ಬೆಂಗಳೂರು: ರಾಜ್ಯದ 10 ಜಿಲ್ಲೆಗಳಲ್ಲಿ ಪ್ರವಾಹ ಪರಿಸ್ಥಿತಿ ಮುಂದುವರೆದಿದ್ದು, ಕರಾವಳಿ ಮತ್ತು ಮಲ್ನಾಡ್ ಜಿಲ್ಲೆಗಳಲ್ಲಿ ಭಾರಿ ಮಳೆಯಾಗಿದೆ. ಪ್ರವಾಹದಿಂದಾಗಿ ಈಗ ಶಿವಮೊಗ್ಗ, ಬೆಳಗಾವಿ ಮತ್ತು ಹಾವೇರಿ ಜಿಲ್ಲೆಗಳಲ್ಲಿ ತಲಾ ಒಬ್ಬರು ಮೃತಪಟ್ಟಿದ್ದಾರೆ ಎನ್ನಲಾಗಿದೆ.
#FloodsCoverageWithTNIE #NorthKarnataka #Monsoon-2019
Rain water gushing on Hational Highway No 4 at Kakti near Belagavi cutting off connectivity @XpressBengaluru pic.twitter.com/R85wqfi5Du— Amit Upadhye (@Amitsen_TNIE) August 6, 2019
ರಾಜ್ಯದಲ್ಲಿ ಅತಿ ಹೆಚ್ಚು ಪ್ರವಾಹಕ್ಕೆ ಬೆಳಗಾವಿ ಜಿಲ್ಲೆ ಒಳಗಾಗಿದ್ದು, ಮಂಗಳವಾರದಂದು ಪರಿಸ್ಥಿತಿ ಇನ್ನು ಬಿಗಡಾಯಿಸಿದೆ.ಈಗ ಪ್ರವಾಹದಿಂದಾಗಿ 80,590 ಹೆಕ್ಟೇರ್ ಭೂಮಿಯಲ್ಲಿ ಬೆಳೆ ಹಾನಿಯಾಗಿದೆ. ಸುಮಾರು 96 ಹಳ್ಳಿಗಳಲ್ಲಿ 8,000 ಜನರು ಸಂಕಷ್ಟದಲ್ಲಿದ್ದಾರೆ ಎನ್ನಲಾಗಿದೆ. ಇದುವರೆಗೂ ಸುಮಾರು 1,050 ಕಿ.ಮೀ.ನಷ್ಟು ರಸ್ತೆ ಜಾಲ ಮತ್ತು 140 ಸೇತುವೆಗಳು ಮತ್ತು ಚೆಕ್ ಡ್ಯಾಮ್‌ಗಳಿಗೆ ನಷ್ಟವಾಗಿವೆ. ಉತ್ತರ ಕರ್ನಾಟಕದಲ್ಲಿ ರಾಷ್ತ್ರೀಯ ಹೆದ್ದಾರಿ 48 (ಪುಣೆ-ಬೆಂಗಳೂರು) ಬಂದಾಗಿದೆ. ಇನ್ನು ನೈರುತ್ಯ ರೈಲ್ವೆಯ ಹುಬ್ಬಳ್ಳಿ ವಿಭಾಗದ ಲೋಂಡಾ-ತಿನೈಘಾಟ್ ವಿಭಾಗದಲ್ಲಿ ರೈಲು ಸೇವೆ ಸ್ಥಗಿತಗೊಂಡಿದೆ ಎನ್ನಲಾಗಿದೆ.
We were with Kerala when they were facing severe flood attack!!
We were with Kodagu when there was Landslides,
But Now,
North Karnataka struggling with heavy rainfall !!!
Who is with Us Now???#NorthKarnataka#UKarnatakaFloods pic.twitter.com/NnAUjDON8e— Manjunath Gouda Karekal/ ಮಂಜುನಾಥ ಗೌಡ ಕಾರೇಕಲ್ಲು (@karekalgouda) August 7, 2019
ಈಗಾಗಲೇ ಭಾರಿ ಮಳೆಯಿಂದಾಗಿ ಧಾರವಾಡ, ಹಾವೇರಿ, ಬೆಳಗಾವಿ, ಕೊಡಗು, ಚಿಕ್ಕಮಗಳೂರು, ಹಾಸನ, ದಕ್ಷಿಣ ಕನ್ನಡ, ಮತ್ತು ಉತ್ತರ ಕನ್ನಡ ಜಿಲ್ಲೆಗಳಲ್ಲಿನ ಶಿಕ್ಷಣ ಸಂಸ್ಥೆಗಳಿಗೆ ರಜಾದಿನವನ್ನು ಘೋಷಿಸಲಾಗಿದೆ.