ಬೆಂಗಳೂರು: ಸಂವಿಧಾನದಲ್ಲಿ ಉಪಮುಖ್ಯಮಂತ್ರಿ ಹುದ್ದೆಯ ಪ್ರಸ್ತಾಪವಿಲ್ಲ. ಹಾಗಾಗಿ ಉಪಮುಖ್ಯಮಂತ್ರಿಯಾಗಿ ಡಾ. ಜಿ. ಪರಮೇಶ್ವರ್ ಪ್ರಮಾಣವಚನ ಸ್ವೀಕರಿಸುವುದು ಸಂವಿಧಾನ ಬಾಹಿರ. ಈ ನಿಟ್ಟಿನಲ್ಲಿ ಉಪಮುಖ್ಯಮಂತ್ರಿ ಹುದ್ದೆ ರದ್ದು ಮಾಡುವಂತೆ ಕೋರಿ ಮೈಸೂರಿನ ಶೇಖರ್ ಅಯ್ಯರ್ ಎಂಬುವವರು ಶುಕ್ರವಾರ ಸಾರ್ವಜನಿಕ ಹಿತಾಸಕ್ತಿ ಅರ್ಜಿ(ಪಿಐಎಲ್) ಸಲ್ಲಿಸಿದ್ದಾರೆ.
ಸಂವಿಧಾನದಲ್ಲಿ ಉಪಮುಖ್ಯಮಂತ್ರಿ ಎಂಬ ಹುದ್ದೆ ಇಲ್ಲ. ಸಂವಿಧಾನದಲ್ಲಿ ಇಲ್ಲದೇ ಇರುವ ಹುದ್ದೆಯನ್ನು ಸೃಷ್ಟಿಸುವ ಅಗತ್ಯವಿದೆಯೇ, ಸಂವಿಧಾನ ಮಾನ್ಯತೆ ಇಲ್ಲದೆ ಹುದ್ದೆ ಕಾನೂನು ಬಾಹಿರ. ಹೀಗಾಗಿ ಡಿಸಿಎಂ ಹುದ್ದೆಯನ್ನು ರದ್ದು ಮಾಡಬೇಕು. ಜತೆಗೆ ಈ ಹುದ್ದೆಯನ್ನು ಕಾನೂನು ಬಾಹಿರವೆಂದು ಘೋಷಿಸಬೇಕು ಎಂದು ಅರ್ಜಿಯಲ್ಲಿ ಮನವಿ ಮಾಡಲಾಗಿದೆ.