ರಾಜ್ಯದ ನೂತನ ಮುಖ್ಯ ಕಾರ್ಯದರ್ಶಿಯಾಗಿ ರತ್ನಪ್ರಭಾ ಆಯ್ಕೆ

ರಾಜ್ಯದ ಮುಖ್ಯಕಾರ್ಯದರ್ಶಿ ಹುದ್ದೆ ಅಲಂಕರಿಸಿದ ಮಹಿಳೆಯರಲ್ಲಿ ರತ್ನಪ್ರಭಾ ಮೂರನೇಯವರು.

Last Updated : Nov 28, 2017, 05:40 PM IST
ರಾಜ್ಯದ ನೂತನ ಮುಖ್ಯ ಕಾರ್ಯದರ್ಶಿಯಾಗಿ ರತ್ನಪ್ರಭಾ ಆಯ್ಕೆ title=

ಬೆಂಗಳೂರು: ಪ್ರಸ್ತುತ ಮುಖ್ಯ ಕಾರ್ಯದರ್ಶಿಯಾಗಿರುವ ಡಾ.ಸುಭಾಶ್ ಚಂದ್ರ ಕುಂಟಿಯಾ ಅವರ ಅಧಿಕಾರವಧಿ ನ. 30ಕ್ಕೆ ಕೊನೆಗೊಳ್ಳಲಿದ್ದು, ಇದೀಗ 1981ರ ಬ್ಯಾಚ್ ನ ಐಎಎಸ್ ಅಧಿಕಾರಿ ರತ್ನಪ್ರಭಾ ಅವರನ್ನು ರಾಜ್ಯ ಸರ್ಕಾರದ ನೂತನ ಮುಖ್ಯ ಕಾರ್ಯದರ್ಶಿಯಾಗಿ ಆಯ್ಕೆ ಮಾಡಿ ಸರ್ಕಾರ ಆದೇಶ ಹೊರಡಿಸಿದೆ.

ಈ ಹಿಂದೆ 2016ರಲ್ಲೂ ರತ್ನಪ್ರಭಾ ಹೆಸರು ಮುಂಚೂಣಿಯಲ್ಲಿತ್ತು. ಕೊನೆ ಕ್ಷಣದಲ್ಲಿ ಸಿಎಂ ಸುಭಾಷ್ ಚಂದ್ರ ಕುಂಟಿಯಾ ಅವರನ್ನು ನೇಮಕ ಮಾಡಿದ್ದರು. ಮೂಲತಃ ಆಂಧ್ರ ಪ್ರದೇಶದವರಾದ ರತ್ನಪ್ರಭಾ ಉತ್ತರ ಕರ್ನಾಟಕ ಭಾಗದಲ್ಲಿ ಹೆಚ್ಚಾಗಿ ಕೆಲಸ ಮಾಡಿದ್ದಾರೆ. ಇದೀಗ ರತ್ನಪ್ರಭಾ ಅವರನ್ನು ಆಯ್ಕೆ ಮಾಡಲಾಗಿದೆ. ರಾಜ್ಯದ ಮುಖ್ಯಕಾರ್ಯದರ್ಶಿ ಹುದ್ದೆ ಅಲಂಕರಿಸಿದ ಮಹಿಳೆಯರಲ್ಲಿ ರತ್ನಪ್ರಭಾ ಮೂರನೇಯವರು.

ಈ ಹಿಂದೆ 2000ರಲ್ಲಿ ತೆರೇಸಾ ಭಟ್ಟಾಚಾರ್ಯ ಮೊದಲ ಮಹಿಳಾ ಮುಖ್ಯ ಕಾರ್ಯದರ್ಶಿಯಾಗಿ 11 ತಿಂಗಳ ಆಡಳಿತ ನಡೆಸಿದ್ದರು. ನಂತರ 2006ರಲ್ಲಿ ಡಾ. ಮಾಲತಿದಾಸ್ ಮುಖ್ಯ ಕಾರ್ಯದರ್ಶಿಯಾಗಿ ಮೂರು ತಿಂಗಳ ಸೇವೆ ಸಲ್ಲಿಸಿದ್ದರು.

Trending News