ಪ್ರಿಯಾಂಕ್ ಖರ್ಗೆ ಟ್ವಿಟ್ಟರ್ ಖಾತೆ ಹ್ಯಾಕ್..!

ಸಾಮಾಜಿಕ ಮಾಧ್ಯಮಗಳಲ್ಲಿ ಸಾಕಷ್ಟು ಸಕ್ರಿಯವಾಗಿರುವ ಕಾಂಗ್ರೆಸ್ ನಾಯಕ ಪ್ರಿಯಾಂಕ್ ಖರ್ಗೆ ಅವರು ತಮ್ಮ ಟ್ವಿಟ್ಟರ್ ಖಾತೆ ಹ್ಯಾಕ್ ಆಗಿರುವ ಸಾಧ್ಯತೆ ಇದೆ ಎಂದು ದೂರಿದ್ದಾರೆ.

Written by - Zee Kannada News Desk | Last Updated : Apr 24, 2022, 01:15 AM IST
  • ಇದು ಟ್ವಿಟರ್ ಸಂಸ್ಥೆಯವರಿಂದಾಗಿದೆಯೋ ಅಥವಾ ಕಿಡಿಗೇಡಿಗಳು ಹ್ಯಾಕ್ ಮಾಡಿದ್ದರೂ ಎಂದು ಇನ್ನೂ ನನಗೆ ತಿಳಿದಿಲ್ಲ,
  • ಟ್ವಿಟರ್ ಸಂಸ್ಥೆಯಿಂದ ಈ ರೀತಿಯಾಗಿದ್ದರೆ ನನಗೆ ಸೂಚನೆ ನೀಡಲಾಗುತ್ತಿತ್ತು ಎಂದು ತಿಳಿದಿದ್ದೇನೆ,
 ಪ್ರಿಯಾಂಕ್ ಖರ್ಗೆ ಟ್ವಿಟ್ಟರ್ ಖಾತೆ ಹ್ಯಾಕ್..! title=
file photo

ಬೆಂಗಳೂರು: ಸಾಮಾಜಿಕ ಮಾಧ್ಯಮಗಳಲ್ಲಿ ಸಾಕಷ್ಟು ಸಕ್ರಿಯವಾಗಿರುವ ಕಾಂಗ್ರೆಸ್ ನಾಯಕ ಪ್ರಿಯಾಂಕ್ ಖರ್ಗೆ ಅವರು ತಮ್ಮ ಟ್ವಿಟ್ಟರ್ ಖಾತೆ ಹ್ಯಾಕ್ ಆಗಿರುವ ಸಾಧ್ಯತೆ ಇದೆ ಎಂದು ದೂರಿದ್ದಾರೆ.

ಈಗ ಈ ಕುರಿತಾಗಿ ತಮ್ಮ ಫೇಸ್ ಬುಕ್ ಖಾತೆಯಲ್ಲಿ ಬರೆದುಕೊಂಡಿರುವ ಅವರು 'ನನ್ನ ಟ್ವಿಟರ್ ಖಾತೆಯು ಇದ್ದಕ್ಕಿದ್ದಂತೆ ನಿಷ್ಕ್ರೀಯವಾಗಿದೆ, ನಾನು ನನ್ನ ಖಾತೆಯನ್ನು ತೆರೆಯಲು ಸಾಧ್ಯವಾಗದ ರೀತಿಯಲ್ಲಿ ನಿಯಂತ್ರಣ ತಪ್ಪಿಸಲಾಗಿದೆ ಎಂದು ಅವರೂ ದೂರಿದ್ದಾರೆ.

ಈಗ ಅವರ ಅಧಿಕೃತ ಖಾತೆ ಹ್ಯಾಕ್ ಆಗಿರುವ ಹಿನ್ನಲೆಯಲ್ಲಿ ಈಗ ಅವರು ಜನರಲ್ಲಿ ಮನವಿ ಮಾಡಿಕೊಳ್ಳುತ್ತಾ ಬರೆದಿದ್ದು ಹೀಗೆ, ನನ್ನ ಟ್ವಿಟರ್ ಖಾತೆಯು ನನ್ನ ನಿಯಂತ್ರಣಕ್ಕೆ ಸಿಗುವವರೆಗೂ ಅದರಲ್ಲಿ ಯಾವುದೇ ಬಗೆಯ ಅಸಂಬದ್ಧ, ಅಪ್ರಬುದ್ದ ಪೋಸ್ಟ್‌ಗಳು ಕಂಡುಬಂದಲ್ಲಿ ಅದು ನನ್ನದಾಗಿರುವುದಿಲ್ಲ ಎಂದು ತಿಳಿಯಬೇಕೆಂದು ನನ್ನ ಮನವಿ ಎಂದು ಅವರು ವಿನಂತಿಸಿಕೊಂಡಿದ್ದಾರೆ.

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News