ಮತ್ತೆ ಪ್ರತಿಧ್ವನಿಸಿದ ಪಂಚಮಸಾಲಿ ಮೀಸಲಾತಿ, ಯತ್ನಾಳ - ಹೆಬ್ಬಾಳ್ಕರ್ ಸದನದ ಬಾವಿಗಿಳಿದು ಪ್ರತಿಭಟನೆ!

ಪಂಚಮಸಾಲಿ ಮೀಸಲಾತಿ ವಿಚಾರ, ಶೂನ್ಯವೇಳೆಯಲ್ಲಿ ಶಾಸಕ ಬಸನಗೌಡ ಯತ್ನಾಳ ಪ್ರಸ್ತಾಪ ಮಾಡಿ ಈವರೆಗೆ ಮೀಸಲಾತಿ ನೀಡಿಲ್ಲ ಎಂದು ವಿಜಯಪುರ ಬಿಜೆಪಿ ಶಾಸಕ ಬಸವನಗೌಡ ಪಾಟೀಲ್ ಯತ್ನಾಳ್ ಹಾಗೂ ಬೆಳಗಾವಿ ಗ್ರಾಮಂತರ ಕಾಂಗ್ರೆಸ್ ಶಾಸಕಿ ಲಕ್ಷ್ಮಿ ಹೆಬ್ಬಾಳ್ಕರ್ ಸದನದ ಬಾವಿಗಿಳಿದು ಪ್ರತಿಭಟನೆ ನಡೆಸಿದರು.

Written by - Prashobh Devanahalli | Edited by - Chetana Devarmani | Last Updated : Sep 20, 2022, 02:04 PM IST
  • ಪಂಚಮಸಾಲಿ ಮೀಸಲಾತಿ ವಿಚಾರ
  • ಮತ್ತೆ ಪ್ರತಿಧ್ವನಿಸಿದ 2A ಮೀಸಲಾತಿ
  • ಯತ್ನಾಳ - ಹೆಬ್ಬಾಳ್ಕರ್ ಸದನದ ಬಾವಿಗಿಳಿದು ಪ್ರತಿಭಟನೆ
ಮತ್ತೆ ಪ್ರತಿಧ್ವನಿಸಿದ ಪಂಚಮಸಾಲಿ ಮೀಸಲಾತಿ, ಯತ್ನಾಳ - ಹೆಬ್ಬಾಳ್ಕರ್ ಸದನದ ಬಾವಿಗಿಳಿದು ಪ್ರತಿಭಟನೆ!  title=
ಸದನ

ಬೆಂಗಳೂರು : ಪಂಚಮಸಾಲಿ ಮೀಸಲಾತಿ ವಿಚಾರ, ಶೂನ್ಯವೇಳೆಯಲ್ಲಿ ಶಾಸಕ ಬಸನಗೌಡ ಯತ್ನಾಳ ಪ್ರಸ್ತಾಪ ಮಾಡಿ ಈವರೆಗೆ ಮೀಸಲಾತಿ ನೀಡಿಲ್ಲ ಎಂದು ವಿಜಯಪುರ ಬಿಜೆಪಿ ಶಾಸಕ ಬಸವನಗೌಡ ಪಾಟೀಲ್ ಯತ್ನಾಳ್ ಹಾಗೂ ಬೆಳಗಾವಿ ಗ್ರಾಮಂತರ ಕಾಂಗ್ರೆಸ್ ಶಾಸಕಿ ಲಕ್ಷ್ಮಿ ಹೆಬ್ಬಾಳ್ಕರ್ ಸದನದ ಬಾವಿಗಿಳಿದು ಪ್ರತಿಭಟನೆ ನಡೆಸಿದರು. ಶೂನ್ಯವೇಳೆಯಲ್ಲಿ ಪಂಚಮಸಾಲಿ 2ಎ ಪಟ್ಟಿಗೆ ಸೇರಿಸಬೇಕು ಎಂಬ ವಿಚಾರವಾಗಿ ಮಾತಾನ್ನಾಡಿದ ಯತ್ನಾಳ್, ಹಿಂದಿನ ಅಧಿವೇಶನದಲ್ಲಿ ಸಿಎಂ ಭರವಸೆ ಕೊಟ್ಟಿದ್ರು.ಹಿಂದೂಳಿದ ಆಯೋಗದ ವರದಿ ಸರ್ಕಾರ ತರಿಸಿಕೊಂಡಿಲ್ಲ.ಶಿಗ್ಗಾಂವಿ ಸಿಎಂ ಮನೆ ಮುಂದೆ ಪ್ರತಿಭಟನೆ ನಡೆದಿದೆ,ವಾಲ್ಮೀಕಿ ಸಮುದಾಯ ಕೂಡ ಪ್ರತಿಭಟನೆ ನಡೆಯುತ್ತಿದೆ.ಸಿಎಂ ಇದಕ್ಕೆ ಸ್ಪಷ್ಟನೆ ನೀಡಬೇಕು ಅಂತ ಯತ್ನಾ ಒತ್ತಾಯ ಮಾಡಿದರು.

ಇದನ್ನೂ ಓದಿ : ಪ್ರೊಟೀನ್ ಪುಡಿ ಮಾರಾಟ ಬ್ಯಾನ್ ಗೆ ಒತ್ತಾಯ; ಸೂಕ್ತ ಕ್ರಮ ಕೈಗೊಳ್ಳುವುದಾಗಿ ಆಶ್ವಾಸನೆ ನೀಡಿದ ಆರೋಗ್ಯ ಇಲಾಖೆ

ಸಿಎಂ ಬಸವರಾಜ ಬೊಮ್ಮಾಯಿ‌ ಉತ್ತರಿಸಿ,ಇದು ಶೂನ್ಯವೇಳೆಯಲ್ಲಿ ಬರುವ ವಿಚಾರ ಅಲ್ಲ. ಆದ್ರೂ ಅವಕಶ ಕೊಟ್ಟಿದ್ದೀರ.ಮೀಸಲಾತಿ ವಿಚಾರ ಬಹಳ ಸ್ಪಷ್ಟವಾಗಿದೆ,ಇಂದೀರಾ ಸಹಾನಿ ಕೇಸ್ ನಲ್ಲಿ ಉಲ್ಲೇಖಿಸಲಾಗಿದೆ.ಈಗಾಗಲೇ ರಾಜ್ಯದಲ್ಲಿ ೫೦% ಮೀಸಲಾತಿ ಇದೆ.ಹಲವಾರು ಸಮುದಾಯಗಳು ಮೀಸಲಾತಿ ಕೇಳುತ್ತಿವೆ,೫೦% ಮೇಲೆ ಮೀಸಲಾತಿ ಕೊಟ್ಟಿದ್ದನ್ನು ಸುಪ್ರೀಂ ರದ್ದು ಮಾಡಿದೆ.ಎಲ್ಲರಿಗೂ ಮೀಸಲಾತಿ ಬೇಕು ಅಂತ ಆಶಯ ಇದೆ,ಅದರಲ್ಲಿ ತಪ್ಪಿಲ್ಲ, ಎಲ್ಲರಿಗೂ ಮುಂದೆ ಬರುವ ಆಶಯ ಇದೆ.ಪಂಚಮಸಾಲಿ ೨ಎ ಕೇಳುತ್ತಿದ್ದಾರೆ,ಇದರ ಬಗ್ಗೆ ಚರ್ಚೆಯಾಗಬೇಕಿದೆ.ಎಸ್ಟಿದು ಕೂಡ ಚರ್ಚೆಯಾಗಬೇಕಿದೆ.ಸಾಮರಸ್ಯ ಕದಡುವ ಕೆಲಸ ಆಗಬಾರದು.ಕಾನೂನು ಚೌಕಟ್ಟಿನಲ್ಲಿ ಬಗೆ ಹರಿಸಬೇಕಾಗಿದೆ, ಎಂದರು.

ಇದೆ ಸಂದರ್ಭದಲ್ಲಿ ಮಾತಾನ್ನಾಡಿದ ಸಿಎಂ,೨ಎ ದಿಂದ ಎಸ್ಟಿಗೆ ಬರಲು ಕುಲಶಾಸ್ತ್ರ ಅಧ್ಯಯನ ಆಗಬೇಕು.ಈಗಾಗಲೇ ಜಿಲ್ಲಾವರು ಅಧ್ಯಯನ ನಡೆಯುತ್ತಿದೆ.ಬಹಳ ಸಮುದಾಯ‌ ಮೀಸಲಾತಿ ಬೇಡಿಕೆ ಇಟ್ಟಿವೆ.ಮುಂದಿನ ಪರಿಣಾಮ ನೋಡಿ ಕ್ರಮ ತೆಗೆದುಕೊಳ್ಳಬೇಕಿದೆ.ಹಿಂದೂಳಿದ ವರ್ಗದ ಆಯೋಗದ ವರದಿ ಬರಬೇಕು,ಬಂದ ಬಳಿಕ ಸರ್ಕಾರ ಕ್ರಮ ತೆಗದುಕೊಳ್ಳುತ್ತೆ.ಯಾರಿಗೂ ಅನ್ಯಾಯ ಆಗದಂತೆ ಕ್ರಮ ತೆಗೆದುಕೊಳ್ಳುತ್ತೇನೆ,ವೈಜ್ಞಾನಿಕವಾಗಿ ನಿರ್ಧಾರ ಮಾಡಲಾಗುವುದು ಅಂತ ಸಿಎಂ ಉತ್ತರ ನೀಡಿದರು.

ಇದನ್ನೂ ಓದಿ : APMC ತಿದ್ದುಪಡಿ ಕಾಯ್ದೆ ವಾಪಸ್‌ ಪಡೆಯಲ್ಲ : ಸಚಿವ ಎಸ್.ಟಿ ಸೋಮಶೇಖರ್

ನಂತರ ಪಂಚಮಸಾಲಿ ವಿಚಾರವಾಗಿ ಯತ್ನಾಳ ಗೆ ಮಾತನಾಡಲು ಅವಕಾಶ ನೀಡದ ಹಿನ್ನೆಲೆ,ಯತ್ನಾಳ ಅವರಿಗೆ ಮಾತನಾಡಲು ಅವಕಾಶ ನೀಡಿ ಎಂದು ಶಾಸಕಿ ಲಕ್ಷ್ಮಿ ಹೆಬ್ಬಾಳ್ಕರ್ ಒತ್ತಾಯ ಮಾಡಿದರು.ಈ ವೇಳೆ ಹೆಬ್ಬಾಳ್ಕರ್ ಗೆ ಹಲವು ಶಾಸಕರ ಬೆಂಬಲ ನೀಡಿದ್ದು ಸದನದಲ್ಲಿ ಗದ್ದಲ, ಸದನದ ಬಾವಿಗಿಳಿದ ಯತ್ನಾಳ, ಹೆಬ್ಬಾಳ್ಕರ್ ಧರಣಿ ನಡೆಸಿದರು. ಈ ವೇಳೆ ಮಧ್ಯೆ ಪ್ರವೇಶ ಮಾಡಿದ ಸ್ಪೀಕರ್, ಶೂನ್ಯ ವೇಳೆಗೆ ಬಾರದ ವಿಷಯ ಚರ್ಚೆಗೆ ಅವಕಾಶ ‌ಕೊಟ್ಟಿದ್ದೇನೆ.ಸರ್ಕಾರ ಉತ್ತರ‌ ಕೊಟ್ಟಿದೆ, ನಿಮಗೆ ಶೋಭೆ ತರಲ್ಲ.ಯತ್ನಾಳ ನಿಮ್ಮ ಜಾಗಕ್ಕೆ ಬನ್ನಿ ಅಂತ ಸ್ಪೀಕರ್ ಒತ್ತಾಯ ಮಾಡಿದರು. ಚರ್ಚೆಗೆ ಬೇರೆ ಸಮಯ ನಿಗದಿ ಮಾಡಿ ಅಂತ ಸಿಎಂ ಮನವಿ ಮಾಡಿದ್ದಾಗ, ಸಮಯ‌ ನಿಗದಿ ಮಾಡುವುದಾಗಿ ಸ್ಪೀಕರ್ ಕಾಗೇರಿ ಭರವಸೆ ನೀಡಿದರು.

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News