ಜಮ್ಮು: Amarnath Yatra 2021 - ಜಮ್ಮು ಮತ್ತು ಕಾಶ್ಮೀರದ ವಾರ್ಷಿಕ ಅಮರನಾಥ್ ಯಾತ್ರೆ ಈ ವರ್ಷದ ಜೂನ್ 28 ರಿಂದ ಆರಂಭಗೊಳ್ಳಲಿದ್ದು, ಸಂಪ್ರದಾಯದಂತೆ ಆಗಸ್ಟ್ 22 ರಂದು ರಕ್ಷಾಬಂಧನದ ದಿನ ಈ ಯಾತ್ರೆ ಮುಕ್ತಾಯವಾಗಲಿದೆ. ಈ ಕುರಿತು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ. ಈ ಕುರಿತು ಮಾಹಿತಿ ನೀಡಿರುವ ಅವರು ಶನಿವಾರ ರಾಜಭವನದಲ್ಲಿ ಉಪರಾಜ್ಯಪಾಲರಾಗಿರುವ ಮನೋಜ್ ಸಿನ್ಹಾ (Jammu And Kashmir, Lieutenant Governor Manoj Sinha) ಅವರ ಅಧ್ಯಕ್ಷತೆಯಲ್ಲಿ ನಡೆದ ಶ್ರೀ ಅಮರನಾಥ್ ಶ್ರಾಯಿನ್ ಬೋರ್ಡ್ (Amarnath Shrine Board) ನ 40 ನೇ ಸಭೆಯಲ್ಲಿ ಈ ನಿರ್ಣಯ ಕೈಗೊಳ್ಳಲಾಗಿದೆ ಎಂದು ಹೇಳಿದ್ದಾರೆ. ಈ ಪವಿತ್ರ ಯಾತ್ರೆಗಾಗಿ 37 ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳಲ್ಲಿ ಪಂಜಾಬ್ ನ್ಯಾಷನಲ್ ಬ್ಯಾಂಕ್, ಜಮ್ಮು ಮತ್ತು ಕಾಶ್ಮೀರ ಬ್ಯಾಂಕ್ ಮತ್ತು ಯಸ್ ಬ್ಯಾಂಕ್‌ನ 446 ಆಯ್ದ ಶಾಖೆಗಳಲ್ಲಿ ನೋಂದಣಿ ಪ್ರಕ್ರಿಯೆ ಏಪ್ರಿಲ್ 1 ರಿಂದ ಪ್ರಾರಂಭವಾಗಲಿದೆ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.
ಕಳೆದ ವರ್ಷ ಕೊರೊನಾ ಮಹಾಮಾರಿಯ ಕಾರಣ ಕೇವಲ ಸಾಧುಗಳು ಮಾತ್ರ ಈ ಯಾತ್ರೆಯನ್ನು (Amarnath Yatra) ಕೈಗೊಂಡಿದ್ದರು. 2019ರಲ್ಲಿ ಜಮ್ಮು-ಕಾಶ್ಮೀರದಲ್ಲಿ ಆರ್ಟಿಕಲ್ 370ನ್ನು ತೆಗೆದುಹಾಕುವ ಮೂರುದಿನ ಮೊದಲು ಅಂದರೆ ಆಗಸ್ಟ್ 2ರಂದು "ಉಗ್ರರ ದಾಳಿ ಬೆದರಿಕೆ" ಹಿನ್ನೆಲೆ ಯಾತ್ರೆಯನ್ನು ಅರ್ಧಕ್ಕೆ ನಿಲ್ಲಿಸಲಾಗಿತ್ತು.
ಇದನ್ನೂ ಓದಿ-Vastu Shastra: ಈ 21 ವಸ್ತುಗಳನ್ನು ಮನೆಯಲ್ಲಿಟ್ಟರೆ ಅದೃಷ್ಟವೋ ಅದೃಷ್ಟ!
2019 ರಲ್ಲಿ 3.42 ಲಕ್ಷಕ್ಕೂ ಅಧಿಕ ಭಾವಿಕರು ಅಮರನಾಥ್ ಗುಹೆಯಲ್ಲಿ ಹಿಮಲಿಂಗದ ದರ್ಶನ ಕೈಗೊಂಡಿದ್ದರು. ANI ನಲ್ಲಿ ಪ್ರಕಟಗೊಂಡ ವರದಿಯ ಪ್ರಕಾರ, ಈ ವರ್ಷ ಅಮರನಾಥ್ ಶ್ರಾಯಿನ್ ಬೋರ್ಡ್ ನ ಪೂಜಾರಿಗಳಿಗೆ ಸಿಗುವ ಪರಿಶ್ರಮಧನವನ್ನು ರೂ.1500 ಕ್ಕೆ ಹೆಚ್ಚಿಸಲಾಗಿದೆ ಎಂದು ಜಮ್ಮು-ಆಡಳಿತ ಹೇಳಿದೆ ಎನ್ನಲಾಗಿದೆ. ಈ ಮೊದಲು ಪೂಜಾರಿಗಳಿಗೆ 1 ಸಾವಿರ ಪ್ರತಿದಿನ ಪರಿಶ್ರಮ ಧನ ನೀಡಲಾಗುತ್ತಿತ್ತು ಎಂಬುದು ಇಲ್ಲಿ ಉಲ್ಲೇಖನೀಯ.
ಇದನ್ನೂ ಓದಿ-ಮನೆ ಅಂಗಳದ ತುಳಸಿ ಒಣಗುತ್ತಿದ್ದರೆ ನೀಡುವ ಸಂದೇಶ ಇದು..!
ಜೂನ್ 28ರಂದು ಆಶಾದ ಚತುರ್ಥಿಯ ದಿನ ಆರಂಭ ಗೊಳ್ಳುವ ಈ ಯಾತ್ರೆ 56 ದಿನಗಳ ವರೆಗೆ ನಡೆಯಲಿದ್ದು, 22 ಆಗಸ್ಟ್ ಅಂದರೆ ಶ್ರಾವಣ ಹುಣ್ಣಿಮೆ ಅಂದರೆ ರಕ್ಷಾಬಂಧನದ ದಿನ ಈ ಯಾತ್ರೆ ಮುಕ್ತಾಯಗೊಳ್ಳಲಿದೆ.
ಇದನ್ನೂ ಓದಿ-Rudraksha- ರುದ್ರಾಕ್ಷಿ ಉತ್ಪತ್ತಿಯಾದದ್ದು ಹೇಗೆ, ಅದನ್ನು ಧರಿಸುವುದರಿಂದ ಏನೆಲ್ಲಾ ಪ್ರಯೋಜನ ಗೊತ್ತಾ
ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3loQYe
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.