರೆ ವಿಪತ್ತಾರೆ (ಕಾರ್ಯನಾಶ ಮಾಡುವುದು)

4 ಬಂದರೆ ಕ್ಷೇಮತಾರೆ (ಕ್ಷೇಮವನ್ನು ಮಾಡುವುದು)

ಇದನ್ನೂ ಓದಿ : Akshaya Tritiya 2021 : ನಾಳೆ ಅಕ್ಷಯ ತೃತೀಯ ದಿನ ಈ ವಸ್ತುಗಳನ್ನು ದಾನ ಮಾಡಿ ; ಅದರ ಅದೃಷ್ಟ ನೋಡಿ!

5 ಬಂದರೆ ಪ್ರತ್ಯಕ್ತಾರೆ (ಸರ್ವವೂ ವಿರುದ ಪಲಗಳನ್ನು ನೀಡುವುದು)

6 ಬಂದರೆ ಸಾಧನತಾರೆ (ಕಾರ್ಯ ಸಾಧನೆಯಾಗುವುದು)

7 ಬಂದರೆ ವಧತಾರೆ (ಆರೋಗ್ಯಕ್ಕೆ ತೊಂದರೆಯಾಗ ಬಹುದು)

8 ಬಂದರೆ ಮಿತ್ರತಾರೆ (ಸುಖವನ್ನು ಕೊಡುವುದು)

9 ಮತ್ತು 0 ಬಂದರೆ ಪರಮಮೈತ್ರತಾರೆ (ಸುಖ, ಸೌಭಾಗ್ಯ ಕೊಡುವುದು)

2-4-6-8-9 ಶೇಷ ಬಂದರೆ ಒಳ್ಳೆಯದು.

ಇದನ್ನೂ ಓದಿ : Planet Transition: ಈ ರಾಶಿಚಕ್ರದಲ್ಲಿ ನಾಲ್ಕು ಗ್ರಹಗಳ ಸಂಯೋಜನೆ, ಯಾರಿಗೆ ಅದೃಷ್ಟ, ಯಾರಿಗೆ ಸಂಕಷ್ಟ

ಚಂದ್ರ ಬಲ- ಜನ್ಮ ರಾಶಿ ಮೊದಲು ಚಂದ್ರನಿದ್ದ ರಾಶಿಯವರಿಗೆ ಲೆಕ್ಕಿಸಿದರೆ,12 ರಾಶಿಗಳಲ್ಲಿ ಚಂದ್ರ ಬಲವನ್ನು ನಿರ್ಣಯಿಸಬಹುದು. ಜನ್ಮ ರಾಶಿ ಬದಲು ಚಂದ್ರನಿದ್ದ ರಾಶಿಗೆ ಲೆಕ್ಕ ಮಾಡಿ ಚಂದ್ರನು ಒಂದನೆ ಮನೆಯಲ್ಲಿದ್ದರೆ
1 ದೇಹಸೌಖ್ಯ, 2 ಕಲಹ, 3 ದ್ರವ್ಯಲಾಭ, 4 ರೋಗಭಯ, 5 ಕಾರ್ಯವಿಕಲ್ಪ, 6 ಶತ್ರುನಾಶ, 7 ಸೌಖ್ಯ ವೃದ್ದಿ, 8 ಆರೋಗ್ಯವೃದ್ದಿ(Health), 9 ಕಾರ್ಯತಾಮಸ, 10 ಉದ್ಯೋಗವೃದ್ದಿ, 11 ಇಷ್ಟಾರ್ಥಸಿದ್ದಿ 12 ಧನ ವ್ಯಯ.
ಈ ಸ್ಥಾನಗಳಲ್ಲಿ ಚಂದ್ರನಿದ್ದರೆ ಶುಭನೆಂದು ತಿಳಿದು ಕೊಳ್ಳಬೇಕ.ಮೇಲೆ ಹೇಳಿದಂತೆ ತಾರಬಲ ಮತ್ತು ಚಂದ್ರ ಬಲವನ್ನು ಶುಭ ಸ್ಥಾನಗಳಲ್ಲಿ ಇದ್ದರೆ ತಾಯಿ ಮಗನನ್ನು ಕಾಪಾಡಿದಂತೆ ಕಾಪಾಡುತ್ತದೆ. ಸಮಸ್ಯೆಗಳಿಗೆ ಕರೆ ಮಾಡಿ: 9008993001 Call / WhatsApp

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3loQYe 
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

 

Trending News