ಉತ್ತರ ಕರ್ನಾಟಕ ಪ್ರತ್ಯೇಕ ರಾಜ್ಯ: ದೇವೇಗೌಡರಿಗೆ ಬಿಎಸ್ ವೈ ಮೂರು ಪ್ರಶ್ನೆಗಳು

ಉತ್ತರ ಕರ್ನಾಟಕದ ಪ್ರತ್ಯೇಕ ರಾಜ್ಯದ ಹೋರಾಟದ ಕಿಡಿಗೆ ಮುಖ್ಯಮಂತ್ರಿ ಕುಮಾರಸ್ವಾಮಿಯೇ ಕಾರಣ- ಬಿಎಸ್ ವೈ

Last Updated : Aug 3, 2018, 03:06 PM IST
ಉತ್ತರ ಕರ್ನಾಟಕ ಪ್ರತ್ಯೇಕ ರಾಜ್ಯ: ದೇವೇಗೌಡರಿಗೆ ಬಿಎಸ್ ವೈ ಮೂರು ಪ್ರಶ್ನೆಗಳು title=

ಬೆಂಗಳೂರು: ಉತ್ತರ ಕರ್ನಾಟಕದ ಪ್ರತ್ಯೇಕ ರಾಜ್ಯದ ಹೋರಾಟದ ಕಿಡಿಗೆ ಮುಖ್ಯಮಂತ್ರಿ ಹೆಚ್.ಡಿ. ಕುಮಾರಸ್ವಾಮಿಯೇ ಕಾರಣ ಎಂದು ಆರೋಪಿಸಿರುವ ಪ್ರತಿಪಕ್ಷ ನಾಯಕ ಬಿ.ಎಸ್. ಯಡಿಯೂರಪ್ಪ, ಇದಕ್ಕೆ ಸಂಬಂಧಿಸಿದಂತೆ ಮಾಜಿ ಪ್ರಧಾನಿ ಹೆಚ್.ಡಿ. ದೇವೇಗೌಡ ಅವರಿಗೆ ಮೂರು ಪ್ರಶ್ನೆಗಳನ್ನು ಕೇಳಿದ್ದಾರೆ.

1) ಉತ್ತರ ಕರ್ನಾಟಕಕ್ಕೆ ಲಿಂಗಾಯಿತ ಸಿಎಂಗಳ ಕೊಡುಗೆ ಏನು ಅಂತಾ ಹುಬ್ಬಳ್ಳಿಯಲ್ಲಿ ಪ್ರಶ್ನೆ ಹಾಕಿದ್ದು ಯಾರು..?

2) ಉತ್ತರ ಕರ್ನಾಟಕದಿಂದ ರಾಜ್ಯಕ್ಕೆ ಆದಾಯ ಏನಿದೆ ಎಂದು ಪ್ರಶ್ನಿಸಿದವರು ಯಾರು…?

3) ಚೆನ್ನಪಟ್ಟಣದಲ್ಲಿ  ಜಾತಿ ಆಧಾರದ ಮೇಲೆ ಮತ ಕೇಳಿದ್ದು ಯಾರು…?

ಹೀಗೆ ಮೂರು ಪ್ರಶ್ನೆಗಳನ್ನು ಕೇಳಿರುವ ಯಡಿಯೂರಪ್ಪ, ಈ ಎಲ್ಲಾ ಪ್ರಶ್ನೆಗಳನ್ನು ಕೇಳಿದವರು ಕುಮಾರಸ್ವಾಮಿ. ಆ ಸಮಯದಲ್ಲಿ ದೇವೇಗೌಡರು ಮಗನಿಗೆ ಬುದ್ದಿ ಹೇಳುವ ಬದಲು ಅವರಿಗೆ ಬೆಂಬಲ ನೀಡುತ್ತಿದ್ದಾರೆ. ಹಾಗಾಗಿ ಈ ಪ್ರಶ್ನೆಗಳಿಗೆ ದೇವೇಗೌಡರೇ ಉತ್ತರಿಸಲಿ ಎಂದು ದೇವೇಗೌಡರ ವಿರುದ್ಧ ಕಿಡಿಕಾರಿದ್ದಾರೆ.

Trending News