ನವದೆಹಲಿ: ಕಾಂಗ್ರೆಸ್ ನ ಟ್ರಬಲ್ ಶೂಟರ್ ಡಿ.ಕೆ.ಶಿವಕುಮಾರ್ ಅವರನ್ನು ಮುಂಬೈ ಪೊಲೀಸರು ಈಗ ಬಂಧಿಸಿದ್ದಾರೆ. ರಾಜೀನಾಮೆ ನೀಡಿದ್ದ ಶಾಸಕರನ್ನು ಭೇಟಿ ಮಾಡಲು ಮುಂಬೈಗೆ ಆಗಮಿಸಿದ್ದ ಡಿಕೆಶಿ ಪೊಲೀಸರೊಂದಿಗೆ ವಾಗ್ವಾದ ನಡೆಸಿದ ಹಿನ್ನಲೆಯಲ್ಲಿ ಈಗ ಅವರನ್ನು ವಶಕ್ಕೆ ತೆಗೆದುಕೊಂಡಿದ್ದಾರೆ.
Karnataka Minister DK Shivakumar who after being denied entry, was sitting outside Renaissance - Mumbai Convention Centre Hotel, detained by Mumbai Police.Section 144 had been imposed in the area. pic.twitter.com/dpHAObKkID
— ANI (@ANI) July 10, 2019
ಇದರಿಂದ ಈಗ ಕರ್ನಾಟಕದ ಸಮ್ಮಿಶ್ರ ಸರ್ಕಾರದ ಬಿಕ್ಕಟ್ಟು ಹೊಸ ರೂಪ ಪಡೆದುಕೊಂಡಿದೆ. ರಾಜೀನಾಮೆ ನೀಡಿದ ಶಾಸಕರು ರಕ್ಷಣೆಗಾಗಿ ಪೊಲೀಸರಿಗೆ ಮನವಿ ಮಾಡಿಕೊಂಡಿದ್ದಾರೆ.ಈ ಹಿನ್ನಲೆಯಲ್ಲಿ ಪೊಲೀಸರು " ಅವರು ನಿಮ್ಮ ಬಗ್ಗೆ ಭಯಭೀತರಾಗಿದ್ದಾರೆ, ಆದ್ದರಿಂದ ನಾವು ನಿಮ್ಮನ್ನು ಪ್ರವೇಶಿಸಲು ಅನುಮತಿಸುವುದಿಲ್ಲ" ಎಂದು ಮುಂಬೈ ಪೊಲೀಸ್ ಅಧಿಕಾರಿಯೊಬ್ಬರು ಶಿವಕುಮಾರ್ ಅವರೊಂದಿಗಿನ ವಾದದ ವೇಳೆ ಹೇಳಿದರು. ಇದೇ ವೇಳೆ ಡಿಕೆಶಿ ತಾವು ರಿನೈಸನ್ಸ್ ಹೋಟಲ್ ನಲ್ಲಿ ರೂಂ ಬುಕ್ ಮಾಡಿರುವುದಾಗಿ ಹೇಳಿದ್ದಾರೆ. 'ನಾನು ಹೋಗುವುದಿಲ್ಲ, ಇಡೀ ದಿನ ಇಲ್ಲಿ ಕಾಯುತ್ತೇನೆ" ಎಂದು ಶಿವಕುಮಾರ್ ಪೊಲೀಸರಿಗೆ ತಿಳಿಸಿದ್ದಾರೆ. ತುರ್ತುಸ್ಥಿತಿಯನ್ನು ಉಲ್ಲೇಖಿಸಿ ಹೋಟೆಲ್ ಅವರ ಬುಕಿಂಗ್ ಅನ್ನು ರದ್ದುಗೊಳಿಸಿತು.
Karnataka Minister DK Shivakumar who after being denied entry was sitting outside Renaissance - Mumbai Convention Centre Hotel where 10 rebel Congress-JD(S) MLAs are staying, detained by Mumbai Police. Section 144 had been imposed in the area. pic.twitter.com/Y31VswwgU0
— ANI (@ANI) July 10, 2019
"ನನ್ನ ಕೋಣೆಗೆ ಹೋಗಲು ನನಗೆ ಅನುಮತಿಸಿ, ನನ್ನ ಸ್ನೇಹಿತರನ್ನು ಭೇಟಿ ಮಾಡಿ ಅವರೊಂದಿಗೆ ಕಾಫಿ ಕುಡಿಯಲು ನಾನು ಬಯಸುತ್ತೇನೆ. ನನ್ನ ಸ್ನೇಹಿತರನ್ನು ಭೇಟಿಯಾಗದೆ ನಾನು ಹೋಗುವುದಿಲ್ಲ. ಅವರು ನನ್ನನ್ನು ಕರೆಯುತ್ತಿದ್ದಾರೆ. ಅವರ ಹೃದಯ ಹೊಡೆದು ಹೋಗುತ್ತದೆ. ನಾನು ಈಗಾಗಲೇ ಅವರ ಸಂಪರ್ಕದಲ್ಲಿದ್ದೇನೆ, ನಮ್ಮಿಬ್ಬರ ಹೃದಯಗಳು ಬಡಿಯುತ್ತಿವೆ" ಎಂದು ಶಿವಕುಮಾರ್ ಹೇಳಿದ್ದಾರೆ.