ಶ್ರವಣಬೆಳಗೊಳ ರಾಜ್ಯಾಭಿಷೇಕ ಮಹೋತ್ಸವಕ್ಕೆ ವೆಂಕಯ್ಯನಾಯ್ಡು ಚಾಲನೆ

ಶ್ರವಣಬೆಳಗೊಳದಲ್ಲಿ ಶನಿವಾರ ನಡೆದ ರಾಜ್ಯಾಭಿಷೇಕ ಮಹೋತ್ಸವಕ್ಕೆ ಉಪರಾಷ್ಟ್ರಪತಿ ವೆಂಕಯ್ಯ ನಾಯ್ಡು, ರಾಜ್ಯಪಾಲ ವಜುಭಾಯಿ ವಾಲಾ ಚಾಲನೆ ನೀಡಿದರು.

Last Updated : Feb 10, 2018, 07:19 PM IST
ಶ್ರವಣಬೆಳಗೊಳ ರಾಜ್ಯಾಭಿಷೇಕ ಮಹೋತ್ಸವಕ್ಕೆ ವೆಂಕಯ್ಯನಾಯ್ಡು ಚಾಲನೆ title=
Pic : Twitter

ಹಾಸನ: ಬಾಹುಬಲಿ 88ನೇ ಮಹಾಮಸ್ತಕಾಭಿಷೇಕದ ಅಂಗವಾಗಿ ಶ್ರವಣಬೆಳಗೊಳದಲ್ಲಿ ಶನಿವಾರ ನಡೆದ ರಾಜ್ಯಾಭಿಷೇಕ ಮಹೋತ್ಸವಕ್ಕೆ ಉಪರಾಷ್ಟ್ರಪತಿ ವೆಂಕಯ್ಯ ನಾಯ್ಡು, ರಾಜ್ಯಪಾಲ ವಜುಭಾಯಿ ವಾಲಾ ಚಾಲನೆ ನೀಡಿದರು.

ಈ ಸಂದರ್ಭದಲ್ಲಿ ಮಾತನಾಡಿದ ಉಪರಾಷ್ಟ್ರಪತಿ ವೆಂಕಯ್ಯ ನಾಯ್ಡು ಅವರು, ಜ್ಞಾನ ನೀಡುವ, ಸದ್ಬುದ್ಧಿ ನೀಡುವ ಗುರುಗಳ ಸನ್ನಿಧಿಯಲ್ಲಿ ಸಮಾರಂಭ ನಡೆಯುತ್ತಿದೆ. ಅವರ ಆಶೀರ್ವಾದ ಪಡೆಯುವುದು ನಮ್ಮ ಕರ್ತವ್ಯ. ಈ ಪರಂಪರೆ ನಾವು ಉಳಿಸಿಕೊಳ್ಳಬೇಕು. ಮಹಾಮಜ್ಜನದಲ್ಲಿ ಭಾಗವಹಿಸುವ ಪುಣ್ಯ ನನ್ನದಾಗಿದೆ ಎಂದರು.

ದಿವ್ಯ ಜ್ಞಾನ ಹಾಗೂ ಮೋಕ್ಷ ಪಡೆಯಲು ಬಾಹುಬಲಿಯ ಬೋಧನೆಗಳು ಹಾಗೂ ರತ್ನ ತ್ರಯಗಳು ಅಗತ್ಯ. ಮಾನವನಿಗೆ ಸರಳತೆ, ಶಾಂತಿ, ತ್ಯಾಗ ಬಾಹುಬಲಿ ಬೋಧಿಸಿದ್ದಾನೆ. ಅಶಾಂತಿ, ವಿವಾದ ರಹಿತವಾದ ವಿಶ್ವ ನಿರ್ಮಾಣದಲ್ಲಿ ಆ ಸಂದೇಶಗಳು ಮಾರ್ಗದರ್ಶಕ ಎಂದು ನುಡಿದರು.

ಇದಕ್ಕೂ ಮುಂಚೆ, ಶ್ರೀ ಚಾರುಕೀರ್ತಿ ಭಟ್ಟಾರಕ ಸ್ವಾಮೀಜಿ ನೇತೃತ್ವದಲ್ಲಿ ನಡೆದ ರಾಜ್ಯಾಭಿಷೇಕ ಮಹೋತ್ಸವ ಉದ್ಘಾಟನಾ ಸಮಾರಂಭದಲ್ಲಿ ಕಳಸದಲ್ಲಿನ ನವರತ್ನಗಳಿಂದ ಬಾಹುಬಲಿ ಮೂರ್ತಿಗೆ ಅಭಿಷೇಕ ಹಾಗೂ ಮೂರ್ತಿಗೆ ಚಾಮರ ಸೇವೆ, ಮಂಗಳಾರತಿಯನ್ನು ಉಪರಾಷ್ಟ್ರಪತಿ ಹಾಗೂ ರಾಜ್ಯಪಾಲರು ನೆರವೇರಿಸಿದರು.

Trending News