ಇಬ್ಬರು ಮಕ್ಕಳನ್ನು ಟಬ್​ನಲ್ಲಿ ಮುಳುಗಿಸಿ ಕೊಂದು, ಪತ್ನಿಯೂ ಆತ್ಮಹತ್ಯೆ!

ಮೃತರನ್ನು ಲಕ್ಷ್ಮಿ, ಮಕ್ಕಳಾದ ಮೂರು ವರ್ಷದ ಉದಯ್, ಒಂದೂವರೆ ವರ್ಷದ ಭೂಮಿಕಾ ಎಂದು ಗುರುತಿಸಲಾಗಿದೆ.  

Last Updated : Aug 2, 2019, 07:50 AM IST
ಇಬ್ಬರು ಮಕ್ಕಳನ್ನು ಟಬ್​ನಲ್ಲಿ ಮುಳುಗಿಸಿ ಕೊಂದು, ಪತ್ನಿಯೂ ಆತ್ಮಹತ್ಯೆ! title=

ಬಳ್ಳಾರಿ: ಗಂಡ ಮಾಂಸ ತರಲಿಲ್ಲ ಎಂಬ ಕಾರಣಕ್ಕೆ ಸುರುವಾದ ಜಗಳ ಸಾವಿನಲ್ಲಿ ಅಂತ್ಯವಾದ ಘಟನೆ ಬಳ್ಳಾರಿಯಲ್ಲಿ ನಡೆದಿದೆ. 

ರಾತ್ರಿ ಅಡುಗೆಗೆ ಮಾಂಸ ತರುವಂತೆ ಹೆಂಡತಿಯು ಗಂಡನಿಗೆ ಹೇಳಿದ್ದಾಳೆ. ಆದರೆ, ಆತ ಮಾಂಸ ತರದ ಕಾರಣ ಜಗಳ ಮಾಡಿ ರಂಪಾಟ ಮಾಡಿದ ಆಕೆ ಕಡೆಗೆ ಮೊಟ್ಟೆ ಸಾಂಬಾರ್ ಮಾಡಿ ಊಟಕ್ಕೆ ಬಡಿಸಿ ತಾನು ಊಟ ಮಾಡದೆ ಬೇಸರದಲ್ಲಿ ಮಲಗಿದ್ದಾಳೆ. ಬೆಳಿಗ್ಗೆ ಎದ್ದ ಗಂಡ ವೀರೇಶ್ ಎಂದಿನಂತೆ ಕೆಲಸಕ್ಕೆ ಹೋದ ಬಳಿಕ ಆಕೆ ತನ್ನ ಇಬ್ಬರು ಮಕ್ಕಳನ್ನೂ ಟಬ್ ನೀರಿನಲ್ಲಿ ಮುಳುಗಿಸಿ ತಾನೂ ಆತ್ಮಹತ್ಯೆ ಮಾಡಿಕೊಂಡಿದ್ದಾಳೆ. 

ಮೃತರನ್ನು ಲಕ್ಷ್ಮಿ, ಮಕ್ಕಳಾದ ಮೂರು ವರ್ಷದ ಉದಯ್, ಒಂದೂವರೆ ವರ್ಷದ ಭೂಮಿಕಾ ಎಂದು ಗುರುತಿಸಲಾಗಿದೆ.  ಪತಿ ವೀರೇಶ್ ಬಳ್ಳಾರಿಯ ಕೆಎಂಎಫ್ ಕಚೇರಿ ಹಿಂಭಾಗ ಎಂ.ಕೆ.ನಗರದ ಕಟ್ಟಡ ಕಾರ್ಮಿಕನಾಗಿದ್ದ ಎನ್ನಲಾಗಿದೆ. ಘಟನೆ ಬಗ್ಗೆ ಕೌಲ್ ಬಜಾರ್ ಪೊಲೀಸರು ಪರಿಶೀಲನೆ ನಡೆಸಿ ಪ್ರಕರಣ ದಾಖಲಿಸಿಕೊಂಡಿದ್ದಾರೆ.

Trending News